Monday, July 4, 2022

ರಣರಂಗವಾದ ನವದೆಹಲಿ: ರೈತರು-ಪೋಲೀಸರ ಸಂಘರ್ಷ, ಲಾಠಿಚಾರ್ಜ್..! ಒಂದು ಸಾವು

ರಣರಂಗವಾದ ನವದೆಹಲಿ: ರೈತರು-ಪೋಲೀಸರ ಸಂಘರ್ಷ, ಲಾಠಿಚಾರ್ಜ್..! ಒಂದು ಸಾವು

violent-clashes-as-indian-farmers-storm-delhis-red-fort- one dead..!

ನವದೆಹಲಿ : ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ದೆಹಲಿಯಲ್ಲಿ ರೈತರು ನಡೆಸಿದ ಟ್ರ್ಯಾಕ್ಟರ್ ಪರೇಡ್‍ನಲ್ಲಿ ಹಿಂಸಾಚಾರ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಲಾಠಿಚಾರ್ಜ್, ಅಶ್ರು ವಾಯು ಬಳಕೆಯಾಗಿದ್ದು ಗೋಲಿಬಾರಿಗೆ ಒಂದು ಸಾವು ಸಂಭವಿಸಿದೆ.  

ಎಪ್ಪತ್ತೆರಡನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಒಂದೆಡೆ ದೆಹಲಿಯಲ್ಲಿ ಸೈನಿಕರ ಪರೇಡ್ ನಡೆಯುತ್ತಿದ್ದರೆ, ದೆಹಲಿಯ ಹೊರ ಭಾಗದಲ್ಲಿಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಟ್ರ್ಯಾಕ್ಟರ್ ಪರೇಡ್ ನಡೆಯಿತು.

ಜೈ ಜವಾನ್ ಜೈ ಕಿಸಾನ್‍ಗೆ ಅನುಗುಣವಾಗಿ ಒಂದೆಡೆ ಸಂಭ್ರಮಾಚರಣೆ ಪರೇಡ್, ಮತ್ತೊಂದೆಡೆ ಪ್ರತಿಭಟನೆಯಾರ್ಥವಾಗಿ ರೈತರ ಗಣತಂತ್ರ ಪರೇಡ್‍ಗೆ ರಾಷ್ಟ್ರ ರಾಜಧಾನಿ ನವದೆಹಲಿ ಸಾಕ್ಷಿಯಾಯಿತು.

ರೈತರು ಪೋಲೀಸರ ಬ್ಯಾರಿಕೇಡ್‍ಗಳು, ಸಶಸ್ತ್ರ ಪೋಲೀಸರ ಮಾನವ ತಡೆಗೋಡೆಗಳು, ರಸ್ತೆಗೆ ಅಡ್ಡಲಾಗಿ ನಿಲಿಸಿದ್ದ ಬಸ್‍ಗಳು, ಕಟೈನರ್ ಲಾರಿಗಳು, ಕ್ರೇನ್‍ಗಳು, ಸಿಮೆಂಟ್ ಬ್ಲಾಕ್‍ಗಳು ಇದ್ಯಾವುದನ್ನೂ ಲೆಕ್ಕಿಸದೆ ಮುನ್ನುಗ್ಗುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಟ್ರ್ಯಾಕ್ಟರ್‍ಗಳಲ್ಲಿ ಸಾವಿರಾರು ರೈತರು ದೆಹಲಿಯತ್ತ ದಾವಿಸಿ ಬಂದಿದ್ದರು.

ನಿನ್ನೆಯಿಂದಲೂ ಪ್ರಯಾಣ ಆರಂಭಿಸಿದ ರೈತರು ಇಂದು ಮುಂಜಾನೆ ದೆಹಲಿಯ ಸಿಂಗು, ಟಿಕ್ರಿ, ಗಾಜಿಯಾಪುರ್ ಗಡಿಗೆ ಲಗ್ಗೆಯಿಟ್ಟರು. ದೆಹಲಿಯ ಗಡಿ ಭಾಗಗಳ ಸುತ್ತಲೂ ಟ್ರ್ಯಾಕ್ಟರ್‍ಗಳ ಪರೇಡ್ ಭಾರೀ ಸದ್ದು ಮಾಡಿದವು.

ಕೆಲವೊಮ್ಮೆ ಪೋಲೀಸರ ಸೂಚನೆಗಳನ್ನು ಉಲ್ಲಂಘಿಸಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅಶ್ರುವಾಯು ಸಿಡಿಸಿ ಲಾಠಿಚಾರ್ಜ್ ಮಾಡಲಾಯಿತು.

ಪರಿಸ್ಥಿತಿ ನಿಯಂತ್ರಿಸಲು ಪೋಲೀಸರು ಹಾಗೂ ಇತರ ಭದ್ರತಾ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು. ಘಟನೆಯಲ್ಲಿ ಹಲವಾರು ರೈತರು ಮತ್ತು ಪೆÇಲೀಸರು ಗಾಯಗೊಂಡಿದ್ದಾರೆ.

ದೆಹಲಿಯ ಸಿಂಗು ಗಡಿಯಲ್ಲಿ ರೈತರ ಪರೇಡ್‍ಗೆ ತಡೆಯೊಡ್ಡಲು ಪೋಲೀಸರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‍ಗಳನ್ನು ಹಾಕಿದರು. ಆದರೆ, ರೈತರು ಬ್ಯಾರಿಕೇಡ್‍ಗಳನ್ನು ಕಿತ್ತೊಗೆದು ಮುಂದೆ ಬಂದರು.

ದೆಹಲಿಯ ಪಾಂಡವನಗರದ ಮೀರತ್‍ಎಕ್ಸ್‍ಪ್ರೆಸ್‍ವೇ ಬಳಿ ಸಾವಿರಾರು ಸಂಖ್ಯೆಯಲ್ಲಿದ್ದ ರೈತರು ಬ್ಯಾರಿಕೇಡ್‍ಗಳನ್ನು ತಳ್ಳಿ ನುಗ್ಗಲು ಯತ್ನಿಸಿದಾಗ ಅವರನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಲಾಗಿದೆ.

ಸಿಂಗು ಗಡಿಯ ಸಂಜಯ್‍ಗಾಂಧಿಯ ಟ್ರಾನ್ಸ್‍ಪೋರ್ಟ್‍ನಗರದಲ್ಲಿ ಮತ್ತು ಘಾಜಿಪುರ್ ಗಡಿಯಲ್ಲಿ ಅಶ್ರುವಾಯು ಸಿಡಿಸಿ ರೈತರನ್ನು ನಿಯಂತ್ರಿಸುವ ಪ್ರಯತ್ನಗಳು ನಡೆದಿವೆ. ಕಲಂ ಬೈಪಾಸ್‍ನಲ್ಲಿ ಪೋಲೀಸರ ಅಶ್ವದಳದ ಭದ್ರತೆ, ಬ್ಯಾರಿಕೇಡ್‍ಗಳನ್ನು ಭೇದಿಸಿ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ.

ಟ್ರ್ಯಾಕ್ಟರ್, ಜೀಪು, ಲಾರಿ, ಬಸ್, ದ್ವಿಚಕ್ರವಾಹನ ಸೇರಿದಂತೆ ನಾನಾ ರೀತಿಯ ವಾಹನಗಳಲ್ಲಿ ರೈತರು ದೆಹಲಿಗೆ ದೌಡಾಯಿಸಿದ್ದಾರೆ. ದೆಹಲಿ ಒಳಗೆ ನುಗ್ಗಲು ಪ್ರಯತ್ನಿಸಿದ ರೈತರನ್ನು ತಡೆಯಲು ಪೋಲೀಸರು ಮತ್ತು ಸೇನಾ ತುಕಡಿಗಳು ಹರಸಾಹಸ ಪಡಬೇಕಾಯಿತು.

ಏಕಕಾಲಕ್ಕೆ ಲಕ್ಷಾಂತರ ಮಂದಿ ಆಗಮಿಸಿದ್ದರಿಂದ ದೆಹಲಿಯ ಗಡಿಭಾಗಗಳಲ್ಲಿ ಕಿಸಾನ್ ಘೋಷಣೆಗಳು ಬೊಬ್ಬಿರಿದವು.

ಇದಷ್ಟೇ ಅಲ್ಲದೆ ಎಲ್ಲಾ ರಾಜ್ಯಗಳಲ್ಲೂ ರೈತರ ಬೆಂಬಲವಾಗಿ ಪ್ರತಿಭಟನೆಗಳು ನಡೆದಿವೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಉತ್ತರ ಪ್ರದೇಶ, ಮಧ್ಯ ಪ್ರದೇಶ ಸೇರಿದಂತೆ ನಾನಾ ರಾಜ್ಯಗಳ ರೈತರು ದೆಹಲಿಯ ಟ್ರ್ಯಾಕ್ಟರ್ ಪರೇಡ್‍ಗೆ ಬೆಂಬಲ ವ್ಯಕ್ತಪಡಿಸಿ ರಾಜ್ಯಮಟ್ಟಗಳಲ್ಲಿ ಟ್ರ್ಯಾಕ್ಟರ್ ರಾಲಿ ನಡೆಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಗ್ರಾಮ ಮಟ್ಟಗಳಲ್ಲೇ ರೈತರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಕೆಲವು ಭಾಗಗಳಲ್ಲಿ ಮನೆ ಮನೆಗೆ ಹೋಗಿ ಟ್ರ್ಯಾಕ್ಟರ್‍ಗಳನ್ನು ಹೊರ ತೆಗೆಯದಂತೆ ರೈತರಿಗೆ ಎಚ್ಚರಿಕೆ ನೀಡಲಾಗಿತ್ತು. ಇದನ್ನೂ ಮೀರಿ ಪ್ರತಿಭಟನೆಗೆ ಮುಂದಾದವರನ್ನು ಹೆದ್ದಾರಿ, ಜಿಲ್ಲಾ ರಸ್ತೆಗಳಲ್ಲಿ ತಡೆದು ನಿಲ್ಲಿಸಲಾಗಿದೆ.

ಕಾಂಗ್ರೆಸ್, ಆಮ್‍ಆದ್ಮಿ, ಎಡಪಕ್ಷಗಳು ಸೇರಿದಂತೆ ಅನೇಕ ವಿರೋಧ ಪಕ್ಷಗಳು ರೈತ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ. ರಾಜಕೀಯ ಹೊರತಾಗಿ ನಡೆದ ರೈತರ ಹೋರಾಟ ರಾಷ್ಟ್ರಾದ್ಯಂತ ಭಾರೀ ಸಂಚಲನ ಮೂಡಿಸಿತ್ತು.

ಕೇಂದ್ರ ಸರ್ಕಾರ ತನ್ನ ಕೃಷಿ ಕಾನೂನುಗಳನ್ನು ಹಿಂಪಡೆಯದೇ ಇದ್ದರೆ ಮುಂದಿನ ದಿನಗಳಲ್ಲಿ ಬಜೆಟ್ ನಡೆಯುವಾಗ ಸಂಸತ್‍ಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ರೈತ ಸಂಘಟನೆಗಳು ನೀಡಿವೆ.

 

LEAVE A REPLY

Please enter your comment!
Please enter your name here

Hot Topics

“ನ್ಯಾಯಮೂರ್ತಿಗಳ ವೈಯುಕ್ತಿಕ ದಾಳಿ ನಡೆಸುವ ಸೋಷಿಯಲ್‌ ಮೀಡಿಯಾ ಅಪಾಯಕಾರಿ”

ನವದೆಹಲಿ: ನ್ಯಾಯಧೀಶರ ಕುರಿತು ವೈಯಕ್ತಿಕವಾಗಿ ದಾಳಿ ನಡೆಸುತ್ತಿರುವ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳು ಲಕ್ಷ್ಮಣ ರೇಖೆ ದಾಟುತ್ತಿರುವುದು ಅಪಾಯಕಾರಿ.ಸಂವಿಧಾನದಡಿ ಕಾನೂನು ಸುವ್ಯವಸ್ಥೆ ಕಾಪಾಡಲು ದೇಶದಲ್ಲಿ ಇವುಗಳ ಕಡ್ಡಾಯವಾಗಿ ನಿಯಂತ್ರಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್...

ಪುತ್ತೂರಿನಲ್ಲಿ ಬೈಕ್‌ – ಕಾರು ಡಿಕ್ಕಿ: ಓರ್ವ ಜೀವಾಂತ್ಯ

ಪುತ್ತೂರು: ಬೈಕ್ ಮತ್ತು ಮಾರುತಿ ಕಾರು ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹೊರ ವಲಯದ ಕುಂಬ್ರದಲ್ಲಿ ನಡೆದಿದೆ.ಕು೦ಬ್ರ...

ಬೆಳ್ತಂಗಡಿ: ಭಾರೀ ಮಳೆ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ದ.ಕ ಡಿಸಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಾದ್ಯಂತ ನಿನ್ನೆ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು ಇಲ್ಲಿನ ಸ್ಥಿತಿಗತಿಗಳನ್ನು ಗಮನಿಸಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದ ಮಾಹಿತಿಯನ್ನು ಪಡೆದುಕೊಂಡು ಜಿಲ್ಲಾಧಿಕಾರಿಯವರು ತಾಲ್ಲೂಕಿನ ಎಲ್ಲ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಿದ್ದಾರೆ.ಗ್ರಾಮೀಣ...