ಮಹಿಳೆಯರ ಮೇಲಿನ ದೌರ್ಜನ್ಯ:ವುಮೆನ್ ಇಂಡಿಯಾ ಮೂವ್ಮೆಂಟ್ ಬಂಟ್ವಾಳದಲ್ಲಿ ಪ್ರತಿಭಟನೆ.
ಬಂಟ್ವಾಳ: ವುಮೆನ್ ಇಂಡಿಯಾ ಮೂಮೆಂಟ್ ದ.ಕ.ಜಿಲ್ಲಾ ಸಮಿತಿ ವತಿಯಿಂದ ದೇಶಾದ್ಯಂತ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಬಂಟ್ವಾಳ ಮಿನಿ ವಿಧಾನ ಸೌದ ಬಳಿ ಪ್ರತಿಭಟನೆ ನಡೆಯಿತು.ಪ್ರತಿಭಟನೆಯ ನೇತೃತ್ವವನ್ನು ವುಮೆನ್ ಇಂಡಿಯಾ ಮೂವ್ಮೆಂಟ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹನಾ ಬಂಟ್ವಾಳ ವಹಿಸಿದ್ದರು.ಪ್ರತಿಭಟನೆಯನ್ನು ಉದ್ದೇಶಿಸಿ ವುಮೆನ್ ಇಂಡಿಯಾ ಮೂಮೆಂಟ್ ರಾಜ್ಯಾಧ್ಯಕ್ಷೆ ತಸ್ನೀಮ್ ಮಾತನಾಡಿ ದೇಶದಲ್ಲಿ ಮಹಿಳೆಯರಿಗೆ ಬದುಕಲು ಸಾಧ್ಯವಾಗದ ಪರಿಸ್ಥಿತಿ ಇದೆ.
ದಿನಗಳೆದಂತೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ನ್ಯಾಷನಲ್ ವುಮೆನ್ ಫ್ರಂಟ್ ಸದಸ್ಯೆ ಶಹಿಲಾ ತುಂಬೆ, ಝುಲೈಕಾ ಕ್ಯಾಂಪಸ್ ಫ್ರಂಟ್ ಇದರ ಬಂಟ್ವಾಳ ಘಟಕ ಕಾರ್ಯದರ್ಶಿ ಸಫ್ರೀನಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.