ಮಂಗಳೂರು/ಮಣಿಪುರ: ಮಣಿಪುರದಲ್ಲಿ ಮತ್ತೆ ಹಿಂ*ಸಾಚಾರ ಭುಗಿಲೆದ್ದಿದೆ. ಜಿರಿಬಾಮ್ ಜಿಲ್ಲೆಯಿಂದ ನಾಪತ್ತೆಯಾದ ಆರು ಜನರ ಪೈಕಿ ಮೂವರ ಶ*ವಗಳು ಶುಕ್ರವಾರ(ನ.15) ರಾತ್ರಿ ಮಣಿಪುರ-ಅಸ್ಸಾಂ ಗಡಿಯಲ್ಲಿರುವ ಜಿರಿ ಮತ್ತು ಬರಕ್ ನದಿಗಳ ಸಂಗಮದ ಬಳಿ ಪತ್ತೆಯಾಗಿವೆ. ಈ ಕೃ*ತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದ್ದು, ಇದೀಗ ಪ್ರತಿಭಟನೆ ಹಿಂಸಾಚಾರದತ್ತ ತಿರುಗಿದೆ.
ಆಕ್ರೋಶಿತರ ಗುಂಪು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ಖಾಸಗಿ ನಿವಾಸದ ಮೇಲೆ ದಾ*ಳಿ ನಡೆಸಿದೆ. ಈ ವೇಳೆ ಸಿಎಂ ಮನೆಯಲ್ಲಿ ಇರಲಿಲ್ಲ. ಅವರ ಕಚೇರಿಯಲ್ಲಿದ್ದದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಸಿಎಂ ಬಿರೇನ್ ಸಿಂಗ್ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಲ್ಯಾನ್‌ಫೆಲೆ ಸಂಕೇತೆಲ್‌ನಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಪಂ ರಂಜನ್, ಗ್ರಾಹಕರ ವ್ಯವಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಎಲ್. ಸುಸಿಂದ್ರೋ ಸಿಂಗ್ ಮನೆ ಮೇಲೂ ದಾ*ಳಿ ನಡೆಸಿದೆ. ಅಲ್ಲದೇ, ಆರು ಶಾಸಕರ ಮನೆ ಮೇಲೆ ದಾ*ಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಭಾರಿ ಸಂಘರ್ಷ ನಡೆದಿದ್ದು, ಪ್ರತಿಭಟನಾಕಾರರನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ.
ಹಿಂ*ಸಾಚಾರ ಕ್ಷಣದಿಂದ ಕ್ಷಣಕ್ಕೆ ಭುಗಿಲೇಳುತ್ತಿದ್ದಂತೆ ಪರಿಸ್ಥಿತಿಯ ಗಂ*ಭೀರತೆ ಅರಿತ ರಾಜ್ಯ ಸರ್ಕಾರ ಇಂಫಾಲ್ ನಲ್ಲಿ ಕರ್ಫ್ಯೂ ವಿಧಿಸಿದೆ. ಪ್ರತಿಭಟನೆಯು ಹಿಂ*ಸಾಸ್ವರೂಪ ಪಡೆದ ಹಿನ್ನೆಲೆಯಲ್ಲಿ ಆರು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಅನುಮಾನ ಅನ್ನೋದು ದೊಡ್ಡ ಪಿಡುಗು ಎಂದರೆ ತಪ್ಪಾಗಲಾರದು. ಸುಂದರ ಸಂಸಾರವ ಒಡೆದು ಹಾಕಲು ಅನುಮಾನವೆಂಬ ಒಂದು ಬೀಜ ಇದ್ದರೆ ಸಾಕು. ಅದೆಷ್ಟೋ ಸಂಸಾರಗಳು ಹಾಳಾಗಿರುವುದು ಅನುಮಾನ ಅನ್ನೋ ಕೆಟ್ಟ ಚಾಳಿಯಿಂದಾಗಿ ಎನ್ನಬಹುದು.
ಅದೇ ರೀತಿ, ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಅನುಮಾನಪಡಲು ಹೋಗಿ ದೊಡ್ಡ ಸಂಕಷ್ಟಕ್ಕೆ ಸುಲುಕಿಕೊಂಡ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
ಪತ್ನಿಯ ನಡವಳಿಕೆ ಮೇಲೆ ಅನುಮಾನ :
ಪತ್ನಿಯ ನಡವಳಿಕೆಯ ಮೇಲಿನ ಅನುಮಾನದಿಂದ ಕಾನ್‌ಸ್ಟೆಬಲ್ ರಾಕೇಶ್ ಕುಮಾರ್ ಆಕೆಯನ್ನು ಪರೀಕ್ಷಿಸಲು ನಕಲಿ ಇನ್‌ಸ್ಟಾಗ್ರಾಮ್ ಖಾತೆಯನ್ನು ರಚಿಸಿ, ಅದರಿಂದ ಮೆಸೆಜ್ ಮಾಡಲು ಮುಂದಾಗಿದ್ದಾನೆ. ದುರಂತ ತಾನು ಬೀಸಿದ ಗಾಳಕ್ಕೆ ತಾನೇ ಸಿಲುಕಿಕೊಂಡಿದ್ದಾನೆ. ಪತ್ನಿಯಲ್ಲಿರುವ ತಪ್ಪನ್ನು ಬಹಿರಂಗಪಡಿಸುವ ಬದಲು ಆತನ ವಂಚನೆಯೇ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಂತರ ಪೊಲೀಸರು ಆರೋಪಿ ಪತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು :
ಜೂನ್ 21, 2024 ರಂದು, ಮಹಿಳೆ ಹರ್ದೋಯ್‌ನಲ್ಲಿರುವ ಸೈಬರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು, “ಗೌರವ್ ಕುಮಾರ್” ಎಂಬ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಸಭ್ಯ ಸಂದೇಶಗಳನ್ನು ಮಾಡಲಾಗುತ್ತಿದೆ ಎಂದು ಅಲ್ಲಿ ಬರೆದುಕೊಂಡಿದ್ದರು. ಆಕೆಯ ಹೇಳಿಕೆಯ ಪ್ರಕಾರ, ‘ಸಂದೇಶಗಳಲ್ಲಿ ಭಾಭಿ ಜೀ, ನೀವು ತುಂಬಾ ಹಾಟ್ ಆಗಿದ್ದೀರಿ’ ಎಂಬಂತಹ ಅನುಚಿತ ಕಾಮೆಂಟ್‌ಗಳನ್ನು ಒಳಗೊಂಡಿತ್ತು, ಜೊತೆಗೆ ‘ಫ್ಲರ್ಟ್’ ಮಾಡಲು ನಿರಂತರ ಪ್ರಯತ್ನ ಮಾಡುವಂತೆ ತೋರುತ್ತಿತ್ತು.
‘ನನಗೆ ಈ ವ್ಯಕ್ತಿಯ ಪರಿಚಯ ಇಲ್ಲ, ಅವನ ಸಂದೇಶಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ, ನಾನು ಅವರನ್ನು ಬ್ಲಾಕ್ ಮಾಡಿದರೂ ಬೇರೆ ಬೇರೆ ಖಾತೆಗಳಿಂದ ನನಗೆ ಸಂದೇಶ ಕಳುಹಿಸುತ್ತಲೇ ಇದ್ದಾನೆ. ಇದರಿಂದ ನನಗೆ ಬಹಳ ಸಮಸ್ಯೆ ಆಗಿದೆ, ನನಗೆ ಸಹಾಯ ಮಾಡಿ’ ಎಂದು ಸೈಬರ್ ಠಾಣೆ ಮೆಟ್ಟಿಲೇರಿದ್ದರು.
ತನಿಖೆಯಿಂದ ಬಯಲಾದ ಆಘಾತಕಾರಿ ಸತ್ಯ :
ಅಧಿಕಾರಿಗಳು ತಮ್ಮ ತನಿಖೆಯನ್ನು ಪ್ರಾರಂಭಿಸಿದಾಗ, ನಕಲಿ ಇನ್‌ಸ್ಟಾಗ್ರಾಮ್ ಐಡಿಯನ್ನು ಆಪರೇಟ್ ಮಾಡಿದ್ದು ಬೇರಾರೂ ಅಲ್ಲ ಮಹಿಳೆಯ ಪತಿ ರಾಕೇಶ್ ಕುಮಾರ್ ಅನ್ನೋದು ತಿಳಿದುಬಂದಿದೆ. ರಾಯ್‌ಬರೇಲಿ ಪೊಲೀಸ್ ಲೈನ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾನ್‌ಸ್ಟೆಬಲ್ ತನ್ನ ಪತ್ನಿಯ ಬಗ್ಗೆ ಅನುಮಾನೊಂಡು ಈ ರೀತಿ ಮೆಸೆಜ್‌ಗಳನ್ನು ಮಾಡುತ್ತಿದ್ದನಂತೆ. ಆದರೆ ಈಗ ಬೇರೆಯವರ ತಪ್ಪನ್ನು ಕಂಡುಹಿಡಿಯಲು ಹೋಗಿ ತಾನೇ ದೊಡ್ಡ ತಪ್ಪು ಮಾಡಿ ಬಂಧಿಯಾಗಿದ್ದಾನೆ.
ಈ ನಡುವೆ ಸರ್ಕಲ್ ಆಫೀಸರ್ (ಸಿಒ) ಸೂಚನೆ ಮೇರೆಗೆ ರಾಕೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಯನ್ನು ಸಬ್ ಇನ್ಸ್‌ಪೆಕ್ಟರ್ ನಿರ್ವಹಿಸುತ್ತಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿ, ಮಹಿಳೆ ಈಗಾಗಲೇ ತನ್ನ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದರು. ಇತ್ತೀಚಿನ ಘಟನೆ ಕಾನ್‌ಸ್ಟೆಬಲ್‌ನ ಇಮೇಜ್‌ಗೆ ಮತ್ತಷ್ಟು ಕಳಂಕ ತಂದಿದೆ. ಅವರ ನಡವಳಿಕೆಯ ಬಗ್ಗೆ ಗಂಭೀರ ಕಳವಳವನ್ನು ಸಹ ಹುಟ್ಟುಹಾಕಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ದುರುಪಯೋಗವನ್ನು ಈ ಘಟನೆ ಸಹ ಎತ್ತಿ ತೋರಿಸುತ್ತದೆ.
ಮಕ್ಕಳಿಗಾಗಿ ಪ್ರತಿಯೊಬ್ಬ ಪೋಷಕರು ತುಂಬಾ ಕಷ್ಟಪಡುತ್ತಾರೆ. ಉತ್ತಮ ಭವಿಷ್ಯ ನೀಡಲು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಮಕ್ಕಳು ಮಾಡುವ ಕೆಲವು ಕೆಲಸಗಳು ಪೋಷಕರಿಗೆ ಕಿರಿಕಿರಿ ಉಂಟುಮಾಡುತ್ತವೆ. ವಿಶೇಷವಾಗಿ ಓದಿನ ವಿಷಯದಲ್ಲಿ ಮಕ್ಕಳಿಗೆ ಶಿಕ್ಷೆ ನೀಡದೇ ಜಾಣ್ಮೆಯಿಂದ ಅವರನ್ನು ಓದುವಂತೆ ಮಾಡುವುದು ಹೇಗೆ? ಎಂಬ ಕೆಲವು ಸರಳ ಐಡಿಯಾಗಳು ಇಲ್ಲಿವೆ.
ಓದಿಸುವ ಸರಳ ಮಾರ್ಗ :
ಮಕ್ಕಳು ದೊಡ್ಡವರಂತೆ ಅಲ್ಲ. ಅವರಿಗೆ ಯಾವುದೇ ನೋವುಗಳು ಅರಿತಿರುವುದಿಲ್ಲ. ಆದ್ದರಿಂದ ಯಾವಾಗಲೂ ಸಂತೋಷದಿಂದ ವರ್ತಮಾನವನ್ನು ಚೆನ್ನಾಗಿ ಆನಂದಿಸುತ್ತಾರೆ. ಆಟ ತುಂಟಾಟಗಳಲ್ಲಿ ಮುಳುಗಿರುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಆದ್ದರಿಂದ ಮಕ್ಕಳಿಗೆ ಓದಿನ ಬಗ್ಗೆ ಆಸಕ್ತಿ ಮೂಡಬೇಕೆಂದರೆ ಅವರೊಂದಿಗೆ ಪ್ರೀತಿಯಿಂದ ಮಾತನಾಡುವುದು ಅನಿವಾರ್ಯ. ಇಂದಿನ ಕಾಲದಲ್ಲಿ ಅನೇಕ ಪೋಷಕರು ವಿದ್ಯಾವಂತರಾಗಿದ್ದು, ಮಕ್ಕಳಿಗಿಂತ ಮೊದಲು ಪೋಷಕರು ಓದಿನ ಬಗ್ಗೆ ಆಸಕ್ತಿ ತೋರಿಸಬೇಕು. ಮಕ್ಕಳಿಗೆ ಓದುವ ಸಮಯವನ್ನು ನಿಗದಿಪಡಿಸಿ, ಆ ಸಮಯದಲ್ಲಿ ಮಕ್ಕಳು ಮಾತ್ರವಲ್ಲ ಪೋಷಕರು ಕೂಡ ಮಕ್ಕಳ ಜೊತೆ ಕುಳಿತು ಓದಿದರೆ ಮಾತ್ರ ಮಕ್ಕಳು ಕೂಡ ಓದುತ್ತಾರೆ.
ಮಕ್ಕಳು ಓದಲು ಕೆಲವು ಟ್ರಿಕ್ ಬಳಸುವುದು ಮುಖ್ಯ. ಓದಿದರೆ ಮಾತ್ರ ಆಟವಾಡಲು ಕಳುಹಿಸುತ್ತೇನೆ. ಇಲ್ಲದಿದ್ದರೆ ಕಳುಹಿಸುವುದಿಲ್ಲ, ಎಂದು ತಮಾಷೆಯಾಗಿ ಹೇಳಬೇಕು, ಇಲ್ಲದಿದ್ದರೆ, ಸ್ವಲ್ಪ ಹೊತ್ತು ಆಟವಾಡು, ಸ್ವಲ್ಪ ಹೊತ್ತು ಓದು ಎಂದು ಪ್ರೀತಿಯಿಂದ ಹೇಳಲು ಪ್ರಯತ್ನಿಸಬೇಕು. ಸಾಧ್ಯವಾದಷ್ಟು ಮಕ್ಕಳಿಗೆ ಮನೆ ಪಾಠ ಕಲಿಸಲು ಪ್ರಯತ್ನಿಸಬೇಕು. ಮಕ್ಕಳು ಚೆನ್ನಾಗಿ ಓದಬೇಕೆಂದರೆ ಅವರಿಗೆ ಸೂಕ್ತ ಸಮಯವನ್ನು ಮೀಸಲಿಡಬೇಕು. ಅದೇ ರೀತಿ ಅವರು ಶ್ರದ್ಧೆಯಿಂದ ಓದಲು ಸೂಕ್ತ ವಾತಾವರಣವನ್ನು ಕಲ್ಪಿಸಬೇಕಾದ ಜವಾಬ್ದಾರಿ ಪೋಷಕರ ಮೇಲಿರುತ್ತದೆ. ಮನೆಯ ವಾತಾವರಣ ಮಕ್ಕಳಿಗೆ ಇಷ್ಟವಾಗದಿದ್ದರೆ, ಮನೆಯಲ್ಲಿ ಮಕ್ಕಳಿಗಾಗಿ ಒಂದು ಸ್ಥಳವನ್ನು ಏರ್ಪಾಟು ಮಾಡಿ. ಮಕ್ಕಳಿಗೆ ಓದಿನ ಬಗ್ಗೆ ಆಸಕ್ತಿ ಮೂಡುತ್ತದೆ.
ಮಕ್ಕಳಿಗೆ ಕೇವಲ ಓದು ಮಾತ್ರ ಉಪಯುಕ್ತವಲ್ಲ. ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸುತ್ತಲೇ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡುವಂತೆ ಮಾಡಬೇಕು. ಅಂದರೆ ಹೆಚ್ಚಿನ ಮಕ್ಕಳಿಗೆ ಆಟಗಳೆಂದರೆ ತುಂಬಾ ಇಷ್ಟ. ಆದ್ದರಿಂದ ಅವರ ಇಷ್ಟಗಳನ್ನು ತಿಳಿದುಕೊಂಡು ಅದರಲ್ಲಿ ಪ್ರೋತ್ಸಾಹಿಸಬೇಕು. ಅದೇ ರೀತಿ ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳ ಬಗ್ಗೆ ಕೂಡ ಮಕ್ಕಳಿಗೆ ಅರಿವು ಮೂಡಿಸಬೇಕು. ಅನೇಕ ಪೋಷಕರು ತಮ್ಮ ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿ ಮಾತ್ರ ಮಾಡಬೇಕೆಂದು ಬಯಸುತ್ತಾರೆ. ಇದರಿಂದ ಮಕ್ಕಳಿಗೆ ಸಮಾಜದ ಬಗ್ಗೆ ಏನೂ ತಿಳಿಯದಂತಾಗುತ್ತದೆ. ಈ ಹಂತಗಳನ್ನು ಅನುಸರಿಸಿದರೂ ಓದಿನ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲವೆಂದರೆ ಅವರು ಒತ್ತಡಕ್ಕೆ ಒಳಗಾಗಿದ್ದಾರೆಯೇ ಎಂದು ತಿಳಿದುಕೊಂಡು, ಮಕ್ಕಳ ಮೇಲೆ ಒಂದು ಕಣ್ಣಿಟ್ಟು ಗಮನಿಸುತ್ತಿರಬೇಕು.
ಮಂಗಳೂರು/ನವದೆಹಲಿ : ಇದು ಸೋಶಿಯಲ್ ಮೀಡಿಯಾ ಯುಗ. ಇಲ್ಲಿ ಟ್ರೆಂಡಿಂಗ್ ನಲ್ಲಿರೋದು ಮುಖ್ಯ. ಅದಕ್ಕಾಗಿ ಅನೇಕ ಸರ್ಕಸ್ ಮಾಡಿ ರೀಲ್ಸ್ ಗಳನ್ನು ಮಾಡಿ, ಆ ಮೂಲಕ ಲೈಕ್ಸ್, ವ್ಯೂವ್ಸ್ ಗಿಟ್ಟಿಸಿಕೊಂಡು ಫೇಮಸ್ ಆಗೋ ಬಯಕೆ ಹೆಚ್ಚಾಗಿದೆ. ಸಾರ್ವಜನಿಕ ಸ್ಥಳ, ರೈಲ್ವೇ ಸ್ಟೇಷನ್, ಬಸ್ ಸ್ಟ್ಯಾಂಡ್ , ಹೀಗೆ ಎಲ್ಲೆಂದರಲ್ಲಿ ರೀಲ್ಸ್ ಹುಚ್ಚಾಟ ಜಾಸ್ತಿಯಾಗಿದೆ. ಇದಕ್ಕೆ ಬ್ರೇಕ್ ಹಾಕಲು ಭಾರತೀಯ ರೈಲ್ವೇ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಇದೀಗ ರೈಲುಗಳಲ್ಲಿ ರೀಲ್ಸ್ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಭಾರತೀಯ ರೈಲ್ವೇ ಇಲಾಖೆ ಮುಂದಾಗಿದೆ. ಈಗಾಗಲೇ ಎಲ್ಲಾ ವಲಯಗಳಲ್ಲಿಯೂ ಸೂಚನೆ ನೀಡಿದೆ. ಇಲಾಖೆಯ ನಿಯಮದನುಸಾರ ಇನ್ಮುಂದೆ ಯಾರಾದರೂ ರೈಲುಗಳಲ್ಲಿ, ಸ್ಟೇಷನ್ ಗಳಲ್ಲಿ ರೀಲ್ಸ್ ಮಾಡಿ, ಇತರ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವ ಅಥವಾ ರೈಲ್ವೇ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ದ ಪ್ರಕರಣ (ಎಫ್ಐಆರ್) ದಾಖಲಿಸಲು ರೈಲ್ವೇ ಮಂಡಳಿ ಆದೇಶಿಸಿದೆ.
ಕೇಸ್ ಬೀಳುತ್ತೆ ಹುಷಾರ್!
ರೈಲ್ವೇ ಕೋಚ್ ಗಳು, ರೈಲು ನಿಲ್ದಾಣಗಳು ಮತ್ತು ರೈಲ್ವೇ ಆವರಣದಲ್ಲಿ ಇಂತಹ ರೀಲ್ಸ್ ಗಳನ್ನು ಮಾಡುವವರ ವಿರುದ್ದ ಕಠಿಣ ಕ್ರಮ ಕ್ಯಗೊಳ್ಳಲಾಗುವುದು ಎಂದು ತಿಳಿಸಿದೆ. ಅದೇ ರೀತಿ ರೈಲುಗಳಲ್ಲಿ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ರೀಲ್ಸ್ ಮಾಡುವುದು ಅಥವಾ ಫೋಟೋ ತೆಗೆಯುವುದು ಕಂಡುಬಂದರೆ ರೈಲ್ವೇ ರಕ್ಷಣಾ ಪಡೆ (RPF), ಸರ್ಕಾರಿ ರೈಲ್ವೇ ಪೋಲಿಸ್ (GRP) ಪ್ರಕರಣ ದಾಖಲಿಸಿಕೊಳ್ಳುತ್ತದೆ.
ಹಾಗಾದರೆ ನೀವು ಯೋಚನೆ ಮಾಡಬಹುದು, ಅಧಿಕಾರಿಗಳು ನೋಡದ ಹಾಗೆ ಗೌಪ್ಯವಾಗಿ ರೀಲ್ಸ್ ಮಾಡಬಹುದಲ್ವಾ ಅಂತ. ಹಾಗೊಂದು ವೇಳೆ ಮಾಡಿದ್ರೋ ತಗಲಾಕ್ಕೊಂತೀರಿ. ಅದು ಹೇಗೆ ಅಂದ್ರೆ, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಬಳಿಕ ಅಧಿಕಾರಿಗಳು ಪರೀಶಿಲನೆ ನಡೆಸಿ ಸಂಬಂಧಪಟ್ಟವರನ್ನು ಹುಡುಕಿ ಬಂಧಿಸಲಿದ್ದಾರೆ. ಈ ಮೂಲಕ ರೈಲು ನಿಲ್ದಾಣ, ರೈಲ್ವೇ ಕೋಚ್ ಹಾಗೂ ರೈಲ್ವೇ ಆವರಣಗಳಲ್ಲಿ ರೀಲ್ಸ್ ಮಾಡುವವರಿಗೆ ಭಾರತೀಯ ರೈಲ್ವೇ ಇಲಾಖೆ ರೀಲ್ಸ್ ಹಾಗೂ ಫೋಟೋ ತೆಗೆಯದಂತೆ ಎಚ್ಚರಿಕೆ ಕೊಟ್ಟಿದೆ.