Connect with us

LATEST NEWS

ಒಲಿಂಪಿಕ್ಸ್​ ವೇಳೆ ಅಶಿಸ್ತಿನ ವರ್ತನೆ ತೋರಿದ ಆರೋಪ : ಮಹಿಳಾ ಕುಸ್ತಿಪಟು ವಿನೇಶ್​ ಫೋಗಟ್ ಅಮಾನತು..!

Published

on

ನವದೆಹಲಿ : ಟೋಕಿಯೊ ಒಲಿಂಪಿಕ್ಸ್​ ವೇಳೆ ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ಪ್ರಸಿದ್ಧ ಮಹಿಳಾ ಕುಸ್ತಿಪಟು ವಿನೇಶ್​ ಫೋಗಟ್ ಅವರನ್ನು ಭಾರತೀಯ ಕುಸ್ತಿ ಒಕ್ಕೂಟ ತಾತ್ಕಾಲಿಕವಾಗಿ ಅಮಾನತು ಮಾಡಿದೆ.

 

ಇವರ ಜೊತೆಗೆ ದುರ್ವರ್ತನೆ ತೋರಿದ ಯುವ ಕುಸ್ತಿಪಟು ಸೋನಮ್​ ಮಲಿಕ್ ಅವರಿಗೂ ನೋಟಿಸ್​ ಜಾರಿ ಮಾಡಿದೆ.

ಟೋಕಿಯೊ ಗೇಮ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಹೀನಾಯ ಸೋಲಿನಿಂದ ಹೊರಬಿದ್ದ ವಿನೀಶ್‌ಗೆ ನೀಡಲಾಗಿರುವ ಅಶಿಸ್ತಿನ ವರ್ತನೆಯ ನೋಟಿಸ್​ಗೆ ಉತ್ತರಿಸಲು ಆಗಸ್ಟ್ 16ರವರೆಗೆ ಸಮಯ ನೀಡಲಾಗಿದೆ ಎಂದು WFI ಮಾಧ್ಯಮಕ್ಕೆ ತಿಳಿಸಿದೆ.

ಒಲಿಂಪಿಕ್ಸ್​ಗೂ ಮುನ್ನ ವಿನೇಶ್​ ತರಬೇತಿ ಪಡೆಯುತ್ತಿದ್ದ ಹಂಗೇರಿಯಿಂದ ಟೋಕಿಯೊಗೆ ನೇರವಾಗಿ ಕೋಚ್​ ವಾಲರ್ ಅಕೊಸ್​ ಜೊತೆಗೆ​ ತೆರಳಿದ್ದರು.

ಆದರೆ, ಅವರು ಭಾರತೀಯ ಕುಸ್ತಿಪಟುಗಳ ಜೊತೆಗೆ ತರಬೇತಿ ನಡೆಸಲು ಮತ್ತು ಕ್ರೀಡಾ ಗ್ರಾಮದಲ್ಲಿ ಉಳಿದುಕೊಳ್ಳಲು ತಿರಸ್ಕರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಜೊತೆಗೆ ವಿನೇಶ್​ ಭಾರತೀಯ ಕ್ರೀಡಾ ತಂಡದ ಅಧಿಕೃತ ಪ್ರಾಯೋಜಕರಾದ ಶಿವ್ ನರೇಶ್ ಲೋಗೋವಿದ್ದ ಕುಸ್ತಿ ಧಿರಿಸನ್ನು ಧರಿಸಿರಲಿಲ್ಲ. ಅವರು ತಮ್ಮ ಪಂದ್ಯಗಳಲ್ಲಿ ನೈಕ್ ಲೋಗೋ ಇದ್ದ ಕುಸ್ತಿ ಧಿರಿಸನ್ನು ಧರಿಸುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದಲ್ಲದೆ ಕ್ರೀಡಾ ಗ್ರಾಮದಲ್ಲಿ ಇತರೆ ಕುಸ್ತಿಪಟುಗಳಾದ ಸೀಮಾ ಬಿಸ್ಲಾ, ಸೋನಮ್ ಮಲಿಕ್​ ರೂಮಿನ ಪಕ್ಕದಲ್ಲಿ ಉಳಿದುಕೊಳ್ಳಲು ಕೂಡ ನಿರಾಕರಿಸಿದ್ದರು. ಈ ಕುಸ್ತಿ ಪಟುಗಳು ಭಾರತದಿಂತ ಪ್ರಯಾಣ ಮಾಡಿರುವುದರಿಂದ ತಮಗೆ ಕೊರೊನಾ ಸೋಂಕು ತಗುಲಬಹುದು ಎಂದು ವಾದ ಮಾಡಿದ್ದರು.ಅಲ್ಲದೆ, ಒಂದು ದಿನ ಅವರ ತರಬೇತಿಗೆ ಭಾರತೀಯ ಹುಡುಗಿಯರ ಜೊತೆಗೆ ತರಬೇತಿ ನಡೆಸಲು ಸಮಯದ ಹೊಂದಾಣಿಕೆಯಾಗದಿದ್ದಕ್ಕಾಗಿ ಅವರು ಕ್ರೀಡಾಕೂಟದಲ್ಲಿ ಭಾರತೀಯ ಕುಸ್ತಿಪಟುಗಳ ಜೊತೆಗೆ ತರಬೇತಿ ನಡೆಸದಿರಲು ತೀರ್ಮಾನ ತೆಗೆದುಕೊಂಡಿದ್ದರೆಂದು WFI ಮಾಹಿತಿ ನೀಡಿದೆ.

“ಹಿರಿಯ ಕ್ರೀಡಾಪಟುವಾಗಿ ಈ ರೀತಿ ವರ್ತಿಸುವುದು ತಪ್ಪು, ಇದು ಸಂಪೂರ್ಣ ಅಶಿಸ್ತಿನ ವರ್ತನೆ. ಹಾಗಾಗಿ, ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಮತ್ತು ಎಲ್ಲಾ ಕುಸ್ತಿ ಚಟುವಟಿಕೆಗಳಿಂದ ನಿರ್ಬಂಧಿಸಲಾಗಿದೆ.

ಅವರು ನೋಟಿಸ್​ಗೆ ಉತ್ತರಿಸುವವರೆಗೂ ಮತ್ತು ಡಬ್ಲ್ಯುಎಫ್‌ಐ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೆ ಯಾವುದೇ ರಾಷ್ಟ್ರೀಯ ಅಥವಾ ಇತರ ದೇಶೀಯ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಿಲ್ಲ” ಎಂದು ಡಬ್ಲ್ಯುಎಫ್‌ಐ ಮೂಲ ಪಿಟಿಐಗೆ ತಿಳಿಸಿದೆ.

ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಒಲಿಂಪಿಕ್ಸ್​ನಲ್ಲಿ ಕುಸ್ತಿಪಟುಗಳ ವರ್ತನೆಯ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿ ಡಬ್ಲ್ಯುಎಫ್‌ಐಗೆ ಪತ್ರ ಬರೆದಿದ್ದು, ನೀವೇಕೆ ನಿಮ್ಮ ಕ್ರೀಡಾಪಟುಗಳನ್ನು ನಿಯಂತ್ರಿಸಲಾಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ .

DAKSHINA KANNADA

ಹೊತ್ತಿ ಉರಿದು ಭಸ್ಮ*ವಾದ ಸ್ವೀಟ್ ಕಾರ್ನ್ ಸ್ಟಾಲ್‌..!! ಓಡಿ ಜೀವ ಉಳಿಸಿಕೊಂಡ ಸ್ಟಾಲ್ ಮಾಲೀಕ, ಗ್ರಾಹಕರು

Published

on

ಉಳ್ಳಾಲ: ರಸ್ತೆಯ ಬದಿಯಲ್ಲಿ ಇರಿಸಲಾಗಿದ್ದ ಸ್ವೀಟ್ ಕಾರ್ನ್ ಸ್ಟಾಲ್ ಒಂದರಲ್ಲಿ ಆಕಸ್ಮಿ*ಕ ಬೆಂಕಿಯಿಂದಾಗಿ ಸ್ಟಾಲ್ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಉಳ್ಳಾಲದ ದೇರಳಕಟ್ಟೆಯಲ್ಲಿ ನಡೆದಿದೆ.

sweet corn burn

ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ. ರಸ್ತೆಯ ಬದಿಯಲ್ಲೇ ಇರಿಸಲಾಗಿದ್ದ ಸ್ವೀಟ್ ಕಾರ್ನ್ ಅಂಗಡಿ ಮಾಲೀಕ ಕಾರ್ನ್ ತಯಾರಿಸುವಾಗ ಈ ಅವಘಡ ಸಂಭವಿಸಿದೆ. ತಕ್ಷಣ ಅಂಗಡಿ ಮಾಲೀಕ ಹಾಗೂ ಸ್ವೀಟ್ ಕಾರ್ನ ತಿನ್ನಲು ಬಂದಿದ್ದ ಗ್ರಾಹಕರು ಓಡಿ ತಪ್ಪಿಸಿಕೊಂಡಿದ್ದಾರೆ. ಸ್ಥಳೀಯರು ತಕ್ಷಣ ಮರಳು ಹಾಗೂ ನೀರನ್ನ ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಸ್ಟಾಲ್ ಉರಿದು ಭಸ್ಮವಾಗಿ ಹೋಗಿದೆ.

Read More..; ಬೆಂಕಿ ಹಚ್ಚಿ ಯುವತಿಯ ಬರ್ಬ*ರ ಹ*ತ್ಯೆ..!! ಕತ್ತು ಕೊಯ್ದು ಸು*ಟ್ಟು ಹಾಕಿರುವ ಶಂಕೆ

sweet corn burn 2

Continue Reading

LATEST NEWS

ಬೆಂಕಿ ಹಚ್ಚಿ ಯುವತಿಯ ಬರ್ಬ*ರ ಹ*ತ್ಯೆ..!! ಕತ್ತು ಕೊಯ್ದು ಸು*ಟ್ಟು ಹಾಕಿರುವ ಶಂಕೆ

Published

on

ಬೆಳಗಾವಿ: 25 ರಿಂದ 30 ವರ್ಷದ ಯುವತಿಯೊಬ್ಬಳನ್ನು ಬರ್ಬರವಾಗಿ ಹ*ತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆದಿದೆ. ಇಲ್ಲಿನ ಗ್ರಾಮೀಣ ಪೊಲೀಸ್ ಠಾಣ ವ್ಯಾಪ್ತಿಯ ಮಮದಾಪುರ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು ಕೊ*ಲೆ ಮಾಡಿದವರಾರು? ಹ*ತ್ಯೆ ಆದವಳು ಯಾರು? ಎಂಬುದಾಗಲಿ ಗೊತ್ತಾಗಿಲ್ಲ. ನಿನ್ನೆ(ಎ.18) ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾಲುವೆ ಪಕ್ಕದಲ್ಲಿ ಹೊಗೆಯಾಡುತ್ತಿರುವುದನ್ನು ಜನರು ಗಮನಿಸಿದ್ದಾರೆ. ಬಿಸಿಲಿನ ತಾಪಕ್ಕೆ ಹುಲ್ಲು ಇರುವ ಜಾಗಕ್ಕೆ ಬೆಂಕಿ ಬಿದ್ದಿರಬಹುದು ಎಂದು ಕೆಲವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಯುವತಿಯ ಮೃತದೇಹ ಕಂಡು ಬಂದಿದೆ.

murder

ಯುವತಿಯ ಕತ್ತು ಕೊಯ್ದು ಬಳಿಕ ಆಕೆಯ ಗುರುತು ಪತ್ತೆಯಾಗದಂತೆ ಸುಟ್ಟು ಹಾಕಿರಬೇಕು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ಹಾಗೂ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಯುವತಿಯನ್ನು ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಸುಟ್ಟು ಹಾಕುವ ಪ್ರಯತ್ನ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಈ ಯುವತಿ ಯಾರು ಹಾಗೂ ಯಾರು ಕೊಲೆ ಮಾಡಿದ್ದಾರೆ ಅನ್ನೋದು ತನಿಖೆಯಿಂದ ಗೊತ್ತಾಗಬೇಕಾಗಿದೆ.

Read More..: ಉಡುಪಿಯಲ್ಲಿ ಭೀಕರ ಅಪಘಾ*ತ; ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವು

Continue Reading

LATEST NEWS

ಉಡುಪಿಯಲ್ಲಿ ಭೀಕರ ಅಪಘಾ*ತ; ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವು

Published

on

ಉಡುಪಿ : ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವನ್ನಪ್ಪಿರುವ ಘಟನೆ ಉಡುಪಿಯ ಹೇರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಕೃಷ್ಣ ಗಾಣಿಗ ಮೃ*ತ ದುರ್ದೈವಿ. ಉಡುಪಿ ನಗರ ಸಭೆಯಲ್ಲಿ ಎಲೆಕ್ಟ್ರಿಷನ್ ಆಗಿ ಕೃಷ್ಣ ಕೆಲಸ ಮಾಡುತ್ತಿದ್ದರು. ಸಂತೆಕಟ್ಟೆ ಮಾರ್ಗವಾಗಿ ಬ್ರಹ್ಮಾವರದ ಕಡೆಗೆ ಸಾಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಲಾರಿ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ.

ಲಾರಿ ಕೃಷ್ಣ ಅವನ್ನು ಕೆಲ ದೂರ ಎಳೆದೊಯ್ದಿದೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ರಸ್ತೆಯಲ್ಲಿ ಕೆಲ ಕಾಲ ಸಂಚಾರ ದಟ್ಟನೆ ಉಂಟಾಗಿತ್ತು.

ಬ್ರಹ್ಮಾವರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Continue Reading

LATEST NEWS

Trending