Sunday, May 16, 2021

ಸರಕಾರದ ಗೈಡ್ ಲೈನ್ಸ್ ಗೆ ವೈನ್ ಮರ್ಚೆಂಟ್ಸ್‌  ಅಸೋಸಿಯೇಷನ್ ಸದಸ್ಯರ ಆಕ್ರೋಶ..!

ಉಡುಪಿ: ಸರಕಾರದ ಹೊಸ ಗೈಡ್‌ಲೈನ್ಸ್‌ಗಳು   ಮದ್ಯದಂಗಡಿಗಳಿಗೆ ಸಂಕಟಕ್ಕೀಡು  ಮಾಡಿದೆ. ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಿರುವುದಕ್ಕೆ ನಮ್ಮ ವಿರೋಧವಿದೆ ಎಂದು ವೈನ್ ಮರ್ಚೆಂಟ್ಸ್‌  ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಹೇಳಿಕೆ ನೀಡಿದ್ದಾರೆ.ಕೊರೊನಾದಿಂದ ಮಧ್ಯ ಮಾರಾಟಗಾರರಿಗೆ ಆಗುತ್ತಿರುವ ತೊಂದರೆಗಳ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು  ಶೇಕಡ 50 ರಷ್ಟಾದರೂ ಗ್ರಾಹಕರನ್ನು ಇರಿಸಿಕೊಂಡು ವ್ಯಾಪಾರ ಮಾಡುವುದಕ್ಕೆ  ನಮಗೆ ಅವಕಾಶ ಮಾಡಿ  ಕೊಡಿ. ಕೇವಲ ಪಾರ್ಸೆಲ್ ನೀಡುವುದರಿಂದ ವ್ಯಾಪಾರ ಆಗುವುದಿಲ್ಲ.ಸರಕಾರ ಕೇವಲ ತನ್ನ ಆದಾಯ ನೋಡಿದರೆ ಮಾತ್ರ ಸಾಲೋದಿಲ್ಲ. ಮದ್ಯ ಮಾರಾಟಗಾರರ ಹಿತವನ್ನು ಕಾಪಾಡುವಂತಹ ಕೆಲಸ ಮಾಡಬೇಕು.

ಕೋವಿಡ್ ನಿಯಮಾವಳಿ ಪಾಲಿಸಲು ನಾವು ಬದ್ದರಿದ್ದೇವೆ.ಆಹಾರದೊಂದಿಗೆ ಮಧ್ಯವನ್ನು ಸೇವಿಸಲು ಅವಕಾಶ ಮಾಡಿಕೊಡಿ.  ರಾಜ್ಯದಲ್ಲಿ 5,300 ರೆಸ್ಟೋರೆಂಟ್ ಸಹಿತ ಬಾರ್ ಇದೆ.

ಶುಭ ಕಾರ್ಯಗಳು ಆರಂಭವಾಗುವಾಗಲೇ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಪರವಾನಿಗೆ ರಿನೀವಲ್ ಮಾಡುವ ಸಮಯ ಬಂದಿದೆ.ಇಂತಹ ಸಂದರ್ಭದಲ್ಲಿ ಮಧ್ಯ ಮಾರಾಟಗಾರರ  ವಿಚಾರದಲ್ಲಿ ಸರಕಾರ ತೋರಿಸುತ್ತಿರುವ ಬೇಜವಾಬ್ದಾರಿ  ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...