Connect with us

  LATEST NEWS

  ಅಧಿಕಾರಿ, ಗ್ರಾಮಸ್ಥರ ನಡುವೆ ವಿಶ್ವಾಸ ಮೂಡಿಸುವ ಗ್ರಾಮ ವಾಸ್ತವ್ಯ;ಸಚಿವ ಎಸ್ ಅಂಗಾರ..!

  Published

  on

   

  ಅಧಿಕಾರಿ, ಗ್ರಾಮಸ್ಥರ ನಡುವೆ ವಿಶ್ವಾಸ ಮೂಡಿಸುವ ಗ್ರಾಮ ವಾಸ್ತವ್ಯ;ಸಚಿವ ಎಸ್ ಅಂಗಾರ..!

  Village Sustainability between officer and villagers; Minister S Angara..!

  ಕಡಬ: ಸರಕಾರದ ಮಹತ್ವಾಕಾಂಕ್ಷೆಯ ಜಿಲ್ಲಾಧಿಕಾರಿಯವರ ನೇತೃತ್ವದ ಪ್ರತೀ ಗ್ರಾಮ ಮಟ್ಟದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರ ಮಧ್ಯೆ ವಿಶ್ವಾಸ ಮೂಡಿಸುವ ಕಾರ್ಯ ಮಾಡಲಿದೆ ಎಂದು ಬಂದರು ಹಾಗೂ ಮೀನುಗಾರಿಕಾ ಒಳನಾಡು ಜಲಸಾರಿಗೆ  ಸಚಿವ ಎಸ್.ಅಂಗಾರ ಹೇಳಿದರು.ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಕೇಪು ಲಕ್ಷ್ಮಿಜನಾರ್ಧನ ದೇವಸ್ಥಾನದ ಸಭಾಭವನದಲ್ಲಿ ಸರಕಾರದ ಆದೇಶದಂತೆ ಗ್ರಾಮ ಮಟ್ಟದಲ್ಲಿ ನಡೆಯುವ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಜಿಲ್ಲೆಯ ಪ್ರಥಮ ಪ್ರಾಯೋಗಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇವತ್ತು ಸರಕಾರದ ಸವಲತ್ತುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎನ್ನುವ ನೆಲೆಯಲ್ಲಿ ಸರಕಾರ ಈ ವಿಶಿಷ್ಠ ಯೋಜನೆಯನ್ನು ಜಾರಿಗೆ ತಂದಿದೆ, ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರಾಜ್ಯದ ಪ್ರತೀ ಗ್ರಾಮದಲ್ಲಿ ನಡೆಯುತ್ತದೆ.ಇದರಿಂದ ಜನರ ಸಮಸ್ಯೆಯನ್ನು ಅವರ ಮನೆಬಾಗಿಲಿನಲ್ಲೇ ಪರಿಹರಿಸಲು ಸಾಧ್ಯವಾಗುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಒಬ್ಬರನ್ನೊಬ್ಬರು ನಂಬುವ ಸ್ಥಿತಿ ಇಲ್ಲದಂತಾಗಿದೆ,ಜನರಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹತ್ತಿರವಾಗುವಂತೆ ಮಾಡಲು ಗ್ರಾಮ ವಾಸ್ತವ್ಯ ಪೂರಕವಾಗಲಿದೆ ಎಂದವರು ಹೇಳಿದರು.

  ಕೃಷಿ,ಆರೋಗ್ಯ,ತೋಟಗಾರಿಕೆ,ಪಂಚಾಯತ್‍ರಾಜ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆಗಳ ಸ್ಟಾಲ್‍ಗಳು ಸಾರ್ವಜನಿಕರ ಗಮನ ಸೆಳೆದವು, ಆರಂಭದಲ್ಲಿ ಸಚಿವರು ಹಾಗೂ ಜನಪ್ರತಿನಿಧಿಗಳು ವಿವಿಧ ಸ್ಟಾಲ್‍ಗಳ ಉದ್ಘಾಟನೆ ನೆರವೇರಿಸಿದರು.

  ಅಚ್ಚುಕಟ್ಟಾದ ವ್ಯವಸ್ಥೆ ಎಲ್ಲವೂ ಕಾರ್ಯಕ್ರಮದ ಯಶಸ್ಸಿಗೆ ಪೂರಕವಾದವು. ವಿಶೇಷ ಎಂದರೆ ಒಂದೇ ವಾರದಲ್ಲಿ ವಿಲೇವಾರಿಯಾಗದ 65 ಪಿಂಚಣಿ ಅರ್ಜಿಗಳ ಪೈಕಿ 46 ಅರ್ಜಿಗಳನ್ನು ವಿಲೆವಾರಿ ಮಾಡಲಾಯಿತು. ಸಭೆಯಲ್ಲಿ ಭಾಗ್ಯಲಕ್ಷ್ಮೀ ಬಾಂಡ್ ಹಾಗೂ ವಿವಿಧ ಪಿಂಚಣಿಗಳನ್ನು ವಿತರಣೆ ಮಾಡಲಾಯಿತು.

  LATEST NEWS

  ಹೆರಿಗೆಗೆ ಹೊರಟ ಪತ್ನಿ… ಗಂಡನಿಗೆ ತಿಂಗಳಿಗಾಗುವಷ್ಟು ಅಡುಗೆ; ಪೋಸ್ಟ್ ವೈರಲ್

  Published

  on

  ಜಪಾನ್: ಸಾಮಾನ್ಯವಾಗಿ ಕೆಲ ಗಂಡಸರು ಹೊಟ್ಟೆ ಹಾಳಾಗುತ್ತೆ ಅಂತ ಹೊರಗೆ ಊಟ ಮಾಡುವುದಿಲ್ಲ, ಮನೆಯಲ್ಲಿ ಹೆಂಡತಿ ಮಾಡಿದ ಅಡುಗೆಗೆ ಇವರು ಸರಿಯಾಗಿ ಹೊಂದಿಕೊಂಡಿರುತ್ತಾರೆ. ಆದರೆ ಹೆಂಡತಿ ಯಾವುದೋ ಕಾರಣಕ್ಕೆ ಊರಿಗೆ ಹೋದಾಗ ಗಂಡನಿಗೆ ಸಣ್ಣ ಪುಟ್ಟ ಆಹಾರ ಪದಾರ್ಥಗಳನ್ನು ಮಾಡಿಕೊಳ್ಳಲು ಬಂದರೆ ಹೇಗೋ ಮ್ಯಾನೇಜ್ ಆಗುತ್ತೆ. ಆದರೆ ಕೆಲ ಗಂಡಸರಿಗೆ ಗ್ಯಾಸ್ ಆನ್ ಸಹ ಮಾಡಲು ಬರುವುದಿಲ್ಲ. ಇನ್ನೂ ಅಡುಗೆ ಮಾಡಿಕೊಳ್ಳುವುದು ದೂರದ ವಿಷಯವಾಗಿರುತ್ತದೆ. ಇಂತಹ ಗಂಡಸರಿಗೆ ಹೆಂಡತಿ ಒಂದೆರಡು ದಿನ ಊರಿಗೆ ಹೋದರೆ ಸಾಕು ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಬೀಳುವುದು ಗ್ಯಾರೆಂಟಿ.

  ಆದರೆ ಇಲ್ಲೊಬ್ಬ ಗಂಡನಿಗೆ, ತುಂಬು ಗರ್ಭಿಣಿ ಮಹಿಳೆಯೊಬ್ಬಳು ತಾನು ಹೆರಿಗೆಗೆ ಹೋದರೆ ತನ್ನ ಗಂಡ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡುವುದಿಲ್ಲ ಅಂತ ಒಂದು ತಿಂಗಳಿಗಾಗುವಷ್ಟು ಆಹಾರವನ್ನು ತಯಾರಿಸಿದ್ದಾರೆ ನೋಡಿ.

  ಅಡುಗೆ ಮಾಡಿಟ್ಟ ವಿಷಯವನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಮಹಿಳೆ

  ಜಪಾನಿನ ವ್ಯಕ್ತಿಯೊಬ್ಬರ ಪತ್ನಿ ತುಂಬು ಗರ್ಭಿಣಿ 30 ದಿನಗಳಿಗಾಗುವಷ್ಟು ಆಹಾರವನ್ನು ಸಿದ್ಧಪಡಿಸಿದ ನಂತರ ಆ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

  ಹೆರಿಗೆಯ ನಂತರ ತನ್ನ ಪತಿಯೊಂದಿಗೆ ಇರಲು ಸಾಧ್ಯವಿಲ್ಲ. ಮಹಿಳೆ ತಾನು ಇಲ್ಲದ ಸಮಯದಲ್ಲಿ ತನ್ನ ಪತಿ ಸರಿಯಾಗಿ ಊಟ, ತಿಂಡಿ ಮಾಡುವುದಿಲ್ಲ ಎಂದು ತುಂಬಾನೇ ಚಿಂತಿತಳಾಗಿ ಹೆರಿಗೆಗೆ ಹೋಗುವ ಮುಂಚೆಯೇ ಒಂದು ತಿಂಗಳಿಗಾಗುವಷ್ಟು ಊಟವನ್ನು ಬೇಯಿಸಿ, ಅದನ್ನು ಫ್ರೀಜರ್‌ನಲ್ಲಿ ಇಟ್ಟಿದ್ದಾರೆ.

  ಈ ಪೋಸ್ಟ್ ಈಗ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ..!

  ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಈ ಪೋಸ್ಟ್ ನೋಡಿ ‘‘ಎಂತಹ ಗಂಡ ಈತ, ತನ್ನ ತುಂಬು ಗರ್ಭಿಣಿಗೆ ಅಡುಗೆ ಮಾಡಿಡಲು ಅನುಮತಿಸಿದ್ದಾರೆ? ಅವನು ಸಾಮಾನ್ಯವಾಗಿ ಮನೆಯಲ್ಲಿ ಯಾವುದೇ ಕೆಲಸವನ್ನು ಸಹ ಮಾಡುವುದಿಲ್ಲ ಅಂತ ಅನ್ನಿಸುತ್ತದೆ’’ ಎಂದು ಕಾಮೆಂಟ್ ಮಾಡಿದ್ದಾರೆ.

  ಮತ್ತೊಬ್ಬರು “ಅವಳು ಎಷ್ಟು ಕರುಣಾಮಯಿ ಹೆಂಡತಿ ಇರಬೇಕು, ಅವಳು ಒಂಬತ್ತು ತಿಂಗಳಿನಿಂದ ಗರ್ಭಿಣಿಯಾಗಿದ್ದಾಳೆ ಮತ್ತು ಇಂತಹ ಸಮಯದಲ್ಲಿಯೂ ಸಹ ಗಂಡನ ಬಗ್ಗೆ ಕಾಳಜಿಯನ್ನು ಹೊಂದಿದ್ದಾರೆ” ಅಂತ ಹೇಳಿದ್ದಾರೆ.

  ಆದರೆ ಕೆಲವರು ಇದನ್ನು ಸಮಸ್ಯೆಯಾಗಿ ನೋಡಲಿಲ್ಲ ಮತ್ತು ಮಹಿಳೆಯನ್ನು ಪ್ರೀತಿಯ ಮತ್ತು ಕಾಳಜಿಯುಳ್ಳ ಹೆಂಡತಿಯಾಗಿ ಮೆಚ್ಚಿದರು.

  Continue Reading

  DAKSHINA KANNADA

  ಬೋಳಿಯಾರು ಪ್ರಕರಣದಲ್ಲಿ ಹೊರಗಿನವರು ಮೂಗು ತೂರಿಸಬೇಡಿ : ಸ್ಪೀಕರ್ ಯು.ಟಿ.ಖಾದರ್

  Published

  on

  ಮಂಗಳೂರು : ಬೋಳಿಯಾರ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಚೂರಿ ಇರಿತ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಹಾಗೂ ಸ್ಥಳೀಯರಲ್ಲದವರು ಮೂಗು ತೂರಿಸಬೇಡಿ. ಬೋಳಿಯಾರು ಅನ್ನೋದು ಸಹೋದರತೆಯಿಂದ ಇರುವ ಊರಾಗಿದ್ದು, ಸಮಸ್ಯೆಯನ್ನು ಊರಿನವರೇ ಬಗೆಹರಿಸಿಕೊಳ್ಳುತ್ತಾರೆ ಎಂದು ಮಂಗಳೂರು ವಿಧಾನಭಾ ಕ್ಷೇತ್ರದ ಶಾಸಕರೂ ಆಗಿರುವ ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.


  ಬೋಳಿಯಾರಿನ ವಿಚಾರಕ್ಕೆ ಸಂಬಂಧಿಸಿದಂತೆ ಹೊರಗಿನವರು ಬಾಯಿ ಮುಚ್ಚಿ ಕೂತರೆ ಅದೇ ದೇಶ ಪ್ರೇಮ ಎಂದು ಅವರು ಹೇಳಿದ್ದಾರೆ.

  ಭಾರತ ಮಾತಾ ಕೀ ಜೈ ಅಂತ ಯಾರು ಎಲ್ಲಿ ಬೇಕಾದ್ರೂ ಹೇಳಬಹುದು. ಆದರೆ, ಬೋಳಿಯಾರಿನಲ್ಲಿ ಬೇರೆಯೇ ಘೋಷಣೆ ಆಗಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಇದರಲ್ಲಿ ರಾಜಕೀಯ ಮಾಡಿದ್ರೆ ಯಾರಿಗೂ ಒಂದು ಓಟ್ ಕೂಡಾ ಹೆಚ್ಚು ಬರೋದಿಲ್ಲ. ನಾನೀಗ ಸ್ಪೀಕರ್ ಆಗಿರುವ ಕಾರಣ ಯಾವುದೇ ಪಕ್ಷಗಳ ಹೆಸರನ್ನು ಉಲ್ಲೇಖಿಸೋದಿಲ್ಲ. ಆದರೆ, ಅವರು ಯಾರು ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಪ್ರಕರಣವನ್ನು ರಾಜಕೀಯ ಮಾಡಲು ಹೊರಟ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.

  ಈ ವಿಚಾರವನ್ನು ದೊಡ್ಡದು ಮಾಡುವವರೇ ದೊಡ್ಡ ದೇಶದ್ರೋಹಿಗಳಾಗಿದ್ದು, ಪೊಲೀಸರಿಗೆ ಅವರ ಕೆಲಸ ಮಾಡಲು ಬಿಡಿ ಎಂದು ಹೇಳಿದ್ದಾರೆ.

  ಇದನ್ನೂ ಓದಿ  : ತಂದೆಯ ಬಂಧನದ ಬಗ್ಗೆ ವಿನೀಶ್ ಭಾವುಕ ಪೋಸ್ಟ್; ನಿಂದಿಸಿದವರಿಗೆ ಧನ್ಯವಾದ ಎಂದ ದರ್ಶನ್ ಪುತ್ರ

  99 ಜನ ಒಳ್ಳೆಯವರ ನಡುವೆ ಒಬ್ಬರು ಹಾಳು ಮಾಡುವವರು ಇರ್ತಾರೆ. ಅವರನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಅದು ಬಿಟ್ಟು ತಪ್ಪು ಮಾಡಿದವರನ್ನು ವಿಚಾರಣೆ ಮಾಡಬಾರದು, ಅವರ ಮನೆಗೆ ಹೋಗಬಾರದು ಅಂತ ಪೊಲೀಸರಿಗೆ ಒತ್ತಡ ಹಾಕುವುದು ಸರಿ ಅಲ್ಲ ಎಂದು ಸ್ಪೀಕರ್ ಖಾದರ್ ಹೇಳಿದ್ದಾರೆ.

  Continue Reading

  FILM

  ಸರಳವಾಗಿ ಮದುವೆಯಾದ ನಟಿ, ‘ಬಿಗ್ ಬಾಸ್ ಕನ್ನಡ 10’ ಸ್ಪರ್ಧಿ ಸಿರಿ

  Published

  on

  ಬೆಂಗಳೂರು/ ಮಂಗಳೂರು : ಖ್ಯಾತ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ಸಿರಿ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಜೂನ್ 13 ರಂದು ಉದ್ಯಮಿ ಮತ್ತು ನಟ ಪ್ರಭಾಕರ್ ಬೋರೇಗೌಡ ಜೊತೆಗೆ ಸರಳವಾಗಿ ವಿವಾಹವಾಗಿದ್ದಾರೆ.
  ಸಿರಿ ಪತಿ ಪ್ರಭಾಕರ್ ಮಂಡ್ಯ ಮೂಲದವರಾಗಿದ್ದು, ಬೆಂಗಳೂರಿನಲ್ಲಿದ್ದಾರೆ. ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಮದುವೆ ನಡೆದಿದೆ. ಆಪ್ತರು ಮತ್ತು ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನಡೆದಿದೆ.


  ಫೋಟೋ, ವೀಡಿಯೋ ವೈರಲ್ :

  ಎರಡು ದಿನಗಳ ಹಿಂದೆ ಸಿರಿ ಅವರ ಅರಿಶಿಣ ಶಾಸ್ತ್ರದ ವಿಡಿಯೋಗಳು ವೈರಲ್ ಆಗಿದ್ದವು. ಅದು ಸೀರಿಯಲ್ ಅಥವಾ ಸಿನಿಮಾಗಾಗಿ ಇರಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಇದು ನಿಜವಾದ ಮದುವೆಯಾಗಿದ್ದು, ಮದುವೆಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.


  ಸಿರಿ ಹಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ಸೌಂದರ್ಯ, ಸಹಜ ನಟನೆಯಿಂದ ಗಮನ ಸೆಳೆದಿದ್ದಾರೆ. ಬಿಗ್ ಬಾಸ್ ಸೀಸನ್ 10 ನಲ್ಲೂ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ಅವರಿಗೆ ಮದುವೆಯ ಬಗ್ಗೆ ಯಾವಗಲೂ ಪ್ರಶ್ನಿಸಲಾಗುತ್ತಿತ್ತು. ”ಇಷ್ಟುದಿನಗಳ ಕಾಲ ಯೋಗ್ಯ ಹುಡುಗ ಸಿಕ್ಕಿಲ್ಲ, ಮದುವೆ ಅವಶ್ಯಕತೆ ಇದೆಯಾ ಎಂಬ ಪ್ರಶ್ನೆ ಎದುರಾಗಿತ್ತು. ಹೀಗಾಗಿ ಮದುವೆ ಆಗಿಲ್ಲ” ಎಂದೇ ಅವರು ಹೇಳುತ್ತಿದ್ದರು.

  ಇದನ್ನೂ ಓದಿ : ತಂದೆಯ ಬಂಧನದ ಬಗ್ಗೆ ವಿನೀಶ್ ಭಾವುಕ ಪೋಸ್ಟ್; ನಿಂದಿಸಿದವರಿಗೆ ಧನ್ಯವಾದ ಎಂದ ದರ್ಶನ್ ಪುತ್ರ

  ಅಭಿಮಾನಿಗಳಿಂದ ಶುಭಾಶಯ

  ಸಿರಿ ದೇವಸ್ಥಾನದಲ್ಲಿ ಸರಳವಾಗಿ ಮದುವೆ ಮಾಡಿಕೊಂಡು ಶಾಕ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಿಡಿಯೋ ವೈರಲ್ ಆಗ್ತಿದೆ. ಜೊತೆಗೆ ಸಿರಿ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

  Continue Reading

  LATEST NEWS

  Trending