Saturday, August 20, 2022

ಬೆಳ್ತಂಗಡಿ: ಕರ್ತವ್ಯದಲ್ಲಿದ್ದಾಗಲೇ ಗ್ರಾಮ ಸಹಾಯಕ ಹಾರ್ಟ್‌ ಅಟ್ಯಾಕ್‌ಗೆ ಬಲಿ

ಬೆಳ್ತಂಗಡಿ: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಗ್ರಾಮ ಸಹಾಯಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಇಂದು ಬೆಳ್ತಂಗಡಿಯಲ್ಲಿ ನಡೆದಿದೆ.

ಮೇಲಂತಬೆಟ್ಟು, ಸವಣಾಲು, ಮುಂಡೂರು ಗ್ರಾಮದ ಗ್ರಾಮಸಹಾಯಕ ಸುಂದರ್ ಗೌಡ (44) ಮೃತಪಟ್ಟ ದುರ್ದೈವಿ.


ಗ್ರಾಮ ಸಹಾಯಕ ಸುಂದರಗೌಡ ಮತ್ತು ಗ್ರಾಮಲೆಕ್ಕಿಗ ಶಿವಕುಮಾರ್‌ರವರು ಮೇಲಂತಬೆಟ್ಟು ಗ್ರಾಮಲೆಕ್ಕಿಗ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ವೇಳೆ ಗ್ರಾಮಲೆಕ್ಕಿಗ ಶಿವಕುಮಾರ್ ಅವರು ಪಕ್ಕದಲ್ಲಿರುವ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಗೆ ಹೋಗಿ ವಾಪಸ್ ಬಂದಾಗ ಸುಂದರ ಗೌಡ ರಾಬರಿ ಕುರ್ಚಿಯಿಂದ ಕೆಳಗೆ ಬಿದ್ದಿದ್ದರು ಎನ್ನಲಾಗಿದೆ.

ತಕ್ಷಣ ಹೊರಗಡೆ ಇದ್ದ ಮುಂಡೂರು ಗ್ರಾಮದ ಸದಸ್ಯರೊಬ್ಬರು ತನ್ನ ಕಾರಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಈ ವೇಳೆ ಸುಂದರ್ ಗೌಡ ನಿಧನಹೊಂದಿದ್ದಾರೆ‌.

ವಿಚಾರ ತಿಳಿದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬೆಳ್ತಂಗಡಿ ತಾಲೂಕು ಕಚೇರಿ ಸಿಬ್ಬಂದಿ, ತಹಶೀಲ್ದಾರ್, ಗ್ರಾಮಲೆಕ್ಕಿಗ, ಗ್ರಾಮಸಹಾಯಕರು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದಿದ್ದಾರೆ.

 

LEAVE A REPLY

Please enter your comment!
Please enter your name here

Hot Topics