Connect with us

LATEST NEWS

ಫೇಸ್‌ಬುಕ್ ಡಿಪಿ ನೋಡಿ ಯಾಮಾರಿದ ಯುವಕ ಕಳೆದುಕೊಂಡಿದ್ದು ಬರೋಬ್ಬರಿ 40 ಲಕ್ಷ ರೂ.-ಫೋಟೊ ನಟಿಯದ್ದು ಎಂದು ಗೊತ್ತಾಗ್ಲೇ ಇಲ್ಲ….!

Published

on

ವಿಜಯಪುರ: ಫೇಸ್‌ಬುಕ್ ಡಿಪಿ ನೋಡಿ ಕ್ಲೀನ್ ಬೋಲ್ಡ್ ಆಗಿದ್ದ ಯುವಕ ಯುವತಿಯೋರ್ವಳ ಮೋಸದ ಜಾಲಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ. ಈ ಪ್ರಕರಣವನ್ನು ಹನಿಟ್ರ್ಯಾಪ್ ಎಂದು ಕೂಡಾ ಹೇಳಬಹುದಾಗಿದೆ.


ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಯುವಕ ಪರಶುರಾಮ‌ ಎಂಬಾತ ಫೇಸ್‌ಬುಕ್‌ನಲ್ಲ್ಲಿ ಬಂದ ಫ್ರೆಂಡ್ ರಿಕ್ವೆಸ್ಟ್‌ನ್ನು ಎಸೆಪ್ಟ್ ಮಾಡಿಕೊಂಡಿದ್ದ. ಡಿಪಿಯಲ್ಲಿದ್ದ ಫೋಟೋದ ಮಾದಕತೆಯ ನೋಟ ಎಂತವರನ್ನೂ ಸೆಳೆಯಬಹುದಿತ್ತು. ಏಕೆಂದರೆ ಅದರಲ್ಲಿದ್ದದ್ದು ಖ್ಯಾತ ನಟಿ ಕೀರ್ತಿ ಸುರೇಶ್ ಫೋಟೋ.

ಅದರ ಅರಿವಿಗೆ ಬಾರದೇ ಈ ಭೂಪ ಮಹಿಳೆಯ ಮಾಯಾಜಾಲಕ್ಕೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾನೆ. ಆಕೆಯ ಡಿಪಿ ನೋಡಿ ಚಾಟಿಂಗ್ ಮಾಡಲೂ ಆರಂಭಿಸಿದ್ದ. ಬಳಿಕ ಸ್ನೇಹ, ಪ್ರೀತಿ ಅಂತೆಲ್ಲಾ ಶುರುವಾಗಿ ಕೊನೆಗೆ ನಿಂತಿದ್ದು ಮೋಸದಲ್ಲಿ.

ಅಂದಂತೆ ಫೇಸ್‌ಬುಕ್ ಪ್ರಣಯದ ನಡುವೆ ಮಾದಕ ನೋಟದ ಚೆಲುವೆ ಹೊಸ ಹೊಸ ವರಾತಗಳನ್ನು ಶುರುವಿಟ್ಟಿದ್ದಳು. ತಾನು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ, ಹಣದ ಅವಶ್ಯಕತೆ ಇದೆ, ಮುಂದೆ ನಾನು ಡಿಸಿ ಆಗುವೆ ಎಂದೆಲ್ಲಾ ಹೇಳಿದ್ದಳು.

ನಾನು ಡಿಸಿ ಆಗಬೇಕು ಅಂದ್ರೆ ಬರೊಬ್ಬರಿ 40 ಲಕ್ಷ ರೂ. ಹಣ ಬೇಕಾಗುತ್ತದೆ ಅಂತಾ ಹೇಳಿ, ಬಡಪಾಯಿ ಹುಡುಗನಿಂದ ಸುಮಾರು 40 ಲಕ್ಷ ರೂ. ಹಣವನ್ನು ಪಡೆದು ವಂಚಿಸಿದ್ದಳು.

ಯುವಕನಿಂದ ಹಣ ಬರುತ್ತೆ ಎಂದು ಗೊತ್ತಾದ ಬಳಿಕ ಹೊಸ ಹೊಸ ಐಡಿಯಾಗಳ‌ ಮೂಲಕ ಹಣ ವಸೂಲಿಗೆ ಮಹಿಳೆ ನಿಂತಿದ್ದಳು. ವಿಡಿಯೋ ಕಾಲ್ ಮಾಡಿ ಯುವಕನ ಬೆತ್ತಲೆ ವಿಡಿಯೋ ಮಾಡಿಕೊಂಡು ಮತ್ತಷ್ಟು ಹಣಕ್ಕಾಗಿ ಪೀಡಿಸಿದ್ದಳು.

ಹಣಕ್ಕಾಗಿ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡೋಕೆ ಶುರು ಮಾಡಿಕೊಂಡಿದ್ದಳು. ಹೀಗಾಗಿ, ಮಹಿಳೆಯ ವಂಚನೆ ಅರಿತ ಯುವಕ ನೇರವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ. ಈಗ ಮಹಿಳೆ ಪೊಲೀಸರ ಅತಿಥಿಯಾಗಿದ್ದು, ಮಹಿಳೆಗೆ ಆಕೆಯ ಪತಿಯೇ ವಂಚನೆಗೆ ಸಾಥ್‌ ನೀಡಿದ್ದ ಎಂಬುದು ಗಮನಿಸಬೇಕಾದ ಅಂಶ.

ಈತ ಹೈದರಾಬಾದ್‌ನಲ್ಲಿ ಕಟ್ಟಡ ಕಾರ್ಮಿಕರ ಸೂಪರ್ ವೈಸರ್ ಆಗಿದ್ದಾನೆ. ಅವನಿಗೆ 30 ಸಾವಿರ ರೂ. ಸಂಬಳ ಬರುತ್ತಿತ್ತು. ಆತ ಮನಸಾರೆ ಪ್ರೀತಿಸುತ್ತಿದ್ದ ಹುಡುಗಿ ಕೇಂದ್ರ ಸರಕಾರದ ಪರೀಕ್ಷೆಗೆ ತಯಾರಿ ನಡೆಸಿದ್ದರಿಂದ ಡಿಸಿ ಆಗುತ್ತಾಳೆ ಎನ್ನುವ ಕನಸು ಕಂಡಿದ್ದ. ಆದರೆ, ಆ ಕನಸು ಬಹುದೊಡ್ಡ ದೋಖಾ ತಂದೊಡ್ಡಿದೆ.

ಆನ್‌ಲೈನ್‌ನಲ್ಲಿ ಪರಿಚಯವಾಗಿದ್ದ ಹಾಸನ ಮೂಲದ ಹುಡುಗಿ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಯುವಕ ಪರಶುರಾಮ ನಡುವೆ ಸಲುಗೆ ಬೆಳೆದಿತ್ತು. ಈ ಸಲುಗೆ ಪ್ರೀತಿಗೆ ತಿರುಗಿತ್ತು. ಇಬ್ಬರೂ ಒಬ್ಬರನೊಬ್ಬರು ನೋಡದೆಯೇ ಮನಸಾರೆ ಪ್ರೀತಿಸುತ್ತಿದ್ದರು.

ಅವಳ ಫೇಸ್‌ಬುಕ್‌ ಡಿಪಿ ನೋಡಿ ಮಾರುಹೋಗಿದ್ದ ಅವಳ ಓದಿಗಾಗಿ ಮನೆಯಲ್ಲಿ ಕೂಡಿಟ್ಟಿದ್ದ 5 ಲಕ್ಷ ರೂ. ನಗದು ಹಣ, ಒಂದು ಪ್ಲಾಟ್ ಸೇರಿ ಎಲ್ಲವನ್ನು ಮಾರಿ ಹಣ ಕಳಿಸುತ್ತಿದ್ದ. ಆದರೆ, ಸುಮಾರು 40 ಲಕ್ಷ ರೂ.ನಷ್ಟು ‌ಹಣ ಕಳಿಸಿದರೂ ಅವಳಿಗೆ ಆತ ಭೇಟಿ ಮಾತ್ರ ಆಗಿರಲಿಲ್ಲ. ಅದಾದ ಬಳಿಕ ಮತ್ತಷ್ಟು ಹಣಕ್ಕಾಗಿ ಪೀಡಿಸಿದಾಗ ಯುವಕ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ.

ಇನ್ನು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಜಯಪುರ ಎಸ್‌ಪಿ ಆನಂದಕುಮಾರ್‌ ವಿಶೇಷ ತಂಡವೊಂದನ್ನು ರಚಿಸಿ ಆರೋಪಿ ಮಂಜುಳಾಳನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಾಸರಳ್ಳಿ ಗ್ರಾಮದಿಂದ ಕರೆ ತಂದಿದ್ದಾರೆ. ಪೋಲಿಸರು ಬಂದ ಮಾಹಿತಿ ತಿಳಿದ ಮಂಜುಳಾ ಗಂಡ ಎಸ್ಕೇಪ್ ಆಗಿದ್ದಾನೆ.

ಇನ್ನೂ ಈ ಮಂಜುಳಾಗೆ ಮಕ್ಕಳು ಸಹ ಇವೆ. ಮಹಿಳೆ ಮತ್ತು ಫೇಸ್‌ಬುಕ್‌ ಡಿಪಿಗೆ ಅಜಗಜಾಂತರ ವ್ಯತ್ಯಾಸ ಇದೆ. ಇದೇ ರೀತಿ ಬೇರೆ ಯಾರಿಗಾದರು ವಂಚಿಸಿದ್ದಾಳಾ ಎಂಬುದರ ಕುರಿತು ಪೋಲಿಸರು ತನಿಖೆ ನಡೆಸುತ್ತಿದ್ದಾರೆ

BANTWAL

ವಿಟ್ಲ: ವಿದ್ಯಾರ್ಥಿನಿಗೆ ಕಿರುಕುಳ-ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

Published

on

ಬಂಟ್ವಾಳ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ವಿಚಾರದಲ್ಲಿ ಪೆರುವಾಯಿ ಮೂಲದ ಯುವಕನ ವಿರುದ್ಧ ವಿಟ್ಲ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಕೇಪು ಗ್ರಾಮದ 9ನೇ ತರಗತಿ ವಿದ್ಯಾರ್ಥಿಯೊಬ್ಬಳನ್ನು ಯುವಕ ಕೆಲವು ದಿನಗಳಿಂದ ಹಿಂಬಾಲಿಸುತ್ತಿದ್ದು, ಮೊಬೈಲ್ ನಂಬರ್ ನೀಡುವಂತೆ ಕಿರುಕುಳ ನೀಡಿದ್ದಾನೆ. ಶಾಲೆ ಸಮೀಪ ಬಂದು ಬೈಕ್ ನಲ್ಲಿ ಕೂರುವಂತೆ ಹೇಳಿದ್ದಾನೆ.

ಈ ಎಲ್ಲಾ ವಿಚಾರವನ್ನು ಬೇರೆ ಕಡೆ ಹೇಳಬಾರದೆಂದು ಬೆದರಿಸುವ ಕಾರ್ಯ ಮಾಡಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ಶಾಲೆಯ ಶಿಕ್ಷಕರಲ್ಲಿ ತಿಳಿಸಿದ್ದು, ಅವರು ಪೋಷಕರಿಗೆ ಮಾಹಿತಿ ನೀಡಿ, ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Continue Reading

DAKSHINA KANNADA

ಇಂದು ಕರ್ನಾಟಕ ಬಂದ್‌: ಕರಾವಳಿಗರಿಂದ ನೈತಿಕ ಬೆಂಬಲ-ಬಸ್‌, ಹೊಟೇಲ್‌, ಶಾಲೆಗಳು ಎಂದಿನಂತೆ

Published

on

ಮಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಹಲವು ಸಂಘಟನೆಗಳು ಕರೆ ನೀಡಿರುವ ಇಂದಿನ (ಶುಕ್ರವಾರ) ಕರ್ನಾಟಕ ಬಂದ್ ಗೆ ಕರಾವಳಿಯಲ್ಲಿ ನೈತಿಕ ಬೆಂಬಲ ವ್ಯಕ್ತವಾಗಿದೆ.

ಖಾಸಗಿ ಬಸ್ ಸಂಘಟನೆಯು ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡಿದೆ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳು ಎಂದಿನಂತೆ ಓಡಾಟ ನಡೆಸಲಿದೆ.

ಕಾವೇರಿ ವಿಚಾರವಾಗಿ ನಮ್ಮ ಸಹಾನುಭೂತಿಯಿದೆ. ಆದರೆ ಬಸ್ ಸಂಚಾರ ಬಂದ್ ಮಾಡುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿ ಸಾರ್ವಜನಿಕ ಜೀವನಕ್ಕೆ ಕಷ್ಟವಾಗುವ ಕಾರಣ ನಾವು ನೈತಿಕ ಬೆಂಬಲ ಸೂಚಿಸುತ್ತೇವೆ. ಬಸ್ ಓಡಾಟ ಎಂದಿನಂತೆ ಇರಲಿದೆ ಎಂದು ಖಾಸಗಿ ಬಸ್ ಒಕ್ಕೂಟ ತಿಳಿಸಿದೆ.

ಜೊತೆಗೆ ಕರಾವಳಿ ಹೋಟೆಲ್ ಉದ್ಯಮವು ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಮಾತ್ರ ನೀಡಿದೆ. ಹೀಗಾಗಿ ಉಡುಪಿ- ಮಂಗಳೂರಿನಲ್ಲಿ ಹೋಟೆಲ್ ಗಳು ತೆರೆದಿರಲಿವೆ.

ಇಂದು ಕರ್ನಾಟಕ ಬಂದ್ ಇದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಜನ ಜೀವನ ಎಂದಿನಂತೆ ಇರಲಿದೆ. ಜೊತೆಗೆ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

Continue Reading

LATEST NEWS

ಭೀಕರ ಬ್ಲಾಸ್ಟ್: ಮೊಬೈಲ್ ಬಳಿಯಲ್ಲಿ ಡಿಯೋಡರೆಂಟ್ ಬಾಟಲಿಗಳನ್ನು ಇಡ್ಡುತ್ತೀರಾ ಹಾಗಾದ್ರೆ ಹುಷಾರ್..!!

Published

on

ಮಹಾರಾಷ್ಟ್ರ: ಮೂವರು ಮೊಬೈಲ್ ಫೋನ್ ಸ್ಫೋಟದಿಂದ ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಮಹಾರಾಷ್ಟ್ರದ ನಾಸಿಕ್‌ನ ಸಿಡ್ಕೋ ಉತ್ತಮ್ ನಗರ ಪ್ರದೇಶದಲ್ಲಿ ಮಂಗಳವಾರದಂದು ನಡೆದಿದೆ.

ಮನೆಯೊಳಗೆ ಚಾರ್ಜ್ ಮಾಡಲು ಇಟ್ಟಿದ್ದ ಮೊಬೈಲ್ ಸ್ಫೋಟಗೊಂಡ ಕಾರಣ ಈ ಘಟನೆ ನಡೆದಿದೆ.

ಫೋನ್ ಪಕ್ಕದಲ್ಲಿ ಡಿಯೋಡರೆಂಟ್ ಕ್ಯಾನ್ ಸ್ಫೋಟದ ತೀವ್ರತೆ ಮತ್ತಷ್ಟು ಹೆಚ್ಚಿಸಿದೆ.

ಸ್ಫೋಟದ ತೀವ್ರತೆಯು ಎಷ್ಟು ದೊಡ್ಡದಾಗಿದೆ ಎಂದರೆ ಅದು ಸುತ್ತಮುತ್ತಲಿನ ಪ್ರತಿಯೊಂದು ಕಿಟಕಿಗಳನ್ನು ಒಡೆದು ಹಾಕಿತು.

ಸ್ಫೋಟದ ತೀವ್ರತೆಯಿಂದಾಗಿ ಹೊರಗೆ ನಿಲ್ಲಿಸಿದ್ದ ಕಾರಿನ ಗಾಜುಗಳು ಕೂಡ ಒಡೆದಿವೆ.

ಅಕ್ಕಪಕ್ಕದ ಮನೆಗಳ ಕಿಟಕಿ ಗಾಜುಗಳೂ ಒಡೆದಿರುವ ಬಗ್ಗೆ ವರದಿಯಾಗಿದೆ.

ಸ್ಫೋಟದ ವೇಳೆ ಮನೆಯಲ್ಲಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರು ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಹಾಗೂ ಪೊಲೀಸರ ತನಿಖೆ ಮುಂದುವರೆದಿದೆ.

 

Continue Reading

LATEST NEWS

Trending