Connect with us

FILM

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ ?!

Published

on

ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ತಮ್ಮ ಡೇಟಿಂಗ್ ವಿಚಾರದಲ್ಲಿ ಸೈಲೆಂಟ್ ಆಗಿದ್ದಾರೆ. ಆದರೆ ಫೋಟೋಗಳು ವೈರಲ್ ಆಗುತ್ತಿವೆ. ಇವರು ಪ್ರೀತಿ ಮಾಡುತ್ತಿರುವ ವಿಚಾರ ರಹಸ್ಯವಾಗಿ ಉಳಿದಿಲ್ಲ. ಈ ಜೋಡಿ ಶೀಘ್ರವೇ ವಿವಾಹವಾಗುವುದಾಗಿ ಸುದ್ಧಿಗಳು ಕೇಳಿ ಬರುತ್ತಿವೆ. ಹೀಗಿರುವಾಗಲೇ ರಶ್ಮಿಕಾ ಮಂದಣ್ಣ ಅವರು ಮದುವೆ ವಿಚಾರ ಮಾತನಾಡಿದ್ದಾರೆ. ವಿಜಯ್​ನ ಮದುವೆ ಆಗುತ್ತಿರುವ ವಿಚಾರನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಚೆನ್ನೈನಲ್ಲಿ ಭಾನುವಾರ (ನವೆಂಬರ್ 24) ರಾತ್ರಿ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರಿಗೆ ವೈಯಕ್ತಿಕ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಈ ವೇದಿಕೆ ಮೇಲೆ ಹೋಸ್ಟ್ ಅವರು ರಶ್ಮಿಕಾ ಮಂದಣ್ಣ ಬಳಿ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರಶ್ಮಿಕಾ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

 

‘ನೀವು ಸಿನಿಮಾ ಇಂಡಸ್ಟ್ರಿಯನ್ನು ಮದುವೆ ಆಗ್ತೀರಾ ಅಥವಾ ಹೊರಗಿನವರನ್ನು ಮದುವೆ ಆಗ್ತೀರಾ? ನೀವು ಕ್ಲ್ಯಾರಿಟಿ ಕೊಟ್ಟರೆ ನಾವು ಹುಡುಗನ ಹುಡುಕುತ್ತೀರಿ’ ಎಂದು ಹೋಸ್ಟ್ ಹೇಳಿದರು. ‘ಎಲ್ಲರಿಗೂ ಆ ಬಗ್ಗೆ ಗೊತ್ತು’ ಎಂದು ರಶ್ಮಿಕಾ ಹೇಳಿದ್ದಾರೆ. ಈ ಮಾತನ್ನು ಕೇಳಿ ಎಲ್ಲರೂ ಚಿಯರ್ ಮಾಡಿದರು. ‘ನಿಮಗೆ ಯಾವ ಉತ್ತರ ಬೇಕು ಎಂಬುದು ನಂಗೆ ಗೊತ್ತು. ನನಗೆ ಚೆನ್ನಾಗಿ ಗೊತ್ತು’ ಎಂದು ರಶ್ಮಿಕಾ ಹೇಳಿದರು.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ. ‘ನಾನು ನನ್ನ ಕೋಸ್ಟಾರ್ ಜೊತೆ ಡೇಟಿಂಗ್ ಮಾಡಿದ್ದೇನೆ. ನಾವು ಒಂದಲ್ಲಾ ಒಂದು ಸಂದರ್ಭದಲ್ಲಿ ಮದುವೆ ಆಗೇ ಆಗುತ್ತೇವೆ’ ಎಂದು  ವಿಜಯ್ ಹೇಳಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ‘ಗೀತ ಗೋವಿಂದಂ’ ಸಿನಿಮಾ ಹಾಗೂ ‘ಡಿಯರ್ ಕಾಮ್ರೇಡ್​’ ಸಿನಿಮಾದಲ್ಲಿ ಇವರು ಒಟ್ಟಾಗಿ ಕಾಣಿಸಿಕೊಂಡಿದ್ದರು.

bangalore

ಬಿಗ್ ಬಾಸ್ ನಿಂದ ಧರ್ಮ ಎಲಿಮಿನೆಟ್ ಆಗಿದ್ದು ಯಾಕೆ ಗೊತ್ತಾ ?

Published

on

ಮಂಗಳೂರು/ಬೆಂಗಳೂರು: ‘ಕನ್ನಡದ ಬಿಗ್ ಬಾಸ್ ಸೀಸನ್ 11’ರ ರಿಯಾಲಿಟಿ ಶೋ 119ನೇ ದಿನಕ್ಕೆ ಕಾಲಿಡುತ್ತಿದೆ. ಅದರ ನಡುವೆ ವಾರ ವಾರ ಎಲಿಮಿನೇಟ್ ಪ್ರಕ್ರಿಯೆ ತೀವ್ರ ಕೂತುಹಲ ಕೆರಳಿಸಿದೆ. ಈ ವಾರ ಬಿಗ್ ಬಾಸ್ ನಿಂದ ಧರ್ಮ ಕೀರ್ತಿರಾಜ್ ಎಲಿಮೀನೆಟ್ ಆಗಿ ಹೊರಬಂದಿದ್ದಾರೆ.


ಸದಾ ನಗುಮುಖದಲ್ಲೇ ಕಾಣಿಸಿಕೊಳ್ಳುವ ಧರ್ಮ, ಯಾರ ತಂಟೆಗೂ ಹೊಗುತ್ತಿರಲಿಲ್ಲ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಧರ್ಮ ಹಾಗೂ ಅನುಷಾ ಒಟ್ಟಿಗೆ ದೊಡ್ಮನೆ ಸೇರಿದ್ದರು. ಆದರೆ ಧರ್ಮ ಮತ್ತು ಅನುಷಾ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದರು. ಆದರೆ ಅನುಷಾ ಈ ಮೊದಲೇ ಎಲಿಮಿನೇಟ್ ಆಗಿದ್ದರು. ಇದು ಧರ್ಮ ಅವರಿಗೆ ಬೇಸರ ಮೂಡಿಸಿತ್ತು.
ಈ ವಾರ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ಕೊನೆಯ ಹಂತದಲ್ಲಿ ಧರ್ಮ ಹಾಗೂ ಚೈತ್ರಾ ಉಳಿದುಕೊಂಡಿದ್ದರು. ಫೈನಲ್ ಆಗಿ ಧರ್ಮ ಮನೆಯಿಂದ ಹೊರಬಂದರು. ಧರ್ಮ ಬೇಸರದಿಂದಲೇ ಹೊರನಡೆದರು.

ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಎಡವಟ್ಟು; 50 ಅಡಿ ಆಳಕ್ಕೆ ಕಾರು ಬಿದ್ದು ಮೂವರ ದುರ್ಮ*ರಣ

ಧರ್ಮ ಸದಾ ಕೂಲ್ ಆಗಿಯೇ ಇರುತ್ತಾರೆ. ಅವರು ಯಾವುದೇ ಕಿತ್ತಾಟಕ್ಕೂ ಹೋಗುತ್ತಿರಲಿಲ್ಲ. ತಾಳ್ಮೆ ಕಳೆದುಕೊಂಡು ಒಂದು ದಿನ ಕೂಗಾಡಿದವರಲ್ಲ. ಇನ್ನೊಂದು ಕಡೆ, ಧರ್ಮ ಎಲ್ಲಿಯೂ ಕೂಡ ಹೈಲೈಟ್ ಆಗುತ್ತಿರಲಿಲ್ಲ. ಇವರಿಗಿಂತ ನಂತರ ವೈಲ್ಡ್ ಕಾರ್ಡ್ ನಲ್ಲಿ ಬಂದ ಹನುಮಂತ, ರಜತ್ ಹಾಗೂ ಶೋಭಾ ಶೆಟ್ಟಿ ಈಗಗಾಲೇ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ.
ಧರ್ಮ ಶಾಂತತೆಯ ಸ್ವರೂಪವನ್ನು ಹೊಂದಿರುವ ವ್ಯಕ್ತಿತ್ವ. ಈ ಮೊದಲು ಎಲಿಮಿನೇಟ್ ಆಗಿರುವ ಲಾಯರ್ ಜಗದೀಶ್ ವಿರುದ್ದ ಇಡೀ ಮನೆಯೇ ತಿರುಗಿ ಬಿದ್ದಾಗಲೂ ಧರ್ಮ ಫೈಟ್ ಗೆ ಹೋಗಿರಲಿಲ್ಲ. ಇದು ಅವರ ಮುಗ್ದತೆ ಮತ್ತು ತಾಳ್ಮೆಯ ಸ್ವರೂಪವನ್ನು ತೋರಿಸುತ್ತದೆ.
ಬಿಗ್ ಬಾಸ್ ಮನೆ ಎಂದರೆ ನೆನಪಾಗುವುದೇ ಜಗಳ, ಕೋಪ ಮತ್ತು ಮಾತುಗಾರಿಕೆ. ಎಲ್ಲೋ ಒಂದು ಕಡೆ ಧರ್ಮ ಅವರಿಗೆ ತಮ್ಮ ತಾಳ್ಮೆಯೇ ಮುಳುವಾಗಿ ಎಲಿಮಿನೇಟ್ ಆಗಲು ಕಾರಣವಾಯಿತು ಎಂದು ಹೇಳಬಹುದು.

 

Continue Reading

FILM

ಯಶ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಖ್ಯಾತ ಕ್ರಿಕೆಟಿಗನ ಪತ್ನಿ

Published

on

ಮಂಗಳೂರು/ ಬೆಂಗಳೂರು : ಭಾರತ ತಂಡದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಕ್ರಿಕೆಟಿಗ ಯಜುವೇಂದ್ರ ಚಹಾಲ್. ಸದ್ಯ  ಐಪಿಎಲ್ ಆಟದ ತಯಾರಿಯಲ್ಲಿದ್ದಾರೆ. ಇದೀಗ ಅವರ ಪತ್ನಿ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಪತಿ ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿದ್ದರೆ, ಇತ್ತ ಪತ್ನಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ.

ಆರ್ ಸಿ ಬಿ ತಂಡದಲ್ಲಿ ಹಲವು ವರ್ಷ ಆಡಿದ್ದ  ಸ್ಪಿನ್ನರ್ ಚಹಾಲ್ ಬಳಿಕ ರಾಜಸ್ತಾನ್ ರಾಯಲ್ಸ್ ನಲ್ಲಿ ಆಡುತ್ತಿದ್ದರು. ಈ ಬಾರಿ ಹರಾಜಿನಲ್ಲಿ ಯಾರ ತೆಕ್ಕೆಗೆ ಸೇರಲಿದ್ದಾರೆ ಗೊತ್ತಿಲ್ಲ. ಈ ನಡುವೆ ಅವರ ಪತ್ನಿ ಧನಶ್ರೀ ವರ್ಮಾ ತೆಲುಗು ಸಿನಿಮಾವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಧನಶ್ರೀ ತಮ್ಮ ನೃತ್ಯದ ಮೂಲಕ ಈಗಾಗಲೇ ಗಮನ ಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಅವರು, ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ನೃತ್ಯದ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ, ರಿಯಾಲಿಟಿ ಶೋಗಳಲ್ಲೂ ಅವರು ಭಾಗಿಯಾಗಿದ್ದು, ಇದೀಗ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.

ದಿಲ್ ರಾಜು ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಹರ್ಷಿತ್ ರೆಡ್ಡಿ ಮತ್ತು ಹನ್ಸಿತಾ ರೆಡ್ಡಿ ನಿರ್ಮಿಸುತ್ತಿರುವ ಚಿತ್ರದಲ್ಲಿ ಧನಶ್ರೀ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ನಾಯಕಿ ಮಿಂಚುತ್ತಿರೋದು ಖ್ಯಾತ ಡ್ಯಾನ್ಸ್ ಮಾಸ್ಟರ್ ಯಶ್. ಸೀತಾ ಕಪೂರ್ ಹಾಗೂ ಧನಶ್ರೀ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದು : ಬಿಗ್‌ಬಾಸ್ ಮನೆಯಲ್ಲಿನ ಸ್ಪರ್ಧಿಗಳ ವಯಸ್ಸೆಷ್ಟು ಗೊತ್ತಾ..?

ನೃತ್ಯದ ಕುರಿತಾದ ಈ ಚಿತ್ರದ ಹೆಸರು ಆಕಾಶಂ ದಾಟಿ ವಸ್ತಾವಾ. ಶಶಿಕುಮಾರ್ ಮುತ್ತುಲೂರಿ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಕೆಲವು ದೃಶ್ಯಗಳು ಮುಂಬೈನಲ್ಲಿ ಚಿತ್ರೀಕರಿಸಲಾಗಿದ್ದು, ಉಳಿದ ಭಾಗದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯಲಿದೆ. ಒಟ್ಟಾರೆ, ತಮ್ಮ ನೆಚ್ಚಿನ ಕ್ರಿಕೆಟಿಗನ ಪತ್ನಿ ಸಿನಿರಂಗಕ್ಕೆ ಎಂಟ್ರಿಕೊಡುತ್ತಿರೋದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರೋದು ಸುಳ್ಳಲ್ಲ.

Continue Reading

FILM

ದಿಲೀಪ್ ಕುಮಾರ್ ಆಗಿದ್ದ ಎ.ಆರ್ ರೆಹಮಾನ್ ಧರ್ಮ ಬದಲಿಸಿದ್ದು ಯಾಕೆ ಗೊತ್ತಾ ??

Published

on

ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಸುಮಾರು 29 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನ ಘೋಷಣೆ ಮಾಡಿದ್ದು ಬಹಳ ಅಚ್ಚರಿ ಮೂಡಿಸಿತ್ತು. ಈ ವಿಚ್ಚೇದನದ ಸುದ್ದಿಯಿಂದಾಗಿ ಎ.ಆರ್‌ ರೆಹಮಾನ್‌ ಅವರ ವೈಯಕ್ತಿನ ಬದುಕಿನ ಹಲವು ವಿಚಾರಗಳು ಮುನ್ನೆಲೆಗೆ ಬರುತ್ತಿವೆ.

‘ರೆಹಮಾನ್’ ಎಂಬ ಹೆಸರಿನೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದ ದಿಲೀಪ್ ಕುಮರ್ 1980ರಲ್ಲಿ ತಂದೆಯ ಮರಣದ ನಂತರ ಕುಟುಂಬದೊಂದಿಗೆ ಇಸ್ಲಾಂಗೆ ಮತಾಂತರಗೊಂಡ ನಂತರ, ಬಹುಕಾಲದ ಆಸೆಯಾಗಿದ್ದ ರೆಹಮಾನ್’ ಎಂಬ ಹೆಸರನ್ನು ಬಳಸಲು ನಿರ್ಧರಿಸಿದರು.

ತಂಗಿಯ ಮದುವೆಗೆ ಜ್ಯೋತಿಷ್ಯ ನೋಡುವಾಗ, ಒಬ್ಬ ಹಿಂದೂ ಜ್ಯೋತಿಷಿ ಅಬ್ದುಲ್ ರೆಹಮಾನ್ ಮತ್ತು ಅಬ್ದುಲ್ ರಹೀಮ್ ಎಂಬ ಹೆಸರುಗಳನ್ನು ಸೂಚಿಸಿದ್ದಾಗಿ ರೆಹಮಾನ್ ಆಗಾಗ ನನಪಿಸುಕೊಳ್ಳುತ್ತಿರುತ್ತಾರೆ. ‘ರೆಹಮಾನ್’ ಹೆಸರು ಇಷ್ಟವಾಗಿದ್ದ ಕಾರಣ ಅದನ್ನೇ ಆಯ್ಕೆ ಮಾಡಿಕೊಂಡರು. ತಾಯಿಯ  ಮನದಿಚ್ಚೆಯಂತೆ, ‘ಅಲ್ಲಾ ರಕ್ಕಾ’ ಎಂಬುದನ್ನು ಸೇರಿಸಿ ಎ.ಆರ್. ರೆಹಮಾನ್ ಎಂದು ಹೆಸರು ಬದಲಾಯಿಸಿಕೊಂಡಿದ್ದರು.

‘ದೇವರಿಂದ ರಕ್ಷಿಸಲ್ಪಟ್ಟವರು’ ಎಂಬ ಅರ್ಥವನ್ನು ಹೊಂದಿರುವ ಎ.ಆರ್. ರೆಹಮಾನ್ ಎಂಬ ಹೆಸರು ಇಂದು ಸಂಗೀತ ಲೋಕದಲ್ಲಿ ಅನುಪಮ ಸ್ಥಾನ ಪಡೆದಿದೆ. ಈ ಹೆಸರು ಬದಲಾವಣೆ ರೆಹಮಾನ್ ಅವರ ಆಧ್ಯಾತ್ಮಿಕ ಪಯಣವನ್ನು ಸೂಚಿಸುವುದು ಮಾತ್ರವಲ್ಲದೆ, ಜಾಗತಿಕ ಖ್ಯಾತಿಗೆ ಅವರ ಏಳಿಗೆಯ ಆರಂಭವನ್ನೂ ಸೂಚಿಸುತ್ತದೆ, ರೆಹಮಾನ್ ಎಂಬ ಹೆಸರು ವಿಶ್ವದ ಅತ್ಯಂತ ಪ್ರಸಿದ್ಧ ಸಂಗೀತಗಾರರಲ್ಲಿ ಒಬ್ಬರನ್ನಾಗಿ ಮಾಡಿದೆ.

29 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ ರೆಹಮಾನ್ ಸಾಯಿರಾ ದಂಪತಿ ವಕೀಲರಾದ ವಂದನಾ ಶಾ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯ ಮೂಲಕ ಪ್ರತ್ಯೇಕಗೊಂಡಿರುವ ವಿಚಾರ ತಿಳಿಸಿದರು. ತಮ್ಮ ತಂದೆಯನ್ನು ಕೊನೆಯ ದಿನಗಳಲ್ಲಿ ಆರೈಕೆ ಮಾಡಿದ್ದ  ಸೂಫಿ ಸಂತರೊಬ್ಬರ ಪ್ರಭಾವಕ್ಕೆ ಒಳಗಾಗಿ ಮುಸ್ಲಿಂ ಧರ್ಮಕ್ಕೆ ರೆಹಮಾನ್ ಮತಾಂತರಗೊಂಡರು ಎನ್ನಲಾಗಿದೆ. ‘ಈ ನಂಬಿಕೆಯ ಬದಲಾವಣೆ ಮನಸ್ಸಿಗೆ ಶಾಂತಿ ನೀಡಿದ್ದು, ತಾವು ತಮ್ಮ ನಂಬಿಕೆಯನ್ನು ಬೇರೆಯವರ ಮೇಲೆ ಹೇರಲು ಇಷ್ಟಪಡುವುದಿಲ್ಲ’ ಎಂದು ಸ್ವತಃ ರೆಹಮಾನ್‌ ಹೇಳಿಕೊಂಡಿದ್ದಾರೆ.

Continue Reading

LATEST NEWS

Trending

Exit mobile version