Tuesday, July 5, 2022

ಪತಿ ಆತ್ಮಹತ್ಯೆ ಮಾಡಿಕೊಳ್ಳುವ ವೀಡಿಯೋ ಸೆರೆ ಹಿಡಿದ ಪತ್ನಿ ಇದೀಗ ಸೆರೆಮನೆಯಲ್ಲಿ ..

ಹೌರಾ: ಪತಿ ಅಮನ್ ಶಾ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂಪೂರ್ಣ ದೃಶ್ಯವನ್ನ ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದ ಪತ್ನಿ (22)ನೇಹಾ ಶುಕ್ಲಾ ಳನ್ನು ಪೊಲೀಸರು ಬಂಧಿಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಿದ್ದಾನೆಯೇ ವಿನ: ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಅಂದುಕೊಂಡಿದ್ದ ಪತ್ನಿ ನೇಹಾ ಶುಕ್ಲ ತಮಾಷೆಗಾಗಿ ವೀಡಿಯೋ ಮಾಡಿದ್ದಳು ಎನ್ನಲಾಗಿದೆ.

ಹಿಂದೆಯೂ ಪತಿ ಆತ್ಮಹತ್ಯೆ ಮಾಡಿಕೊಳ್ಳುವ ನಾಟವಾಡಿ ತೋರಿಸಿದ್ದ ಇದರಿಂದ ಇದನ್ನೇ ಸತ್ಯವೆಂದು ನಂಬಿದ್ದ ಪತ್ನಿ ಅದನ್ನು ವೀಡಿಯೋ ಮಾಡಿದ್ದಳು ಎನ್ನಲಾಗಿದೆ.

5ವರ್ಷ ಕಾಲ ಪ್ರೀತಿಸಿದ್ದ (25)ರ ಯುವಕ ಅಮನ್ ಶಾ ನಾಲ್ಕು ತಿಂಗಳ ಹಿಂದೆ ನೇಹಾಳನ್ನು ಮದುವೆಯಾಗಿದ್ದ
‘ಇದೀಗ ಪೊಲೀಸರು ನೇಹಾಳನ್ನು ಬಂಧಿಸಿದ್ದಾರೆ. ಮಹಿಳೆಯ ಮೊಬೈಲ್ ನಿಂದ ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ವೀಡಿಯೋವನ್ನು ವಶಪಡಿಸಿಕೊಂಡಿದ್ದಾರೆ.

ಹೌರಾ ನಗರದ ಪೊಲೀಸರು ಮಹಿಳೆ ತನ್ನ ಹೇಳಿಕೆಯನ್ನು ಪದೇ ಪದೇ ಬದಲಿಸುತ್ತಿದ್ದಾಳೆ ಎಂದು ಹೇಳಿದ್ದು, ಸಂಪೂರ್ಣ ಪ್ರಕರಣದ ತನಿಖೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಮದುವೆ ಬಳಿಕ ನೇಹಾ ಉದ್ಯೋಗ ತೊರೆದಿದ್ದರು ಅಮನ್ ಸ್ವಂತ ಉದ್ಯಮ ನಡೆಸುತ್ತಿದ್ದರು ಅಮನ್ ಕಿರಿಯ ಸಹೋದರಿ ಬರ್ಖಾ ಪ್ರಸಾದ್ ಹೇಳಿಕೆ ಪ್ರಕಾರ ಮಾರ್ಚ್ 31ರಂದು ನೇಹಾ ಒಬ್ಬಂಟಿಯಾಗಿ ದಿಲ್ಲಿಗೆ ಪ್ರಯಾಣ ಬೆಳೆಸಿದ್ದರು ಇದೇ ದಂಪತಿ ನಡುವೆ ಕಲಹಕ್ಕೆ ಕಾರಣವಾಗಿತ್ತು.

ಕಾರಣ ಅಮನ್ ಆಕೆಯೊಂದಿಗೆ ದಿಲ್ಲಿಗೆ ಹೋಗಲು ಬಯಸಿದ್ದ, ಅಮನ್ ನ ಹೆತ್ತವರು ವೆಲ್ಲೋರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಯಿಂದ ಮರಳಿ ಬಂದ ನಂತರ ವಿಚಾರಣೆಗಾಗಿ ಕರೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ : ಶಾಲಾ- ಕಾಲೇಜುಗಳಿಗೆ ಇಂದು (ಜು5) ರಜೆ ಘೋಷಿಸಿದ ಜಿಲ್ಲಾಧಿಕಾರಿ..!

ಮಂಗಳೂರು " ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ದಿನಾಂಕ 05/07/ 2022ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ...

ಮಂಗಳೂರು: ವರ್ಕ್ ಶಾಪ್‌ಗೆ ನೀರು ನುಗ್ಗಿ ಅಪಾರ ಹಾನಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವರ್ಕ್ ಶಾಪ್‌ಗೆ ನೀರು ನುಗ್ಗಿ ಅಪಾರ ಹಾನಿಯಾದ ಘಟನೆ ಮಂಗಳೂರು ನಗರ ಹೊರವಲಯದ ಕುಲಶೇಖರದ ಬಜ್ಜೋಡಿ ಎಂಬಲ್ಲಿ ನಡೆದಿದೆ.ಭಾರೀ ಮಳೆ ಹಿನ್ನಲೆ ವರ್ಕ್ ಶಾಪ್...