Connect with us

    DAKSHINA KANNADA

    ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿದವರಿಗೆ 1ಲಕ್ಷ ರೂ ಘೋಷಿಸಿದ ಬಿಲ್ಲವ ನಾಯಕಿ..!

    Published

    on

     

    ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿದವರಿಗೆ 1ಲಕ್ಷ ರೂ ಘೋಷಿಸಿದ ಬಿಲ್ಲವ ನಾಯಕಿ..!

     victims Rs 1 Lakh declaration for soot on jagadish Adhikari:

    ಮಂಗಳೂರು:  ಬಿಲ್ಲವ ಸಮುದಾಯ, ಕಾರಣೀಕ ಪುರುಷರಾದ ಕೋಟಿ ಚೆನ್ನಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ವಿರುದ್ಧ ಅವಹೇಳನಾರಿ ಹೇಳಿಕೆ ಹಿನ್ನೆಲೆ ಮಾಜಿ ಕಾರ್ಪೊರೇಟರ್ ಬಿಲ್ಲವ ನಾಯಕಿ ವಿವಾದಾತ್ಮಕವಾಗಿ ನೀಡಿದ ಹೇಳಿಕೆಯೊಂದು ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

      ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್‌ ಅಧಿಕಾರಿ ಮುಖಕ್ಕೆ ಯಾರಾದರೂ ಮೂರು ದಿನಗಳ ಒಳಗೆ ಮಸಿ ಹಾಕಿದಲ್ಲಿ ಅವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಮಾಜಿ ಕಾರ್ಪೋರೇಟರ್‌ ಬಿಲ್ಲವ ಸಮುದಾಯದ ಮುಖಂಡೆ ಪ್ರತಿಭಾ ಕುಳಾಯಿ ಘೋಷಿಸಿದ್ದಾರೆ.

    ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನನ್ನನ್ನು ಎಲ್ಲರೂ ಹಿಂದು ವಿರೋಧಿ ಎಂದು ಹೇಳುತ್ತಾರೆ. ಸಾಯಲು  ಮನಸ್ಸಿದ್ದರೆ ಸಂಘಟನೆಗೆ ಸೇರಿ ಎಂದು ತಾನು ಈ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ ಎಂದ ಅವರು ಯುವಕರು ಸಂಘಟನೆಗೆ ಸೇರುವುದು ಅಪಾಯಕಾರಿ ಎಂದದ್ದಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು  ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಯುವಕರನ್ನು ಬಳಸಿಕೊಂಡು ಸಂಘಟನೆಗೆ ಸೇರಲು ಪ್ರೇರೇಪಿಸುತ್ತಾರೆ ಎಂದು ಆರೋಪಿಸಿದರು.

    ಯಾವುದೇ ಧರ್ಮದ ಸಂಘಟನೆ ಜೈಲು ಪಾಲಾಗಿರುವ ಯುವಕರನ್ನು  ಹೊರತರಲು ಯತ್ನಿಸುತ್ತಿಲ್ಲ. ಕೋಮುಗಲಭೆಯನ್ನು ಸೃಷ್ಟಿಸುತ್ತಿದ್ದಾರೆ. ಇದಕ್ಕೆ ರಾಜಕಾರಣಿಗಳೇ ಕಾರಣ ಎಂದರು.

    ಇತ್ತೀಚೆಗೆ 22 ಹಿಂದುಳಿದ ಯುವಕರು ಕ್ರಿಮಿನಲ್‌ ಪ್ರಕರಣ ಮೈಮೇಲೆ ಎಳೆದುಕೊಂಡಿದ್ದು ಅದರಲ್ಲಿ 12 ಮಂದಿ ಬಿಲ್ಲವ ಸಮದಾಯಕ್ಕೆ ಸೇರಿದವರಾಗಿದ್ದಾರೆ.

    ಇವರ ಉತ್ತಮ ಭವಿಷ್ಯದ ಬಗ್ಗೆ  ಯೋಚಿಸುವವರು ಯಾರೂ ಇಲ್ಲ ಎಂದು ಅವರು ವಿಡಿಯೋ ಮೂಲಕ ಖೇದ ವ್ಯಕ್ತಪಡಿಸಿದ್ದಾರೆ.   ಜಗದೀಶ್ ಅಧಿಕಾರಿ ಗರೋಡಿ ಕ್ಷೇತ್ರಕ್ಕೆ ಬಂದು ತಪ್ಪು ಕಾಣಿಕೆ ಹಾಕಿ ಕ್ಷಮೆ ಯಾಚಿಸಬೇಕು ಅಂತೆಯೇ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

    ಅಲ್ಲದೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿಯವರನ್ನು ಬಿಜೆಪಿಯವರು  ಪಕ್ಷದಿಂದ ಕಿತ್ತು ಬಿಸಾಡದೇ ಇದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶೇಕಡಾ 60ರಷ್ಟು ಬಿಲ್ಲವ ಸಮುದಾಯ ಮುಂದಿನ ದಿನಗಳಲ್ಲಿ ಏನು ಮಾಡಲಿದೆ ಅನ್ನೋದನ್ನು ಕಾದು ನೋಡಲಿ  ಎಂದು ಸವಾಲು ಹಾಕಿದ್ದಾರೆ.

    ಇನ್ನು  ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್‌ ಅಧಿಕಾರಿ ಮುಖಕ್ಕೆ 3 ದಿನಗಳ ಒಳಗಾಗಿ ಯಾರಾದರೂ ಬಿಲ್ಲವ ಸಮುದಾಯದ ಯುವಕರು ಮಸಿ ಬಳಿದರೆ  ಅವರಿಗೆ ತಕ್ಷಣ   1 ಲಕ್ಷ ರೂಪಾಯಿ ನಗದು  ಬಹುಮಾನ ನೀಡುವುದಾಗಿ ಮಾಜಿ ಕಾರ್ಪೊರೇಟರ್‌ ಪ್ರತಿಭಾ ಕುಳಾಯಿ ಘೋಷಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    BANTWAL

    ಬೈಕ್‌ಗಳು ಪರಸ್ಪರ ಮು*ಖಾಮು*ಖಿ ; ಬಾಲಕಿ ಸಾ*ವು

    Published

    on

    ಬಂಟ್ವಾಳ: ಬೈಕ್ ಗಳ ನಡುವೆ ಭೀ*ಕರ ಅ*ಪಘಾ*ತ ಸಂಭವಿಸಿ ಬೈಕ್ ನಲ್ಲಿ ಸಹ ಪ್ರಯಾಣಿಕೆಯಾಗಿದ್ದ ಬಾಲಕಿ ಮೃ*ತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆ ಎಂಬಲ್ಲಿ ನಿನ್ನೆ (ಜ.14) ರಾತ್ರಿ ನಡೆದಿದೆ.

    ಕುಕ್ಕಿಪಾಡಿ ಗ್ರಾಮದ ಕೊಡಂಬೆಟ್ಟು ನಿವಾಸಿ ಇಸ್ಮತ್ ಆಯಿಶಾ (13) ಮೃ*ತ ಬಾಲಕಿ ಎಂದು ಗುರುತಿಸಲಾಗಿದೆ.

    ಬಾಲಕಿಯ ತಂದೆ ಬೈಕ್ ಚಾಲಕ ಅಬ್ದುಲ್ ರಹಮಾನ್ ಕೂಡ ಗಾ*ಯಗೊಂಡಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

     

    ಇದನ್ನೂ ಓದಿ : ಮಂಗಳೂರು: ಕೈದಿಗಳಿಂದ ಜೈಲು ಅಧಿಕಾರಿ, ಸಿಬಂದಿಯ ಕರ್ತವ್ಯಕ್ಕೆ ಅಡ್ಡಿ

     

    ರಾಮಲ್ ಕಟ್ಟೆಯಿಂದ ಹೆದ್ದಾರಿಯಲ್ಲಿ ರಾಂಗ್ ಸೈಡ್ ನಲ್ಲಿ ಬಂದ ನೆತ್ತರಕೆರೆ ನಿವಾಸಿ ರಂಜಿತ್ ಎಂಬಾತ ಬಿ.ಸಿ ರೋಡಿನ ಕಡೆಯಿಂದ ತುಂಬೆ ಕಡೆಗೆ ಸರಿಯಾದ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಗೆ ಡಿ*ಕ್ಕಿ ಹೊಡೆದಿದ್ದಾನೆ. ರಂಜಿತ್ ಗೆ ಕೂಡ ಗಾ*ಯವಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.

    ಅ*ಪಘಾ*ತ ನಡೆದ ರಭಸಕ್ಕೆ ಬೈಕ್ ಸಂಪೂರ್ಣ ಜ*ಖಂಗೊಂಡಿದೆ. ಘಟನಾ ಸ್ಥಳಕ್ಕೆ ಪಾಣೆಮಂಗಳೂರು ಟ್ರಾಫಿಕ್ ಎಸ್.ಐ ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    DAKSHINA KANNADA

    ಮಂಗಳೂರು: ಕೈದಿಗಳಿಂದ ಜೈಲು ಅಧಿಕಾರಿ, ಸಿಬಂದಿಯ ಕರ್ತವ್ಯಕ್ಕೆ ಅಡ್ಡಿ

    Published

    on

    ಮಂಗಳೂರು : ನಗರದ ಜೈಲಿನಲ್ಲಿ ಕೈದಿಗಳು ಜೈಲು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹ*ಲ್ಲೆಗೆ ಯತ್ನಿಸಿದ ಘಟನೆ ನಡೆದಿದ್ದು, ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

    ಮಂಗಳೂರಿನ ಜಿಲ್ಲಾ ಕಾರಾಗೃಹದ ‘ಎ’ ಬ್ಲಾಕ್‌ನ ಸೆಲ್‌ಗಳಲ್ಲಿ ನಿಷೇಧಿತ ವಸ್ತುಗಳಿರುವ ಶಂಕೆಯ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಜೈಲು ಸಿಬಂದಿ ತಪಾಸಣೆಗೆ ತೆರಳಿದ್ದರು. ಈ ವೇಳೆ ವಿಚಾರಣಾಧೀನ ಕೈದಿಗಳು ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

     

    ಇದನ್ನೂ ಓದಿ : ಮಂಗಳೂರಿಗೆ ಆಗಮಿಸಲಿದ್ದಾರೆ ಡಾಲಿ ಚಾಯ್ ವಾಲ

     

    ಜೈಲಿನಲ್ಲಿ ಮೊಬೈಲ್, ಗಾಂಜಾ ಮೊದಲಾದ ನಿಷೇಧಿತ ವಸ್ತುಗಳಿರುವ ಶಂಕೆಯಿಂದ ಜೈಲು ಅಧೀಕ್ಷಕ ಎಂ.ಎಚ್.ಆಶೇಖಾನ್ ನೇತೃತ್ವದಲ್ಲಿ ತಪಾಸಣೆಗೆ ಮುಂದಾಗಿದ್ದರು. ಆಗ ಪಾತ್ರೆ ಮತ್ತಿತರ ವಸ್ತುಗಳಿಂದ ವಿಚಾರಣಾ ಕೈದಿಗಳು ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲದೆ ಅ*ವಾಚ್ಯ ಶಬ್ದಗಳಿಂದ ಬೈ*ದು ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಬರ್ಕೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

    Continue Reading

    DAKSHINA KANNADA

    ರಾಜ್ಯದ 6 ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ; ಎಲ್ಲೆಲ್ಲಿ?

    Published

    on

    ಮಂಗಳೂರು/ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಿನ್ನೆ ಸಂಜೆ ಮತ್ತು ರಾತ್ರಿ ಮಳೆಯಾಗಿದ್ದು, ಕೆಲವೆಡೆ ಮಳೆಗಾಲದಂತೆ ಜೋರಾಗಿ ಮಳೆಯಾಗಿದೆ.

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಾಧಾರಣ ಮಳೆ ಆಗಿದ್ದು, ಇನ್ನೂ ಮುಂದಿನ 2 ದಿನ ಮಳೆಯಾಗಲಿದೆ ಎಂದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕೊಮೊರಿನ್ ಪ್ರದೇಶ ಮತ್ತು ನೆರೆಹೊರೆಗಳಲ್ಲಿ ಚಂಡಮಾರುತದ ಪರಿಚಲನೆಯು ಈಗ ಅಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಸಮಭಾಜಕ ವೃತ್ತದ ಹಿಂದೂ ಮಹಾಸಾಗರದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ. ಎತ್ತರದಲ್ಲಿದೆ. ಇದರಿಂದ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

    ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ

    ಯಾವ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ?
    ಹಾಸನ, ಚಾಮರಾಜನಗರ, ಕೊಡಗು, ಮೈಸೂರು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದ್ದು, ಇನ್ನು ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಂಜು ಬೀಳುವ ಸಾಧ್ಯತೆ ಇದೆ. ಜನವರಿ 20 ರವರೆಗೂ ಇದೇ ಹವಾಮಾನ ಮುಂದುವರಿಯಲಿದೆ.

    ಮುಂದಿನ 24 ಗಂಟೆಗಳ ಕಾಲ ಬೆಂಗಳೂರು ಹಾಗೂ ನೆರೆಯ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಡಿ.ಸೆ ಮತ್ತು 20 ಡಿ. ಸೆ ಇರುವ ಸಾಧ್ಯತೆ ಇದ್ದು, ನಾಳೆಯೂ ಹೀಗೆ ಇರಲಿದೆ.

    ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸೋಮವಾರ ಹಗುರ ಮಳೆಯಾಗಿದೆ. ವಿಜಯಪುರದಲ್ಲಿ ಕನಿಷ್ಠ ತಾಪಮಾನ 14.6 ಡಿ. ಸೆ ಹಾಗೂ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಗರಿಷ್ಠ ತಾಪಮಾನ 32.8 ಡಿ. ಸೆ ದಾಖಲಾಗಿದೆ. ಇನ್ನು ಬೆಂಗಳೂರಿನಲ್ಲಿ ಇನ್ನೆರಡು ದಿನ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಮುಂದುವರಿಯುವ ಸಾಧ್ಯತೆ ಇದೆ.

    Continue Reading

    LATEST NEWS

    Trending