DAKSHINA KANNADA
ಕೊಣಾಜೆ ಬೆಳ್ಮ ಮಂದಿರದಲ್ಲೂ ದುಷ್ಕೃತ್ಯ ಎಸಗಿದ ದುಷ್ಕರ್ಮಿಗಳು..! ಇದಕ್ಕೆ ಕೊನೆ ಎಂದು..!?
ಕೊಣಾಜೆ ಬೆಳ್ಮ ಮಂದಿರದಲ್ಲೂ ದುಷ್ಕೃತ್ಯ ಎಸಗಿದ ದುಷ್ಕರ್ಮಿಗಳು..! ಇದಕ್ಕೆ ಕೊನೆ ಎಂದು..!?
Victims of misconduct at Konaje Belma Hindu prayer Mandir ..!
ಮಂಗಳೂರು : ಮಂಗಳೂರಿನಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಮಲಿನಗೊಳಿಸುವ, ಅಪವಿತ್ರಗೊಳಿಸುವ ಕೃತ್ಯಗಳು ಹೆಚ್ಚಾಗುತ್ತಿದೆ.
ಉಳ್ಳಾಲದಲ್ಲಿ ಕೊರಗಜ್ಜ ಕ್ಷೇತ್ರದ ಬಳಿಕ ಇದೀಗ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ದುಷ್ಕರ್ಮಿಗಳು ಮಂದಿರವನ್ನು ಮಲಿನಗೊಳಿಸುವ ಮೂಲಕ ಅಪವಿತ್ರಗೊಳಿಸಲಾಗಿದೆ.
ಇಲ್ಲಿ ಮುಲಾರ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ವಿಕೃತಿ ಮೆರೆದಿರುವ ದುಷ್ಕರ್ಮಿಗಳು ಭಗವಾಧ್ವಜದ ಮೇಲೆ ಮಲ ಮೂತ್ರ ವಿಸರ್ಜಿಸಿ ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ಸಂಜೆ ಉಳ್ಳಾಲ ಜಂಕ್ಷನ್ನಿನಲ್ಲಿರುವ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಕಾಂಡೋಂ ಮತ್ತು ಬಿಜೆಪಿ ಮುಖಂಡರ ಪತ್ರಿಕೆ ಜಾಹೀರಾತಿನಲ್ಲಿ ಅವಾಚ್ಯ ಶಬ್ದಗಳನ್ನು ಬರೆದಿರುವ ಪತ್ರ ಇರುವುದು ಬೆಳಕಿಗೆ ಬರುತ್ತಿದ್ದಂತೆ, ಇದೀಗ ಕೊಣಾಜೆ ಮಂದಿರದಲ್ಲಿ ದುಷ್ಕøತ್ಯ ಎಸಗಲಾಗಿದೆ.
ಮಂದಿರದ ಬಾಗಿಲು ಒಡೆಯಲು ಯತ್ನಿಸಿದ ದುಷ್ಕರ್ಮಿಗಳು ಸ್ಥಳದಲ್ಲಿದ್ದಂತಹ ಭಗವಾಧ್ವಜಕ್ಕೆ ಮಲಮೂತ್ರ ವಿಸರ್ಜಿಸಿ ಪರಿಸರ ಮಲಿನಗೊಳಿಸಿ ಪಲಾಯನ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರು ಭೇಟಿ ನೀಡಿ ಸ್ಥಳಿಯರೊಂದಿಗೆ ಮಾತುಕಡೆ ನಡೆಸಿದ್ದಾರೆ.
ಕಳವಿಗೆ ಯತ್ನಿಸಿರುವವರು ದುಷ್ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಆಯುಕ್ತರು ತಿಳಿಸಿದ್ದರೂ ಕಳೆದ ಆನೇಕ ಸಮಯಗಳಿಂದ ಶಾಂತಿಯಲ್ಲಿದ್ದ ಉಳ್ಳಾಲ ಮತ್ತು ಮಂಗಳೂರು ಪ್ರದೇಶಗಳಲ್ಲಿ ಮತ್ತೆ ಶಾಂತಿ ಕದಡುವ ಯತ್ನವನ್ನು ಕೆಲ ಮತಾಂಧ ಶಕ್ತಿಗಳು ಮಾಡುತ್ತಿವೆ ಎನ್ನುವುದು ಈ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಗಂಭೀರ ಹೆಜ್ಜೆಗಳನ್ನು ಇಡಬೇಕಿದೆ.
DAKSHINA KANNADA
Sullia : ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಸರ್ಕಾರಿ ಅಧಿಕಾರಿ
ಸುಳ್ಯ : ಸರ್ಕಾರಿ ಅಧಿಕಾರಿಯೊಬ್ಬರು ಮದ್ಯದ ನಶೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಸಾರ್ವಜನಿಕರಿಂದ ಬೈಗುಳ ತಿಂದ ಸುಳ್ಯದ ಅರಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್ ಎಂಬವರು ಕಂಠಪೂರ್ತಿ ಕುಡಿದ ಮದ್ಯದ ಮತ್ತಿನಲ್ಲಿ ಸುಳ್ಯ ಅರಂಬೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ, ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಹಲವಾರು ವಾಹನಗಳಿಗೆ ಢಿಕ್ಕಿ ಆಗುವಂತಹ ಸಂಭಾವ್ಯ ದುರಂತವೊಂದು ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದೆ. ರಸ್ತೆಯುದ್ದಕ್ಕೂ ವಿರುದ್ಧ ದಿಕ್ಕಿನಲ್ಲಿ, ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ಸಂಭವಿಸುವ ಸಾಧ್ಯತೆಯನ್ನು ಮನಗಂಡ ಕೆಲವು ವಾಹನ ಸವಾರರು ಸಾರ್ವಜನಿಕರ ಸಹಕಾರದಿಂದ ಅಡ್ಡಗಟ್ಟಿದ್ದಾರೆ. ಸರ್ಕಾರಿ ಅಧಿಕಾರಿಯ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
DAKSHINA KANNADA
ಉಪ್ಪಿನಂಗಡಿ:12 ಅಡಿ ಉದ್ದದ ಕಾಳಿಂಗ ಸರ್ಪ ಹಿಡಿಯೋಕು ಮೀಟ್ರು ಬೇಕು
ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯ ಸೈಂಟ್ ಜೋಸೆಫ್ ಮಲಂಕರ ಚರ್ಚ್ ಪರಿಸರದಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷಗೊಂಡಿತು. ಇದನ್ನು ಸೆರೆ ಹಿಡಿದ ಉರಗ ತಜ್ಞ ಕೆ. ಝಕರಿಯ್ಯ ಎಂಬುವವರು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಎರಡು- ಮೂರು ದಿನಗಳಿಂದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ನೆಲ್ಯಾಡಿಯ ಸೈಂಟ್ ಜೋಸೆಫ್ ಮಲಂಕರ ಚರ್ಚ್ ಪರಿಸರದಲ್ಲಿ ಸುತ್ತಾಡಿಕೊಂಡಿತ್ತು.
ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿಯ ಕೆ. ಝಕರಿಯಾ ಅವರು ಅಲ್ಲಿಗೆ ತೆರಳಿ ಸುಮಾರು ಒಂದು ಗಂಟೆಯಷ್ಟು ಕಾರ್ಯಾಚರಣೆಯ ಬಳಿಕ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಗುಂಡ್ಯ ಬಳಿ ದಟ್ಟಾರಣ್ಯಕ್ಕೆ ಬಿಟ್ಟಿದ್ದಾರೆ.
DAKSHINA KANNADA
ಅತ್ತಾವರ ಅಪಾರ್ಟ್‌ಮೆಂಟ್‌ನಲ್ಲಿ ಆಕಸ್ಮಿಕ ಬೆಂಕಿ – ವೃದ್ಧೆ ಸಾವು..!
ಮಂಗಳೂರು: ಮಂಗಳೂರಿನ ಅತ್ತಾವರದ ಅಪಾರ್ಟ್ ಮೆಂಟ್‌ವೊಂದರಲ್ಲಿ ಇಂದು ಬೆಳಗ್ಗೆ ನಡೆದ ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಗಂಭೀರ ಗಾಯಗೊಂಡಿದ್ದ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಾಹಿನಾ ನುಸ್ಬಾ(58) ಸಾವನ್ನಪ್ಪಿದ ವೃದ್ಧೆ ಎಂದು ಗುರುತಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮುಂಜಾನೆ 4 ಗಂಟೆಯ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಐವರು ಮಕ್ಕಳ ಸಹಿತ ಎಂಟು ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಅನಾರೋಗ್ಯದಿಂದಾಗಿ ಬೆಡ್ ರೂಮ್ ನಲ್ಲೇ ಇದ್ದ ವೃದ್ಧ ಮಹಿಳೆ ದಟ್ಟ ಹೊಗೆಯಿಂದಾಗಿ ತಕ್ಷಣ ಹೊರಬರಲಾಗದೇ ಉಸಿರುಗಟ್ಟಿ ಚಿಂತಾಜನಕ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
- FILM7 days ago
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನೋಡಿ ‘ಕತ್ತೆ’ ಎಂದ ಕಿಚ್ಚ ಸುದೀಪ
- bengaluru6 days ago
ಇನ್ಸ್ಟಾಗ್ರಾಂನಲ್ಲಿ 11 ಸಾವಿರ ಫಾಲೋವರ್ಸ್ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ ಸಂಗೀತಾ
- DAKSHINA KANNADA6 days ago
Breaking news :ಮಂಗಳೂರಿನ ಹೊಟೇಲ್ ರೂಂನಲ್ಲಿ ಬೆಂಕಿ-ಒಳಗಿದ್ದ ವ್ಯಕ್ತಿ ಸಾವು
- bengaluru6 days ago
ಬೆಂಗಳೂರು ಕಂಬಳಕ್ಕೆ ಕ್ಷಣಗಣನೆ-ಉಪ್ಪಿನಂಗಡಿಯಿಂದ ಬೆಂಗಳೂರಿಗೆ ಕೋಣಗಳ ಪ್ರಯಾಣ