Connect with us

LATEST NEWS

ವಿಶ್ವಹಿಂದೂ ಪರಿಷತ್ ಪುಂಡು ಪೋಕರಿಗಳ ಸಂಸ್ಥೆಯಲ್ಲ..!!

Published

on

ವಿಶ್ವಹಿಂದೂ ಪರಿಷತ್ ಪುಂಡು ಪೋಕರಿಗಳ ಸಂಸ್ಥೆಯಲ್ಲ..!!

ಉಡುಪಿ :ವಿಶ್ವಹಿಂದೂ ಪರಿಷತ್ ಪುಂಡು ಪೋಕರಿಗಳ ಸಂಸ್ಥೆಯಲ್ಲ ಮತ್ತು ರಾಮಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ . ಅದೊಂದು ನೊಂದಣಿಯಾಗಿರುವ ಸಂಸ್ಥೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ರಾಮಜನ್ಮಭೂಮಿ ಬಗ್ಗೆ ಅಪಸ್ವರ ತೆಗೆದ ರಾಜಕೀಯ ನೇತಾರರಿಗೆ ಕಿವಿಮಾತು ಹೇಳಿದ್ದಾರೆ.

ರಾಮ ಮಂದಿ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನ ವಿಚಾರಕ್ಕೆ ಸಂಬಂಧ ಪಟ್ಟಂತೆ ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯ ಹಾಗು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರ ಸ್ವಾಮಿ ನೀಡಿರುವ ಹೇಳಿಕೆಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು ಟ್ರಸ್ಟ್ ನೊಂದವಣೆಗೆ ಅದರದ್ದೆ ಆದ ನೀತಿ ನಿಯಮಾವಳಿಗಳು ಇದೆ.

ದೇಣಿಗೆ ಸಂಗ್ರಹ ಮಾಡಲು ಅದರದ್ದೇ ಆದ ಕಾನೂನು ಇದೆ. ಹಾಗಾಗಿ ಸಂಶಯಗಳನ್ನು ಇಟ್ಟು ಆರೋಪ ಮಾಡುವುದು ಸೂಕ್ತವಲ್ಲ.

ದೇಣಿಗೆ ಸಂಗ್ರಹಕ್ಕೆ ವಿಶ್ವ ಹಿಂದೂ ಪರಿಷತ್ ನ ಕಾರ್ಯರ್ತರಿಗೆ ಜವಾಬ್ದಾರಿ ನೀಡಲಾಗಿದೆ. ವಿಶ್ವ ಹಿಂದೂ ಪರಿಷತ್ ನ ಮುಖ್ಯಸ್ಥರು ಆಯಾ ಊರಿನಲ್ಲಿ ನಿಧಿ ಸಂಗ್ರಹ ಕಾಯಕದಲ್ಲಿ ನಿರತರಾಗಿದ್ದಾರೆ.

ವಿಶ್ವಹಿಂದೂ ಪರಿಷತ್ ಪುಂಡು ಪೋಕರಿಗಳ ಸಂಸ್ಥೆಯಲ್ಲ, ಇದು ಅಧಿಕೃತ ಸಂಸ್ಥೆ. ಹಾಗಾಗಿ ಇಂತಹ ಮಾತು ಬಳಸುವುದು ಯುಕ್ತವಲ್ಲ, ಸಂಶಯಕ್ಕೆ ಪರಿಹಾರ ಇದೆ. ಸಂಶಯ ಇದೆ ಎಂದು ಅರೋಪ ಮಾಡಿದರೆ, ಆರೋಪದಲ್ಲಿಯೇ ಮುಗಿಯುತ್ತದೆ. ಆರೋಪಕ್ಕೆ ಪ್ರತ್ಯಾರೋಪ ಸಿಗುತ್ತದೆ, ಪ್ರಶ್ನೆಗೆ ಉತ್ತರ ಸಿಗುವುದಿಲ್ಲ .ಪ್ರಶ್ನೆ ಮಾಡಿದರೆ ಉತ್ತರ ಕೊಡಬಹುದು ಅಂತ ರಾಜಕೀಯ ನಾಯಕರುಗಳ ಸಂಶಯದ ಮಾತುಗಳಿಗೆ ಶ್ರೀಗಳು ತಿರುಗೇಟು ನೀಡಿದರು.

 

Click to comment

Leave a Reply

Your email address will not be published. Required fields are marked *

DAKSHINA KANNADA

MANGALURU : ಜಿಲ್ಲೆಯಿಂದ ಟಿಕೇಟ್ ನೀಡಿದ್ರೆ ಡಿವಿ ಹಠಾವೋ ಆಂದೋಲನ; ನೇತ್ರಾವತಿ ಹೋರಾಟ ಸಮಿತಿಯಿಂದ ಕಾಂಗ್ರೆಸ್‌ಗೆ ಎಚ್ಚರಿಕೆ ಸಂದೇಶ

Published

on

ಮಂಗಳೂರು : ಡಿ.ವಿ.ಸದಾನಂದ ಗೌಡರು ಕಾಂಗ್ರೆಸ್ ಪಕ್ಷಕ್ಕೆ ಬರೋದು ಬಹುತೇಕ ಖಚಿತವಾಗಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ಹೋರಾಟಗಾರರು ಅಲರ್ಟ್ ಆಗಿದ್ದಾರೆ. ಕಾಂಗ್ರೆಸ್‌ ಸೇರ್ಪಡೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಅವರಿಗೆ ಟಿಕೇಟ್ ನೀಡಿದ್ರೆ ದೊಡ್ಡ ಆಂದೋಲನ ನಡೆಸುವುದಾಗಿ ನೇತ್ರಾವತಿ ಹೋರಾಟ ಸಮಿತಿಯ ಸಂಚಾಲಕ ದಿನಕರ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಡಿವಿ ಹಟಾವೋ ನೇತ್ರಾವತಿ ಬಚಾವೋ ಎಂಬ ಹೆಸರಿನಲ್ಲಿ ಜಿಲ್ಲೆಯಲ್ಲಿ ಆಂದೋಲನ ನಡೆಸಿ ಅವರನ್ನು ಸೋಲಿಸು ಜಿಲ್ಲೆಯ ಜನರು ಒಗ್ಗಟ್ಟಾಗಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಇಂದು ಕುಡಿಯುವ ನೀರಿಗೆ ಸಮಸ್ಯೆ ಆಗಿದ್ದರೆ ಅದಕ್ಕೆ ಡಿ.ವಿ. ಸದಾನಂದ ಗೌಡರೇ ಕಾರಣವಾಗಿದ್ದಾರೆ. ನಮ್ಮ ಪಶ್ಚಿಮ ಘಟ್ಟ ಹಾಳಾಗಿ ಮಳೆ ಬಾರದಂತೆ ಮಾಡಿ ಜಿಲ್ಲೆಯ ಜೀವ ನದಿಗೇ ಕನ್ನ ಹಾಕಿದವರನ್ನು ಜಿಲ್ಲೆಯ ಜನ ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

Continue Reading

LATEST NEWS

ಜಾರಿ ಬಿದ್ದು ಗಂಡ ಸತ್ತ ಅಂದ್ಲು ಹೆಂಡ್ತಿ; ಅಂತ್ಯಕ್ರಿಯೆ ಬಳಿಕ ಗೊತ್ತಾಯ್ತು ಅಸಲಿ ಸತ್ಯ!

Published

on

ಉತ್ತರ ಕನ್ನಡ : ಪ್ರತಿ ದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಪತಿಯನ್ನು ಸದ್ದಿಲ್ಲದೆ ಮುಗಿಸಿದ ಪತ್ನಿ ಮನೆಯಲ್ಲಿ ಜಾರಿ ಬಿದ್ದು ಹೀಗಾಯ್ತು ಅಂತ ಊರಲ್ಲಿ ಕಥೆ ಕಟ್ಟಿದ್ದಳು. ಆದ್ರೆ ಪತಿಯ ಅಂತ್ಯ ಕ್ರಿಯೆ ನಡೆದು ಹದಿನೈದು ದಿನಗಳ ಬಳಿಕ ಪತ್ನಿಯೇ ಪತಿಯನ್ನ ಮುಗಿಸಿದ್ದಾಳೆ ಅನ್ನೋ ಸತ್ಯ ಬಯಲಾಗಿದೆ.
ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ. 44 ವರ್ಷದ ಟೋಪಣ್ಣ ಲಮಾಣಿ ಕೊ*ಲೆಗೀಡಾದಾತ. ಶಾಂತವ್ವ ಕೊ*ಲೆಗೈದ ಪತ್ನಿ.

ಕುಡಿದು ಗಲಾಟೆ ಮಾಡುತ್ತಿದ್ದ ಪತಿ:
ವಿಪರೀತ ಕುಡಿತದ ಚಟ ಹೊಂದಿರುವ ಮುಂಡಗೋಡಿನ ಲಂಬಾಣಿ ತಾಂಡಾದ ಟೋಪಣ್ಣ ಮನೆಗೆ ಬಂದು ಗಲಾಟೆ ಮಾಡ್ತಾ ಇದ್ದ. ಇದು ತಾಂಡದಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದ ಕಾರಣ ಈ ಮನೆಯಲ್ಲಿ ಗಲಾಟೆ ನಡೆದ್ರೆ ಯಾರೂ ಅತ್ತ ತಲೆ ಹಾಕ್ತಾ ಇರಲಿಲ್ಲ. ಆದ್ರೆ ಆ ದಿನ ಎಂದಿನಂತೆ ಕುಡಿದು ಬಂದ ಪತಿ ಮನೆಯಲ್ಲಿ ನಿಯಂತ್ರಣ ತಪ್ಪಿ ಬಿದ್ದಿರುವುದಾಗಿ ಹೇಳಿದ್ದಾಳೆ. ಸ್ಥಳಕ್ಕೆ ಬಂದ ಆಕ್ಕಪಕ್ಕದವರು ನೋಡಿದಾಗ ಟೋಪಣ್ಣ ಲಮಾಣಿ ಇಹಲೋಕ ತ್ಯಜಿಸಿರುವುದು ಗೊತ್ತಾಗಿದೆ. ಹೀಗಾಗಿ ಕುಟುಂಬಸ್ಥರು ಸೇರಿ ಆತನ ಅಂತ್ಯಕ್ರಿಯೆ ನಡೆಸಿದ್ದಾರೆ.

ಸತ್ಯ ಬಯಲಾಗಿದ್ದು ಹೇಗೆ?
ಆದ್ರೆ ಟೋಪಣ್ಣ ಅಂತ್ಯಕ್ರಿಯೆ ಮುಗಿದು ಕೆಲ ದಿನಗಳ ಬಳಿಕ ಪತ್ನಿ ಶಾಂತವ್ವ ಬಾಯಿಂದ ಅಸಲಿ ಸತ್ಯ ಹೊರಬಿದ್ದಿದೆ. ಯಾರೊಂದಿಗೋ ಮೊಬೈಲ್‌ನಲ್ಲಿ ಮಾತಾಡುವ ವೇಳೆ ಪತಿಯ ಮರ್ಮಾಂಗ ಹಿಚುಕಿ ಕೊಲೆ ಮಾಡಿರುವುದಾಗಿ ಮಾತನಾಡಿದ್ದಾಳೆ.

ಇದು ಪಕ್ಕದ ಮನೆಯವರಿಗೆ ಕೇಳಿಸಿದ್ದು ವಿಚಾರವನ್ನು ಗ್ರಾಮದ ಹಿರಿಯರಿಗೆ ತಿಳಿಸಿದ್ದಾರೆ. ವಿಚಾರ ತಿಳಿದ ತಾಂಡಾದ ಹಿರಿಯರು ಸಭೆ ಕರೆದು ಶಾಂತವ್ವಳ ಮೊಬೈಲ್ ಪರಿಶೀಲಿಸಿ ಆಕೆಯ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶಾಂತವ್ವ ತನ್ನ ಒಪ್ಪಿಕೊಂಡಿದ್ದು, ನಾನೇ ಕೊಲೆ ಮಾಡಿರುವುದಾಗಿ ಹೇಳಿದ್ದಾಳೆ. ಸತ್ಯ ಹೊರಬಿದ್ದ ಹಿನ್ನೆಲೆಯಲ್ಲಿ ತಾಂಡದ ಮುಖ್ಯಸ್ಥರು ಪೊಲೀಸರಿಗೆ ಮಾಹಿತಿ ನೀಡಿ ಶಾಂತವ್ವಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

Continue Reading

DAKSHINA KANNADA

PUTTUR : ಅಂಗನವಾಡಿಯಲ್ಲಿ ಆಮ್ಲೇಟ್‌ ತಯಾರಿ; ಆರೋಗ್ಯ ಕೇಂದ್ರದ ಸಿಸಿ ಟಿವಿ ಕದ್ದು ಪರಾರಿ; ಕಿಡಿಗೇಡಿಗಳ ಅನೈತಿಕ ಚಟುವಟಿಕೆಗೆ ಯಾವಾಗ ಬ್ರೇಕ್!?

Published

on

ಪುತ್ತೂರು : ನಗರದ ಹೃದಯಭಾಗದಲ್ಲಿರುವ ಅಂಗನವಾಡಿ ಕೇಂದ್ರ ಹಾಗೂ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ಕಿಡಿಗೇಡಿಗಳು ಮಾಡಬಾರದ್ದು ಮಾಡಿ ಸಿಸಿ ಕ್ಯಾಮೆರಾ ಸಹಿತ ಪರಾರಿಯಾಗಿದ್ದಾರೆ. ಆದ್ರೆ, ಪ್ರಕರಣ ದಾಖಲಿಸಿ ಅಂತ ಪೊಲೀಸ್ ಠಾಣೆಗೆ ಹೋದ್ರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಮಕ್ಕಳಿಗೆ ಅಂತ ಇಟ್ಟಿದ್ದ ಮೊಟ್ಟೆಗಳನ್ನು ಆಮ್ಲೇಟ್ ಮಾಡಿ ತಿಂದಿರುವ ಕಿಡಿಗೇಡಿಗಳು, ಬಳಿಕ ಪಕ್ಕದಲ್ಲೇ ಇರೋ ಆರೋಗ್ಯ ಕೇಂದ್ರದಲ್ಲಿ ಏನಾದ್ರೂ ಸಿಗತ್ತದಾ ಎಂದು ತಡಕಾಡಿದ್ದಾರೆ. ಇನ್ನು ಇಲ್ಲೇ ಅನೈತಿಕ ಚಟುವಟಿಕೆ ನಡೆಸಿರುವುದಕ್ಕೆ ಸಾಕ್ಷಿ ಬಿಟ್ಟು ಹೋಗಿದ್ದಾರೆ. ಹೀಗಾಗಿ ಇದು ಕೇವಲ ಕಿಡಿಗೇಡಿಗಳ ಕೃತ್ಯ ಮಾತ್ರ ಆಗಿರದೆ ಅನೈತಿಕ ದಂಧೆಯವರೂ ಇದರ ಹಿಂದೆ ಇದ್ದಾರೆ ಅನ್ನೋ ಅನುಮಾನ ಸ್ಥಳಿಯರದ್ದು.

ಯಾಕಂದ್ರೆ ನಗರದ ನಡುವೆ ಇದ್ರೂ ಕೂಡಾ ರಾತ್ರಿಯಾದ ಮೇಲೆ ಇದೊಂದು ನಿರ್ಜನ ಪ್ರದೇಶವಾಗಿ ಜನ ಓಡಾಟ ಇರೋದು ಕಡಿಮೆ. ಹೀಗಾಗಿ ತಮ್ಮ ಅನೈತಿಕ ಚಟುವಟಿಕೆಗೆ ಈ ಜಾಗವನ್ನೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಸ್ಥಳಿಯರ ಅನುಮಾನ.

ಈ ಹಿಂದೆಯೂ ಅನೇಕ ಬಾರಿ ಇಂತಹ ಘಟನೆ ಇದೇ ಅಂಗನವಾಡಿ ಹಾಗೂ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಆಗಲೂ ಪೊಲೀಸರಿಂದ ಯಾವುದೇ ಕ್ರಮ ಆಗಿರಲಿಲ್ಲ. ಇತ್ತೀಚೆಗೆ ಇಲ್ಲಿ ಸಿಸಿ ಟಿವಿ ಅಳವಡಿಸಿದ್ದು, ಈ ಬಾರಿ ಕಿಡಿಗೇಡಿಗಳು ಗುರುತು ಪತ್ತೆಯಾಗಬಾರದು ಅಂತ ಸಿಸಿಟಿವಿನ್ನೇ ಹೊತ್ತೊಯ್ದಿದ್ದಾರೆ.
ಶಾಲೆ ಹಾಗೂ ಆರೋಗ್ಯ ಕೇಂದ್ರ ಒಂದೇ ಕಡೆ ಇದ್ರೂ ಇದಕ್ಕೆ ಸೂಕ್ತ ಭದ್ರತೆ ಇಲ್ಲ. ಆವರಣ ಗೋಡೆಯೂ ಇಲ್ಲದೆ ಇರೋದ್ರಿಂದ ಇಂತಹ ಕಿಡಿಗೇಡಿಗಳಿಗೆ ಕೃತ್ಯ ನಡೆಸಲು ಅನುಕೂಲ ಆಗಿದೆ. ಆದ್ರೆ, ಪೊಲೀಸರು ಈ ಬಗ್ಗೆ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವ ಬದಲಾಗಿ ಮೌನಕ್ಕೆ ಶರಣಾಗಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading

LATEST NEWS

Trending