Monday, October 18, 2021

ಸಚಿವ ಸ್ಥಾನ ಸಿಕ್ಕಾಗ ಅಭಿವೃದ್ದಿಗಿಂತ ಹಿಂದುತ್ವ ಮುಖ್ಯ ಎಂದವರು ನಂಬಿಕೆ ಉಳಿಸಿ: ಪುನೀತ್‌ ಅತ್ತಾವರ

ಮಂಗಳೂರು: ಇಂಧನ ಸಚಿವರು ಸಚಿವ ಸ್ಥಾನ ಸಿಕ್ಕಾಗ ನನಗೆ ಅಭಿವೃದ್ದಿಗಿಂತ ಹಿಂದುತ್ವ ಮುಖ್ಯ ಎಂದವರು ನಮ್ಮ ನಂಬಿಕೆ ಉಳಿಸಿ ಎಂದು ಬಜರಂಗದಳ ಸಂಚಾಲಕ ಪುನೀತ್‌ ಅತ್ತಾವರ ತಿಳಿಸಿದ್ದಾರೆ.


ಮೈಸೂರಿನಲ್ಲಿ ದೇವಸ್ಥಾನ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟು ಮಂಗಳೂರಿನ ಕದ್ರಿ ದೇವಸ್ಥಾನ ದ್ವಾರದ ಮುಂಭಾಗದಲ್ಲಿ ವಿಎಚ್‌ಪಿ ಹಾಗೂ ಬಜರಂಗದಳ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ,

ದೇವಸ್ಥಾನ ಧ್ವಂಸಗೊಳಿಸುವ ದುಸ್ಸಾಹಸಕ್ಕೆ ಕೈ ಹಾಕಬೇಡಿ.

ದ.ಕ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಗೆಲ್ಲಲು ಬಜರಂಗದಳ, ಹಾಗೂ ಹಿಂದೂ ಸಂಘಟನೆಯ ಶಕ್ತಿಯಿಂದ ಎಂದರು. ನಿಮ್ಮ ಸ್ವಂತ ಬಲದಿಂದ ಸರಕಾರ ರಚಿಸಿಲ್ಲ.

ಇದರ ಹಿಂದೆ ಹಿಂದೂ ಯುವಕರ ಬಲಿದಾನವಿದೆ. ನೀವು ಹಿಂದುತ್ವ ಬಿಟ್ಟರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡುತ್ತಿದ್ದೇವೆ. ಈಗಾಗಲೇ ಅನಧಿಕೃತ ಕಟ್ಟಡದ ಹೆಸರಲ್ಲಿರುವ ದೇವಸ್ಥಾನವನ್ನು ಸಕ್ರಮಗೊಳಿಸಿ ಎಂದರು.


ವಿಎಚ್‌ಪಿಯ ಮುಖ್ಯಸ್ಥ ಎಂ.ಬಿ ಪುರಾಣಿಕ್‌ ಮಾತನಾಡಿ, ಇದು ಕೇವಲ ಪ್ರತಿಭಟನೆಯಲ್ಲ ಬದಲಿಗೆ ಅಧಿಕಾರಿಗಳಿಗೆ, ವ್ಯವಸ್ಥೆಗೆ ನೀಡುವ ಎಚ್ಚರಿಕೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ದೇವಸ್ಥಾನವನ್ನು ಬಿಟ್ಟು ಮಸೀದಿ ಹಾಗೂ ಚರ್ಚ್‌ಗಳಿಗೆ ನೋಟೀಸ್‌ ನೀಡಿ ಅಕ್ರಮ ಧಾರ್ಮಿಕ ಕೇಂದ್ರವನ್ನು ಸಕ್ರಮಗೊಳಿಸುವಂತೆ ಕೇಳಿಕೊಂಡಿದೆ.

ಮೈಸೂರಿನಲ್ಲಿ ದೇವಸ್ಥಾನ ಧ್ವಂಸ ಮಾಡಿದ್ದು, ಅಕ್ಷಮ್ಯ ಅಪರಾಧ. ಆ ದೇವಸ್ಥಾನವನ್ನು 3 ತಿಂಗಳ ಒಳಗೆ ಪುನರ್‌ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು. ಹೀಮದೂ ದೇವಸ್ಥಾನ, ದೇವಾಲಯಕ್ಕೆ ಅನ್ಯಾಯವಾದಾಗ ಪ್ರತಿರೋಧ ಒಡ್ಡುತ್ತೇವೆ ಎಂದರು.

ನಮ್ಮದೇ ಸರ್ಕಾರ, ನಮ್ಮದೇ ಇಲಾಖೆ ಈ ರೀತಿ ಮಾಡಿರುವುದು ಹಿಂದೂ ಸಮಾಜಕ್ಕೆ ಬೇಸರವಾಗಿದೆ ಎಂದರು.
ಮುರಳಿ ಹಸಂತಡ್ಕ ಮಾತನಾಡಿ, ನಿಮ್ಮ ಪಟ್ಟಿಯಲ್ಲಿರುವ ಅನಧಿಕೃತ ದೇವಾಲಯಗಳನ್ನು ಸಕ್ರಮಗೊಳಿಸಿ ಎಂದರು.

ಆಗಿರುವಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಎಂದು ಆಗ್ರಹಿಸಿದರು.
ಪ್ರತಿಭಟನೆಗೂ ಮೊದಲು ಹನುಮಾನ್‌ ಚಾಲೀಸ್‌ ಪಠಣಿಸಿದರು. ಇದೇ ವೇಳೆ ಬಿಜೆಪಿ ಸರಕಾರಕ್ಕೆ ಧಿಕ್ಕಾರ ಕೂಗಿದರು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...