Connect with us

ಹಿರಿಯ ಸಾಹಿತಿ, ಪತ್ರಕರ್ತ ಶತಾಯುಷಿ ಡಾ.ಪಾಟೀಲ್ ಪುಟ್ಟಪ್ಪ ನಿಧನ

Published

on

ಹಿರಿಯ ಸಾಹಿತಿ, ಪತ್ರಕರ್ತ ಶತಾಯುಷಿ ಡಾ.ಪಾಟೀಲ್ ಪುಟ್ಟಪ್ಪ ನಿಧನ

ಬೆಂಗಳೂರು: ಹಿರಿಯ ಸಾಹಿತಿ, ಹೋರಾಟಗಾರ, ಪತ್ರಕರ್ತ ಶತಾಯುಷಿ ಡಾ.ಪಾಟೀಲ ಪುಟ್ಟಪ್ಪ ನಿನ್ನೆ (ಮಾರ್ಚ್ 16) ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಕಿಮ್ಸ್‌ಗೆ ದಾಖಲಾಗಿದ್ದ ಹಿರಿಯ ಸಾಹಿತಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಪಾಪು ಎಂದೇ ಖ್ಯಾತಿ ಗಳಿಸಿದ್ದ ಪಾಟೀಲ್ ಪುಟ್ಟಪ್ಪರಿಗೆ ಭರ್ತಿ 101 ವರ್ಷ ವಯಸ್ಸಾಗಿತ್ತು.

ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಪುಟ್ಟಪ್ಪನವರನ್ನು ಪರೀಕ್ಷಿಸಿದ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ, ಕಿಡ್ನಿ ಸೋಂಕಿಗೆ ಒಳಗಾಗಿದೆ ರಕ್ತದ ಕೊರತೆ ಇದೆ, ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದರು.

ಇದೀಗ ಅಪಾರ ಸಾಹಿತ್ಯಾಭಿಮಾನಿಗಳನ್ನು ಪುಟ್ಟಪ್ಪ ಅಗಲಿದ್ದಾರೆ.

ಇಂದು ಮಧ್ಯಾಹ್ನದವರೆಗೆ ಹುಬ್ಬಳ್ಳಿಯಲ್ಲಿರುವ ಪುಟ್ಟಪ್ಪ ಅವರ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ.

ಸಂಜೆ ಅವರ ಹುಟ್ಟೂರಾದ ಹಲಗೇರಿಯಲ್ಲಿ ಅಂತಿಮ ಸಂಸ್ಕಾರದ ವಿಧಿ-ವಿಧಾನಗಳು ಜರುಗಲಿವೆ.

ಪುಟ್ಟಪ್ಪನವರು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇತ್ತೀಚಿಗಷ್ಟೇ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.

“ಕನ್ನಡ ನಾಡಿನ ಸಾಕ್ಷಿಪ್ರಜ್ಞೆಯಾಗಿ, ಸಂಸ್ಕೃತಿ ರಕ್ಷಕರಾಗಿ, “ಪ್ರಪಂಚ” ಪತ್ರಿಕೆಯ ಸ್ಥಾಪಕ ಸಂಪಾದಕರಾದ ನಾಡೋಜ ಪಾಟೀಲ ಪುಟ್ಟಪ್ಪ 1921 ಜನವರಿ 14ರಂದು, ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ ಜನಿಸಿದರು.

ಕುರುಬಗೊಂಡ, ಬ್ಯಾಡಗಿ, ಹಾವೇರಿ, ಧಾರವಾಡದಲ್ಲಿ ಪುಟ್ಟಪ್ಪನವರು ಪ್ರಾಥಮಿಕ ಶಿಕ್ಷಣ ಪಡೆದರು.

ಕರ್ನಾಟಕ ಕಾಲೇಜಿನಲ್ಲಿ ಪದವಿ ಹಾಗೂ ಬೆಳಗಾವಿಯಲ್ಲಿ ಕಾನೂನು ಅಧ್ಯಯನ ಮಾಡಿ ಮುಂಬಯಿ ಮತ್ತು ಹುಬ್ಬಳ್ಳಿಯಲ್ಲಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ನಿರ್ವಹಿಸಿದ್ದರು.

1945ರಲ್ಲಿ ವಕೀಲಿ ವೃತ್ತಿಗಾಗಿ ಮುಂಬಯಿಗೆ ತೆರಳಿದ್ದ ಪುಟ್ಟಪ್ಪನವರು, 1949ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಅಮೆರಿಕದಿಂದ ಮರಳಿದ ನಂತರ ನವಯುಗ ಮಾಸಪತ್ರಿಕೆಯ ಸಂಪಾದಕರಾಗಿ, 1954ರಲ್ಲಿ ಪ್ರಪಂಚ ಪತ್ರಿಕೆಯನ್ನು ಆರಂಭಿಸಿದ್ದರು.

1962ರಿಂದ 1974ರ ವರೆಗೆ ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದ ಇವರು, 1942ರ ಆಗಸ್ಟ್ 9ರಂದು ಕಾಲೇಜಿನ ಬ್ರಿಟಿಷ್ ಅಧ್ಯಾಪಕರಿಗೆ ಬಲವಂತವಾಗಿ ಗಾಂಧಿ ಟೋಪಿ ಹಾಕಿ ಸುದ್ದಿಯಾಗಿದ್ದರು.

ಡಾ. ಪಾಟೀಲ ಪುಟ್ಟಪ್ಪನವರು ಅಪ್ರತಿಮ ಹೋರಾಟಗಾರರು, ನಿರ್ಭೀತ ಪತ್ರಕರ್ತರು ಹಾಗೂ ಸೃಜನಶೀಲ ಸಾಹಿತಿಯಾಗಿದ್ದರು.

ನಮ್ಮ ದೇಶ ನಮ್ಮ ಜನ, ನನ್ನದು ಈ ಕನ್ನಡ ನಾಡು, ಕರ್ನಾಟಕದ ಕಥೆ, ಪಾಪು ಪ್ರಪಂಚ, ಶಿಲಾಬಾಲಿಕೆ ನುಡಿದಳು, ಗವಾಕ್ಷ ತೆರೆಯಿತು, ಸಾವಿನ ಮೇಜವಾನಿಗಳಂತಹ ಅಪೂರ್ವ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದರು.

ಪ್ರಪಂಚದಷ್ಟೆ ಓದುಗರ ಜ್ಞಾನವೂ ವಿಸ್ತಾರವಾಗಬೇಕೆಂಬ ಹಂಬಲದಿಂದ ತಮ್ಮ ಸಂಪಾದಕತ್ವದಲ್ಲಿ ಪ್ರಪಂಚ ವಾರಪತ್ರಿಕೆಯನ್ನು ನಡೆಸಿದವರು.

ಕರ್ನಾಟಕ ಏಕೀಕರಣಕ್ಕಾಗಿ ಅವರು ನಡೆಸಿದ ಹೋರಾಟ ಅನನ್ಯವಾದುದು.

ವರ್ತಮಾನದ ಎಲ್ಲ ವಿಚಾರಗಳ ಬಗ್ಗೆ ನಾಡಿನ ವಿವಿಧ ಪತ್ರಿಕೆಗಳಲ್ಲಿನ ಅವರ ಅಂಕಣ ಬರಹಗಳು ಓದುಗರಿಗೆ ಮನ ಗೆದ್ದಿದ್ದವು.

ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಪುಟ್ಟಪ್ಪನವರು ನಾಡಿನಾದ್ಯಂತ ಕೈಗೊಂಡ ಕನ್ನಡ ಭಾಷಾ ಜಾಗೃತಿ ಅಭಿಯಾನ ಹಾಗೂ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸದೃಢವಾಗಿ ಬೆಳೆಸುವಲ್ಲಿ ಪುಟ್ಟಪ್ಪನವರ ಪಾತ್ರ ಶ್ಲಾಘನೀಯವಾಗಿದೆ.

ಇಂತಹ ಮಹಾನ್ ಮೇಧಾವಿ ಬೆಳಗಾವಿಯಲ್ಲಿ 2003ರಲ್ಲಿ ಜರುಗಿದ 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಸಾಹಿತ್ಯ ಹಾಗೂ ಮಾದ್ಯಮ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗೆ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ಟಿಎಸ್‌ಆರ್ ಪತ್ರಿಕಾ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿಲಿಟ್ ಪದವಿ.

ಹಂಪಿ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಸಾಹಿತ್ಯ ಹೀಗೆ ಹತ್ತು ಹಲವು ಪ್ರಶಸ್ತಿಗಳು ಮುಡಿಗೇರಿವೆ.

Click to comment

Leave a Reply

Your email address will not be published. Required fields are marked *

FILM

ಹಿರಿಯ ನಟ ನಿರ್ಮಾಪಕ…ಕಳ್ಳ ‘ಕುಳ್ಳ’ ಖ್ಯಾತಿಯ ದ್ವಾರಕೀಶ್ ಇನ್ನಿಲ್ಲ

Published

on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮೇರು ನಟನಾಗಿ ಗುರುತಿಸಿಕೊಂಡಿದ್ದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್(81 ವ) ರವರು ಎ.16ರಂದು ಹೃದಯಾಘಾತದಿಂದ ನಿಧನಹೊಂದಿದ್ದಾರೆ. ಕನ್ನಡದಲ್ಲಿ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಅವರು ಇನ್ನಿಲ್ಲ ಎಂಬ ಸುದ್ದಿ ಸಾಕಷ್ಟು ನೋವುಂಟು ಮಾಡಿದೆ. ಹಲವು ದಿಗ್ಗಜರ ಜೊತೆ ಅವರು ನಟಿಸಿದ್ದ ಇವರು ವಿಷ್ಣುವರ್ದನ್ ಹಾಗೂ ಇವರು ನಟಿಸಿದ್ದ ಕಳ್ಳ-ಕುಳ್ಳ ಸಿನೆಮಾದಲ್ಲಿ ಇವರಿಬ್ಬರ ಜೋಡಿ ಬಹಳಷ್ಟು ಸದ್ದು ಮಾಡಿತ್ತು.

ರಾತ್ರಿ ಭೇದಿ ಆರಂಭ ಆಗಿದ್ದರಿಂದ ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ಮಲಗಿದ್ದವರು ಮತ್ತೆ ಏಳಲೇ ಇಲ್ಲ.  ಅವರಿಗೆ ಹೃದಯಾಘಾತ ಆಗಿದೆ ಎಂದು ದ್ವಾರಕೀಶ್ ಪುತ್ರ ಯೋಗಿ ಅವರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ದ್ವಾರಕೀಶ್ ಸಾವಿನ ಸುಳ್ಳು ಸುದ್ದಿ ಹರಡಿತ್ತು…!
ದ್ವಾರಕೀಶ್ ಅವರ ನಿಧನವಾರ್ತೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫ್ಯಾನ್ಸ್ ಸಂತಾಪ ಸೂಚಿಸುತ್ತಿದ್ದಾರೆ. ಈ ಹಿಂದೆ ದ್ವಾರಕೀಶ್ ಮರಣ ಫೇಕ್ ಸುದ್ದಿ ಹರಿದಾಡಿತ್ತು. ಇದೇ ರೀತಿ ಈ ಬಾರಿಯೂ ಆಗಿರಬಹುದು ಎಂದು ಹಲವರು ಭಾವಿಸಿದ್ದರು. ಇದೀಗ ದ್ವಾರಕೀಶ್ ರವರ ಕುಟುಂಬದವರು ಅವರ ನಿಧನ ಸುದ್ದಿಯನ್ನು ಖಚಿತಪಡಿಸಿದ್ದಾರೆ.

READ MORE..; ಅರ್ಚಕರಿಂದಲೇ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ..!! ವಿಡಿಯೋ ವೈರಲ್

ರಾಜ್‌ಕುಮಾರ್, ವಿಷ್ಣವರ್ಧನ್, ಶ್ರೀನಾಥ್ ಸೇರಿದಂತೆ ಹಲವು ದಿಗ್ಗಜರೊಂದಿಗೆ ಸ್ಕ್ರೀನ್ ಹಂಚಿಕೊಂಡಿದ್ದರು. ಇವರ ಮಂಕು ತಿಮ್ಮ ಸಿನೆಮಾ ಸುಪರ್ ಹಿಟ್ ಆಗಿತ್ತು. ನಟಿ ಮಂಜುಳಾ ಜೊತೆ ಹಲವು ಸಿನೆಮಾದಲ್ಲಿ ನಟಿಸಿದ್ದರು. ನಟನಾಗಿ ನಿರ್ದೇಶನಕ್ಕೂ ಇಳಿದಿದ್ದ ಇವರು ಹಲವು ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಮಮತೆಯ ಬಂಧನ ಇವರ ಮೊದಲ ನಿರ್ಮಾಣದ ಚಿತ್ರವಾಗಿದ್ದು, ‘ವೀರ ಸಂಕಲ್ಪ’ ಅವರು ನಟಿಸಿರುವ ಕೊನೆಯ ಚಿತ್ರವಾಗಿದೆ.

 

Continue Reading

DAKSHINA KANNADA

ಒಂದು ತಿಂಗಳಿನಿಂದ ಮೊಬೈಲ್‌ ಫೋನ್‌ ಸಂಪರ್ಕವಿಲ್ಲದೆ ಪರದಾಡುತ್ತಿದ್ದಾರೆ ಈ ಜನರು..!!

Published

on

ಉಡುಪಿ: ಜಿಲ್ಲೆಯ ಕಟಪಾಡಿ ಪೇಟೆ ಸುತ್ತಮುತ್ತಲಿನ ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಕಳೆದ ಒಂದು  ತಿಂಗಳಿನಿಂದ ಮೊಬೈಲ್ ನೆಟ್ವರ್ಕ್ ಸಂಪೂರ್ಣ ಸ್ಥಗಿತವಾಗಿದ್ದು, ಖಾಸಗಿ ಕಂಪೆನಿಗಳ ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್ ಬಳಕೆದಾರರು ತೀವ್ರ ಅಡಚಣೆ ಅನುಭವಿಸುತ್ತಿದ್ದಾರೆ.

katapadi

ಮೊಬೈಲ್ ಕಂಪೆನಿ ಹಾಗೂ ಟವರ್ ಅಳವಡಿಸಲಾಗಿರುವ ಜಾಗದ ಮಾಲೀಕರ ನಡುವಿನ ಒಪ್ಪಂದ ಮುಗಿದ ಹಿನ್ನೆಲೆಯಲ್ಲಿ ಏರ್‌ಟೆಲ್, ವಿಐ ಮತ್ತು ಜಿಯೋ ಬಳಕೆದಾರರಿಗೆ ನೆಟ್ ವರ್ಕ್ ಸಿಗದಂತಾಗಿದೆ. ಫೋನ್ ಕರೆ ಮಾಡಲು, ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ, ಆನ್‌ಲೈನ್ ಹಣಕಾಸಿನ ವ್ಯವಹಾರ, ವರ್ಕ್ ಫ್ರಮ್ ಹೋಮ್, ಕಚೇರಿಯ ದೈನಂದಿನ ಕೆಲಸ ನಿರ್ವಹಿಸಲು ಕಷ್ಟಪಡುತ್ತಿದ್ದು, ಜನರ ಗೋಳು ಕೇಳುವವರೇ ಇಲ್ಲವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಮೊಬೈಲ್ ಸೇವೆ ಒದಗಿಸುವ ಕಂಪೆನಿಗಳು ಟವರ್ ಲಭ್ಯವಿಲ್ಲದೆ ನಾವೇನೂ ಮಾಡಲಾಗುತ್ತಿಲ್ಲ. ಸಮೀಪದಲ್ಲಿ ಪರ್ಯಾಯ ಜಾಗವೂ ಸಿಗುತ್ತಿಲ್ಲ ಎಂದು ಹೇಳುತ್ತಿವೆ. ಏರ್‌ಟೆಲ್ ಸಂಸ್ಥೆಯ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ‘ಪರ್ಯಾಯ ಟವರ್‌ಗೆ ವ್ಯವಸ್ಥೆಯಾಗದೆ ಏನೂ ಮಾಡುವಂತಿಲ್ಲ, ಪರ್ಯಾಯ ಜಾಗದ ವ್ಯವಸ್ಥೆ ಆದಲ್ಲಿ ಟವರ್ ನಿರ್ಮಾಣ ಮಾಡುತ್ತೇವೆ’ ಎಂದು ಹೇಳುತ್ತಿದ್ದಾರೆ.

READ MORE..; ಅರ್ಚಕರಿಂದಲೇ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ..!! ವಿಡಿಯೋ ವೈರಲ್

ನೆಟ್ ವರ್ಕ್ ಸಿಗದೆ ಹೈರಾಣಾಗಿರುವ ಸ್ಥಳೀಯರು ಮೊಬೈಲ್ ಸೇವೆ ಕಲ್ಪಿಸುವ ಸಂಸ್ಥೆಗಳ ವಿರುದ್ಧ – ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಜನರಲ್ಲಿ ಕಂಪೆನಿ ವಿರುದ್ದ ಆಕ್ರೋಶ ಹೆಚ್ಚುತ್ತಿದೆ. ಜಾಗದ ಮಾಲೀಕರು ಮತ್ತು ನೆಟ್ವರ್ಕ್ ಸಂಸ್ಥೆಗಳು ಪರಸ್ಪರ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳ ಬೇಕು ಎಂದು ಒತ್ತಾಯಿಸು ತ್ತಿರುವ ಸ್ಥಳೀಯರು ಸಂಘಟಿತ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

 

 

Continue Reading

DAKSHINA KANNADA

ಪ್ರತಿಭಾವಂತೆ ವಿದ್ಯಾರ್ಥಿನಿಯನ್ನು ಬಲಿ ಪಡೆದ ಮೆದುಳು ಜ್ವರ

Published

on

ಮೂಡಬಿದಿರೆ: ಮೆದುಳು ಜ್ವರಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಮೂಡಬಿದರೆಯಲ್ಲಿ ನಡೆದಿದೆ. ಶಿರ್ತಾಡಿ ಮೌಂಟ್ ಕಾರ್ಮೆಲ್ ಹೈಸ್ಕೂಲ್‌ನ 10ನೇ ತರಗತಿಯ ಸ್ವಸ್ತಿ ಶೆಟ್ಟಿ (15) ಮೃತ ವಿದ್ಯಾರ್ಥಿನಿ. ಸ್ವಸ್ತಿ ಶೆಟ್ಟಿ ಮೆದುಳು ಜ್ವರ ಉಲ್ಬಣಗೊಂಡ ಪರಿಣಾಮ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

Swasthi

ಉತ್ತಮ ತ್ರೋಬಾಲ್ ಆಟಗಾರ್ತಿಯಾಗಿದ್ದ ಈಕೆ ಉತ್ತಮ ನೃತ್ಯಪಟುವೂ ಆಗಿದ್ದಳು.ತಂದೆ ಸತೀಶ್‌ ಶೆಟ್ಟಿ ಗೋವಾದಲ್ಲಿ ಉದ್ಯೋಗದಲ್ಲಿದ್ದು ತಾಯಿ ಸರಿತಾ ಶೆಟ್ಟಿ ಶಿರ್ತಾಡಿ ನವಮೈತ್ರಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಉದ್ಯೋಗಿ. ಮೂಲತಃ ವಾಲ್ಪಾಡಿಯವರಾದ ಇವರು ಪ್ರಸ್ತುತ ಮೂಡಬಿದಿರೆಯಲ್ಲಿ ನೆಲೆಸಿದ್ದಾರೆ.

READ MORE..; ಪ್ರಚಾರದ ಭರದಲ್ಲಿ ತೇಜಸ್ವಿ ಸೂರ್ಯ ಕಿರಿಕ್‌..! ಸಂಸದರಿಗೆ ಡೌನ್ ಡೌನ್ ಎಂದ ಸಭಿಕರು

Continue Reading

LATEST NEWS

Trending