ತೆಲುಗು ಹಿರಿಯ ನಟ ಚಲಪತಿ ರಾವ್ (Chalapathi Rao) ಭಾನುವಾರ ಬೆಳಗ್ಗೆ ಡಿಸೆಂಬರ್ 25ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹೈದ್ರಾಬಾದ್ : ತೆಲುಗು ಹಿರಿಯ ನಟ ಚಲಪತಿ ರಾವ್ (Chalapathi Rao) ಭಾನುವಾರ ಬೆಳಗ್ಗೆ ಡಿಸೆಂಬರ್ 25ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 78 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.
1966ರಲ್ಲಿ ʻಗುಡಾಚಾರಿʼ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದರು.
600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಇವರು ಪೋಷಕನಟ ಹಾಗು ಖಳನಟನಾಗಿ ಗುರುತಿಸಿಕೊಂಡಿದ್ದರು.ಎನ್‌ಟಿಆರ್, ಚಿರಂಜೀವಿ, ನಾಗಾರ್ಜುನ, ವೆಂಕಟೇಶ್ ಸೇರಿದಂತೆ ಹಲವು ಸ್ಟಾರ್‌ಗಳ ಜತೆ ಸ್ಕ್ರೀನ್ ಶೇರ್ ಮಾಡಿದ್ದರು.
ಬುಧವಾರ ಡಿಸೆಂಬರ್ 28 ಮಧ್ಯಾಹ್ನ 3 ಘಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಬಂಜಾರಾ ಹಿಲ್ಸ್ ರವಿಬಾಬು ಮನೆಯಲ್ಲಿ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಚಲಪತಿ ರಾವ್ ಅವರು ʻಸಾಕ್ಷಿʼ (1966), ʻಡ್ರೈವರ್ ರಾಮುಡುʼ (1979), ʻವಜ್ರಂʼ (1995), ಮತ್ತು ಬಾಲಿವುಡ್ ಸಿನಿಮಾ ʻಕಿಕ್ʼ (2009) ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಸ್ಟಾರ್ ನಟರಿಂದ ತೊಡಗಿ ಅಭಿಮಾನಿಗಳ ತನಕ ಬಹಳಷ್ಟು ಜನರು ಸಂತಾತ ಸೂಚಿಸಿದ್ದಾರೆ. ನಟ ಪತ್ನಿ ಇಂದುಮತಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.