Wednesday, September 30, 2020

ಗ್ರಹ ಮಂಡಲದಲ್ಲಿ ಅಪರೂಪದಲ್ಲೇ ಅಪರೂಪದ ವಿದ್ಯಮಾನ : ಲೋಕ ಕಲ್ಯಾಣಕ್ಕೆ ವಿಶೇಷ ಪ್ರಾರ್ಥನೆ..!

ಕೇಂದ್ರ ಸರಕಾರದಿಂದ ಅನ್ಲಾಕ್ 5.0 ಮಾರ್ಗಸೂಚಿ ಬಿಡುಗಡೆ…!!

ಹೊಸದಿಲ್ಲಿ: ಕೊರೊನಾ ಸೊಂಕು ಏರಿಕೆಯಲ್ಲಿರುವಂತೆಯೇ ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಅನ್‌ಲಾಕ್ 5.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಸಿನಿಮಾ ಹಾಲ್, ಕ್ರೀಡಾಪಟುಗಳಿಗಾಗಿ ಈಜುಕೊಳ, ಕ್ರೀಡಾ ತರಬೇತಿ ಹಾಗೂ ಮನೋರಂಜನಾ ಪಾರ್ಕ್‌ಗಳನ್ನು ತೆರೆಯಲು ಅನುಮತಿ...

ಮುಡಿಪು ಅಕ್ರಮ ಮಣ್ಣು ಗಣಿಗಾರಿಕೆ ಪ್ರದೇಶಕ್ಕೆ ಸಹಾಯಕ ಆಯುಕ್ತರ ನೇತೃತ್ವದ ತಂಡ ದಾಳಿ

ಮಂಗಳೂರು : ಅಕ್ರಮ ಮಣ್ಣು ಗಣಿಗಾರಿಕೆ ಪ್ರದೇಶಕ್ಕೆ ಸಹಾಯಕ ಆಯುಕ್ತರ ನೇತೃತ್ವದ ತಂಡ ದಾಳಿ ನಡೆಸಿ 28 ಲಾರಿ , 6 ಜೆಸಿಬಿ ಹಾಗೂ ಮೂರು ಹಿಟಾಚಿಯನ್ನು ವಶಕ್ಕೆ ತೆಗೆದುಕೊಂಡಿದೆ. ಸಹಾಯಕ ಆಯುಕ್ತ ಮದನ್...

ಕೌಡೂರಿನಲ್ಲಿ ನಾಗರಿಕರೊಂದಿಗೆ ಶಾಸಕ ಡಾ.ಭರತ್ ಶೆಟ್ಟಿ ಸಮಾಲೋಚನೆ, ಮೂಲಹಕ್ಕುಪತ್ರ ನೀಡಲು ಶೀಘ್ರ ಕ್ರಮ

ಮಂಗಳೂರು: ಹಕ್ಕುಪತ್ರ ಸಿಗದೆ ಭಾರಿ ಸಮಸ್ಯೆಯ ಉಂಟಾಗಿರುವ ಕಂದಾವರ ಗ್ರಾಮ ಪಂಚಾಯತ್ ಕೌಡೂರು ಪ್ರದೇಶಕ್ಕೆ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಭೇಟಿ ನೀಡಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಸ್ಥಳೀಯ...

ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ವಿರೋಧಿಸಿ ಎಸ್ ಡಿಪಿಐ ಪ್ರತಿಭಟನೆ

ಮಂಗಳೂರು : ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ 32 ಆರೋಪಿಗಳಿಗೆ ಖುಲಾಸೆಗೊಳಿಸಿ ಕ್ಲೀನ್ ಚಿಟ್ ನೀಡಿರುವ ಲಕ್ನೋ ಸಿಬಿಐ ಕೋರ್ಟಿನ ತೀರ್ಪನ್ನು ಖಂಡಿಸಿ ಎಸ್ ಡಿಪಿಐ ದಕ್ಷಿಣಕನ್ನಡ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಾಬರಿ...

ಸತ್ಯಮೇವ ಜಯತೆ ಎಂಬ ಮಾತು ನಿಜವಾಗಿದೆ – ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಉಡುಪಿ : ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಸೇರಿದಂತೆ ಎಲ್ಲಾ ನಾಯಕರುಗಳನ್ನು ದೋಷಮುಕ್ತ ಗೊಳಿಸಿದ ತೀರ್ಪನ್ನು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ವಾಗತಿಸಿದ್ದಾರೆ. ಸಿಪಿಐ...

ಗ್ರಹ ಮಂಡಲದಲ್ಲಿ ಅಪರೂಪದಲ್ಲೇ ಅಪರೂಪದ ವಿದ್ಯಮಾನ : ಲೋಕ ಕಲ್ಯಾಣಕ್ಕೆ ವಿಶೇಷ ಪ್ರಾರ್ಥನೆ..!

ಚಿತ್ರ : ಮಂಜು ನೀರೇಶ್ವಾಲ್ಯ

ಮಂಗಳೂರು : ಇಂದು  ಭಾನುವಾರದ ವಿಶೇಷ ದಿನ. ಈ ದಿನ ಗ್ರಹ ಮಂಡಲದಲ್ಲಿ ಅಪರೂಪದಲ್ಲೇ ಅಪರೂಪದ ವಿದ್ಯಮಾನ ನಡೆದಿದೆ.  ಛಾಯಾಗ್ರಹಗಳಾದ ರಾಹು-ಕೇತುಗಳನ್ನು ಹೊರತುಪಡಿಸಿ, ಮಿಕ್ಕ ಏಳು ಗ್ರಹಗಳಲ್ಲಿ ಆರು ಗ್ರಹಗಳು ತಮ್ಮ ತಮ್ಮ ಸ್ವಕ್ಷೇತ್ರಗಳಲ್ಲಿ ನಿಂತಿರುವುದು ಇಂದಿನ ವಿಶೇಷವಾಗಿದೆ.

250 ವರ್ಷಗಳಿಗೊಮ್ಮೆ ಈ ಕೌತುಕ ನಡೆಯುತ್ತಿದೆ.  ಗುರುವು  ಧನಸ್ಸು ರಾಶಿಯಲ್ಲಿ, ಶನಿಯು ಮಕರದಲ್ಲಿ, ಕುಜನು ಮೇಷದಲ್ಲಿ, ಚಂದ್ರನು ಕಟಕದಲ್ಲಿ ಶುಕ್ರನೊಂದಿಗೆ, ರವಿಯು ಸಿಂಹದಲ್ಲಿ, ಬುಧನು ಉಚ್ಛ ಕ್ಷೇತ್ರವು, ಸ್ವಕ್ಷೇತ್ರವೂ ಆದ ಕನ್ಯಾರಾಶಿಯಲ್ಲಿರುತ್ತಾನೆ, ಇಂದು ಬೆಳಿಗ್ಗೆ 11-45 ರಿಂದ 12.45ರ ವರೆಗೆ ಈ ವಿದ್ಯಮಾನ ನಡೆಯಿತು.

ಇಂದು ದಿನಾಂಕ 13-09-2020 ರ ಬೆಳಿಗ್ಗೆ 6 ಗ್ರಹಗಳು ಅವರವರ ಸ್ವಕ್ಷೇತ್ರ ದಲ್ಲಿ ಇರುತ್ತಾರೆ.

ಇದೊಂದು ಒಳ್ಳೆಯ ಮುಹೂರ್ತ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ, (ಇಂದು) ಭಾನುವಾರದ ದಿನ ಗ್ರಹ ಮಂಡಲದಲ್ಲಿ ಅಪರೂಪದಲ್ಲೇ ಅಪರೂಪದ ವಿದ್ಯಮಾನವನ್ನು ನಾವೆಲ್ಲರೂ ಕಾಣಬಹುದಾಗಿದೆ.

ಛಾಯಾಗ್ರಹಗಳಾದ ರಾಹು-ಕೇತುಗಳನ್ನು ಹೊರತುಪಡಿಸಿ, ಮಿಕ್ಕ ಏಳು ಗ್ರಹಗಳಲ್ಲಿ ಆರು ಗ್ರಹಗಳು ತಮ್ಮ ತಮ್ಮ ಸ್ವಕ್ಷೇತ್ರಗಳಲ್ಲಿ ಇರುವುದು ಅತ್ಯಂತ ವಿಶೇಷವು. ಗುರುವು (ಪೂರ್ವಾಷಾಢ) ಧನಸ್ಸು ರಾಶಿಯಲ್ಲಿ, ಶನಿಯು(ಉತ್ತರಾಷಾಢ) ಮಕರದಲ್ಲಿ, ಕುಜನು(ಅಶ್ವಿನಿ) ಮೇಷದಲ್ಲಿ, ಚಂದ್ರನು ಕಟಕದಲ್ಲಿ ಶುಕ್ರನೊಂದಿಗೆ(ಪುನರ್ವಸು ನಕ್ಷತ್ರದಲ್ಲಿ), ರವಿಯು ಸಿಂಹದಲ್ಲಿ(ಉತ್ತರಾ ನಕ್ಷತ್ರ), ಬುಧನು ಉಚ್ಛ ಕ್ಷೇತ್ರವು, ಸ್ವಕ್ಷೇತ್ರವೂ ಆದ ಕನ್ಯಾರಾಶಿಯಲ್ಲಿ(ಹಸ್ತಾ ನಕ್ಷತ್ರ) ಇರುವುದು ವಿಶೇಷವೂ, ಅಪರೂಪವೂ ಆಗಿದೆ.

ವಾರ ಗ್ರಹರಾಜನಾದ ರವಿಯು ವಾರ. ಈ ಸಂದರ್ಭದಲ್ಲಿ ಬೆಳಿಗ್ಗೆ 11ರ ಸಮಯಕ್ಕೆ ವೃಶ್ಚಿಕ ಲಗ್ನ(10-45ರಿಂದ12-45ರ ವರೆಗೆ) ಇರುವುದು. ಆ ಲಗ್ನಕ್ಕೆ ಹೊಂದಿಕೊಂಡಂತೆ, ಗುರುವು ಧನಸ್ಥಾನವಾದ 2ನೇ ಮನೆಯಲ್ಲಿ, ಶನಿಯು 3ರಲ್ಲಿ, ಕುಜನು 6ರಲ್ಲಿ, ಚಂದ್ರನು (ಶುಕ್ರನೊಂದಿಗೆ)9ರಲ್ಲಿ, ರವಿಯು 10ರಲ್ಲಿ, ಬುಧನು 11ರಲ್ಲಿ ಇರುತ್ತಾರೆ.

ಇದು ಅತ್ಯಂತ ಸುಸಮಯ. ಅಂದು ಸುಮಾರು ಬೆಳಿಗ್ಗೆ 10-45ರಿಂದ 12-45ರ ವರೆಗೂ ವೃಶ್ಚಿಕ ಲಗ್ನ ಇರುವುದು ಈ ಹಿನ್ನೆಲೆಯಲ್ಲಿ ಮಂಗಳೂರಿನ  ಶ್ರೀ ವೆಂಕಟರಮಣ ದೇವಸ್ಥಾನ ದಲ್ಲಿ ಲೋಕ ಕಲ್ಯಾಣಾರ್ಥ ವಿಶೇಷ ಪ್ರಾರ್ಥನೆ ಆಯೋಜನೆ ಮಾಡಲಾಗಿತ್ತು.

ಈ ಸಮಯದಲ್ಲಿ ಯಾರು ಯಾವುದೇ ಸತ್ಕಾರ್ಯ, ಜಪ,ಹೋಮ,ತಪ, ದಾನ, ಗೋ ಸೇವೆ, ದೀನ ಜನೋಪಚಾರ, ಮಂತ್ರ ಪಾರಾಯಣ, ಸಹಸ್ರನಾಮದಿ ಪಾರಾಯಣಗಳು, ಪ್ರಾಣಿ-ಪಕ್ಷಿಗಳಿಗೆ ಆಹಾರ ಕೊಡವುದು, ಸತ್ಪಾತ್ರರಿಗೆ ದಾನ, ಮಹಾಲಯ ಪಕ್ಷದ ತನ್ನಿಮಿತ್ತ ಕಾರ್ಯ ಇತ್ಯಾದಿ ಸತ್ಕಾರ್ಯ ಮಾಡುವುದು ಶ್ರೇಯಸ್ಕರ. ಆದುದರಿಂದ ಲೋಕ ಕಲ್ಯಾಣಾರ್ಥವಾಗಿ ಇಡೀ ಪ್ರಪಂಚಕ್ಕೆ ತಗಲಿದ ಈ ಮಹಾಮಾರಿಯು ಶೀಘ್ರವಾಗಿ ತೊಲಗಲಿ , ಶ್ರೀ ದೇವಳಗಳಲ್ಲಿ ನಡೆಯುವ ಎಲ್ಲಾ ಪೂಜಾ ಕೈ೦ಕರ್ಯಗಳು ಹಿಂದಿನಂತೆ ಸುಸೂತ್ರವಾಗಿ ನಡೆಯಲಿ , ಜನರ ಕಷ್ಟಗಳು ಬೇಗನೆ ನಿವಾರಣೆ ಯಾಗಲಿ ಎಂಬ ಹಿತ ದ್ರಷ್ಟಿಯಿಂದ ಶ್ರೀ ದೇವಳದಲ್ಲಿ 11:30 ಕ್ಕೆ ಸರಿಯಾಗಿ ದೇವಳದ ಆಡಳಿತ ಮಂಡಳಿ , ವೈದಿಕ ರು ಹಾಗೂ ಸಮಾಜ ಬಾಂಧವರು ಎಲ್ಲರೊಡಗೂಡಿ ಶ್ರೀ ವೀರ ವೆಂಕಟೇಶ್ ದೇವರ ಸನ್ನಿಧಾನದಲ್ಲಿ ಮಹಾ ಪ್ರಾರ್ಥನೆ ಸಲ್ಲಿಸಲಾಯಿತು .

ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಕೆ . ಪಿ . ಪ್ರಶಾಂತ್ ರಾವ್ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು .

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.