ಮಂಗಳೂರು: ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ರಸ್ತೆ ದುರವಸ್ಥೆ ಬಗ್ಗೆ ಇಂದು ವರ್ಚುವಲ್ ಸಭೆ ನಡೆಯಲಿದೆ.
ವೀಡಿಯೋ ಕಾನ್ಫೆರೆನ್ಸ್ ಮೂಲಕ ಈ ಸಭೆ ನಡೆಯಲಿದ್ದು, ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಹಾಸನ ಜಿಲ್ಲಾಧಿಕಾರಿ ಆರ್ ಗಿರೀಶ್, ರಾಷ್ಟ್ರೀಯ ಹೆದ್ದಾರಿ ಇಲಾಖೆ ವಲಯ ಅಧಿಕಾರಿಗಳು, ಹಾಸನ ಮತ್ತು ದ.ಕ. ಹೆದ್ದಾರಿ ಯೋಜನಾ ಅಧಿಕಾರಿಗಳು, ರಸ್ತೆ ಗುತ್ತಿಗೆ ವಹಿಸಿಕೊಂಡ ಕಂಟ್ರಾಕ್ಟುದಾರರು ಸಭೆಯಲ್ಲಿ ಉಪಸ್ಥಿತರಿರುವರು.
ಶಿರಾಡಿ ಬಳಿಕದ ಮಾರನಹಳ್ಳಿ-ದೋಣಿಗಲ್ -ಸಕಲೇಶಪುರ ರಸ್ತೆ ಸಂಪೂರ್ಣ ರಾಡಿ ಎದ್ದು ಹೋಗಿದ್ದು ವಾಹನ ಸಂಚಾರಕ್ಕೆ ದುಸ್ತರವಾಗಿದೆ.
ಇದರಿಂದ ಬೆಂಗಳೂರು-ಹಾಸನ-ಮಂಗಳೂರಿನ ಮಧ್ಯೆ ಸಾಗುವ ವಾಹನಗಳಿಗೆ ಹೊಡೆತ ಬಿದ್ದಿದ್ದು, ಉದ್ಯಮಕ್ಕೆ ಬರೆ ಎಳೆದಂತಾಗಿದೆ.
ಈ ಕಾರಣದಿಂದ ರಸ್ತೆಯನ್ನು ತಾತ್ಕಾಲಿಕ ದುರಸ್ತಿ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.