Thursday, March 23, 2023

ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಬೆಳ್ಳಿಪ್ಪಾಡಿ ಮನೆತನದ ಕುಡಿ ವೆನ್ಯ ರೈ

ಪುತ್ತೂರು: ಕಿರುತೆರೆಯ ಸ್ಟಾರ್ ನಿರ್ದೇಶಕ ಹಯವದನ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ದೊಡ್ಡ ಪರದೆಯ “ಎಲ್ಲೋ ಜೋಗಪ್ಪ ನಿನ್ನರಮನೆ” ಚಲನಚಿತ್ರಕ್ಕೆ ನಾಯಕಿಯಾಗಿ ಪುತ್ತೂರಿನ ಪ್ರತಿಷ್ಠಿತ ಬೆಳ್ಳಿಪ್ಪಾಡಿ ತರವಾಡಿನ ಕಲಾವಿದರ ಕುಟುಂಬದ ಕುಡಿ ವೆನ್ಯ ರೈ ಆಯ್ಕೆಯಾಗಿದ್ದಾರೆ.


ಯಕ್ಷಗಾನ, ನಾಟಕ, ಧಾರವಾಹಿ ಮತ್ತು ತುಳು, ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಚೇತನ್ ರೈ ಮಾಣಿ ಅವರ ಪುತ್ರಿಯಾಗಿರುವ ವೆನ್ಯ ರೈ ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್ ಮುಂಡಾಡಿ ನಿರ್ದೇಶನದ “ಭಾವಪೂರ್ಣ” ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.

ಇದೇ ಮೊದಲ ಬಾರಿಗೆ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಪುತ್ತೂರಿನ ಈ ಚಂದುಳ್ಳಿ ಚೆಲುವೆ ನಟಿಸಲಿದ್ದಾರೆ. ನಿಜ ಜೀವನದಲ್ಲೂ ತನ್ನ ಮಾತಿನ ಮೂಲಕ ಎಲ್ಲರನ್ನೂ ಆಕರ್ಷಿಸುವ ವೆನ್ಯ ರೈ ಈ ಪಾತ್ರಕ್ಕೆ ಸೂಕ್ತವಾಗಿ ಹೊಂದುತ್ತಾರೆ ಎನ್ನುವ ನಿರ್ದೇಶಕ ಹಯವದನ, ಚಿತ್ರದಲ್ಲಿ ವೆನ್ಯ ರೈ ಉತ್ತರ ಭಾರತದ ಕಾಲೇಜು ವಿದ್ಯಾರ್ಥಿನಿಯ ಪಾತ್ರದಲ್ಲಿ ನಟಿಸಲಿದ್ದು, ಇದೊಂದು ಪ್ರವಾಸ ಕಥನದ ಸಿನೆಮಾವಾಗಿದೆ ಪಾತ್ರಗಳು ಕಲಾವಿದರಿಗೆ ಚಾಲೆಂಜಿಂಗ್ ಆಗಿದೆ ಎಂದು ಹೇಳಿದ್ದಾರೆ.
ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿರುವ ವೆನ್ಯ ರೈ ಗೆ ತಂದೆ ಚೇತನ್ ರೈ ಅಭಿನಯದಲ್ಲಿ ಮೊದಲ ಗುರು. ಈ ನಡುವೆ ಮಲಾರ್ ಬೀಡು ಪುಷ್ಪರಾಜ್ ಶೆಟ್ಟಿ ಅವರ “ಆರಾಟ” ಚಿತ್ರದಲ್ಲೂ ವೆನ್ಯ ರೈ ನಾಯಕಿಯಾಗಿ ನಟಿಸಲಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಓಮನ್‌ನಲ್ಲಿ ಹೃದಯಾಘಾತದಿಂದ ಅನಿವಾಸಿ ಭಾರತೀಯ ಮಹಿಳೆ ಮೃತ್ಯು..!

ಓಮನ್‌ ನಲ್ಲಿ ಭಾರತೀಯ ಮೂಲದ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕೇರಳ ಕೊಟ್ಟಾಯಂನ ಮಹಿಳೆ ಸೈಮಾ ಬಾಲಕೃಷ್ಣ ಮೃತ ಮಹಿಳೆಯಾಗಿದ್ದಾಳೆ.ಓಮನ್ : ಓಮನ್‌ ನಲ್ಲಿ ಭಾರತೀಯ ಮೂಲದ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕೇರಳ ಕೊಟ್ಟಾಯಂನ...

ಉಡುಪಿ : ಕಳವಾದ 74 ಲಕ್ಷ ರೂಪಾಯಿ ಸೊತ್ತುಗಳು ಮರಳಿ ಮಾಲಕರಿಗೆ ಹಸ್ತಾಂತರಿಸಿದ ಪೊಲೀಸರು.!

ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ,ದರೋಡೆ ಮತ್ತಿತರ ಕಾರಣಗಳಿಂದ ಸುತ್ತುಗಳನ್ನು ಕಳೆದುಕೊಂಡವರಿಗೆ ಅವರ ಚಿನ್ನಾಭರಣ ಸೊತ್ತು ಮತ್ತು ನಗದನ್ನು ಹಸ್ತಾಂತರಿಸಲಾಯಿತು.ಉಡುಪಿ : ಉಡುಪಿ ಜಿಲ್ಲೆಯ ವಿವಿಧ ಪೊಲೀಸ್...

ಚಿಕ್ಕಮಗಳೂರು : ಬೈಕಿಗೆ ಬಸ್ ಡಿಕ್ಕಿ – ಇಬ್ಬರು ಸವಾರರು ಸ್ಥಳದಲ್ಲೇ ಮೃತ್ಯು..!

ಕೆಎಸ್ಆರ್ ಟಿಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರಿನಲ್ಲಿ ಸಂಭವಿಸಿದೆ. ಚಿಕ್ಕಮಗಳೂರು: ಕೆಎಸ್ಆರ್ ಟಿಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು...