Saturday, July 2, 2022

ಉರುಳಿ ಬಿದ್ದ ಸೇನಾ ವಾಹನ ಬೆಂಕಿಗಾಹುತಿ : ಮೂವರು ಯೋಧರು ಹುತಾತ್ಮ, 5 ಗಂಭೀರ..!

ಜೈಪುರ: ಸೇನಾ ವಾಹನ ಉರುಳಿಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಯೋಧರು ಹುತಾತ್ಮರಾಗಿರುವ ಘಟನೆ ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ ಇತರ ಐವರು ಯೋಧರು ಗಂಭೀರ ಗಾಯಗೊಂಡಿದ್ದಾರೆ.

ಇಂದು ಮುಂಜಾನೆ ಗಂಗಾನಗರದ ರಾಜಿಯಾಸರ್​ ಏರಿಯಾದಲ್ಲಿ ಘಟನೆ ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಯೋಧರಿದ್ದ ಜಿಪ್ಸಿ ವಾಹನ ಉರುಳಿಬಿದ್ದು ಬೆಂಕಿ ಏಕಾಎಕಿ ಹೊತ್ತಿಕೊಂಡಿತು.

ಗಾಯಗೊಂಡ ಐವರು ಯೋಧರು ವಾಹನದಿಂದ ಹೊರಬಂದರು. ಆದರೆ, ಮೂವರು ಅಲ್ಲಿಯೇ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸ್ಟೇಷನ್​ ಹೌಸ್​ ಆಫೀಸರ್​ ವಿಕ್ರಮ್​ ತಿವಾರಿ ಹೇಳಿದ್ದಾರೆ.

ಗಾಯಗೊಂಡ ಯೋಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್​ಎಚ್​ಒ ತಿಳಿಸಿದರು.

LEAVE A REPLY

Please enter your comment!
Please enter your name here

Hot Topics

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸೆಕೆಂಡರಿ ಸ್ಕೂಲ್ ಉದ್ಘಾಟಿಸಿದ ಶಿಕ್ಷಣ ಸಚಿವ

ಬಂಟ್ವಾಳ: ಬ್ರಿಟಿಷರ ಶಿಕ್ಷಣ ನೀತಿ ನಮ್ಮ ನೆಲಕ್ಕೆ ಪೂರಕವಾಗಿಲ್ಲ ಎಂದು ಬದಲಾವಣೆ ತೀರ್ಮಾನಿಸಿ ಎನ್ ಇಪಿ ಜಾರಿಗೆ ತರಲಾಗಿದೆ. ವ್ಯಕ್ತಿಯನ್ನು ಸ್ವಾವಲಂಬಿ ಮಾಡಬೇಕಾದ ಶಿಕ್ಷಣ ಎಲ್ಲಿಗೆ ಬಂದಿದೆ.ಸ್ವಾಭಿಮಾನಿ ಬದುಕುವ ಧೈರ್ಯ ಕಲ್ಪಿಸುವುದು ಶಿಕ್ಷಣದಿಂದ...

ಇಂದು ಮಧ್ಯಾಹ್ನ ಸುಳ್ಯದಲ್ಲಿ ಮತ್ತೆ ಕಂಪಿಸಿದ ವಸುಂಧರೆ

ಸುಳ್ಯ: ದಕ್ಷಿಣ ಕನ್ನಡದ ಸುಳ್ಯ ಮತ್ತು ಮಡಿಕೇರಿ ಭಾಗದಲ್ಲಿ ಶನಿವಾರ ಮಧ್ಯಾಹ್ನ 1.21 ಕ್ಕೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ.ಜೂ. 25 ರಂದು ಕರಿಕೆ‌‌ ಸಮೀಪ, ಜೂ. 28 ರಂದು ಎರಡು ಬಾರಿ,...

ಹೆಜಮಾಡಿ: ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ವೇಗದೂತ ಬಸ್‌

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಹೆಜಮಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಮರಿಗೆ ಬಿದ್ದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.ಖಾಸಗಿ ವೇಗದೂತ ಬಸ್ ಉಡುಪಿಯಿಂದ ಮಂಗಳೂರಿಗೆ...