ಮಂಗಳೂರು: ಅಲ್ ಮದ್ರಸ್‌ತುಲ್ ದಿನೀಯ ಅಸೋಸಿಯೇಶನ್ ಬೆಂಗೆರೆ, ಕಸಬಾ ಜಮಾತ್ ಕಮಿಟಿ ಹಾಗೂ ಇತರ ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಸೇವಾ ಸಂಘಟನೆ ವತಿಯಿಂದ ಸಾಗರ ಮಾಲ ಯೋಜನೆಯಡಿ ಸರಕಾರ ಬೆಂಗರೆಯಲ್ಲಿ ನಿರ್ಮಿಸಲು ಮುಂದಾಗಿರುವ ಕೋಸ್ಟಲ್ ಬರ್ತ್ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ನಿರತರು ಮಾತನಾಡಿ ಈ ಪ್ರತಿಭಟನೆ ಸರಕಾರಕ್ಕೊಂದು ಎಚ್ಚರಿಕೆ ಗಂಟೆಯಾಗಿದೆ. ನಮ್ಮ ಪ್ರತಿಭಟನೆಗೆ ಸರಕಾರ ಸ್ಪಂದಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ನಾವು ಇನ್ನಷ್ಟು ಉಗ್ರ ಹೋರಾಟ ನಡೆಸಲಿದ್ದೇವೆ ಎಂದರು.
ಇಲ್ಲಿಗೆ ಮಂಜೂರಾಗಿರುವ ಯೋಜನೆಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು. ಇಲ್ಲಿ ಈಗಾಗಲೇ ಮೂಲ ಸೌಲಭ್ಯ ಇಲ್ಲದಿರುವಾಗ ಅದನ್ನು ಸರಿಪಡಿಸುವುದು ಬಿಟ್ಟು ದೊಡ್ಡ ಯೋಜನೆಗಳನ್ನು ತಂದು ನಮ್ಮನ್ನು ಇನ್ನಷ್ಟು ದಾರಿ ತಪ್ಪಿಸುವ ಕೆಲಸವನ್ನು ಸರಕಾರ ಮಾಡಬಾರದು.
ಯೋಜನೆ ಕೈಬಿಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದರು. ಕೋಸ್ಟಲ್ ಬರ್ತ್ ಯೋಜನೆ ಕಾಮಗಾರಿ ಶನಿವಾರ ಆರಂಭಗೊಂಡಿದ್ದು ನಾವು ನಿರಂತರವಾಗಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಸ್ಥಳೀಯ ಕಾರ್ಪೋರೇಟರ್ ಮುನೀಬ್ ಬೆಂಗ್ರೆ ಹೇಳಿದ್ದಾರೆ.
ಇಲ್ಲಿ 400ಕ್ಕೂ ಅಧಿಕ ಮಂದಿ ಮೀನುಗಾರಿಕೆಯನ್ನೇ ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದು, ಯೋಜನೆ ಬಂದಲ್ಲಿ ಇವರೆಲ್ಲರೂ ಸಂಕಷ್ಟಕ್ಕೆ ಒಳಗಾಗಲಿದ್ದಾರ