Connect with us

    DAKSHINA KANNADA

    ವಾಮಂಜೂರು ಪ್ರವೀಣನಿಗೆ ದಕ್ಕದ ಬಿಡುಗಡೆ ಭಾಗ್ಯ-ಸಂಬಂಧಿಕರ ಮೊಗದಲ್ಲಿ ಸಂತಸ

    Published

    on

    ಮಂಗಳೂರು: ಮಂಗಳೂರಿನ ವಾಮಂಜೂರಿನಲ್ಲಿ 28 ವರ್ಷಗಳ ಹಿಂದೆ ಚಿನ್ನಕ್ಕಾಗಿ ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಕೊಲೆ ಮಾಡಿ ಜೈಲಿನಲ್ಲಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರವೀಣ್‌ ಕುಮಾರ್‌ನಿಗೆ ಬಿಡುಗಡೆ ಭಾಗ್ಯ ಸಿಗದಿರುವ ಬಗ್ಗೆ ಸಂತ್ರಸ್ತರ ಸಂಬಂಧಿಕರು ಸಮಾಧಾನ ಮತ್ತು ಸಂತಸ ವ್ಯಕ್ತಪಡಿಸಿದ್ದಾರೆ.

    ಜೈಲಿನಲ್ಲಿ ಸನ್ನಡತೆ ಆಧಾರದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತೋತ್ಸವ ಆಚರಣೆ ಸಂದರ್ಭ ವಾಮಂಜೂರು ಪ್ರವೀಣ್‌ ಬಿಡುಗಡೆಗೊಳ್ಳುವ ಪ್ರಸ್ತಾಪವಿತ್ತು.

    ಆತನನ್ನು ಬಿಡುಗಡೆ ಮಾಡಬಹುದೇ ಎಂಬುದಾಗಿ ಬಂಧೀಖಾನೆ ಇಲಾಖೆಯು ಪೊಲೀಸರಿಂದ ವರದಿ ಕೇಳಿತ್ತು.

    ಈ ವಿಷಯ ಪ್ರವೀಣನಿಂದ ಹತ್ಯೆಯಾದವರ ಸಂಬಂಧಿಕರ ಗಮನಕ್ಕೆ ಬಂದಿತ್ತು. ಆತನನ್ನು ಬಿಡುಗಡೆ ಮಾಡ ಬಾರದೆಂದು ಒತ್ತಾಯಿಸಿದ್ದರು.

    ಆತ ಬಿಡುಗಡಯಾಗಿ ಬಂದರೆ ನಮಗೆಲ್ಲರಿಗೆ ಅಪಾಯವಿದೆ,
    ಈಗಾಗಲೇ ಆತ ನಮಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿ ಸಂತ್ರಸ್ತರ ಕುಟುಂಬಸ್ಥರು ಪ್ರವೀಣ್‌ ಬಿಡುಗಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದರು.

    ಸ್ವತಃ ಪ್ರವೀಣ್‌ನ ಪತ್ನಿ ತನ್ನ ಗಂಡನ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದು, ಆತ ಊರಿಗೆ ಬರುವುದು ಬೇಡ, ಜೈಲಿನಲ್ಲಿಯೇ ಇರಲಿ ಎಂದಿದ್ದರು.

    ಕುಟುಂಬಸ್ಥರು ಸಲ್ಲಿಸಿದ ಮನವಿಯನ್ನು ಪೊಲೀಸರು ಬಂಧೀಖಾನೆ ಇಲಾಖೆಗೆ ರವಾನಿಸಿದ್ದರು. ನಾವು ಪೊಲೀಸ್‌ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ.

    ರಾಜ್ಯದ ಗೃಹ ಸಚಿವರು ಕೂಡಾ ಹಂತಕ ಪ್ರವೀಣ್‌ನನ್ನು ಬಿಡುಗಡೆ ಮಾಡುವುದಿಲ್ಲ ಎನ್ನುವ ಭರವಸೆ ನೀಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಇದೀಗ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ರವೀಣ್‌ ಬಿಡುಗಡೆ ಆಗದಿರುವ ಬಗ್ಗೆ ಕುಟುಂಬಸ್ಥರು ಸಮಾಧಾನ ವ್ಯಕ್ತ ಪಡಿಸಿದ್ದಾರೆ.

     

    BIG BOSS

    ಮಂಗಳೂರು: ಪತಿಯ ಅ*ನೈತಿಕ ಸಂಬಂಧ; ತ್ರಿವಳಿ ತಲಾಕ್ ಮೂಲಕ ಪತ್ನಿಗೆ ವಿಚ್ಚೇದನ

    Published

    on

    ಮಂಗಳೂರು: ತಂದೆಯನ್ನು ಮನೆಗೆ ಕರೆದು ತಂದೆಯ ಎದುರಿನಲ್ಲಿ ಪತಿ ನನಗೆ ತ್ರಿವಳಿ ತಲಾಕ್ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಉಳ್ಳಾಲದ ಸಮ್ಮರ್ ಸ್ಯಾಂಡ್ ಬಳಿಯ ನಿವಾಸಿಯಾಗಿರುವ ಮಹಮ್ಮದ್ ದಿಲ್ಫಾಜ್‌ ಎಂಬವರ ವಿರುದ್ಧ ಈ ದೂರು ದಾಖಲಾಗಿದೆ. 2019 ರಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಕೆಲ ಕಾಲ ಚೆನ್ನಾಗಿ ಸಂಸಾರ ಕೂಡಾ ನಡೆಸಿ ಬಳಿಕ ಪತಿ ಪರ ಸ್ತ್ರೀಯ ಜೊತೆ ಸಂಬಂಧ ಬೆಳೆಸಿದ್ದಾಗಿ ಆರೋಪಿಸಲಾಗಿದೆ.

    ಈ ವಿಚಾರವನ್ನು ಪ್ರಶ್ನೆ ಮಾಡಿದ ಪತ್ನಿಗೆ ದೈಹಿಕ ಹಿಂ*ಸೆ ನೀಡಲಾಗಿದ್ದು, ನಿರಂತರ ಕಿ*ರುಕುಳ ನೀಡಲಾದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಎರಡೂ ಮನೆಯವರೂ ರಾಜಿ ಪಂಚಾಯತಿ ನಡೆಸಿದ್ದರೂ ಸಂಸಾರ ಸರಿ ಹೋಗಿರಲಿಲ್ಲ. ಇದೀಗ ಹಣಕ್ಕಾಗಿ ಬೇಡಿಕೆ ಇಟ್ಟು ತಂದೆಯನ್ನು ಮನೆಗೆ ಕರೆಸಿ ಅವರ ಸಮ್ಮುಖದಲ್ಲಿ ಮೂರ ಬಾರಿ ತಲಾಕ್ ಹೇಳಿ ತವರು ಮನೆಗೆ ಕಳುಹಿಸಲಾಗಿದೆ ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

    ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತ್ರಿವಳಿ ತಲಾಕ್ ಕಾನೂನನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವುದರಿಂದ ಈ ದೂರಿಗೆ ಪೊಲೀಸರು ಹೆಚ್ಚಿನ ಮಾನ್ಯತೆ ನೀಡಿ ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

    Continue Reading

    BIG BOSS

    ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ ಸಂಚು ರೂಪಿಸುತ್ತಿದ್ದಾಗಲೇ ಅರೆಸ್ಟ್‌

    Published

    on

    ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ (43) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರ ತಂಡವು ನವೆಂಬರ್ 22ರ ಸಂಜೆ ಬಂಧಿಸಿದೆ.

    ಆರೋಪಿ ದಾವೂದ್ ಉಳ್ಳಾಲದ ಧರ್ಮನಗರ ನಿವಾಸಿ. ಅವನು ಮಂಗಳೂರಿನ ತಲಪಾಡಿ-ದೇವಿಪುರ ರಸ್ತೆ ಬಳಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರ ವಿರುದ್ಧ ಅಪರಾಧ ಎಸಗಲು ಸಂಚು ರೂಪಿಸುತ್ತಿದ್ದಾಗಲೇ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ನರೇಂದ್ರ ನೇತೃತ್ವದ ಸಿಸಿಬಿ ತಂಡ ರೌಡಿಶೀಟರ್‌ನನ್ನು ಬಂಧಿಸಲು ಮುಂದಾಗಿದೆ.

    ಕಾರ್ಯಾಚರಣೆ ವೇಳೆ ದಾವೂದ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಪಿಎಸ್ ಐ ನರೇಂದ್ರ ಮತ್ತು ಇತರ ಸಿಬ್ಬಂದಿಗೆ ಗಾಯಗಳಾಗಿವೆ. ದಾಳಿಯ ಹೊರತಾಗಿಯೂ ಪೊಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಕ್ರಮಕ್ಕಾಗಿ ದಾವುದ್‌ನನ್ನು ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

    ದಾವೂದ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ ಐ ನರೇಂದ್ರ ಅವರ ದೂರಿನ ಮೇರೆಗೆ ಆರೋಪಿ ದಾವುದ್ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ದಾವೂದ್ ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿರುತ್ತಾನೆ. ಉಳ್ಳಾಲ, ಮಂಗಳೂರು ದಕ್ಷಿಣ ಮತ್ತು ಬಜ್ಪೆ ಸೇರಿದಂತೆ ಇತರ ಸ್ಥಳಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಾಗಿ ವರದಿಯಾಗಿದೆ .

    Continue Reading

    BIG BOSS

    ಕೊಣಾಜೆ: 3 ವರ್ಷದ ಬಾಲೆಗೆ ಕಿ*ರುಕುಳ ನೀಡಿದ 70ರ ಅಜ್ಜ ಅರೆಸ್ಟ್

    Published

    on

    ಕೊಣಾಜೆ: ಬಾಲಕಿಗೆ ಕಿ*ರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪ್ಪತ್ತರ ಹರೆಯದ ವೃದ್ಧನನ್ನು ಪೊಲೀಸರು ಬಂಧಿಸಿ,‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಆರೋಪಿಯನ್ನು ಅಬ್ದುಲ್ಲಾ (70) ಎಂದು ಗುರುತಿಸಲಾಗಿದೆ.

    ಉಳ್ಳಾಲ ತಾಲೂಕು ಬಾಳೆಪುಣಿ ಗ್ರಾಮದಲ್ಲಿ ಘಟನೆ ನಡೆದಿದೆ. 3 ವರ್ಷದ ಬಾಲಕಿ ಆಟವಾಡುತ್ತಿದ್ದಾಗ ಆರೋಪಿ ಲೈಂ*ಗಿಕ ಕಿ*ರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಬಾಲಕಿಯ ಅಸ್ವಸ್ಥತೆಯನ್ನು ಗಮನಿಸಿದ ತಾಯಿ ವೈದ್ಯಕೀಯ ತಪಾಸಣೆ ನಡೆಸಿದ್ದು ಬಳಿಕ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಈ ಬಗ್ಗೆ ಕೊಣಾಜೆ ಪೊಲೀಸರು ಆರೋಪಿ ವಿರುದ್ಧ ಪೋ*ಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    Continue Reading

    LATEST NEWS

    Trending