Connect with us

    DAKSHINA KANNADA

    ‘ಮಾಗಣೆ ಮಾಹಿತಿ ಕೋಶ’ ರಚನೆಗೆ ವಜ್ರದೇಹಿ ಸ್ವಾಮೀಜಿಯವರಿಂದ ಚಾಲನೆ

    Published

    on

    ಮಂಗಳೂರು: ಹೋಬಳಿ ಮಾಗಣೆಗಳ ಒಕ್ಕೂಟದ ವಿಶೇಷ ಸಮಾಲೋಚನಾ ಸಭೆಯಲ್ಲಿ “ಸೋಮೇಶ್ವರ ಮಾಗಣೆಯ ಮಾಹಿತಿ ಕೋಶ ” ಗ್ರಂಥ ರಚನಾ ಕಾರ್ಯಕ್ಕೆ ಶ್ರೀ ಕ್ಷೇತ್ರ ವಜ್ರದೇಹಿ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳು ಮಾರ್ಗದರ್ಶನ ನೀಡಿದರು.


    ಅಸೈಗೋಳಿ ಬಂಟರ ಭವನದಲ್ಲಿ ಮಂಗಳವಾರ ಸಂಜೆ ನಡೆದ ಈ ಕಾರ್ಯಕ್ರಮವು ಸಾಹಿತ್ಯ ವಲಯದ ಅಪೂರ್ವ ಕಾರ್ಯಕ್ರಮವಾಗಿ ದಾಖಲಿಸಲ್ಪಟ್ಟಿತು.

    ಪೂಜ್ಯ ಸ್ವಾಮೀಜಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


    “ದೇಶ ಮತ್ತು ದೇಹದ ಸೂತ್ರ ಧರ್ಮ, ದೇಶ ಉಳಿದರೆ ದೇಹ ಉಳಿಯಲು ಸಾಧ್ಯ, ನಮ್ಮಲ್ಲಿ ವ್ಯಾಜ್ಯಗಳು ಬಂದದ್ದು ಭೂಮಿಯಿಂದ. ನಮ್ಮಲ್ಲಿ ಕುಟುಂಬಗಳಿಗೆ ಹೆಚ್ಚು ಮೌಲ್ಯ ಇರುವುದರಿಂದ ಕುಟುಂಬ ಉಳಿದಿದೆ. ನಮ್ಮ ಹಿರಿಯರು ಬಿಟ್ಟು ಹೋದ ಇತಿಹಾಸವನ್ನು ಉಳಿಸಿ ದಾಖಲಿಸುವ ಕೆಲಸ ಆಗಬೇಕು’ ಎಂದು ಹೇಳಿದರು.

    ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನದ ಸಂದೇಶ ನೀಡಿದರು.
    ಮಾಗಣೆಗಳ ಒಕ್ಕೂಟದ ಅಧ್ಯಕ್ಷರು, ರೂವಾರಿ ಪೂಜ್ಯ ಶ್ರೀ ನೀಲೇಶ್ವರ ಉಚ್ಚಿಲ್ಲತ್ತಾಯ ಪದ್ಮನಾಭ ತಂತ್ರಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, “ಯಾವೆಲ್ಲಾ ವಿಷಯಗಳು ಆಗಬೇಕೆಂದು ಮನಸಿನಲ್ಲಿತ್ತೋ ಅದೆಲ್ಲಾ ಈ ಸಭೆಯಲ್ಲಿ ಮೂಡಿಬಂದಿದೆ, ಇದು ತಂತ್ರಿಗಳು ಮಾಡಿದ ಮಾಗಣೆ ಎಂಬ ಅಭಿಪ್ರಾಯ ಇದ್ದಿರಬಹುದು, ಅದು ತಪ್ಪು.

    ಇದು ನೀವು ಮಾಡಿದ ಮಾಗಣೆ, ನಿಮ್ಮ ಮಾಗಣೆ, ಇದನ್ನು ಬಲಿಷ್ಟವಾಗಿ ಬೆಳೆಸುವ ಹೊಣೆಗಾತರಿಕೆ ನಿಮ್ಮೆಲ್ಲರಿಗೆ ಇದೆ, ಎಲ್ಲರಲ್ಲೂ ಒಂದು ಜ್ಞಾನ ಇದೆ, ಅದನ್ನು ಬೆಳೆಸಿದರೆ ಅದುವೇ ವಿಜ್ಞಾನವಾಗುತ್ತದೆ, ನಾವೆಲ್ಲರೂ ಮಾಗಣೆ ಒಕ್ಕೂಟದ ಮೂಲಕ ಬಲಿಷ್ಟವಾಗಬೇಕಾಗಿದೆ, ” ಎಂದು ಆಶೀರ್ವಚನದ ಮಾತುಗಳನ್ನಾಡಿದರು.


    ಮಾಗಣೆಗಳ ಒಕ್ಕೂಟದ ಪ್ರಧಾನ ಸಂಚಾಲಕರು, ಚಂದ್ರಹಾಸ ಅಡ್ಯಂತಾಯ, ಚಂದ್ರಹಾಸ್ ಉಳ್ಳಾಲ್, ಕೆ. ಟಿ. ಸುವರ್ಣ, ಸೀತಾರಾಮ ಶೆಟ್ಟಿ ನೆತ್ತಿಲ ಬಾಳಿಕೆ, ಹರೀಶ್ ಕುತ್ತಾರ್, ಪ್ರಧಾನ ಕಾರ್ಯದರ್ಶಿ ಚಿದಾನಂದ ಉಚ್ಚಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಒಕ್ಕೂಟದ ಸಂಯೋಜಕ ಕದ್ರಿ ನವನೀತ್ ಶೆಟ್ಟಿ ಅವರು ಮಾಗಣೆಗಳ ಒಕ್ಕೂಟದ ಉದ್ದೇಶ, ಕಾರ್ಯಯೋಜನೆಗಳ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.

    ಅಕ್ಟೋಬರ್ 10ನೇ ತಾರೀಕಿನ ಒಳಗೆ 17 ಗ್ರಾಮಗಳ ದೇವಸ್ಥಾನ , ದೈವಸ್ಥಾನ ,ಧಾರ್ಮಿಕ ಶ್ರದ್ದಾ ಕೇಂದ್ರಗಳ,ಚಾರಿತ್ರಿಕ ಸ್ಥಳಗಳ ಪ್ರಾಥಮಿಕ ಮಾಹಿತಿಯ ಕರಡು ಪ್ರತಿಯನ್ನು ಒಕ್ಕೂಟಕ್ಕೆ ಒಪ್ಪಿಸುವಂತೆ ತೀರ್ಮಾನಿಸಲಾಯಿತು‌.


    ಪ್ರತೀಯೊಂದು ಗ್ರಾಮದಲ್ಲಿ ಇಬ್ಬರು ಸಂಪಾದಕರನ್ನು ನಿಯೋಜಿಸಿ ಊರಿನ ಹಿರಿಯರ ,ಜಾನಪದ ಕಲಾವಿದರ ,ಸಾಹಿತಿಗಳ ,ಅನುಭವಿಗಳ ಸಹಕಾರದೊಂದಿಗೆ ಸ್ಥಳ ಪುರಾಣವನ್ನೊಳಗೊಂಡ ಸಚಿತ್ರ ಗ್ರಾಮ ಚರಿತ್ರೆಯನ್ನು ರಚಿಸಲು ಮಾರ್ಗದರ್ಶನ ನೀಡಿದರು.

    ಉಪನ್ಯಾಸಕ ಅರುಣ್ ಉಳ್ಳಾಲ್, ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಹರೇಕಳ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡರು.

    BIG BOSS

    ಉಪಚುನಾವಣೆಯಲ್ಲಿ ಗೆಲುವು; ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

    Published

    on

    ಮಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು, ಮಲ್ಲಿಕಟ್ಟೆಯಲ್ಲಿರುವ ಕಚೇರಿಯೆದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಪರ ಘೋಷಣೆ ಕೂ

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಮಾತನಾಡಿ, ‘ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಹಿಡಿದ ಕನ್ನಡಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಗೆಲುವಿನ ನಿರೀಕ್ಷೆ ಇತ್ತು. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದ ಫಲಿತಾಂಶ ತಲೆಕೆಳಗಾಗಿದೆ’ ಎಂದರು.

    ‘ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಚುನಾವಣೆಯಲ್ಲಿ ಸೋತಿದ್ದಾರೆ‌. ಇದು ರಾಜ್ಯದ ಜನರು ಕಾಂಗ್ರೆಸ್ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಬಿಜೆಪಿ ಮೈತ್ರಿಕೂಟದ ಬಗೆಗಿರುವ ಅಪನಂಬಿಕೆಗೆ ಸಾಕ್ಷಿಯಾಗಿದೆ. ಇನ್ನಾದರೂ ಬಿಜೆಪಿ ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಬಿಟ್ಟು, ಅಭಿವೃದ್ಧಿ ಬಗ್ಗೆ ಯೋಚಿಸಲಿ’ ಎಂದು ಹೇಳಿದರು

    Continue Reading

    DAKSHINA KANNADA

    ಪಿಲಿಕುಳ ಕಂಬಳಕ್ಕೆ ಪ್ರಾಣಿಪ್ರಿಯರ ವಿರೋಧ !

    Published

    on

    ಮಂಗಳೂರು: ಕಂಬಳ ಕರಾವಳಿ ಕರ್ನಾಟಕದ ಜನಪದ ಕ್ರೀಡೆ. ಈ ಹಿಂದೆ ನಿಷೇಧಕ್ಕೆ ಒಳಪಟ್ಟರೂ ನಂತರ ಕಂಬಳ ನಡೆಸುವುದಕ್ಕೆ ಅನುಮತಿ ಸಿಕ್ಕಿತ್ತು. ಆದರೆ ಈಗ ಸರ್ಕಾರಿ ಪ್ರಾಯೋಜಿತ ಮೊದಲ ಕಂಬಳಕ್ಕೆ ಪ್ರಾಣಿ ಪ್ರಿಯರ ವಿರೋಧ ವ್ಯಕ್ತವಾಗಿದೆ. ಇದರ ನಡುವೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

    ಕಳೆದ ಹತ್ತು ವರ್ಷಗಳಿಂದ ನಿಂತು ಹೋಗಿದ್ದ ಪಿಲಿಕುಳದ ಸರ್ಕಾರಿ ಕಂಬಳ ಈ ಬಾರಿ ಮತ್ತೆ ಆಯೋಜಿಸಲು ಜಿಲ್ಲಾಡಳಿತ ಮುಂದಾಗಿದೆ. ಹೀಗಾಗಿ ಪಿಲಿಕುಳದ ಗುತ್ತಿನ ಮನೆಯ ಮುಂದೆ ಕಂಬಳ ಕರೆ ನಿರ್ಮಾಣ ಮಾಡಿ ಕಂಬಳದ ದಿನಾಂಕ ಕೂಡಾ ಘೋಷಣೆ ಮಾಡಿತ್ತು. ನವೆಂಬರ್ 9 ರಂದು ನಿಗದಿಯಾಗಿದ್ದ ಈ ಕಂಬಳ, ಪಂಚಾಯತ್ ಉಪಚುನಾವಣೆಯ ನೀತಿ ಸಂಹಿತೆ ಕಾರಣದಿಂದ ಮುಂದೂಡಲಾಗಿತ್ತು.

    ಇದನ್ನೂ ಓದಿ: 30 ವರ್ಷಕ್ಕೆ ಮದುವೆಯಾಗುವ ಯೋಚನೆ ಮಾಡಿದ್ರೆ ಇದನ್ನು ಓದಲೇ ಬೇಕು !!
    ಈ ನಡುವೆ ಪೆಟಾದವರು ಬೆಂಗಳೂರು ಕಂಬಳ ಹಾಗೂ ಪಿಲಿಕುಳ ಕಂಬಳದ ಆಯೋಜನೆಯ ಬಗ್ಗೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಬೆಂಗಳೂರು ಕಂಬಳ ಇನ್ನೂ ದಿನ ನಿಗದಿಯಾಗದೇ ಇದ್ದರೂ ಕಂಬಳ ನಡೆಸಲು ಅನುಮತಿ ನೀಡಬಾರದೆಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪೆಟಾ ಸಲ್ಲಿಸಿದ ಈ ಅರ್ಜಿಗೆ ಬೆಂಗಳೂರು ಕಂಬಳ ಆಯೋಜಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಕೀಲರ ಮೂಲಕ ವಾದ ಮಂಡಿಸಿದ್ದಾರೆ. ಆದ್ರೇ ಪಿಲಿಕುಳದ ಸರ್ಕಾರಿ ಕಂಬಳದ ವಿಚಾರವಾಗಿ ಯಾವುದೇ ಅರ್ಜಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿಲ್ಲ.
    ಹೀಗಾಗಿ ಪಿಲಿಕುಳ ಕಂಬಳ ನಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಕಾಡಿದೆ. ಮಂಗಳೂರು ನಗರದಲ್ಲಿ ಕಂಬಳ ನಡೆಯದೇ ಇದ್ದ ಸಂದರ್ಭದಲ್ಲಿ ಪಿಲಿಕುಳದಲ್ಲಿ ಸರ್ಕಾರದ ವತಿಯಿಂದ ಕಂಬಳ ಆರಂಭಿಸಲಾಗಿತ್ತು. ಕಾರಣಾಂತರಗಳಿಂದ ನಿಂತು ಹೋಗಿದ್ದ ಕಂಬಳ ಮತ್ತೆ ಆರಂಭವಾದ ಕಾರಣ ಕಂಬಳ ಪ್ರೇಮಿಗಳು ಸಂತಸಗೊಂಡಿದ್ದರು. ಆದ್ರೆ ಇದೀಗ ಪೆಟಾ ಪಿಲಿಕುಳ ಕಂಬಳಕ್ಕೆ ಅಪಸ್ವರ ಎತ್ತಿದ್ದು, ಇಲ್ಲಿ ನಡೆಯುವ ಗದ್ದಲದಿಂದ ಪಿಲಿಕುಳದ ಪ್ರಾಣಿ ಸಂಗ್ರಹಾಲಯದಲ್ಲಿ ಇರುವ ಪ್ರಾಣಿಗಳಿಗೆ ತೊಂದರೆ ಆಗಲಿದೆ ಎಂಬ ವಾದವನ್ನು ನ್ಯಾಯಾಲಯದ ಮುಂದೆ ಇಟ್ಟಿದೆ.

     

    Continue Reading

    BIG BOSS

    ಮಂಗಳೂರು: ಪತಿಯ ಅ*ನೈತಿಕ ಸಂಬಂಧ; ತ್ರಿವಳಿ ತಲಾಕ್ ಮೂಲಕ ಪತ್ನಿಗೆ ವಿಚ್ಚೇದನ

    Published

    on

    ಮಂಗಳೂರು: ತಂದೆಯನ್ನು ಮನೆಗೆ ಕರೆದು ತಂದೆಯ ಎದುರಿನಲ್ಲಿ ಪತಿ ನನಗೆ ತ್ರಿವಳಿ ತಲಾಕ್ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಉಳ್ಳಾಲದ ಸಮ್ಮರ್ ಸ್ಯಾಂಡ್ ಬಳಿಯ ನಿವಾಸಿಯಾಗಿರುವ ಮಹಮ್ಮದ್ ದಿಲ್ಫಾಜ್‌ ಎಂಬವರ ವಿರುದ್ಧ ಈ ದೂರು ದಾಖಲಾಗಿದೆ. 2019 ರಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಕೆಲ ಕಾಲ ಚೆನ್ನಾಗಿ ಸಂಸಾರ ಕೂಡಾ ನಡೆಸಿ ಬಳಿಕ ಪತಿ ಪರ ಸ್ತ್ರೀಯ ಜೊತೆ ಸಂಬಂಧ ಬೆಳೆಸಿದ್ದಾಗಿ ಆರೋಪಿಸಲಾಗಿದೆ.

    ಈ ವಿಚಾರವನ್ನು ಪ್ರಶ್ನೆ ಮಾಡಿದ ಪತ್ನಿಗೆ ದೈಹಿಕ ಹಿಂ*ಸೆ ನೀಡಲಾಗಿದ್ದು, ನಿರಂತರ ಕಿ*ರುಕುಳ ನೀಡಲಾದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಎರಡೂ ಮನೆಯವರೂ ರಾಜಿ ಪಂಚಾಯತಿ ನಡೆಸಿದ್ದರೂ ಸಂಸಾರ ಸರಿ ಹೋಗಿರಲಿಲ್ಲ. ಇದೀಗ ಹಣಕ್ಕಾಗಿ ಬೇಡಿಕೆ ಇಟ್ಟು ತಂದೆಯನ್ನು ಮನೆಗೆ ಕರೆಸಿ ಅವರ ಸಮ್ಮುಖದಲ್ಲಿ ಮೂರ ಬಾರಿ ತಲಾಕ್ ಹೇಳಿ ತವರು ಮನೆಗೆ ಕಳುಹಿಸಲಾಗಿದೆ ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

    ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತ್ರಿವಳಿ ತಲಾಕ್ ಕಾನೂನನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವುದರಿಂದ ಈ ದೂರಿಗೆ ಪೊಲೀಸರು ಹೆಚ್ಚಿನ ಮಾನ್ಯತೆ ನೀಡಿ ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

    Continue Reading

    LATEST NEWS

    Trending