Connect with us

ಯುಟಿ ಖಾದರ್ ಕೆಂಗಣ್ಣಿಗೆ ಗುರಿಯಾಯ್ತು ಮಂಗಳೂರಿನಲ್ಲಿ ತೆರೆದ ಜವಳಿ ಅಂಗಡಿ ಹಾಗೂ ಬಾರ್..

Published

on

ಯುಟಿ ಖಾದರ್ ಕೆಂಗಣ್ಣಿಗೆ ಗುರಿಯಾಯ್ತು ಮಂಗಳೂರಿನಲ್ಲಿ ತೆರೆದ ಜವಳಿ ಅಂಗಡಿ ಹಾಗೂ ಬಾರ್..

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆದಲ್ಲಿ, ಕೊರೊನಾ ಸೋಂಕು ಹರಡುವಿಕೆಯಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ.

ಆದ್ರೆ ಇದೀಗ ಜಿಲ್ಲೆಯಾದ್ಯಂತ ಜವಳಿ ಅಂಗಡಿಗಳನ್ನು ತೆರೆಯಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದು, ಶಾಸಕ ಯುಟಿ ಖಾದರ್ ಅವರ ಕೆಂಗಣ್ಣಿಗೆ ಗುರಿಯಾಗಿದೆ.

ಜವಳಿ ಅಂಗಡಿ ತೆರೆಯಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೀಡಿದ ಸೂಚನೆಗೆ ಶಾಸಕ ಯು.ಟಿ ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸೋಂಕಿತರು ಹೆಚ್ಚುತ್ತಿರುವ ಈ ಸಮಯದಲ್ಲಿ ಇಂತಹ ನಿರ್ಧಾರ ಅಗತ್ಯವೇ? ಎಂದು ಸರಕಾರಕ್ಕೆ ಖಾದರ್ ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.

ಮೊನ್ನೆ ಸಭೆಯಲ್ಲಿ, ಜವಳಿ ಅಂಗಡಿ ತೆರವಿಗೆ ಅವಕಾಶವಿಲ್ಲ ಎಂದ ಸಚಿವರು ಹಾಗೂ ಜಿಲ್ಲಾಧಿಕಾರಿ ಇದೀಗ ಏಕಾಏಕಿ ಯಾವುದೇ ಸೂಚನೆ ನೀಡದೆ ತೆರವಿಗೆ ಅವಕಾಶ ನೀಡಿದ್ದು ತಪ್ಪು.

ಮಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದು, ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳುವ ಬದಲು, ಅನಾವಶ್ಯಕವಾಗಿ ಜವಳಿ ಅಂಗಡಿ, ಬಾರ್ ತೆರವುಗೊಳಿಸಿರುವುದು ಸರಕಾರದ ಬೇಜವಾಬ್ದಾರಿತನ ಎಂದು ಟೀಕಿಸಿದ್ದಾರೆ.

ಜವಳಿ ಅಂಗಡಿ, ಬಾರ್ ತೆರೆದು ಇದೀಗ ಜನ ಸಂಚಾರಕ್ಕೆ ಬಸ್ ಸಂಚಾರ ತಡೆಗಟ್ಟಿರುವುದು ಅವೈಜ್ಞಾನಿಕ ಕ್ರಮವಾಗಿದೆ.

ಜಿಲ್ಲೆಯ ಜನರು ಯಾರೋಬ್ಬರೂ ಜವಳಿ ಅಂಗಡಿ ತೆರವಿಗೆ ಅಪೇಕ್ಷೆ ಪಡುತ್ತಿಲ್ಲ. ಹಾಗಾಗಿ ದ.ಕ ಜಿಲ್ಲೆಯ ಸಂಸದರು, ಶಾಸಕರು ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಖಾದರ್ ಸೂಚನೆ ನೀಡಿದ್ದಾರೆ.

ದೂರದೃಷ್ಟಿ ಇಲ್ಲದೆ, ಗೊಂದಲ ನಿರ್ಧಾರಗಳಿಂದ ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಾದರೆ, ಇದಕ್ಕೆ ನೇರ ಹೊಣೆ ಬಿಜೆಪಿ ಸರಕಾರವೇ ಆಗುತ್ತೆ.

ವೆನ್ಲಾಕ್ ಆಸ್ಪತ್ರೆಯಲ್ಲಿ ಸಮರ್ಪಕ ಟೆಸ್ಟಿಂಗ್ ಕಿಟ್ ಕೊರತೆ ಇದ್ದು ಸೋಂಕಿತ ವ್ಯಕ್ತಿಗಳಿಗೆ ಟೆಸ್ಟ್ ಮಾಡಲು ವ್ಯವಸ್ಥೆ ಇಲ್ಲ.

ಇನ್ನಿತರ ಖಾಯಿಲೆಗೆ‌ ಸೂಕ್ತ ಆಸ್ಪತ್ರೆ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಇಷ್ಟೆಲ್ಲಾ ಮೂಲಭೂತ ಸೌಕರ್ಯದ ಕೊರತೆ ಇರುವಾಗ ಅದನ್ನು ಒದಗಿಸುವುದು ಸರಕಾರದ ಹೊಣೆ.

ಅದು ಬಿಟ್ಟು ಜವಳಿ ಅಂಗಡಿ ತೆರೆಯುವುದು ಎಷ್ಟರಮಟ್ಟಿಗೆ ಸರಿ ಎಂದು ಸರಕಾರಕ್ಕೆ ಶಾಸಕ ಯು.ಟಿ‌ ಖಾದರ್ ಸವಾಲೆಸೆದಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

ಬೆಂಕಿ ಹಚ್ಚಿ ಯುವತಿಯ ಬರ್ಬ*ರ ಹ*ತ್ಯೆ..!! ಕತ್ತು ಕೊಯ್ದು ಸು*ಟ್ಟು ಹಾಕಿರುವ ಶಂಕೆ

Published

on

ಬೆಳಗಾವಿ: 25 ರಿಂದ 30 ವರ್ಷದ ಯುವತಿಯೊಬ್ಬಳನ್ನು ಬರ್ಬರವಾಗಿ ಹ*ತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆದಿದೆ. ಇಲ್ಲಿನ ಗ್ರಾಮೀಣ ಪೊಲೀಸ್ ಠಾಣ ವ್ಯಾಪ್ತಿಯ ಮಮದಾಪುರ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು ಕೊ*ಲೆ ಮಾಡಿದವರಾರು? ಹ*ತ್ಯೆ ಆದವಳು ಯಾರು? ಎಂಬುದಾಗಲಿ ಗೊತ್ತಾಗಿಲ್ಲ. ನಿನ್ನೆ(ಎ.18) ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾಲುವೆ ಪಕ್ಕದಲ್ಲಿ ಹೊಗೆಯಾಡುತ್ತಿರುವುದನ್ನು ಜನರು ಗಮನಿಸಿದ್ದಾರೆ. ಬಿಸಿಲಿನ ತಾಪಕ್ಕೆ ಹುಲ್ಲು ಇರುವ ಜಾಗಕ್ಕೆ ಬೆಂಕಿ ಬಿದ್ದಿರಬಹುದು ಎಂದು ಕೆಲವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಯುವತಿಯ ಮೃತದೇಹ ಕಂಡು ಬಂದಿದೆ.

murder

ಯುವತಿಯ ಕತ್ತು ಕೊಯ್ದು ಬಳಿಕ ಆಕೆಯ ಗುರುತು ಪತ್ತೆಯಾಗದಂತೆ ಸುಟ್ಟು ಹಾಕಿರಬೇಕು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ಹಾಗೂ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಯುವತಿಯನ್ನು ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಸುಟ್ಟು ಹಾಕುವ ಪ್ರಯತ್ನ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಈ ಯುವತಿ ಯಾರು ಹಾಗೂ ಯಾರು ಕೊಲೆ ಮಾಡಿದ್ದಾರೆ ಅನ್ನೋದು ತನಿಖೆಯಿಂದ ಗೊತ್ತಾಗಬೇಕಾಗಿದೆ.

Read More..: ಉಡುಪಿಯಲ್ಲಿ ಭೀಕರ ಅಪಘಾ*ತ; ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವು

Continue Reading

LATEST NEWS

ಉಡುಪಿಯಲ್ಲಿ ಭೀಕರ ಅಪಘಾ*ತ; ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವು

Published

on

ಉಡುಪಿ : ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವನ್ನಪ್ಪಿರುವ ಘಟನೆ ಉಡುಪಿಯ ಹೇರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಕೃಷ್ಣ ಗಾಣಿಗ ಮೃ*ತ ದುರ್ದೈವಿ. ಉಡುಪಿ ನಗರ ಸಭೆಯಲ್ಲಿ ಎಲೆಕ್ಟ್ರಿಷನ್ ಆಗಿ ಕೃಷ್ಣ ಕೆಲಸ ಮಾಡುತ್ತಿದ್ದರು. ಸಂತೆಕಟ್ಟೆ ಮಾರ್ಗವಾಗಿ ಬ್ರಹ್ಮಾವರದ ಕಡೆಗೆ ಸಾಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಲಾರಿ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ.

ಲಾರಿ ಕೃಷ್ಣ ಅವನ್ನು ಕೆಲ ದೂರ ಎಳೆದೊಯ್ದಿದೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ರಸ್ತೆಯಲ್ಲಿ ಕೆಲ ಕಾಲ ಸಂಚಾರ ದಟ್ಟನೆ ಉಂಟಾಗಿತ್ತು.

ಬ್ರಹ್ಮಾವರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Continue Reading

DAKSHINA KANNADA

ಮಂಡ್ಯದಲ್ಲಿ ಅವಳಿ ಮಕ್ಕಳ ಸಾ*ವಿನ ಪ್ರಕರಣಕ್ಕೆ ಟ್ವಿಸ್ಟ್..! ತಾಯಿಯಿಂದ ಕೃತ್ಯ..!

Published

on

ಮಂಗಳೂರು,(ಮಂಡ್ಯ): ಮಂಡ್ಯದಲ್ಲಿ ಐಸ್‌ ಕ್ರೀಮ್‌ ತಿಂದು ಅವಳಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ಬುಧವಾರ ಅವಳಿ ಮಕ್ಕಳು ಸಾವನ್ನಪ್ಪಿದ್ದರು. ಐಸ್ ಕ್ರೀಂ ತಿಂದು ಮಕ್ಕಳು ಇಹಲೋಕ ತ್ಯಜಿಸಿವೆ ಎನ್ನಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ಬಯಲಾಗಿದೆ. ತಾಯಿಯೇ ಮಕ್ಕಳಿಗೆ ವಿಷ ಹಾಕಿ ಸಾಯಿಸಿದ್ದಾಳೆ ಎನ್ನುವುದು ಖಚಿತವಾಗಿದೆ.

ಹೆತ್ತ ಮಕ್ಕಳಿಗೆ ವಿಷವಿಕ್ಕಿದ ತಾಯಿ!

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ಪೂಜಾ ಹಾಗೂ ಪ್ರಸನ್ನ ದಂಪತಿಗಳ ಒಂದೂವರೆ ವರ್ಷದ ಅವಳಿ ಕಂದಮ್ಮಗಳು ಸಾವನ್ನಪ್ಪಿದ್ದವು.

ಪೊಲೀಸ್‌ ತನಿಖೆಯ ಬಳಿಕ ತಾಯಿ ಪೂಜಾಳೇ ಮೂವರು ಮಕ್ಕಳಿಗೆ ವಿಷ ಹಾಕಿದ್ದಾಳೆಂಬುದು ಗೊತ್ತಾಗಿದೆ.

ತ್ರಿಶುಲ್, ತ್ರಿಶ ಅವಳಿ ಮಕ್ಕಳು ಹಾಗೂ ಮಗಳು ಬೃಂದಾಗೆ ಪೂಜಾ ಹಾಕಿದ್ದಳು. ಬಳಿಕ ಐಸ್ ಕ್ರೀಂ ತಿಂದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲಾಗಿತ್ತು. ಇದೀಗ ಪೊಲೀಸ್ ವಿಚಾರಣೆ ವೇಳೆ ಸತ್ಯಾಂಶ ಬಯಲಾಗಿದೆ.

ಪೂಜಾ ಪತಿ ಪ್ರಸನ್ನ ಪದೇ ಪದೇ ಜಗಳವಾಡುತ್ತಿದ್ದರು. ಈ ಜಗಳದಿಂದ ಬೇಸತ್ತು ಬುಧವಾರ ಮಕ್ಕಳಿಗೆ ತಾಯಿ ವಿಷ ಉಣಿಸಿದ್ದಾಳೆ. ಬಳಿಕ ತಾನೂ ಸೇವಿಸಿದ್ದಳು. ಕೂಡಲೇ ಮಕ್ಕಳು ಹಾಗೂ ಪೂಜಾಳನ್ನು ಮಂಡ್ಯ‌ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿ, ಆಸ್ಪತ್ರೆಯಲ್ಲಿ ಅವಳಿ ಜವಳಿ ಕಂದಮ್ಮಗಳು ಕೊನೆಯುಸಿರೆಳೆದಿದ್ದವು.

ಸದ್ಯ ತಾಯಿ ಹಾಗೂ ಮೊದಲ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Continue Reading

LATEST NEWS

Trending