Thursday, September 29, 2022

ಪಡುಬಿದ್ರಿ: ಉದ್ಯಮಿಗೆ ಪಿಸ್ತೂಲು ತೋರಿಸಿ ಹಲ್ಲೆ-ನಗ, ನಗದು ಕಳವು

ಪಡುಬಿದ್ರಿ: ಉದ್ಯಮಿಯೊಬ್ಬರಿಗೆ ಪಿಸ್ತೂಲು ತೋರಿಸಿ ತೀವ್ರ ಗಾಯಗೊಳಿಸಿದ ಘಟನೆ ಪಡುಬಿದ್ರಿಯ ಕಂಚಿನಡ್ಕ ರುದ್ರಭೂಮಿ ಬಳಿ ನಿನ್ನೆ ನಡೆದಿದೆ.

ಘಟನೆ ಹಿನ್ನೆಲೆ
ಮನ್ಸೂರ್.ಕೆ ಎಂಬವರು ಪಡುಬಿದ್ರಿಯಲ್ಲಿ ಎಂ.ಎಸ್.ಫ್ರೂಟ್ಸ್ ಅಂಡ್ ವೆಜಿಟೆಬಲ್ಸ್ ಮತ್ತು ಎಂ.ಎಸ್. ಗೂಡ್ಸ್ ಟ್ರಾನ್ಸ್‌‌ಪೋರ್ಟ್‌ ಮಾಲಕರಾಗಿದ್ದಾರೆ. ಫೆ.31ರಂದು ಎಂದಿನಂತೆ ರಾತ್ರಿ 8 ಗಂಟೆಗೆ ದಿನದ ವ್ಯಾಪಾರ ವಹಿವಾಟು ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದರು.

ಕಂಚಿನಡ್ಕ ರುದ್ರಭೂಮಿಗೆ ಹೋಗುವ ರಸ್ತೆಯಲ್ಲಿ ಎರಡು ಕಾರು ಮತ್ತು ಎರಡು ರಿಕ್ಷಾಗಳಲ್ಲಿ ಬಂದ ದುಷ್ಕರ್ಮಿಗಳು ವಾಹನವನ್ನು ಅಡ್ಡಗಟ್ಟಿ, ಪಿಸ್ತೂಲನ್ನು ಮನ್ಸೂರ್ ತಲೆಗೆ ಗುರಿಯಾಗಿಸಿ, ಹರಿತವಾದ ಲಾಂಗನ್ನು ಹಿಡಿದು ಬೆದರಿಸಿದ್ದಾರೆ.

ಇದಾದ ನಂತರ ತಲವಾರು, ಚಾಕು, ಕಬ್ಬಿಣದ ರಾಡು, ದೊಣ್ಣೆಯಿಂದ ಮನ್ಸೂರ್‌ ಕಾಲು, ಹೊಟ್ಟೆ, ಎದೆಯ ಭಾಗಕ್ಕೆ ಹಲ್ಲೆ ನಡೆಸಿ.

ಮನ್ಸೂರ್‌ ಬಳಿ ಇದ್ದ ಮೂರು ಲಕ್ಷ ರೂಪಾಯಿ ಹಣ ಹಾಗೂ 8 ಗ್ರಾಂನ ಚಿನ್ನವನ್ನು ದರೋಡೆ ಮಾಡಿದ್ದಾರೆ.

ನಂತರ ಮನ್ಸೂರ್‌ನನ್ನು ಕಿಡ್ನಾಪ್‌ ಮಾಡಲು ಆರೋಪಿಗಳು ಕಾರಿನ ಒಳಗೆ ಹಾಕಿಕೊಂಡಿದ್ದಾರೆ. ಈ ಮಧ್ಯೆ ಆರೋಪಿಗಳು ಒಬ್ಬರಿಗೊಬ್ಬರು ಹಣ ಹಂಚಿಕೊಳ್ಳುತ್ತಿರುವಾಗ,

ಮನ್ಸೂರ್‌ ಗಾಡಿಯಿಂದ ಇಳಿದು ತಪ್ಪಿಸಿಕೊಂಡು ಓಡಿಹೋಗಿ, ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಅಪರಿಚಿತರಿಂದ ಕಾಲಿವುಡ್‌ ‘ಆ್ಯಕ್ಷನ್‌ ಸ್ಟಾರ್’ ವಿಶಾಲ್ ಮನೆಗೆ ಕಲ್ಲು ತೂರಾಟ

ಚೆನ್ನೈ: ಕಾಲಿವುಡ್‌ನ 'ಆ್ಯಕ್ಷನ್‌ ಸ್ಟಾರ್' ನಟ ವಿಶಾಲ್ ಅವರ ಮನೆಗೆ ಯಾರೋ ಅಪರಿಚಿತ ಗನ್‌ಮ್ಯಾನ್‌ಗಳು ನುಗ್ಗಿ ಆಕ್ರಮಣ ಮಾಡಿ ಕಲ್ಲುತೂರಾಟ ಮಾಡಿದ್ದಾರೆ. ಅದರ ಪರಿಣಾಮವಾಗಿ ಮನೆಯ ಕಿಟಕಿ ಗಾಜುಗಳು ಒಡೆದಿರುವ ಘಟನೆ ಚೆನ್ನೈಯಲ್ಲಿ...

ಬ್ರೇಕಿಂಗ್ ನ್ಯೂಸ್: PFI ಸಂಘಟನೆ ಇನ್ನು 5ವರ್ಷ ಬ್ಯಾನ್-ಕೇಂದ್ರದ ಮಹತ್ವದ ಆದೇಶ

ನವದೆಹಲಿ: ಇಂದಿನಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ಪಿಎಫ್‌ಐ ಸಂಘಟನೆ ಮತ್ತು ಅದರ ಅಂಗಸಂಸ್ಥೆಗಳನ್ನು ಮುಂದಿನ 5 ವರ್ಷಗಳ ಕಾಲ ನಿಷೇಧ ಮಾಡಿ ಮಹತ್ವದ ಆದೇಶ ಹೊರಡಿಸಿದೆ.ಈ ಸಂಘಟನೆಗಳು ಕಾನೂನುಬಾಹಿರ ಎಂದು ತಕ್ಷಣದಿಂದಲೇ...

ಮಂಗಳೂರು: ಗೆಳೆಯನ ಸಾವಿಗೆ ಕಾರಣವಾದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ-ಯುವಕನ ಏಕಾಂಗಿ ಪ್ರತಿಭಟನೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದೊಳಗಿನ ರಸ್ತೆಗಳಲ್ಲಿರುವ ಯಮಗಾತ್ರದ ಗುಂಡಿಗಳ ಅವ್ಯವಸ್ಥೆಯಿಂದ ತನ್ನ ಗೆಳೆಯ ಮೃತಪಟ್ಟಿದ್ದು, ಈ ಹಿನ್ನಲೆ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ಏಕಾಂಗಿ ಪ್ರತಿಭಟನೆ...