Connect with us

    FILM

    ಟಿವಿ ನೋಡುತ್ತಿದ್ದಾಗ ಹೃದಯಾ*ಘಾತ.. ಭಾರತದ ಖ್ಯಾತ ಸಿಂಗರ್​ ಉಷಾ ಉತ್ತುಪ್ ಪತಿ ನಿ*ಧನ

    Published

    on

    ಭಾರತದ ಖ್ಯಾತ ಸಿಂಗರ್​ ಉಷಾ ಉತ್ತುಪ್ ಅವರ ಪತಿ ಜಾನಿ ಚಾಕೊ ಉತ್ತುಪ್ ನಿ*ಧನರಾಗಿದ್ದಾರೆ. ಸೋಮವಾರದಂದು ಕೋಲ್ಕತ್ತಾದ ಮನೆಯಲ್ಲಿಯೇ ಇಹ*ಲೋಕ ತ್ಯಜಿಸಿದ್ದಾರೆ.

    78 ವರ್ಷ ವಯಸ್ಸಿನ ಜಾನಿ ತಮ್ಮ ನಿವಾಸದಲ್ಲಿ ಟಿವಿ ನೋಡುವಾಗ ಹೃದಯಾಘಾ*ತ ಸಂಭವಿಸಿದೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೊನೆಗೆ ಆಸ್ಪತ್ರೆಯಲ್ಲಿ ಮೃ*ತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

    ಜಾನಿ ಚಾಕೊ ಉತ್ತುಪ್ ಅವರು ಉಷಾರವರ 2ನೇ ಪತಿ. ಅದಕ್ಕೂ ಮುನ್ನ ರಾಮು ಅವರನ್ನು ಉಷಾ ಮದುವೆಯಾಗಿದ್ದರು. 70ರ ದಶಕದಲ್ಲಿ ಟೀ ಪ್ಲಾನ್ಟೇಶನ್​ನಲ್ಲಿ ಜಾನಿ ಚಾಕೊ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರನ್ನು ​ಉಷಾ ಉತ್ತುಪ್​ ಭೇಟಿಯಾದರು. ಬಳಿಕ ಈ ಜೋಡಿ ವಿವಾಹವಾದರು.

    ಉಷಾ ಉತ್ತುಪ್​​ರವರಿಗೆ ಸನ್ನಿ ಎಂಬ ಮಗ ಮತ್ತು ಅಂಜಲಿ ಎಂಬ ಮಗಳಿದ್ದಾರೆ. ಇಂದು ಜಾನಿ ಚಾಕೊ ಉತ್ತುಪ್ ಅಂತ್ಯ*ಕ್ರಿಯೆ ನಡೆಯಲಿದೆ.

    Click to comment

    Leave a Reply

    Your email address will not be published. Required fields are marked *

    FILM

    ಖ್ಯಾತ ನಟ, ನಿರ್ಮಾಪಕನ ಪುತ್ರಿ ಕ್ಯಾನ್ಸರ್‌ಗೆ ಬ*ಲಿ

    Published

    on

    ಮಂಗಳೂರು/ಮುಂಬೈ : ಖ್ಯಾತ ನಿರ್ಮಾಪಕ ಕೃಷ್ಣ ಕುಮಾರ್ ಆಘಾ*ತಕ್ಕೊಳಗಾಗಿದ್ದಾರೆ. ಅವರ 20 ವರ್ಷದ ಮಗಳು ತಿಶಾ ಕುಮಾರ್ ಇಹಲೋಕ ತ್ಯಜಿಸಿದ್ದಾಳೆ. ಹೌದು, ಚಿಕ್ಕ ವಯಸ್ಸಿನಲ್ಲೇ ತಿಶಾ ನಿ*ಧನರಾಗಿದ್ದಾರೆ. ಅನಿಮಲ್ ಹಿಟ್ ಆದ ಸಂಭ್ರಮದಲ್ಲಿದ್ದ ನಿರ್ಮಾಪಕ ಕೃಷ್ಣ ಕುಮಾರ್ ದುಃಖ ಅನುಭವಿಸುವಂತಾಗಿದೆ.


    ತಿಶಾ ಕ್ಯಾನ್ಸ*ರ್​ನಿಂದ ಬಳಲುತ್ತಿದ್ದರು. ಜುಲೈ 18ರಂದು ತಿಶಾ ನಿಧ*ನ ಹೊಂದಿದ್ದು, ಇಂದು (ಜುಲೈ 19) ಕುಟುಂಬ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಕೃಷ್ಣ ಕುಮಾರ್ ಅವರು ಬಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆ ಟಿ-ಸೀರಿಸ್​ನ ಭಾಗವಾಗಿದ್ದಾರೆ. ಟಿ-ಸೀರಿಸ್ ನಿರ್ಮಾಣದ ಸಿನಿಮಾಗಳಲ್ಲಿ ಇವರ ಪಾಲೂ ಇದೆ. ಈ ಹಿನ್ನೆಲೆಯಲ್ಲಿ ಟಿ-ಸೀರಿಸ್ ಕಡೆಯಿಂದ ಸುತ್ತೋಲೆ ರಿಲೀಸ್ ಮಾಡಲಾಗಿದೆ.

    ‘ಕೃಷ್ಣ ಕುಮಾರ್ ಅವರ ಮಗಳು ತಿಶಾ ಅವರು ತೀರಿಕೊಂಡಿದ್ದಾರೆ. ಅನಾರೋಗ್ಯದ ವಿರುದ್ಧ ಅವರು ಹೋರಾಡುತ್ತಿದ್ದರು. ಈ ಕಷ್ಟದ ಸಮಯದಲ್ಲಿ ಖಾಸಗಿತನವನ್ನು ಗೌರವಿಸಿ’ ಎಂದು ಕೋರಿದ್ದಾರೆ. ಕೆಲವು ಮೂಲಗಳ ಪ್ರಕಾರ, ತಿಶಾ ಅವರು ಕ್ಯಾನ್ಸರ್​ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದರಂತೆ. ಅವರು ಅಲ್ಲಿಯೇ ನಿಧ*ನ ಹೊಂದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ.

    ಇದನ್ನೂ ಓದಿ :  Watch : ಸರ್ಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟ; ಮೂಕ ಜೀವಿಗಳು ಬ*ಲಿ

    ತಿಶಾ ತಂದೆ ಕೃಷ್ಣಕುಮಾರ್ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಕೊನೆಯದಾಗಿ ಕೃಷ್ಣ ಕುಮಾರ್ ರಣಬೀರ್ ಕಪೂರ್ ಅಭಿನಯದ ಆ್ಯನಿಮಲ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೂಲ್ ಬೂಲಯ್ಯ 2, ಆಶಿಖಿ, ತಪ್ಪಡ್ ಸೇರಿದಂತೆ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

    Continue Reading

    FILM

    20 ವರ್ಷಗಳ ನಂತರ ಕೊಲೆ ಆರೋಪಿ ಅರೆಸ್ಟ್..! ಈಗ ಈ ಆರೋಪಿ ಸಿನೆಮಾ ನಿರ್ದೇಶಕ..

    Published

    on

    ಬೆಂಗಳೂರು: ಈಗಾಗಲೇ ಸ್ಯಾಂಡಲ್‌ವುಡ್‌ ನಲ್ಲಿ ದರ್ಶನ್‌ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಕನ್ನಡ ಚಿತ್ರರಂಗದ ಒಬ್ಬ ಸ್ಟಾರ್ ನಟ ಕೊಲೆ ಕೇಸ್‌ ನಲ್ಲಿ ಜೈಲು ಸೇರಿರುವುದು ಚಿತ್ರರಂಗಕ್ಕೆ ಕಪ್ಪು ಚುಕ್ಕೆಯಾಗಿಬಿಟ್ಟಿದೆ. ಇದೀಗ ಇಪ್ಪತ್ತು ವರ್ಷಗಳ ಹಿಂದೆ ಕೊಲೆಯಲ್ಲಿ ಭಾಗಿಯಾಗಿದ್ದ ಸಿನೆಮಾ ನಿರ್ದೇಶಕ ಈಗ ಪೊಲೀಸ್ ಅತಿಥಿಯಾಗಿದ್ದಾರೆ. ವಿಶೇಷ ಅಂದರೆ ಈ ಆರೋಪಿ ಈಗ ಸಿನೆಮಾ ನಿರ್ದೇಶಕರಾಗಿದ್ದಾರೆ.

    ದರ್ಶನ್‌ ಆ್ಯಂಡ್ ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಣೆ..! 14 ದಿನಗಳ ಕಾಲ ಮತ್ತೆ ಜೈಲು ವಾಸ..!

    ಅಷ್ಟಕ್ಕೂ ಏನಿದು ಘಟನೆ:
    20 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕೇಬಲ್ ದಂಧೆಯಲ್ಲಿ ಅದೆಷ್ಟೋ ಹಣವನ್ನು ಗಳಿಸುತ್ತಿದ್ದರು. ಇದೇ ಕೇಬಲ್ ದಂಧೆಯಲ್ಲಿ ನಟೋರಿಯಸ್ ರೌಡಿಯ ಕೊಲೆ ನಡೆದಿತ್ತು. ಈ ಕೊಲೆಯಲ್ಲಿ ಭಾಗಿಯಾಗಿದ್ದ ಈಗ ನಿರ್ದೇಶಕನಾಗಿರುವ ಗಜೇಂದ್ರ ಅಲಿಯಾಸ್ ಗಜ ಜೈಲು ಸೇರಿದ್ದ ಆತ ಬೇಲ್ ಮೂಲಕ ಹೊರ ಬಂದಿದ್ದ. ಆದರೆ ಕಳೆದ 20 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ಚಳ್ಳೆ ಹಣ್ಣು ತಿನ್ನಿಸುತ್ತದ್ದ ಈತ ಸಮಾಜದಲ್ಲಿ ನಾನೊಬ್ಬ ನಿರ್ದೇಶಕ ಮತ್ತು ಸಿನೆಮಾ ನಟ ಎಂಬ ಹಣೆಪಟ್ಟಿಯಲ್ಲಿ ಜೀವನ ನಡೆಸುತ್ತಿದ್ದ. ಇದೀಗ ಈತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತ ಪುಟಾಣಿ ಪವರ್ ಹಾಗೂ ರುದ್ರ ಎಂಬ ಸಿನೆಮಾವನ್ನು ನಿರ್ದೇಶನ ಮಾಡಿದ್ದಾನೆ.

    Continue Reading

    FILM

    ದರ್ಶನ್‌ ಆ್ಯಂಡ್ ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಣೆ..! 14 ದಿನಗಳ ಕಾಲ ಮತ್ತೆ ಜೈಲು ವಾಸ..!

    Published

    on

    ಬೆಂಗಳೂರು/ಮಂಗಳೂರು: ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು 14 ದಿನಗಳ ಕಾಲ ವಿಸ್ತರಣೆ ಮಾಡಿ ನ್ಯಾಯಾಧೀಶ ವಿಶ್ವನಾಥ ಪಿ ಗೌಡ ಜು.18ರಂದು ಆದೇಶ ಹೊರಡಿಸಿದ್ದಾರೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಡಿಯೋ ಕಾನ್ಫರೆನ್ಸ್​ ಮೂಲಕ ದರ್ಶನ್, ಪವಿತ್ರಾ ಗೌಡ ಹಾಗೂ ಇನ್ನುಳಿದ ಆರೋಪಿಗಳು ಹಾಜರಾಗಿದ್ದರು. ಎಲ್ಲರಿಗೂ 14 ದಿನಗಳ ಕಾಲ ಅಂದರೆ ಆಗಸ್ಟ್​ 1ರ ತನಕ ನ್ಯಾಯಾಂಗ ಬಂಧನ ಮುಂದುವರಿಯಲಿದೆ.

    ದರ್ಶನ್ ಗಾಗಿ ಶಪಥ ಮಾಡಿದ ಅಭಿಮಾನಿ..!! ಅದೇನು ಗೊತ್ತಾ?

    ದರ್ಶನ್‌ಗೆ ಬೇಲ್ ಕಷ್ಟ ಎಂದ ಪತ್ನಿ, ಸಹೋದರ:

    ಜೈಲಿನಲ್ಲಿರುವ ದರ್ಶನ್‌ನನ್ನು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪರವರು ಭೇಟಿ ಮಾಡಿ ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ದರ್ಶನ್‌ ಜೊತೆ ಮಾತನಾಡಿದ ಅವರು ಸದ್ಯಕ್ಕೆ ಬೇಲ್ ಸಿಗುವುದು ಕಷ್ಟಕರವಾಗಿದ್ದು, ಬೇಲ್‌ ಗಾಗಿ ಪ್ರಯತ್ನ ಪಡುತ್ತಿರುವುದಾಗಿ ಹೇಳಿದ್ದಾರೆ. ಇನ್ನು ಜೈಲಿನಲ್ಲಿರುವ ದರ್ಶನ್ ಗೆ ಸ್ವಲ್ಪ ಕಾಲ ಸಮಾಧಾನದಿಂದಿರುವಂತೆ ಹೇಳಿದ್ದಾರೆ. ಕೊಲೆ ಆರೋಪಿಗಳಾದ ದರ್ಶನ್ ತಂಡದ ಪರ ಪೊಲೀಸರು ಸಾಕ್ಷ್ಯಾಧಾರಗಳನ್ನು ಬಲಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

    Continue Reading

    LATEST NEWS

    Trending