ಅಮೇರಿಕಾ ಕೊರೋನಾ ಸಂಕಟ : ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ..!
ವಾಷಿಂಗ್ಟನ್: ವಿಶ್ವವನ್ನೇ ನುಂಗಿ ನೀರು ಕುಡಿಯುತ್ತಿರುವ ಮಾಹಾ ಮಾರಿ ಕೊರೊನಾ ವೈರಸ್ ವಿಶ್ವದ ದೊಡ್ಡಣ್ಣ ಅಮೆರಿಕಾವನ್ನು ಕಂಗೆಡಿಸಿದೆ.
ವಿಶ್ವದ ಅತ್ಯಂತ ಬಲಿಷ್ಟ ವಾದ ಈ ದೇಶದಲ್ಲಿ ಈಗಾಗಲೇ 2000 ಕ್ಕೂ ಅಧಿಕ ಕೊರೊನಾ ಪ್ರಕರಣಗಳು ಧೃಡ ಪಟ್ಟಿದ್ದು 40 ಜನರು ಈ ಮಹಾಮಾರಿಗೆ ಜೀವತೆತ್ತಿದ್ದಾರೆ.
ಸ್ವತ ಅಮೇರಿಕಾದ ಅಧ್ಯಕ್ಷ ಹಾಗೂ ಅವರ ಕುಟುಂಬ ಕೊರೋನಾ ವೈರಸ್ ಸೋಂಕಿನ ಭೀತಿ ಎದುರಿಸುತ್ತಿದೆ.
ಈ ಹಿನ್ನಲೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರಾದ್ಯಂತ ತುರ್ತು ಸ್ಥಿತಿಯನ್ನು ಘೋಷನೆ ಮಾಡಿದ್ದಾರೆ.
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಮೆರಿಕಾದ ಹಲವಾರು ರಾಜ್ಯಗಳು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಇದರಲ್ಲಿ ಬೃಹತ್ ಸಭೆ ಸಮಾರಂಭಗಳಿಗೆ ನಿಷೇಧ, ಕ್ರೀಡಾಕೂಟಗಳ ರದ್ದು ಮತ್ತು ಶಾಲೆಗಳಿಗೆ ರಜೆ ಘೋಷಣೆ ಸೇರಿದೆ.
ಈ ಘೋಷಣೆಯ ಮೂಲಕ ಅಮೆರಿಕಾ ಸರಕಾರಕ್ಕೆ ಈ ಮಾರಕ ವೈರಸ್ ವಿರುದ್ಧ ಸಮರ ಸಾರಲು 50 ಬಿಲಿಯನ್ ಡಾಲರ್ ನಷ್ಟು ಪರಿಹಾರ ಮೊತ್ತವನ್ನು ವಿನಿಯೋಗಿಸಲು ಸಾಧ್ಯವಾಗಲಿದೆ.
ಟ್ರಂಪ್ ಸರಕಾರದ ಈ ಕ್ರಮದಿಂದಾಗಿ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿರುವ ತೊಡಕು ಮತ್ತು ಮಿತಿಗಳು ನಿವಾರಣೆಯಾಗಲಿವೆ ಆ ಮೂಲಕ ಕೊರೊನಾ ಪ್ರಕರಣ ಪತ್ತೆ ಕಾರ್ಯಕ್ಕೆ ಅಮೆರಿಕಾದ್ಯಂತ ಇನ್ನಷ್ಟು ವೇಗ ಲಭಿಸಲಿದೆ.
ದೀಕ್ಷಿತಾ ಜ 9 ರಂದು ಕಾಲೇಜಿಗೆ ಹೋಗಿದ್ದು ಅಲ್ಲಿಂದ ಸಂಜೆ ವಾಪಸ್ಸು ಮನೆಗೆ ಬಂದಿದ್ದಾರೆ. ಬಳಿಕ ಮನೆಯ ಕೊಠಡಿಯಲ್ಲಿ ನೇ*ಣು ಬಿ*ಗಿದು ಅ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಆ*ತ್ಮಹ*ತ್ಯೆಯ ಹಿಂದಿನ ಕಾರಣ ನಿಗೂಢವಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು/ನವದೆಹಲಿ : ಮೊಸಳೆಯ ತಲೆಬುರುಡೆ ಕಳ್ಳಸಾಗಣೆಗೆ ಯತ್ನಿಸಿದ ಆರೋಪದಲ್ಲಿ ಕೆನಡಾ ಮೂಲದ ವ್ಯಕ್ತಿಯನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಟರ್ಮಿನಲ್ 3ರಲ್ಲಿ ಕೆನಡಾ ಮೂಲದ ವ್ಯಕ್ತಿ ಮಾಂಟ್ರಿಯಲ್‌ಗೆ ವಿಮಾನ ಹತ್ತಲು ಯತ್ನಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಮೊಸಳೆಯ ಮರಿಯನ್ನು ಹೋಲುವ ಸುಮಾರು 770 ಗ್ರಾಂ ತೂಕದ ಚೂಪಾದ ಹಲ್ಲುಗಳನ್ನು ಹೊಂದಿರುವ ತಲೆಬುರುಡೆ ಪತ್ತೆಯಾಗಿದೆ.
ದೆಹಲಿ ಸರ್ಕಾರದ ಅಧೀನದಲ್ಲಿರುವ ಅರಣ್ಯ ಮತ್ತು ವನ್ಯಜೀವಿ ಇಲಾಖೆಯು ನಡೆಸಿದ ಶೋಧ ಕಾರ್ಯದಲ್ಲಿ ಅದು ಮೊಸಳೆ ಮರಿಯ ತಲೆಬುರುಡೆ ಎಂಬುದಾಗಿ ದೃಢಪಟ್ಟಿದೆ. 1972ರ ವನ್ಯ ಜೀವಿ ಕಾಯ್ದೆಯಡಿಯಲ್ಲಿ ಸಂರಕ್ಷಿತ ಜಾತಿಗೆ ಸೇರಿದ ತಲೆಬುರುಡೆ ಇದಾಗಿದೆ. ಹೆಚ್ಚಿನ ವೈಜ್ಞಾನಿಕ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಬೆಂಗಳೂರು: ಸಮಾಜದ ಮುಖ್ಯ ವಾಹಿನಿಗೆ ಬರಲು ನಿರ್ಧರಿಸಿ ನಿನ್ನೆ ಮೋಸ್ಟ್ ವಾಂಟೆಡ್ 6 ಜನ ನಕ್ಸಸಲರು ಬೆಂಗಳೂರಿನ ಗೃಹಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾದರು. ಬಳಿಕ ಅವರನ್ನ ವಶಕ್ಕೆ ಪಡೆದ ಪೊಲೀಸರು ಇಂದು ಅವರನ್ನು ಬೆಂಗಳೂರಿನ ಎನ್ಐಎ ವಿಶೇಷ ಕೋರ್ಟಿಗೆ ಹಾಜರುಪಡಿಸಿದ್ದಾರೆ.
ಹೌದು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸಂಕಿರಣದ ಎನ್ಐಐ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ನಕ್ಸಲರನ್ನು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಇದೀಗ ಹಾಜರುಪಡಿಸಿದ್ದಾರೆ. ಇದಕ್ಕೂ ಮೊದಲು 6 ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಎನ್ಐಎ ವಿಶೇಷ ಕೋರ್ಟ್ ಮುಂದೆ ಇದೀಗ ಹಾಜರುಪಡಿಸಿದ್ದಾರೆ.