International news
ತೈವಾನ್ ಗೆ ಅಮೆರಿಕಾ ಸಹಾಯ; ವಾರ್ನಿಂಗ್ ಕೊಟ್ಟ ಚೀನಾ !
Published
1 day agoon
By
NEWS DESK3ಮಂಗಳೂರು: ಅಮೆರಿಕಾ ದೇಶವು ತೈವಾನ್ ಗೆ ಹೊಸ ಕಂತಿನ ಶಸ್ತ್ರಾಸ್ತ್ರ ಮಾರಾಟ ಮತ್ತು ಮಿಲಿಟರಿ ನೆರವು ನೀಡಲು ಮುಂದಾಗಿದೆ. ಆದರೆ ಅಮೆರಿಕಾದ ಈ ಕ್ರಮವನ್ನು ಖಂಡಿಸಿರುವ ಚೀನಾ ‘ಅಮೆರಿಕವು ಬೆಂಕಿಯೊಂದಿಗೆ ಸರಸವಾಡುತ್ತಿದೆ’ ಎಂದು ಎಚ್ಚರಿಕೆ ನೀಡಿದೆ.
ತೈವಾನ್ ವಿಚಾರದಲ್ಲಿ ಚೀನಾ ಮತ್ತು ಅಮೆರಿಕಾದ ನಡುವೆ ನಡೆಯುತ್ತಿರುವ ಫೈಟಿಂಗ್, ಇವತ್ತು ಅಥವಾ ನಿನ್ನೆಯದ್ದಲ್ಲ. ಚೀನಾ ಮತ್ತು ಅಮೆರಿಕಾ ನಡುವೆ ಸುಮಾರು ವರ್ಷಗಳಿಂದ ಕೂಡ ಈ ವಿಚಾರದಲ್ಲಿ ಕಿರಿಕ್ ನಡೆಯುತ್ತಾ ಬಂದಿದೆ. ಈ ವಿಚಾರದಲ್ಲಿ ಚೀನಾ ಪದೇ ಪದೇ ತನ್ನದೇ ವಾದ ಮಂಡನೆ ಮಾಡುತ್ತಾ, ತೈವಾನ್ ಕೂಡ ಚೀನಾ ಭಾಗ ಎಂದು ಹೇಳುತ್ತಿದೆ. ಆದರೆ ಈ ಮಾತು ಒಪ್ಪದ ಅಮೆರಿಕಾ ಮಾತ್ರ ತೈವಾನ್ ಗೆ ಸಹಾಯ ಮಾಡುತ್ತಿದೆ.
ಇದನ್ನೂ ಓದಿ: ಶೇಖ್ ಹಸೀನಾರನ್ನು ಹಸ್ತಾಂತರಿಸುವಂತೆ ಭಾರತಕ್ಕೆ ಬಾಂಗ್ಲಾದೇಶದಿಂದ ಪತ್ರ ರವಾನೆ !
571 ಮಿಲಿಯನ್ ಡಾಲರ್ ನೆರವು
ತೈವಾನ್ ಗೆ 571 ಮಿಲಿಯನ್ ಡಾಲರ್ ಮೊತ್ತದ ರಕ್ಷಣಾ ಸಾಧನ ಹಾಗೂ ಸೇವೆಗಳು, ತೈವಾನ್ ಯೋಧರಿಗೆ ಮಿಲಿಟರಿ ಶಿಕ್ಷಣ ಮತ್ತು ತರಬೇತಿ ಒದಗಿಸುವ ಯೋಜನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅನುಮತಿ ನೀಡಿದ್ದರು. ಜತೆಗೆ, ಪ್ರತ್ಯೇಕವಾಗಿ 295 ಮಿಲಿಯನ್ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಮಾರಾಟಕ್ಕೂ ಅಮೆರಿಕದ ರಕ್ಷಣಾ ಇಲಾಖೆ ಅನುಮೋದನೆ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಇಲಾಖೆ ‘ತೈವಾನ್ ಜಲಸಂಧಿಯ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ತರುವ ಈ ಅಪಾಯಕಾರಿ ನಡೆಯನ್ನು ಹಾಗೂ ತೈವಾನ್ ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ಅಮೆರಿಕಾ ತಕ್ಷಣ ನಿಲ್ಲಿಸಬೇಕು’ ಎಂದು ಆಗ್ರಹಿಸಿದೆ.
ಅಮೆರಿಕದ ಘೋಷಣೆಯನ್ನು ತೈವಾನ್ ಸ್ವಾಗತಿಸಿದ್ದು ‘ಇದು ತೈವಾನ್ ರಕ್ಷಣೆಗೆ ಅಮೆರಿಕದ ಬದ್ದತೆಯನ್ನು ಸೂಚಿಸುತ್ತದೆ’ ಎಂದಿದೆ.
ಅಮೆರಿಕವು, ತೈವಾನ್ ಗೆ ಮಾಡುತ್ತಿರುವ ಸಹಾಯ ಕಂಡು ಚೀನಾ ಕೂಡ ರೊಚ್ಚಿಗೆದ್ದಿದೆ. ಅದರಲ್ಲೂ ಈಗ ನೇರವಾಗಿಯೇ ಅಮೆರಿಕಾಗೆ ಚೀನಾ ವಾರ್ನಿಂಗ್ ಕೊಡುತ್ತಿದೆ. ಇದೇ ವಿಚಾರ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ.
International news
ವಿಶ್ವ ಪ್ರಸಿದ್ದ ಪ್ಯಾರೀಸ್ ನ ಐಫೆಲ್ ಟವರ್ ನಲ್ಲಿ ಬೆಂಕಿ ಅವಘಡ; 1200 ಪ್ರವಾಸಿಗರ ಸ್ಥಳಾಂತರ
Published
45 minutes agoon
25/12/2024By
NEWS DESK3ಮಂಗಳೂರು/ಪ್ಯಾರಿಸ್: ಪ್ಯಾರಿಸ್ ನ ಐಫೆಲ್ ಟವರ್ ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಈಗಗಾಲೇ 1200 ಜನರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ. ಪ್ಯಾರಿಸ್ ನ ಐಕಾನಿಕ್ ಲ್ಯಾಂಡ್ ಮಾರ್ಕ್ ನಲ್ಲಿ ಬೆಂಕಿ ಕಾಣಿಸಿಕೊಂಡ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಬೆಂಕಿಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಸೇವೆಗಳನ್ನು ನಿಯೋಜಿಸಲಾಯಿತು.
ಫ್ರೆಂಚ್ ಅಧಿಕಾರಿಗಳ ಪ್ರಕಾರ, ಐಫೆಲ್ ಟವರ್ ನಲ್ಲಿ ಬೆಂಕಿ ಅದರ ಲಿಫ್ಟ್ ನಲ್ಲಿ ಕಾಣಿಸಿಕೊಂಡಿದೆ. ಈ ಬೆಂಕಿಯು ಮೊದಲ ಮತ್ತು ಎರಡನೇ ಮಹಡಿಯ ನಡುವಿನ ಲಿಫ್ಟ್ ಶಾಫ್ಟ್ ನಲ್ಲಿ ಕಾಣಿಸಿಕೊಂಡಿತು. ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ತುರ್ತು ಸಹಾಯಕರು, ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ನಂತರ ಬೆಂಕಿ ತೀವ್ರವಾಗಿ ಹರಡಿದ್ದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಯಿತು. ಸುಮಾರು 1200 ಜನರನ್ನು ಟವರ್ ನಿಂದ ಹೊರಕ್ಕೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪಾಕ್ ನಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಗರ್ಭಿಣಿ !
ಅವಘಡದಲ್ಲಿ ಸಿಲುಕಿ ಹಾಕಿಕೊಂಡ ಎಲ್ಲರನ್ನೂ ರಕ್ಷಣೆ ಮಾಡಲಾಗಿದೆ, ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆ ಬಳಿಕ ಐಫೆಲ್ ಟವರ್ ಗೋಪುರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಐಫೆಲ್ ಟವರ್ ವಿಶ್ವದ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾಗಿದೆ. ಅಂಕಿಅಂಶಗಳ ಪ್ರಕಾರ ಪ್ರತಿದಿನ 15,000 ಮತ್ತು 25,000 ಸಂದರ್ಶಕರು ಇಲ್ಲಿಗೆ ಭೇಟಿ ನೀಡುತ್ತಾರೆ.
ಸ್ಮಾರಕಕ್ಕೆ ಬೆಂಕಿ ಬಿದ್ದಿರುವುದು ಇದು ಮೊದಲನೇ ಸಲ ಅಲ್ಲ. ಜನವರಿ 1956 ರಲ್ಲಿ, ಗೋಪುರದ ದೂರದರ್ಶನ ಪ್ರಸರಣ ಕೊಠಡಿಯಲ್ಲಿ ಬೆಂಕಿ ಸಂಭವಿಸಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿತ್ತು.
International news
ಶೇಖ್ ಹಸೀನಾರನ್ನು ಹಸ್ತಾಂತರಿಸುವಂತೆ ಭಾರತಕ್ಕೆ ಬಾಂಗ್ಲಾದೇಶದಿಂದ ಪತ್ರ ರವಾನೆ !
Published
1 day agoon
24/12/2024By
NEWS DESK3ಮಂಗಳೂರು/ಢಾಕಾ: ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಮರಳಿ ಢಾಕಾಗೆ ಕಳುಹಿಸಿಕೊಡಬೇಕು ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಸೋಮವಾರ ಭಾರತಕ್ಕೆ ರಾಜತಾಂತ್ರಿಕ ಮನವಿ ಸಲ್ಲಿಸಿದೆ.
k
ಈ ವರ್ಷದ ಆರಂಭದಲ್ಲಿ ಆಗಸ್ಟ್ ನಲ್ಲಿ ಅಧಿಕಾರದಿಂದ ಕೆಳಗಿಳಿದ ಶೇಖ್ ಹಸೀನಾ ಬಾಂಗ್ಲಾದೇಶದಿಂದ ಪರಾರಿಯಾಗಿ ಭಾರತದಲ್ಲಿ ಆಶ್ರಯ ಪಡೆದಿದ್ದರು. ಬಾಂಗ್ಲಾದಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ನಂತರ ಶೇಖ್ ಹಸೀನಾ ಬಾಂಗ್ಲಾದೇಶವನ್ನು ತೊರೆಯಬೇಕಾಯಿತು.
ಇದನ್ನೂ ಓದಿ: ಪೂಜಾ ಖೇಡ್ಕರ್ ಜಾಮೀನು ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್ !
‘ನರಮೇಧ ಹಾಗೂ ಮಾನವೀಯತೆ ಮೇಲೆ ಎಸಗಿದ ಅಪರಾಧ’ದ ಕಾರಣ ಢಾಕಾ ಮೂಲದ ಅಂತರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ICT) ಶೇಖ್ ಹಸೀನಾ ಮತ್ತು ಹಲವಾರು ಮಾಜಿ ಕ್ಯಾಬಿನೆಟ್ ಮಂತ್ರಿಗಳು, ಸಲಹೆಗಾರರು, ಮಿಲಿಟರಿ ಮತ್ತು ನಾಗರಿಕ ಅಧಿಕಾರಿಗಳಿಗೆ ಬಂಧನ ವಾರೆಂಟ್ ಗಳನ್ನು ಹೊರಡಿಸಿದ್ದಾರೆ.
‘ಭಾರತ ಸರ್ಕಾರಕ್ಕೆ ನಾವು ಅಧಿಕೃತ ರಾಜತಾಂತ್ರಿಕ ಸಂದೇಶವನ್ನು ಕಳುಹಿಸಿದ್ದು, ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸಲಿಕ್ಕಾಗಿ ಶೇಖ್ ಹಸೀನಾ ಅವರನ್ನು ವಾಪಸ್ ಕಳುಹಿಸಬೇಕು ಎಂದು ಕೇಳಿದ್ದೇವೆ’ ಎಂದು ವಿದೇಶಾಂಗ ಇಲಾಖೆಯ ಸಲಹೆಗಾರ ತೌಹೀದ್ ಹೊಸೈನ್ ತಿಳಿಸಿದರು.
‘ಪದಚ್ಯುತಗೊಂಡ ಬಾಂಗ್ಲಾದೇಶದ ಪ್ರಧಾನಿಯನ್ನು ವಾಪಸ್ ಕರೆಸುವ ಸಂಬಂಧ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದೇವೆ’ ಎಂದು ಗೃಹ ಸಚಿವಾಲಯದ ಸಲಹೆಗಾರ ಜಹಾಂಗೀರ್ ಆಲಂ ತಿಳಿಸಿದ್ದರು.
ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಈಗಾಗಲೇ ‘ಹಸ್ತಾಂತರ ಒಪ್ಪಂದ’ವಿದ್ದು, ಅದರ ಅನ್ವಯವೇ ಹಸೀನಾ ಅವರನ್ನು ಮರಳಿ ದೇಶಕ್ಕೆ ಕರೆಸಿಕೊಳ್ಳಲಾಗುವುದು ಎಂದು ಜಹಾಂಗೀರ್ ಆಲಂ ಸ್ಪಷ್ಟಪಡಿಸಿದ್ದರು.
International news
ಖಾಸಗಿ ವಿಮಾನ ಪತನ; 10 ಜನ ಸಾವು, ಹಲವರಿಗೆ ಗಾಯ !
Published
2 days agoon
23/12/2024By
NEWS DESK3ಮಂಗಳೂರು/ಬ್ರೆಜಿಲ್: ಬ್ರೆಜಿಲ್‌ನ ಪ್ರವಾಸಿ ತಾಣವಾದ ಗ್ರಾಮಡೊದಲ್ಲಿ ವಿಮಾನ ಸ್ಫೋಟಗೊಂಡು ಸುಮಾರು 10 ಜನರು ಜೀವವನ್ನು ಬಿಟ್ಟಿದ್ದು. 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದಕ್ಷಿಣ ಬ್ರೆಜಿಲ್‌ನ ಪ್ರವಾಸಿ ನಗರವಾದ ಗ್ರಾಮಡೊದ ಮಧ್ಯಭಾಗಕ್ಕೆ 10 ಜನರನ್ನ ಹೊತ್ತು ಮಿನಿ ವಿಮಾನವೊಂದು ಸಾಗುತ್ತಿತ್ತು. ಆದ್ರೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಇದ್ದಕ್ಕಿದಂತೆ ವಿಮಾನವು ಅಂಗಡಿಗಳು ಮತ್ತು ಮನೆಗಳಿಗೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ.
ಗ್ರಾಮಾಡೊದ ಬಹುಪಾಲು ಅಪಾರ್ಟ್ ಮೆಂಟ್ ನ ಅಕ್ಕಪಕ್ಕ ಮೊಬೈಲ್ ಫೋನ್ ಅಂಗಡಿಗೆ ಅಪ್ಪಳಿಸುವ ಮೊದಲು ವಿಮಾನವು ಮನೆಯ ಚಿಮಣಿಗೆ ಮತ್ತು ನಂತರ ಕಟ್ಟಡದ ಎರಡನೇ ಮಹಡಿಗೆ ಅಪ್ಪಳಿಸಿತು ಎಂದು ಬ್ರೆಜಿಲಿಯನ್ ಸಿವಿಲ್ ಡಿಫೆನ್ಸ್ ಏಜೆನ್ಸಿ ತಿಳಿಸಿದೆ.
ಇದನ್ನೂ ಓದಿ: ಫ್ಲೋರಿಡಾ ಕ್ರಿಸ್ಮಸ್ ಶೋನಲ್ಲಿ ಜನಸಂದಣಿಗೆ ಡ್ರೋನ್ ಡಿಕ್ಕಿ: ಹಲವರಿಗೆ ಗಾಯ
ವಿಮಾನದಲ್ಲಿದ್ದವರೆಲ್ಲಾ ಒಂದೇ ಕುಟುಂಬದ ಸದಸ್ಯರು
ಇನ್ನು ಸ್ಥಳೀಯ ಮಾಧ್ಯಮಗಳು ನೀಡಿದ ವರದಿ ಪ್ರಕಾರ ವಿಮಾನದಲ್ಲಿದ್ದ ಎಲ್ಲರೂ ಒಂದೇ ಕುಟುಂಬದವರಾಗಿದ್ದರು ಎಂದು ತಿಳಿದು ಬಂದಿದೆ. ಸಾವೊ ಪೈಲೋ ರಾಜ್ಯದಿಂದ ರಿಯೋ ಗ್ರಾಂಡೆ ಡು ಸೊಲ್ಗೆ ಪ್ರಯಾಣ ಬೆಳೆಸಿದ್ದರು ಸೆರಾ ಎಂಬ ಗುಡ್ಡುಗಾಡು ಪ್ರದೇಶದಲ್ಲಿ ಈ ಗ್ರಾಮಾಡೊ ಎಂಬ ಪ್ರವಾಸಿ ತಾಣ ಬರುತ್ತದೆ. ಈ ಪ್ರದೇಶವನ್ನು ತಲುಪಿದಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು. ವಸತಿ ಕಟ್ಟಡ ಹಾಗೂ ಮೊಬೈಲ್ ಶಾಪ್ಗೆ ಅಪ್ಪಳಿಸಿದ ವಿಮಾನ ಸ್ಫೋಟಗೊಂಡಿದೆ.
ಗ್ರಾಮಡೊದ ವಿಶೇಷತೆ
ಗ್ರಾಮಡೊ ಸೆರ್ರಾ ಗೌಚಾ ಪರ್ವತಗಳಲ್ಲಿದೆ. ಇದು ತಂಪಾದ ಹವಾಮಾನ, ಹೈಕಿಂಗ್ ತಾಣಗಳನ್ನು ಆನಂದಿಸುವ ಬ್ರೆಜಿಲಿಯನ್ ಪ್ರವಾಸಿಗರಿಗೆ ಇಷ್ಟವಾದ ಜಾಗವಾಗಿದೆ. ಈ ಪಟ್ಟಣವು 19ನೇ ಶತಮಾನದಲ್ಲಿ ಹೆಚ್ಚಿನ ಸಂಖ್ಯೆಯ ಜರ್ಮನ್ ಮತ್ತು ಇಟಾಲಿಯನ್ ವಲಸಿಗರಿಂದ ನೆಲೆಸಲ್ಪಟ್ಟಿತು. ಇದು ಕ್ರಿಸ್ಮಸ್ ರಜಾದಿನಗಳಿಗೆ ಜನಪ್ರಿಯ ಸ್ಥಳವಾಗಿದೆ.
LATEST NEWS
ಗ್ಯಾಸ್ ಸ್ಟವ್ ಈ ಬಣ್ಣದಲ್ಲಿ ಉರಿದರೆ ಕೂಡಲೇ ಎಚ್ಚೆತ್ತುಕೊಳ್ಳಿ
ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಟೀಂ ಇಂಡಿಯಾ ಕ್ರಿಕೆಟಿಗ ?
ಕಡಬ : ಮೇಯುತ್ತಿದ್ದ ದನದ ಕಾಲು ಕ*ಡಿದ ಪಾ*ಪಿ
ಬಿಪಿ, ಮಧುಮೇಹ ಮಾತ್ರೆಗಳ ಬೆಲೆ ಕಡಿತಗೊಳಿಸಿದ ಸರ್ಕಾರ !
ಮಲದ ಗುಂಡಿಗೆ ಇಳಿದ ಕಾರ್ಮಿಕ ಉಸಿರುಗಟ್ಟಿ ಸಾವು.!
ಸೈಬರ್ ಕ್ರೈಂ ಕಾರ್ಯಾಚರಣೆ; ಕೇರಳದ ಆರೋಪಿಗಳಿಬ್ಬರು ಅರೆಸ್ಟ್
Trending
- FILM22 hours ago
ಆ ಒಂದು ದೃಶ್ಯದಿಂದ ಪುಷ್ಪ 2 ಚಿತ್ರಕ್ಕೆ ಮತ್ತೆ ಸಂಕಷ್ಟ!
- FILM22 hours ago
ಸಂಭಾವನೆಯಲ್ಲಿ ದಾಖಲೆ ಬರೆದ ಯಶ್ !
- bangalore22 hours ago
ಡಿಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಚಿನ್ನ ಖರೀದಿಸಿ ವಂಚನೆ; ನಟ ಧಮೇಂದ್ರ ವಿರುದ್ದ ಎಫ್ ಐ ಆರ್ ದಾಖಲು !
- LATEST NEWS7 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್