ಮಂಗಳೂರು: ಉಡುಪಿಯ ಒಂದು ಕಾಲೇಜಿನಿಂದ ಪ್ರಾರಂಭವಾಗಿ ರಾಜ್ಯ, ದೇಶಾದ್ಯಂತ ಹಿಜಾಬ್-ಕೇಸರಿ ಗಲಾಟೆ ನಡೆಯುತ್ತಿದೆ.
ಆದರೆ ಪಕ್ಕದಲ್ಲೇ ಇರುವ ಸ್ಪೋಟಕ ತುಂಬಿರುವ ಗೋದಾಮಿನಂತಿರುವ ಹಾಗೂ ದೇಶದಲ್ಲೇ ಕೋಮುಸೂಕ್ಷ್ಮ ಎಂದೇ ಕುಖ್ಯಾತಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ದು ಮಾಡದಿರುವುದು ತುಂಬಾ ಜನರಿಗೆ ಆಶ್ಚರ್ಯವಾಗಿರಿಸಿದೆ.
ಇದೆಲ್ಲದರ ಮಧ್ಯೆ ಮೃತ ಹೊಂದಿದ ಮುಸ್ಲಿಂ ವ್ಯಕ್ತಿಯನ್ನು ದಫನಕ್ಕೆ ಕೊಂಡೊಯ್ಯುತ್ತಿದ್ದಾಗ ಓಕುಳಿ ನೃತ್ಯದಲ್ಲಿದ್ದ ಹಿಂದೂ ಬಾಂಧವರು ದಾರಿ ಬಿಟ್ಟು ಗೌರವ ಸೂಚಿಸಿರುವುದು ಇನ್ನೂ ಜಿಲ್ಲೆಯಲ್ಲಿ ಸಾಮರಸ್ಯ ಇದೆ ಎಂಬುವುದನ್ನು ಸಾಬೀತುಪಡಿಸಿದ್ದಾರೆ.
ಉಪ್ಪಿನಂಗಡಿ ಹಿರಿಯ ವರ್ತಕ ಹಾಗೂ ಸಾಮಾಜಿಕ ಕಾರ್ಯಕರ್ತ ಜ.ಹಸನಬ್ಬ ಹಾಜಿ ಎಂಬುವವರು ಫೆ.9ರಂದು ನಿಧನ ಹೊಂದಿದ್ದರು.
ನಿನ್ನೆ ಅವರ ದಫನ ಕಾರ್ಯ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯ ಮಾಲಿಕ್ ದಿನಾರ್ ಜುಮಾ ಮಸೀದಿಗೆ ಮೃತದೇಹ ಕೊಂಡೊಯ್ಯುತ್ತಿದ್ದರು.
ಇದೇ ವೇಳೆ ಅದೇ ರಸ್ತೆಯಲ್ಲಿರುವ ವೆಂಕಟ್ರಮಣ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಸಂಭ್ರಮದ ಪ್ರಯುಕ್ತ ಭಕ್ತರು ಬ್ಯಾಂಡ್, ವಾದ್ಯ ಓಲಗೊಂದಿಗೆ ಬಣ್ಣದ ಓಕೊಳಿಯನ್ನು ಎರಚಿ ಕುಣಿದು ಕುಪ್ಪಳಿಸುತ್ತಿದ್ದರು.
ಅಂತಿಮ ಯಾತ್ರೆ ಬರುತ್ತಿದ್ದಂತೆ ಚೆಂಡೆ, ಬ್ಯಾಂಡ್, ವಾದ್ಯ ಸದ್ದು ಒಮ್ಮೆಲೆ ನಿಂತು ನಲಿಯುತ್ತಿದ್ದವರು ಬದಿಗೆ ಸರಿದು ಮೌನವಾಗಿ ಎದೆ ಮೇಲೆ ಕೈ ಇಟ್ಟು ಮೈನಾ ಕಾಕನಿಗೆ ಗೌರವ ಸಲ್ಲಿಸಿದರು.
ಈ ಮೂಲಕ ಕೋಮುಸೂಕ್ಷ್ಮ ಹಣೆಪಟ್ಟಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯ ಇನ್ನು ಕೂಡ ಜೀವಂತ ಇದೆ ಎಂಬುವುದನ್ನು ಸಾಬೀತು ಪಡಿಸಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿದ್ದು ಹಲವು ಹಿಂದೂ-ಮುಸ್ಲಿಂ ಬಾಂಧವರು ಹಂಚಿ ಭಾವಕ್ಯತೆಯ ಸಂದೇಶ ನೀಡುತ್ತಿದ್ದಾರೆ.
ಇತ್ತೀಚೆಗೆ ಉಪ್ಪಿನಂಗಡಿ ಠಾಣೆಯ ಎದುರು ಪಿಎಫ್‌ಐ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಭಜನಾ ತಂಡವೊಂದು ಬಂದಾಗ ಪ್ರತಿಭನಕಾರರು ದಾರಿ ಬಿಟ್ಟು ಸೌಹಾರ್ದತೆಯನ್ನು ಮೆರೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಮಂಗಳೂರು : ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಜನವರಿ 10 ರಂದು ಏಳನೇ ವರ್ಷದ ಏಕಾದಶಿಯನ್ನು ಅದ್ಧೂರಿಯಿಂದ ಆಚರಿಸಲಾಗುವುದು ಎಂದು ದೇವಳದ ಮ್ಯಾನೇಜಿಂಗ್ ಟ್ರಸ್ಟಿ ಪ್ರವೀಣ್ ನಾಗ್ವೇಕರ್ ಬೋಳಾರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಇಲ್ಲಿ ನಡೆಯುವ ಏಕಾದಶಿ ಕಾರ್ಯಕ್ರಮ ದೇವರ ಅಪ್ಪಣೆಯಂತೆ ನಡೆಯುತ್ತಿದ್ದು, ಪ್ರತೀ ಬಾರಿಯಂತೆ ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲಾಗುವುದು. ಅಂದು ಲೋಕ ಕಲ್ಯಾಣಕ್ಕಾಗಿ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಾಯಂಕಾಲ 4 ಗಂಟೆಗೆ ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಉಸ್ತುವಾರಿ ಗಣೇಶ್ ನಾಗ್ವೇಕರ್ ಬೋಳಾರ್ ಮಾತನಾಡಿ, ಅಂದು ಬೆಳಗ್ಗೆ 7 ರಿಂದ 8ರ ವರೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 1 ರಿಂದ 3ರ ವರೆಗೆ ಭಜನಾ ಕಾರ್ಯಕ್ರಮ, ರಾತ್ರಿ 9ಕ್ಕೆ ದೀಪಾರಾಧನೆ ಮಹಾಪೂಜೆ ಬಳಿಕ 10 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಹೇಳಿದರು.
ಮಂಗಳೂರು: ನಗರದಲ್ಲಿ ಕರ್ನಾಟಕದ ಮೊದಲ ಸಿ ಬ್ಯಾಂಡ್ ಹವಾಮಾನ ರಾಡಾರ್(DWR) ಅಳವಡಿಕೆ ಕಾರ್ಯ ಕೆಲವೇ ದಿನಗಳಲ್ಲಿ ಸಂಪೂರ್ಣಗೊಳ್ಳಲಿದೆ. ತಾಂತ್ರಿಕ ತೊಂದರೆಗಳಿಂದ ಸ್ವಲ್ಪ ವಿಳಂಬವಾದರೂ ಜನವರಿ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರದ ಮುಖ್ಯಸ್ಥ ಎನ್ ಪುವಿಯರಸನ್ ತಿಳಿಸಿದ್ದಾರೆ.
ಇಲಾಖೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ TMD ಬೆಂಗಳೂರು ಶನಿವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಪುವಿಯರಸನ್ ಅವರು, ಆರಂಭದಲ್ಲಿ ಜನವರಿ 15 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದ್ದ ರಾಡಾರ್ ಈಗ ಈ ತಿಂಗಳ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲು ಪ್ರಾರಂಭಿಸುವ ಭರವಸೆ ಇದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದಲ್ಲಿ (KSNDMC) ಆಯೋಜಿಸಲಾದ ಕಾರ್ಯಾಗಾರವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಕೃಷಿ ಹವಾಮಾನ ವಿಭಾಗದ ಕೊಡುಗೆಗಳೊಂದಿಗೆ ಹಲವಾರು ಟೆಕ್ನಿಕಲ್ ಸೆಷನ್ಸ್ ಗಳನ್ನು ಒಳಗೊಂಡಿತ್ತು.
ಕಾರ್ಯಾಗಾರದಲ್ಲಿ ಬೆಂಗಳೂರಿನಲ್ಲಿ S-ಬ್ಯಾಂಡ್ DWR ಅನ್ನು ಸ್ಥಾಪಿಸುವಲ್ಲಿ ಐಎಂಡಿ ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಪುವಿಯರಸನ್ ಚರ್ಚಿಸಿದರು. ಯೋಜನೆಯು ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದೆ. ಏಕೆಂದರೆ ಐಎಂಡಿಗೆ ಟವರ್ ಮತ್ತು ಯುಟಿಲಿಟಿ ಕೋಣೆಗೆ 30×30 ಮೀಟರ್ ಪ್ಲಾಟ್ ಅಗತ್ಯವಿದೆ ಎಂದು ವಿವರಿಸಿದರು.
ಕದ್ರಿ ಬಳಿ ಸ್ಥಾಪಿಸಲಾಗುತ್ತಿರುವ ಮಂಗಳೂರು ರಾಡಾರ್ 250-300 ಕಿಮೀ ವ್ಯಾಪ್ತಿಯನ್ನು ಒಳಗೊಂಡಿದೆ. ಆಗುಂಬೆ, ಹುಲಿಕಲ್, ತಲಕಾವೇರಿ, ಕೆರೆಕಟ್ಟೆ ಮತ್ತು ಭಾಗಮಂಡಲ ಸೇರಿದಂತೆ ಮಾನ್ಸೂನ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವ ಕರ್ನಾಟಕದ ಪ್ರದೇಶಗಳಿಗೆ ವರ್ಧಿತ ಹವಾಮಾನ ಮುನ್ಸೂಚನೆಯನ್ನು ಒದಗಿಸುತ್ತದೆ. ಪುವಿಯರಸನ್ ಅವರು ಧಾರವಾಡದಲ್ಲಿ X-ಬ್ಯಾಂಡ್ DWR ಯೋಜನೆಗಳನ್ನು ಮತ್ತು ಹೊನ್ನಾವರದಲ್ಲಿ S-ಬ್ಯಾಂಡ್ ರಾಡಾರ್‌ಗಳು ಮತ್ತು ಬಳ್ಳಾರಿಯಲ್ಲಿ C-ಬ್ಯಾಂಡ್ ರಾಡಾರ್‌ಗಳ ಪ್ರಸ್ತಾಪವನ್ನು ಪ್ರಸ್ತಾಪಿಸಿದರು.
ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಯಾವುದೇ ಡಾಪ್ಲರ್ ರಾಡಾರ್ ಇರುವುದಿಲ್ಲ. ಈ ಹಿನ್ನೆಲೆ ಕರ್ನಾಟಕವು ನಿಖರ ಹವಾಮಾನ ಮುನ್ಸೂಚನೆಗಾಗಿ ಗೋವಾ, ಹೈದರಾಬಾದ್, ಚೆನ್ನೈಯ ರಾಡಾರ್‌ಗಳನ್ನು ಅವಲಂಬಿಸಿದೆ.
ಕಾರ್ಯಾಗಾರದಲ್ಲಿ KSNDMC ನಿರ್ದೇಶಕ ಭೋಯಾರ್ ಹರ್ಷಲ್ ನಾರಾಯಣರಾವ್ ಅವರು ಕರ್ನಾಟಕದ ನೈಸರ್ಗಿಕ ವಿಕೋಪಗಳ ದುರ್ಬಲತೆಯನ್ನು ಚರ್ಚಿಸಿದರು. ರಾಜ್ಯದಲ್ಲಿ ಶೇ.80ರಷ್ಟು ಬರಪೀಡಿತವಾಗಿದ್ದು, ಕಳೆದ 23 ವರ್ಷಗಳಲ್ಲಿ 16 ವರ್ಷ ಬರಗಾಲಕ್ಕೆ ತುತ್ತಾಗಿದೆ. ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಕೊಡಗಿನಂತಹ ಜಿಲ್ಲೆಗಳಲ್ಲಿ ಭೂಕುಸಿತದಿಂದ ವ್ಯಾಪಕ ಹಾನಿ ಉಂಟಾಗಿದೆ. 2018 ರಿಂದ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಭೂಕುಸಿತಗಳು ಸಂಭವಿಸಿವೆ ಎಂದರು.
ಮಂಗಳೂರು : ಆಟದ ಪಿಸ್ತೂಲ್ ಎಂದು ಭಾವಿಸಿ ಟೇಬಲ್ ಮೇಲಿದ್ದ ರಿಯಲ್ ರಿವಾಲ್ವರ್ ಎತ್ತಿಕೊಂಡು ಹೊಟ್ಟೆಗೆ ಇಟ್ಟು ಟ್ರಿಗರ್ ಅದುಮಿದ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮಂಗಳೂರಿನ ಹೊರವಲಯ ವಾಮಂಜೂರು ಬಳಿ ಈ ಘಟನೆ ನಡೆದಿದೆ. ಗಾಯಾಳು ಹೆಸರು ಸಫ್ವಾನ್ ಎಂಬ ಮಾಹಿತಿ ಲಭ್ಯವಾಗಿದೆ.
ವಾಮಂಜೂರಿನ ಸೆಕೆಂಡ್ ಹ್ಯಾಂಡ್ ಬಜಾರ್‌ನಲ್ಲಿ ಜನವರಿ 6 ರಂದು ಈ ಘಟನೆ ನಡೆದಿದ್ದು, ಸೆಕೆಂಡ್ ಹ್ಯಾಂಡ್ ಐಟಂ ಖರೀದಿ ಮಾಡಲು ಈತ ಅಂಗಡಿಯೊಂದಕ್ಕೆ ಬಂದಿದ್ದ. ಭಾಸ್ಕರ್ ಎಂಬವರು ಅಂಗಡಿಯ ಟೇಬಲ್ ಮೇಲೆ ರಿವಾಲ್ವರ್ ಇರಿಸಿ ಒಳಗೆ ಹೋದ ಸಂದರ್ಭದಲ್ಲಿ ಸಫ್ವಾನ್ ರಿವಾಲ್ವಾರ್ ಕೈಗೆತ್ತಿಕೊಂಡಿದ್ದಾನೆ.
ಆಟದ ಪಿಸ್ತೂಲ್ ಇರಬೇಕು ಎಂದು ಅದನ್ನು ಕೈನಲ್ಲಿ ಹಿಡಿದು ತಮಾಷೆಗೆ ಹೊಟ್ಟೆಗೆ ಇಟ್ಟು ಟ್ರಿಗರ್ ಅದುಮಿದ್ದಾನೆ. ರಿವಾಲ್ವರ್ ನಿಂದ ಸಿಡಿದ ಗುಂ*ಡು ಆತನ ಹೊಟ್ಟೆಗೆ ನುಸುಳಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.