ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಜತ್ತೂರು ಗ್ರಾಮದ ವರಾಲು ಬೆದ್ರೋಡಿ ಎಂಬಲ್ಲಿ ಕೆಟ್ಟು ನಿಂತಿದ್ದ ಲಾರಿಯೊಂದನ್ನು ದುರಸ್ತಿ ಪಡಿಸುತ್ತಿದ್ದ ಮೂವರು ಮೆಕಾನಿಕ್ಗಳ ಮೇಲೆ ಪಿಕಪ್ವೊಂದು ಹರಿದು ಮೂವರೂ ಸಾವನವಿದ ವಾರುಣ ಘಟನೆ ನಿನ್ನೆ ಸಂಜೆ ಸಂಭವಿಸಿದೆ.
ಬೆಂಗಳೂರು ಮೂಲದ ಮಧು (35), ಅಬ್ದುಲ್ ರೆಹಮಾನ್ (25), ಅಫೈಲ್ ಯಾನೆ ಅಬಾನ್ (35) ಮೃತರು.
ಆಸಿಫ್ ಎಂಬವರು ಚಾಲಕರಾಗಿದ್ದ ಖಾಸಗಿ ಸಂಸ್ಥೆಗೆ ಸೇರಿದ್ದ ಲಾರಿಯೊಂದು ಬೆದ್ರೋಡಿ ಎಂಬಲ್ಲಿ ರಾ.ಹ. 75ರಲ್ಲಿ ಕಳೆದ ಮೂರು ದಿನಗಳಿಂದ ಕೆಟ್ಟು ನಿಂತಿದ್ದು,
ದುರಸ್ತಿ ಕಾರ್ಯಕ್ಕಾಗಿ ಬೆ೦ಗಳೂರಿನಿ೦ದಲೇ ಮೆಕಾನಿಕ್ಗಳನ್ನು ಕಳುಹಿಸಿಕೊಟ್ಟಿತ್ತು. ಅದರಂತೆ ಕೆಟ್ಟು ನಿಂತಿದ್ದ ಲಾರಿಯನ್ನು ದುರಸ್ತಿ ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಕರ್ತವ್ಯ ನಿರತ ಫಿಟ್ಟರ್ಗಳ ಮೇಲೆ ಹರಿಯಿತು.
ಪರಿಣಾಮ ಮಧು ಹಾಗೂ ರೆಹಮಾನ್ ಸ್ಥಳದಲ್ಲೇ ಸಾವನ್ನಪ್ಪಿದರೆ,
ಎರಡೂ ಕಾಲುಗಳನ್ನು ಕಳೆದುಕೊಂಡಿದ್ದ ಅಪ್ಪಲ್ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ಮಧು, ಬೇರೊಂದು ಲಾರಿಯ ಚಾಲಕನಾಗಿದ್ದು, ತನ್ನ ಸಂಸ್ಥೆಯ ಲಾರಿಯೊಂದು ಕೆಟ್ಟು ನಿಂತಿರುವುದಕ್ಕೆ ಮೆಕಾನಿಕ್ ಗಳನ್ನು ಬೆಂಗಳೂರಿನಿಂದ ಕರೆತಂದು ಲಾರಿಯ ದುರಸ್ತಿ ಕಾರ್ಯದಲ್ಲಿ ಮೆಕಾನಿಕ್ಗಳೊಂದಿಗೆ ಸಹಕರಿಸುತ್ತಿದ್ದರು.
ಘಟನೆ ವೇಳೆ ಕೆಟ್ಟು ನಿಂತಿದ್ದ ಲಾರಿಯ ಚಾಲಕ ಆಸೀಫ್ ಲಾರಿಯಿಂದ ತುಸು ದೂರ ನಿಂತಿದ್ದ ಕಾರಣ ಅವಘಡದಿಂದ ಪಾರಾದಂತಾಗಿದೆ.
ಘಟನೆ ಸಂಭವಿಸಿದಾಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ರಾವಾನಿಸಲು ನೆರವಾದರು.
ಬಳಿಕ ಆಂಬುಲೆನ್ಸ್ ಚಾಲಕ ನೌಫಾಲ್, ಫಾರೂಕ್, ಆಸಿಫ್ ಮೊದಲಾದವರು ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಲ್ಲಿ ಕೈ ಜೋಡಿಸಿದರು.