ಮಂಗಳೂರು/ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಹರೆಯದ ಪ್ರಾಯದಲ್ಲಿ ಪ್ರೀತಿ ಎಂಬ ಬಲೆಗೆ ಸಿಲುಕಿ ದಾರಿ ತಪ್ಪಿ ಕೊನೆಗೆ ಅದು ದುರಂತದಲ್ಲಿ ಅಂತ್ಯ ಕಾಣುವ ಘಟನೆ ಇದೀಗ ನಮ್ಮ ಸುತ್ತ ನಡೆಯುತ್ತಲೇ ಇದೆ. ಈಗ ಅಂತಹದ್ದೇ ಒಂದು ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಬೆಳಗ್ಗಿನ ಸಮಯದಲ್ಲಿಯೇ ಮರಕ್ಕೆ ನೇ*ಣು ಬಿಗಿದು ಅಪ್ರಾಪ್ತ ಪ್ರೇಮಿಗಳು ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಬೀರಪ್ಪನಹಳ್ಳಿ ಗ್ರಾಮದ ಅರಣ್ಯ ಭಾಗದಲ್ಲಿ ನಡೆದಿರುವುದನ್ನು ಗಮನಿಸಿದ ಗ್ರಾಮೀಣರು ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ.
ಆ*ತ್ಮಹತ್ಯೆ ನಡೆದ ಸ್ಥಳದಲ್ಲೇ ಶಾಲಾ ಬ್ಯಾಗ್‌ಗಳು ಪತ್ತೆಯಾಗಿದೆ. ಹುಡುಗಿ ಚಿಕ್ಕಬಳ್ಳಾಪುರದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಹಾಗೂ ಬಾಲಕ ಚಿಂತಾಮಣಿ ತಾಲ್ಲೂಕಿನ ಇರಗಂಪಲ್ಲಿ ಗ್ರಾಮದವನು ಎಂದು ಮಾಹಿತಿ ಇದೆ. ತಮ್ಮ ಪ್ರೀತಿ ವಿಷಯ ಮನೆಯವರಿಗೆ ಗೊತ್ತಾಗಿದ್ದ ಕಾರಣ ಪೋಷಕರಿಗೆ ಹೆದರಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹಗಳನ್ನು ಮರದಿಂದ ಕೆಳಗೆ ಇಳಿಸಿ ಮರ*ಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೂ ಖಚಿತವಾದ ಕಾರಣಗಳು ಏನೆಂಬುವುದು ಇನ್ನು ತಿಳಿದು ಬರಬೇಕಷ್ಟೇ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು/ಇಸ್ಲಾಮಾಬಾದ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ತಮ್ಮ ತಂದೆಯನ್ನು ಸುಟ್ಟು ಹಾಕಿ ಕೊಂದಿದ್ದಾರೆ.
ಈ ಘಟನೆ ಪಾಕಿಸ್ತಾನದ ಲಾಹೋರ್ ನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಗುಜ್ರಾನ್ ವಾಲಾದ ಮೊಘಲ್ ಚೌಕ್ ನಲ್ಲಿ ಸೋಮವಾರ ನಡೆದಿದೆ.
ಅಲಿ ಅಕ್ಬರ್ (48) ಮೃತ ವ್ಯಕ್ತಿ. ಇವರು ಮೂರು ಮದುವೆಯಾಗಿದ್ದು, 10 ಮಕ್ಕಳನ್ನು ಹೊಂದಿದ್ದರು. ಅಕ್ಬರ್ ಮೊದಲ ಪತ್ನಿ ತೀರಿಕೊಂಡಿದ್ದು, ಉಳಿದ ಇಬ್ಬರು ಪತ್ನಿಯರು ಮತ್ತು ಮಕ್ಕಳು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದರು.
ಅಷ್ಟಕ್ಕೂ ಮೃತ ವ್ಯಕ್ತಿ ಅಲಿ ಅಕ್ಬರ್ ತಮ್ಮ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದನು ಎಂದು ದೌರ್ಜನ್ಯಕ್ಕೊಳಗಾದ ಬಾಲಕಿಯರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
“ನಮ್ಮ ತಂದೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ನಾವಿಬ್ಬರೂ ನಮ್ಮ ತಂದೆಯನ್ನು ಕೊಲ್ಲಲು ನಿರ್ಧರಿಸಿದ್ದೇವು. ನಾವು ಅವರ ಬೈಕ್ ನಿಂದ ಪೆಟ್ರೋಲ್ ತೆಗೆದುಕೊಂಡು, ನಂತರ ಅವರು ಮಲಗಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದೇವೆ” ಎಂದು ಇಬ್ಬರೂ ಹೆಣ್ಣುಮಕ್ಕಳು ಹೇಳಿಕೆ ನೀಡಿದ್ದಾರೆ.
ಸೋಮವಾರದಂದು ಅಕ್ಬರ್ ಮಲಗಿದ್ದಾಗ, ಅವನ 12 ಮತ್ತು 15 ವರ್ಷದ ಇಬ್ಬರು ಪುತ್ರಿಯರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ, ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವ ಮೊದಲು ಮೃತನ ಇಬ್ಬರೂ ಪತ್ನಿಯರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಬಳಿಕ ಇಬ್ಬರೂ ಅಪ್ರಾಪ್ತ ಹುಡುಗಿಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನವದೆಹಲಿ: ಎರಡು ಅಂತಸ್ತಿನ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 35 ವರ್ಷದ ಮಹಿಳೆ ಸಾವನ್ನಪ್ಪಿದ್ದು ಮತ್ತು ಅವರ ಪತಿ ಗಾಯಗೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ಬೆಂಕಿ ಕಾಣಿಸಿಕೊಂಡ ಸಮಯದಲ್ಲಿ ರೋಹಿತ್ ಮತ್ತು ವಿನೀತಾ ಶರ್ಮಾ ಕಟ್ಟಡದ ಮೊದಲ ಮಹಡಿಯಲ್ಲಿ ಮಲಗಿದ್ದರು.
ಮುಂಜಾನೆ 3.35ರ ಸುಮಾರಿಗೆ ಬೆಂಕಿಯ ಬಗ್ಗೆ ನಮಗೆ ಎಚ್ಚರಿಕೆ ನೀಡಲಾಯಿತು. ನಂತರ ನಾವು ನಾಲ್ಕು ಅಗ್ನಿಶಾಮಕ ವಾಹನಗಳನ್ನು ಎಸ್ ಕ್ಲಾತ್ ಹೌಸ್ ಮತ್ತು ರೆಡಿಮೇಡ್ ಗಾರ್ಮೆಂಟ್ಸ್ ಮುಖ್ಯ ರಸ್ತೆಯಲ್ಲಿರುವ ಬಟ್ಟೆ ಅಂಗಡಿಗೆ ಕಳುಹಿಸಿದ್ದೇವೆ. ದಂಪತಿಯನ್ನು ರಕ್ಷಿಸಲಾಗಿದೆ. ಆದರೆ ವಿನೀತಾ ದೀರ್ಘಕಾಲದವರೆಗೆ ಹೊಗೆಯಲ್ಲಿ ಸಿಲುಕಿದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ನೋಯಾದ ಗೌತಮ್ ಬುದ್ಧ ನಗರದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರದೀಪ್ ಕುಮಾರ್ ಚೌಬೆ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಎಚ್‌ಎಂಪಿವಿ ವೈರಸ್ ಟೆಸ್ಟ್ ಕಡ್ಡಾಯವಲ್ಲ ಎಂದು ಆರೋಗ್ಯ ಇಲಾಖೆ ಆಸ್ಪತ್ರೆಗೆ ಹೋಗುವವರಿಗೆ ಸೂಚನೆ ನೀಡಿದೆ. ಜತೆಗೆ, ಖಾಸಗಿ ಲ್ಯಾಬ್ ಹಾಗೂ ಖಾಸಗಿ ಆಸ್ಪತ್ರೆಗಳ ಮೇಲೆ ಇಲಾಖೆ ನಿಗಾ ಇಡುವುದಾಗಿ ತಿಳಿಸಿದೆ. ಎಚ್‌ಎಂಪಿವಿ ವೈರಸ್ ಟೆಸ್ಟ್ ಮಾಡಿಸಿಕೊಳ್ಳಿ ಎನ್ನುವವರ ಮೇಲೆ ಹದ್ದಿನ ಕಣ್ಣು ಇಡಲು ನಿರ್ಧರಿಸಿದೆ. ಜ್ವರ, ಕೆಮ್ಮು ಎಂದು ಆಸ್ಪತ್ರೆಗೆ ಹೋಗುವವರು ಎಚ್‌ಎಂಪಿವಿ ವೈರಸ್ ಟೆಸ್ಟ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಇಲಾಖೆ ಹೇಳಿದೆ.
ಈ ವಿಚಾರವಾಗಿ ಇಂದು (ಬುಧವಾರ) ಸಂಜೆಯೊಳಗೆ ಆರೋಗ್ಯ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಎಚ್‌ಎಂಪಿವಿ ವೈರಸ್ ಟೆಸ್ಟ್ಗೆ 10 ಸಾವಿರದಿಂದ 12 ಸಾವಿರ ರೂ!
ಖಾಸಗಿ ಆಸ್ಪತ್ರೆಗಳಲ್ಲಿ ಎಚ್‌ಎಂಪಿವಿ ವೈರಸ್ ಟೆಸ್ಟ್ಗೆ 10 ಸಾವಿರ ರೂ.ನಿಂದ 12 ಸಾವಿರ ರೂ. ದರ ಇದೆ. ಹೀಗಾಗಿ ಟೆಸ್ಟಿಂಗ್ ಅಗತ್ಯ ಇಲ್ಲ ಎಂದು ಇಲಾಖೆ ಪ್ರಕಟಣೆ ಹೊರಡಿಸಲಿದೆ ಎಂದು ಮೂಲಗಳು ಹೇಳಿವೆ.
ಅಪಾಯಕಾರಿ ವೈರಸ್ ಅಲ್ಲ: ಆರೋಗ್ಯ ಇಲಾಖೆ
ಸಾಮಾನ್ಯವಾಗಿ ಚಳಿಗಾಲದಲ್ಲಿ ವೈರಸ್ ಕಾಣಿಸಿಕೊಳ್ಳುವುದು ಸಹಜ. ಅದಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲೂ ಎಚ್‌ಎಂಪಿವಿ ಟೆಸ್ಟಿಂಗ್ ಮಾಡುವುದಿಲ್ಲ. ಈ ವೈರಸ್ ಅಪಾಯಕಾರಿ ಅಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಪತ್ತೆಯಾಗಿರುವುದು ಚೀನಾದಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ ವೈರಸ್ ಅಲ್ಲ ಎಂದು ಈಗಾಗಲೇ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆರೋಗ್ಯ ಇಲಾಖೆ ಜೊತೆ ಸಭೆ ನಡೆಸಿದ್ದು, ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಲ್ಲಿ ಈಗಾಗಲೇ ವೈರಸ್ ಪತ್ತೆಯಾಗಿದೆ. ಅದಕ್ಕೂ ಮುನ್ನ ಶಿವಮೊಗ್ಗದಲ್ಲಿ ವೈರಸ್ ಪತ್ತೆಯಾಗಿರುವ ಬಗ್ಗೆ ನಂತರ ಬೆಳಕಿಗೆ ಬಂದಿತ್ತು. ಆದರೆ, ಈ ಎಲ್ಲ ವೈರಸ್ ಸೋಂಕು ಪ್ರಕರಣಗಳಲ್ಲಿ ಸೋಂಕಿಗೆ ಒಳಗಾದ ಮಕ್ಕಳು ಸದ್ಯ ಆರೋಗ್ಯವಾಗಿದ್ದಾರೆ.
ದೇಶದಾದ್ಯಂತ ಈವರೆಗೆ ಒಟ್ಟು 7 ಹೆಚ್ಎಂಪಿವಿ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಕರ್ನಾಟಕದಲ್ಲಿ 2, ತಮಿಳುನಾಡಿನಲ್ಲಿ 2, ಮಹಾರಾಷ್ಟ್ರದಲ್ಲಿ 2, ಗುಜರಾತ್ನಲ್ಲಿ 1 ಪ್ರಕರಣ ದೃಢಪಟ್ಟಿವೆ.
ಎಚ್‌ಎಂಪಿವಿ ವೈರಸ್ ಬಗ್ಗೆ ಭಯ ಅಗತ್ಯವಿಲ್ಲ. ಮುನ್ನೆಚ್ಚರಿಕೆ ವಹಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.