Connect with us

DAKSHINA KANNADA

ಉಳ್ಳಾಲ: ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ ಬೆಟ್ಟಂಪಾಡಿ ಪರಿಸರ ಉಳಿಸಲು ಮೀನುಗಾರರ ಆಗ್ರಹ

Published

on

ಉಳ್ಳಾಲ: ಸೋಮೇಶ್ವರದ ಬಟ್ಟಪ್ಪಾಡಿಯಲ್ಲಿ ಅನಧಿಕೃತ ಗೆಸ್ಟ್ ಹೌಸ್, ಕಾಂಡ್ಲಾ ಗಿಡ ನಾಶ, ಸ್ಥಳೀಯ ಮೀನುಗಾರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೈಕೋರ್ಟ್‍ನಲ್ಲಿ ದಾವೆ ಹೂಡಲಾಗಿದೆ. ಶೀಘ್ರದಲ್ಲೇ ತೀರ್ಪು ಸಾಂಪ್ರದಾಯಿಕ ಮೀನುಗಾರರ ಪರವಾಗಿ ಬರುವ ವಿಶ್ವಾಸವಿದೆ ಎಂದು ಉಚ್ಚಿಲ ಬಟ್ಟಪ್ಪಾಡಿ ಪರಿಸರದ ಮೀನುಗಾರ ಮುಖಂಡ ಸುಕೇಶ್ ಉಚ್ಚಿಲ್ ಹೇಳಿದರು.


ಉಚ್ಚಿಲ ಬಟ್ಟಪ್ಪಾಡಿ ಸಮುದ್ರತೀರದಲ್ಲಿ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈ ಪ್ರದೇಶದಲ್ಲಿ ಆಗುತ್ತಿರುವ ಪರಿಸರ ನಾಶ, ಅಕ್ರಮ ಚಟುವಟಿಕೆಗಳ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ , ಅನೈತಿಕ ದಂಧೆಗಳಿಗೂ ಶೀಘ್ರವೇ ಕೊನೆಗೊಳ್ಳಬೇಕು’ ಎಂದು ಮಾಹಿತಿ ನೀಡಿದರು.

ಪ್ರದೇಶದಲ್ಲಿ ಅನಧಿಕೃತ ಬೋಟಿಂಗ್ ಮಾಡಲಾಗುತ್ತಿದೆ. ಕೋಸ್ಟ್ ಗಾರ್ಡ್, ಪೊಲೀಸ್ ಠಾಣೆ, ಪುರಸಭೆ ಅನುಮತಿ ಪಡೆಯದೆ ಬೋಟಿಂಗ್ ಮಾಡಲಾಗುತ್ತಿದೆ. ಅವಘಢ ಸಂಭವಿಸಿದಲ್ಲಿ ಪ್ರವಾಸಿಗ ಇಕ್ಕಟ್ಟಿಗೆ ಸಿಲುಕುವುದು ಖಚಿತ. ಸ್ವಾರ್ಥಕ್ಕೋಸ್ಕರ ಕಾಂಡಾಲು ಮರಗಳನ್ನು ಕಡಿಯಲಾಗಿದೆ.

ಈ ಮರಗಳನ್ನು ಕಡಿಯುವುದು ಶ್ರೀಗಂಧ ಮರವನ್ನು ಕಡಿಯುವುದಕ್ಕಿಂತ ದೊಡ್ಡ ಅಪರಾಧ. ಮುಂಬೈ ಹೈಕೋರ್ಟ್ ನೀಡಿರುವ ವೋಕಲ್ ತೀರ್ಪು ಪ್ರಕಾರ ಕಾಂಡಾಲು ಗಿಡಗಳು ಮನುಷ್ಯನ ಮೂಲಭೂತ ಹಕ್ಕುಗಳಲ್ಲಿ ಒಂದು ಎಂದು ಉಲ್ಲೇಖ ಮಾಡಿದೆ.
ಮುಂಬೈನಲ್ಲಿ ಕಾಂಡಾಲು ಗಿಡವಿರುವ ಪ್ರದೇಶದಲ್ಲಿ ತಮ್ಮ ಸ್ವಂತ ಜಾಗದಲ್ಲಿ ಕಟ್ಟಲಾಗಿರುವ ಸಿನಿಮಾ ನಟರುಗಳ 300 ಕ್ಕಿಂತ ಅಧಿಕ ರೆಸಾರ್ಟ್‍ಗಳನ್ನು ಮಹಾರಾಷ್ಟ್ರ ಸರಕಾರ ತನ್ನ ವಶಕ್ಕೆ ಪಡೆದುಕೊಂಡು ಸಂರಕ್ಷಿತ ಅರಣ್ಯ ವಲಯ ಎಂದು ಘೋಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿರುತ್ತದೆ.

ಆದರೆ ಉಚ್ಚಿಲದ ಬಟ್ಟಂಪಾಡಿಯಲ್ಲಿ ಕಾಂಡ್ಲಾ ಕಾಡು ಇರುವ 50 ಮೀ ದೂರದಲ್ಲಿ ರೆಸಾಟ್ ಕಟ್ಟಲಾಗಿದೆ.
ಸಂರಕ್ಷಿತ ಅರಣ್ಯ ವಲಯ ಎಂದು ನಾಮಫಲಕ ಹಾಕುವ ಜಾಗದಲ್ಲಿ ಪ್ರವಾಸೋದ್ಯಮ ಇಲಾಖೆಯ ಬೋರ್ಡ್ ಹಾಕಲಾಗಿದೆ. ಉಚ್ಚಿಲ ಸೇತುವೆಯಿಂದ 5 ಕಿ.ಮೀ ಉದ್ದಕ್ಕೂ ಅಕ್ರಮ ರೆಸಾರ್ಟ್‌ಗಳನ್ನು ಕಟ್ಟಲಾಗಿದೆ.

ಸ್ಥಳದಲ್ಲಿ ಕಟ್ಟಲಾಗಿರುವ ಗೆಸ್ಟ್ ಹೌಸ್ ಗಳೆಲ್ಲವೂ ಸಂರಕ್ಷಿತ ಅರಣ್ಯ ವಲಯದಲ್ಲಿ ಬರುತ್ತದೆ. ಅದನ್ನು ಸರಕಾರ ತನ್ನ ವ್ಯಾಪ್ತಿಗೆ ಪಡೆದುಕೊಳ್ಳಬೇಕಿದೆ. ಕಡಲ್ಕೊರೆತಕ್ಕೆ ರಸ್ತೆ ಸಂಪೂರ್ಣ ಹೋಗಿದ್ದು, ಎರಡು ಬಾರಿ ನಿರ್ಮಿಸಿದರೂ ಪ್ರಯೋಜನಕ್ಕೆ ಬಂದಿಲ್ಲ.

ಬಟ್ಟಪ್ಪಾಡಿಯಲ್ಲಿ ಬಂಡವಾಳಶಾಹಿಗಳಿಗಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಆದರೆ 600 ವರ್ಷಗಳಿಂದ ಮೀನು ಹಿಡಿದು ಬದುಕುತ್ತಿರುವ ಸ್ಥಳೀಯರಿಗೆ ಯಾವುದೇ ರೀತಿಯ ಮೂಲಸೌಕರ್ಯವನ್ನು ಜಿಲ್ಲಾಡಳಿತ ನೀಡುತ್ತಿಲ್ಲ ಎಂದ ಅವರು ಗೆಸ್ಟ್ ಹೌಸ್ ಮಾಡಿದವರೆಲ್ಲರೂ ಹೊರಗಿನಿಂದ ಬಂದವರು, ಪುರಸಭೆಯವರು ಅನುಮತಿಯನ್ನೇ ನೀಡಿಲ್ಲ ಅನ್ನುತ್ತಾರೆ. ಆದರೆ ಕಾರ್ಯಾಚರಿಸುತ್ತಿರುವ ಬಗ್ಗೆ ಪ್ರಶ್ನಿಸಿದರೆ ಉತ್ತರ ಸಿಗುತ್ತಿಲ್ಲ.

ಗೆಸ್ಟ್ ಹೌಸಿಗೆ ಬರುವ ಪ್ರವಾಸಿಗರು ರಾತ್ರಿಯಿಡೀ ಡಿ.ಜೆ ಇಡುತ್ತಾರೆ, ಕುಣಿಯುತ್ತಾರೆ. ಇದರಿಂದ ಮೀನುಗಾರರು ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದೇ ಬೆಳಿಗ್ಗೆ ಬೇಗನೇ ಎದ್ದು ಮೀನುಗಾರಿಕೆಗೆ ತೆರಳಲು ಅಡಚಣೆಯುಂಟಾಗುತ್ತಿದೆ. ದೊಡ್ಡ ಶಬ್ದದಿಂದ ಸಮುದ್ರ ತೀರದ ಮೀನುಗಳು ದೂರವಾಗುತ್ತವೆ. ಸ್ಥಳೀಯ ಮೀನುಗಾರರು ರೋವಿಂಗ್ ಮೂಲಕ ನಡೆಸುವ ಮೀನುಗಾರಿಕೆಗೂ ತೊಂದರೆಯಾಗುತ್ತಿದೆ.

ಇತ್ತೀಚೆಗೆ ತೆಂಗಿನಮರವಿರುವ ಎತ್ತರಕ್ಕೆ ಸೋಮೇಶ್ವರದಿಂದ ಉಚ್ಚಿಲದವರೆಗೆ ಮರಳು ರಾಶಿಯನ್ನು ಹಾಕಲಾಗಿತ್ತು. ಮರಳು ಹಾಕಿರುವುದೇ ಸಿಆರ್ ಝೆಡ್ ಕಾನೂನಿನ ಉಲ್ಲಂಘನೆ. ಸ್ಥಳೀಯ ಮೀನುಗಾರರ ಹಿತರಕ್ಷಣೆ ಹಾಗೂ ಜಲಚರಗಳ ರಕ್ಷಣೆಗಾಗಿ ಸಿಆರ್‍ಝೆಡ್ ಕಾನೂನು ಜಾರಿಗೊಳಿಸಲಾಗಿದೆ. ಇದನ್ನೆಲ್ಲಾ ಉಲ್ಲೇಖಿಸಿ ಹೈಕೋರ್ಟ್‌ಗೆ ನ್ಯಾಯಕ್ಕಾಗಿ ಮೊರೆ ಹೋಗಿದ್ದೇವೆ.

ಕಾಂಡ್ಲಾ ಗಿಡ ಕಡಿದ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಆರೋಪಿತ ಪ್ರಕಾಶ್ ಶೆಟ್ಟಿಯನ್ನು ಈವರೆಗೆ ಬಂಧಿಸಿಲ್ಲ,
ಬಟ್ಟಪ್ಪಾಡಿ ಪ್ರದೇಶದಲ್ಲಿರುವ ಡಾ.ಅಖ್ತರ್ ಹುಸೈನ್ ಗೆ ಸೇರಿದ ಸ್ಯಾಂಕ್ಟಮ್ ಗೆಸ್ಟ್ ಹೌಸ್ ಸಮುದ್ರ-ಹೊಳೆಯ ನಡುವೆ ಕಟ್ಟಲಾಗಿದೆ. ಇದರ ಸುತ್ತ 50ಮೀ ದೂರದಲ್ಲಿ ಕಾಂಡ್ಲಾ ಗಿಡವಿದೆ. ಅರಣ್ಯ ಇಲಾಖೆ ಸ್ವಾಧೀನಕ್ಕೆ ಪಡೆಯಬೇಕಿದ್ದರೂ ಈವರೆಗೆ ಅದರತ್ತ ಗಮನಹರಿಸಿಲ್ಲ.

ತಿಂಗಳ ಹಿಂದೆ ಜಿಲ್ಲಾಧಿಕಾರಿಯವರೇ ಕುಟುಂಬ ಸಮೇತರಾಗಿ ಅನಧಿಕೃತ ಗೆಸ್ಟ್ ಹೌಸ್ ನಲ್ಲಿ ಮೂರು ದಿನಗಳ ಕಾಲ ವಿಹರಿಸಿ ತೆರಳಿದ್ದಾರೆ. ಅಲ್ಲದೆ ಮೆಸ್ಕಾಂ ಇಲಾಖೆಗೆ ಸೇರಿದ ಐಎಎಸ್ ಅಧಿಕಾರಿಯೂ ರೆಸಾರ್ಟ್‌ನಲ್ಲಿ ತಂಗಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಥಳೀಯರು ಕೂಡಾ ಕೆಲವರು ಮರಳು ಮಾಫಿಯಾ, ಗೆಸ್ಟ ಹೌಸ್ ಮಾಫಿಯಾ, ಪ್ರವಾಸೋದ್ಯಮ ಮಾಫಿಯಾ ಜೊತೆಗೆ ಸೇರಿಕೊಂಡಿದ್ದಾರೆ. ಆದರೆ ಯಾರು ಎಲ್ಲೇ ಇದ್ದರೂ ಪ್ರಕೃತಿಯನ್ನು ರಕ್ಷಣೆ ಮಾಡಬೇಕು ಅನ್ನುವ ಉದ್ದೇಶದಿಂದ ಹೋರಾಟವನ್ನು ಮುಂದುವರಿಸುತ್ತೇವೆ.

ಸೋಮೇಶ್ವರದಿಂದ ಉಚ್ಚಿಲ ಸಮುದ್ರ ತೀರದಲ್ಲಿ ಕಡಲ್ಕೊರೆತದ ಕಲ್ಲು ಮಾಫಿಯಾ ಕಳೆದ ಏಳು ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಿದೆ. ವಿಶ್ವದ ಹಲವೆಡೆ ಕಡಲ್ಕೊರೆತ ಆಗುತ್ತಿದೆ, ಆದರೆ ಎಲ್ಲಿಯೂ ಉಳ್ಳಾಲದಂತ ಕಳಪೆ, ಅವೈಜ್ಞಾನಿಕ ಕಾಮಗಾರಿ ನಡೆದಿಲ್ಲ. ಕಲ್ಲುಗಳನ್ನು ಹಾಕುತ್ತಿದ್ದರೂ 300 ಕೀ ದೂರದಲ್ಲಿದ್ದ ನೀರು ಇದೀಗ 10 ಮೀ ಮನೆಯ ಹತ್ತಿರ ಬಂದಿದೆ.

ಕಲ್ಲುಗಳನ್ನು ನಿರಂತರ ಹಾಕಲಾಗುತ್ತಿದೆ. ಅವೈಜ್ಞಾನಿಕವಾಗಿ ಕಲ್ಲು ಹಾಕುವುದನ್ನು ಪ್ರಶ್ನಿಸಿ ,ಮುಂಬೈ ಮೆರೈನ್ ಡ್ರೈವ್ ನಲ್ಲಿ ಹಾಕಿದಂತೆ 15 ಫೀಟ್ ಆಳ ಹೊಂಡ ತೆಗೆದು ಬಳಿಕ ಅಳವಡಿಸಬೇಕು ಅನ್ನುವ ಸಲಹೆಯನ್ನು ನೀಡಿದ್ದರೂ, ಸ್ಥಳೀಯರನ್ನು ಗಣನೆಗೆ ಪಡೆಯದೆ ಬಂದರು ಇಲಾಖೆ ಹಾಗೂ ಗುತ್ತಿಗೆದಾರರು ಬಹುದೊಡ್ಡ ಕಲ್ಲುಮಾಫಿಯಾದಲ್ಲಿ ನಿರತವಾಗಿದೆ.

1 ಮೀಟರ್ ಉದ್ದ ಕಲ್ಲು ಹಾಕುವುದಕ್ಕೆ 900 ರೂ. ಗುತ್ತಿಗೆದಾರರು ಟೆಂಡರ್ ಪಡೆದುಕೊಂಡಿದ್ದಾರೆ. ಅದನ್ನು ಸಬ್ ಗುತ್ತಿಗೆದಾರರಿಗೆ ರೂ.300ಕ್ಕೆ ನೀಡಲಾಗಿದೆ. ಉಳಿದ ರೂ.600 ಎಲ್ಲಿಹೋಗಿದೆ ಅನ್ನುವುದು ಗೊತ್ತಿಲ್ಲ. ರೂ.50 ಲಾಭದಲ್ಲಿ ಕಲ್ಲು ಹಾಕಲಾಗುತ್ತಿದೆ. ಹಳೇಯ ಕಲ್ಲುಗಳನ್ನು ಮತ್ತೆ ಹಾಕುತ್ತಾ ಅವರು ರೂ.150 ಲಾಭ ಗಳಿಸಲಾಗುತ್ತಿದೆ. ಜಪಾನ್‍ನಿಂದ ಎಡಿಬಿ ಮೂಲಕ ಕೋಟ್ಯಂತರ ಸಾಲ ಪಡೆದು ಕಾಮಗಾರಿ ನಡೆಸುತ್ತಿದೆ.

ಅವರಿಗೆ ಖುದ್ದಾಗಿ ಪತ್ರ ಬರೆದಾಗ ತಾವು ಸಾಲ ನೀಡಿರುವುದಾಗಿಯೂ, ತಾಂತ್ರಿಕ ವಿಚಾರಗಳೆಲ್ಲ ಮಂಗಳೂರು ಬಂದರು ಇಲಾಖೆ ಕಮೀಷನರ್‍ಗೆ ಸಂಪರ್ಕಿಸುವಂತೆ ಸೂಚಿಸಿದ್ದಾರೆ. ಕಲ್ಲು ಮಾಫಿಯಾ ಬಹುದೊಡ್ಡವಾಗಿ ಬೆಳೆದಿದ್ದು, ಪ್ರಧಾನಿಗೆ ಪತ್ರ ಬರೆದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಇದರ ವಿರುದ್ಧವೂ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆಗಳನ್ನು ನಡೆಸುತ್ತಿದ್ದೇವೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಬಟ್ಟಂಪಾಡಿ ನಿವಾಸಿಗಳಾದ ರಂಜಿತ್ ಉಚ್ಚಿಲ್, ಶಬೀರ್, ವಸಂತ್ ಉಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು.

 

DAKSHINA KANNADA

ದೇಶದಲ್ಲಿ ಮೊದಲ ಬಾರಿಗೆ QR ಕೋಡ್ ವೋಟರ್ ಸ್ಲಿಪ್

Published

on

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಮತದಾರರಿಗೆ ಕ್ಯೂ ಆರ್‌ ಕೋಡ್‌ ಹೊಂದಿರುವ ವೋಟರ್‌ ಸ್ಲಿಪ್‌ ನೀಡಲಾಗುವುದು.

ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತಗಟ್ಟೆ ಸುಲಭವಾಗಿ ಹುಡುಕಲು ಸಾಧ್ಯವಾಗದಂತೆ ಮನೆ ಮನೆಗೆ ನೀಡಲಾಗುವ ವೋಟರ್‌ ಸ್ಲಿಪ್‌ ಗಳಲ್ಲಿ ಮತಗಟ್ಟೆಯ ಕ್ಯೂ ಆರ್‌ ಕೋಡ್‌ ಮುದ್ರಿಸಲಾಗಿದೆ.

ನಗರದ ನಿವಾಸಿಗಳು ಕ್ಯೂ ಆರ್‌ ಕೋಡ್‌ ಮೂಲಕ ತಮ್ಮ ಮತಗಟ್ಟೆಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಮತದಾರರ ಮಾಹಿತಿ ಚೀಟಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನೋಂದಾಯಿತ ಎಲ್ಲಾ ಮತದಾರರಿಗೆ ಒದಗಿಸಲಾಗುವುದು.

Continue Reading

DAKSHINA KANNADA

ಒಂದು ತಿಂಗಳಿನಿಂದ ಮೊಬೈಲ್‌ ಫೋನ್‌ ಸಂಪರ್ಕವಿಲ್ಲದೆ ಪರದಾಡುತ್ತಿದ್ದಾರೆ ಈ ಜನರು..!!

Published

on

ಉಡುಪಿ: ಜಿಲ್ಲೆಯ ಕಟಪಾಡಿ ಪೇಟೆ ಸುತ್ತಮುತ್ತಲಿನ ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಕಳೆದ ಒಂದು  ತಿಂಗಳಿನಿಂದ ಮೊಬೈಲ್ ನೆಟ್ವರ್ಕ್ ಸಂಪೂರ್ಣ ಸ್ಥಗಿತವಾಗಿದ್ದು, ಖಾಸಗಿ ಕಂಪೆನಿಗಳ ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್ ಬಳಕೆದಾರರು ತೀವ್ರ ಅಡಚಣೆ ಅನುಭವಿಸುತ್ತಿದ್ದಾರೆ.

katapadi

ಮೊಬೈಲ್ ಕಂಪೆನಿ ಹಾಗೂ ಟವರ್ ಅಳವಡಿಸಲಾಗಿರುವ ಜಾಗದ ಮಾಲೀಕರ ನಡುವಿನ ಒಪ್ಪಂದ ಮುಗಿದ ಹಿನ್ನೆಲೆಯಲ್ಲಿ ಏರ್‌ಟೆಲ್, ವಿಐ ಮತ್ತು ಜಿಯೋ ಬಳಕೆದಾರರಿಗೆ ನೆಟ್ ವರ್ಕ್ ಸಿಗದಂತಾಗಿದೆ. ಫೋನ್ ಕರೆ ಮಾಡಲು, ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ, ಆನ್‌ಲೈನ್ ಹಣಕಾಸಿನ ವ್ಯವಹಾರ, ವರ್ಕ್ ಫ್ರಮ್ ಹೋಮ್, ಕಚೇರಿಯ ದೈನಂದಿನ ಕೆಲಸ ನಿರ್ವಹಿಸಲು ಕಷ್ಟಪಡುತ್ತಿದ್ದು, ಜನರ ಗೋಳು ಕೇಳುವವರೇ ಇಲ್ಲವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಮೊಬೈಲ್ ಸೇವೆ ಒದಗಿಸುವ ಕಂಪೆನಿಗಳು ಟವರ್ ಲಭ್ಯವಿಲ್ಲದೆ ನಾವೇನೂ ಮಾಡಲಾಗುತ್ತಿಲ್ಲ. ಸಮೀಪದಲ್ಲಿ ಪರ್ಯಾಯ ಜಾಗವೂ ಸಿಗುತ್ತಿಲ್ಲ ಎಂದು ಹೇಳುತ್ತಿವೆ. ಏರ್‌ಟೆಲ್ ಸಂಸ್ಥೆಯ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ‘ಪರ್ಯಾಯ ಟವರ್‌ಗೆ ವ್ಯವಸ್ಥೆಯಾಗದೆ ಏನೂ ಮಾಡುವಂತಿಲ್ಲ, ಪರ್ಯಾಯ ಜಾಗದ ವ್ಯವಸ್ಥೆ ಆದಲ್ಲಿ ಟವರ್ ನಿರ್ಮಾಣ ಮಾಡುತ್ತೇವೆ’ ಎಂದು ಹೇಳುತ್ತಿದ್ದಾರೆ.

READ MORE..; ಅರ್ಚಕರಿಂದಲೇ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ..!! ವಿಡಿಯೋ ವೈರಲ್

ನೆಟ್ ವರ್ಕ್ ಸಿಗದೆ ಹೈರಾಣಾಗಿರುವ ಸ್ಥಳೀಯರು ಮೊಬೈಲ್ ಸೇವೆ ಕಲ್ಪಿಸುವ ಸಂಸ್ಥೆಗಳ ವಿರುದ್ಧ – ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಜನರಲ್ಲಿ ಕಂಪೆನಿ ವಿರುದ್ದ ಆಕ್ರೋಶ ಹೆಚ್ಚುತ್ತಿದೆ. ಜಾಗದ ಮಾಲೀಕರು ಮತ್ತು ನೆಟ್ವರ್ಕ್ ಸಂಸ್ಥೆಗಳು ಪರಸ್ಪರ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳ ಬೇಕು ಎಂದು ಒತ್ತಾಯಿಸು ತ್ತಿರುವ ಸ್ಥಳೀಯರು ಸಂಘಟಿತ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

 

Continue Reading

DAKSHINA KANNADA

ಪ್ರತಿಭಾವಂತೆ ವಿದ್ಯಾರ್ಥಿನಿಯನ್ನು ಬಲಿ ಪಡೆದ ಮೆದುಳು ಜ್ವರ

Published

on

ಮೂಡಬಿದಿರೆ: ಮೆದುಳು ಜ್ವರಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಮೂಡಬಿದರೆಯಲ್ಲಿ ನಡೆದಿದೆ. ಶಿರ್ತಾಡಿ ಮೌಂಟ್ ಕಾರ್ಮೆಲ್ ಹೈಸ್ಕೂಲ್‌ನ 10ನೇ ತರಗತಿಯ ಸ್ವಸ್ತಿ ಶೆಟ್ಟಿ (15) ಮೃತ ವಿದ್ಯಾರ್ಥಿನಿ. ಸ್ವಸ್ತಿ ಶೆಟ್ಟಿ ಮೆದುಳು ಜ್ವರ ಉಲ್ಬಣಗೊಂಡ ಪರಿಣಾಮ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

Swasthi

ಉತ್ತಮ ತ್ರೋಬಾಲ್ ಆಟಗಾರ್ತಿಯಾಗಿದ್ದ ಈಕೆ ಉತ್ತಮ ನೃತ್ಯಪಟುವೂ ಆಗಿದ್ದಳು.ತಂದೆ ಸತೀಶ್‌ ಶೆಟ್ಟಿ ಗೋವಾದಲ್ಲಿ ಉದ್ಯೋಗದಲ್ಲಿದ್ದು ತಾಯಿ ಸರಿತಾ ಶೆಟ್ಟಿ ಶಿರ್ತಾಡಿ ನವಮೈತ್ರಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಉದ್ಯೋಗಿ. ಮೂಲತಃ ವಾಲ್ಪಾಡಿಯವರಾದ ಇವರು ಪ್ರಸ್ತುತ ಮೂಡಬಿದಿರೆಯಲ್ಲಿ ನೆಲೆಸಿದ್ದಾರೆ.

READ MORE..; ಪ್ರಚಾರದ ಭರದಲ್ಲಿ ತೇಜಸ್ವಿ ಸೂರ್ಯ ಕಿರಿಕ್‌..! ಸಂಸದರಿಗೆ ಡೌನ್ ಡೌನ್ ಎಂದ ಸಭಿಕರು

Continue Reading

LATEST NEWS

Trending