ಮಂಗಳೂರು: ನಗರದ ದಕ್ಷಿಣ ದಕ್ಕೆಯಲ್ಲಿ ಏ.20 ರಂದು ಅಪರಿಚಿತ ವ್ಯಕ್ತಿ (35-40 ವರ್ಷ) ಮಲಗಿದ್ದ ಸ್ಥಿತಿಯಲ್ಲಿ ಬಿದ್ದಿದ್ದಾಗ, ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿರುತ್ತಾರೆ.
ಈ ಬಗ್ಗೆ ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ ಇಂತಿದೆ:
ಅಪರಿಚಿತ ವ್ಯಕ್ತಿಯು 5 ಅಡಿ 7 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ, ಸಪೂರ ಶರೀರ, 2 ಇಂಚು ಕಪ್ಪು ಕೂದಲು, ಬಲ ಭುಜದಲ್ಲಿ ಹಳೆಗಾಯದ ಗುರುತು ಇದ್ದು, ತಿಳಿ ಗುಲಾಬಿ ಬಣ್ಣದ ಲುಂಗಿ ಧರಿಸಿರುತ್ತಾರೆ.
ಈ ಚಹರೆಯುಳ್ಳ ವ್ಯಕ್ತಿಯ ಸಂಬಂಧಿಕರಿದ್ದಲ್ಲಿ ದಕ್ಷಿಣ ಪೋಲಿಸ್ ಠಾಣೆಯ ಕಂಟ್ರೊಲ್ ರೂಂ:0824-2220800, ಪೊಲೀಸ್ ಇನ್ಸ್‍ಪೆಕ್ಟರ್: 9480805339, ಪೊಲೀಸ್ ಸಬ್ ಇನ್ಸ್‍ಪೆಕ್ಟರ್: 9480805346, ಪೊಲೀಸ್ ಸ್ಟೇಷನ್: 0824-2220518 ಈ ದೂರವಾಣಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.