ನವದೆಹಲಿ : ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಪುತ್ರ ಚಿರಾಗ್ ಟ್ವೀಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ದೆಹಲಿಯ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇಂತಹ ಕೇಂದ್ರ ಸಚಿವರು ಅನಾರೋಗ್ಯದಿಂದಾಗಿ ಸಾವನ್ನಪ್ಪಿರುವುದಾಗಿ ಅವರ ಪುತ್ರ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
पापा….अब आप इस दुनिया में नहीं हैं लेकिन मुझे पता है आप जहां भी हैं हमेशा मेरे साथ हैं। Miss you Papa… pic.twitter.com/Qc9wF6Jl6Z
ಈ ಕುರಿತಂತೆ ಟ್ವಿಟ್ ಮಾಡಿರುವ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ, ಕಳೆದ ಕೆಲ ದಿನಗಳ ಹಿಂದೆ ದೆಹಲಿಯ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಮ್ಮ ತಂದೆ, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನರಾಗಿರುವುದಾಗಿ ತಿಳಿಸಿದ್ದಾರೆ.
ಈ ಮೂಲಕ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಇನ್ನಿಲ್ಲವಾಗಿದ್ದಾರೆ.
ಇನ್ನು ರಾಮ್ ವಿಲಾಸ್ ಪಾಸ್ವಾನ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಸಹಿತ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಕ್ಯಾಬಿನೆಟ್ ಸಚಿವರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರು ಅಲ್ಪಾವಧಿಯ ಅನಾರೋಗ್ಯದ ನಿಮಿತ್ತ ನಿಧನರಾದ ಸುದ್ದಿ ಕೇಳಿ ಆಘಾತವಾಯಿತು. ಭಗವಂತನು ಅವರ ಆತ್ಮಕ್ಕೆ ಸದ್ಗತಿ ನೀಡಲೆಂದು ಪ್ರಾರ್ಥಿಸುತ್ತೇನೆ. pic.twitter.com/UlCkOCHjBj
ಮಂಗಳೂರು/ತಿರುವನಂತಪುರ : ಸ್ವಯಂ ಘೋಷಿತ ಗುರು ಗೋಪನ್ ಸ್ವಾಮಿಯ “ಸಮಾಧಿ” ವಿಚಾರವಾಗಿ ಕೇರಳ ಹೈಕೋರ್ಟ್ ಬುಧವಾರ ಕಾಂಕ್ರಿಟ್ ಚೇಂಬರ್ ಅನ್ನು ತೆರೆಯಲು ಅನುಮತಿ ನೀಡಿದೆ.
ತಿರುವನಂತಪುರ ಜಿಲ್ಲೆಯ ನೆಯ್ಯತ್ತಿಂಕರದಲ್ಲಿನ ಗೋಪನ್ ಕಳೆದ ಶುಕ್ರವಾರ ಕಾಣೆಯಾಗಿದ್ದಾರೆ ಎನ್ನಲಾಗಿತ್ತು. ಗೋಪನ್ ಸ್ವಾಮಿಗಳ ಮಕ್ಕಳಾದ ಸನಂದನ್ ಮತ್ತು ರಾಜಸೇನನ್ ಅವರು ಸ್ಥಳೀಯ ಸಮುದಾಯ ಅಥವಾ ಸಂಬಂಧಿಕರಿಗೆ ತಿಳಿಸದೆ ತಮ್ಮ ತಂದೆಯನ್ನು ನೆಯ್ಯಟಿಂಕರಾದ ದೇವಸ್ಥಾನದ ಬಳಿ ಸಮಾಧಿ ಮಾಡಿದ ನಂತರ ಈ ವಿವಾದ ಭುಗಿಲೆದ್ದಿತ್ತು.
ಈ ಬಗ್ಗೆ ಗೋಪನ್ ಅವರ ಮಕ್ಕಳು, ‘ತಮ್ಮ ತಂದೆ ಕುಳಿತ ಭಂಗಿಯಲ್ಲಿ ಧ್ಯಾನ ಮಾಡುತ್ತಿದ್ದಾಗ ನಿಧನರಾದರು ಮತ್ತು ಅವರ ಸಾವಿಗೆ ಯಾರಿಗೂ ಕೂಡ ಅವಕಾಶ ನೀಡದಂತೆ ಸೂಚನೆ ನೀಡಿದ್ದರು’ ಎಂದು ಹೇಳಿದ್ದಾರೆ. ನಂತರ ಅವರು ತಮ್ಮ ತಂದೆಯ ಸಮಾಧಿಯ ಕುರಿತ ಪೋಸ್ಟರ್ ಗಳನ್ನು ಕುಟುಂಬದವರು ಹಾಕಿದ್ದರು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು.
ಹಾಗಾಗಿ ಕಂದಾಯ ಅಧಿಕಾರಿಯ ಆದೇಶ ಪತ್ರದೊಂದಿಗೆ ಪೊಲೀಸರು ತಪಾಸಣೆಗೆ ಮುಂದದಾಗ ಕುಟುಂಬವು ಆಕ್ಷೇಪ ವ್ಯಕ್ತಪಡಿಸಿತ್ತು. ಕೆಲವು ಹಿಂದೂ ಸಂಘಟನೆಗೆಳೂ ಕುಟುಂಬದ ಪರ ನಿಂತಿದ್ದವು.
ಜತೆಗೆ ಪೊಲೀಸರು ತಪಾಸಣೆಗೆ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಸಮಾಧಿ ತೆರೆಯಲು ಪೊಲೀಸರಿಗೆ ಅನುಮತಿ ನೀಡಿದೆ.
ಮಂಗಳೂರು : ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹೆಚ್ಚು ಲಾಭ ಬರುತ್ತದೆ ಎಂಬ ಆಮಿಷ ಒಡ್ಡಿ ಸೈಬರ್ ಮೂಲಕ ವಂಚಿಸಿದ ಪ್ರಕರಣವೊಂದನ್ನು ಮಂಗಳೂರು ಸೆನ್ ಕ್ರೈಮ್ ಪೊಲೀಸರು ಬೇಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೇರಳದ ಕಣ್ಣೂರಿನ ಪತಾಯಕುನ್ನು ಉಮ್ಮರ್ ವಲಿಯ ಪರಂಬತ್ (41) ಮತ್ತು ರಿಯಾಝ್ ಎಂ.ವಿ. (45) ಬಂಧಿತ ಆರೋಪಿಗಳು ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಪಡೆಯ ಬಹುದು ಎಂಬ ವಾಟ್ಸ್‌ಆ್ಯಪ್ ಸಂದೇಶವನ್ನು ಗಮನಿಸಿದ ಮಂಗಳೂರಿನ ವ್ಯಕ್ತಿಯೊಬ್ಬರು ಹಂತ ಹಂತವಾಗಿ 77,96,322.08 ರೂ.ವನ್ನು ಪಾವತಿಸಿದ್ದರು.
ಆದರೆ ಆರೋಪಿಗಳು ಲಾಭಾಂಶ ನೀಡದೆ ವಂಚಿಸಿದ್ದರು. ಈ ಬಗ್ಗೆ ಹಣ ಕಳೆದುಕೊಂಡ ವ್ಯಕ್ತಿ ಮಂಗಳೂರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವ್ಯಕ್ತಿಯಿಂದ ಪಾವತಿಯಾಗಿದ್ದ ಹಣದ ವಿವರಕ್ಕೆ ಸಂಬಂಧಿಸಿ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಗೆ 26,27,114.4 ರೂಪಾಯಿ ವರ್ಗಾವಣೆಯಾಗಿರುವುದು ಹಾಗೂ ಬಳಿಕ ಈ ಖಾತೆಯಿಂದ ಉಮರ್ ವಲಿಯ ಪರಂಬತ್ ಎಂಬಾತನ ಬ್ಯಾಂಕ್ ಖಾತೆಗೆ 6 ಲಕ್ಷ ರೂ. ಪಾವತಿಯಾಗಿರುವುದು ಕಂಡು ಬಂತು.
ತನಿಖೆ ಕೈಗೊಂಡಾಗ ರಿಯಾಝ್ ಎಂ.ವಿ. ಎಂಬಾತನು ಹಣವನ್ನು ವರ್ಗಾವಣೆ ಮಾಡಿಸಿದ್ದ. ಹೀಗೆ ಈ ಪ್ರಕರಣದಲ್ಲಿ ಭಾಗಿಯಾದ ಕೇರಳ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೆನ್ ಪೊಲೀಸ್ ಠಾಣಾಧಿಕಾರಿಯೂ ಆಗಿರುವ ಎಸಿಪಿ ರವೀಶ್ ನಾಯಕ್, ಇನ್ಸ್ ಪೆಕ್ಟರ್ ಸತೀಶ್ ಎಂ.ಪಿ., ಸಬ್ ಇನ್ಸ್ ಪೆಕ್ಟರ್ ಗುರಪ್ಪಕಾಂತಿ ನೇತೃತ್ವದ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು
ಮಂಗಳೂರ/ಪ್ರಯಾಗ್‌ರಾಜ್ : ನಾಗಾ ಸಾಧು ಆಗಲು ಮೂರು ಹಂತಗಳ ಕಠಿಣ ಪರೀಕ್ಷೆಯನ್ನು ದಾಟಬೇಕಾಗುತ್ತದೆ. ಮೊದಲ ಹಂತ ದಾಟಿದವನು ಮಹಾಪುರಷ್, ಎರಡನೇ ಹಂತ ದಾಟಿದವನು ಅವದೂತ್ ಹಾಗೂ ಮೂರನೇ ಹಂತ ದಾಟಿದವನು ದಿಗಂಬರ್ ಆಗಿ ಬಳಿಕ ನಾಗಾ ಸಾಧು ಎನಿಸಿಕೊಳ್ಳುತ್ತಾನೆ. ಸಾಮಾನ್ಯವಾಗಿ 17 ರಿಂದ 19 ವರ್ಷದ ಯುವಕರಿಗೆ ಮಾತ್ರ ಈ ನಾಗಾ ದೀಕ್ಷೆಯನ್ನು ನೀಡಲಾಗುತ್ತದೆ. ನಾಗ ಅಂದ್ರೆ ತನ್ನ ಸ್ವಂತ ಅಸ್ಥಿತ್ವವನ್ನೇ ಕಳೆದುಕೊಂಡು ಬೆತ್ತಲಾಗುವುದು ಎಂಬ ಅರ್ಥ ಕೂಡಾ ಇದೆ. ಹೀಗಾಗಿ ಆರಂಭದಲ್ಲಿ ನಾಗ ಸಾಧುವಾಗಿ ದೀಕ್ಷೆ ಪಡೆಯಲು ಬರುವವನನ್ನು ಸಂಪೂರ್ಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆತನ ಹಿನ್ನಲೆಯನ್ನು ತಿಳಿದುಕೊಂಡು ಆತನಿಂದ ಯಾವುದೇ ಅಪರಾಧ ಆಗಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ದೀಕ್ಷೆ ಕೊಡಲು ಒಪ್ಪಿಕೊಳ್ಳಲಾಗುತ್ತದೆ. ಹೀಗೆ ಗುರುವೊಬ್ಬ ಸಿಕ್ಕ ಮೇಲೆ ಕನಿಷ್ಟ ಮೂರರಿಂದ ನಾಲ್ಕು ವರ್ಷ ಅವರ ಸೇವೆಯನ್ನು ಮಾಡಬೇಕಾಗುತ್ತದೆ. ಇದನ್ನು ಪರಾಕ್ ಅವಧಿ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಶಿಷ್ಯನಿಗೆ ಶಾಸ್ತ್ರ ಮತ್ತು ಶಸ್ತ್ರದ ಅಭ್ಯಾಸವನ್ನು ಮಾಡಿಸಲಾಗುತ್ತದೆ.
ಮಹಾಪುರಷ್ :
ನಾಗಾ ಸಾಧು ಆಗಲು ಹೊರಟ ವ್ಯಕ್ತಿಗೆ ನಿದ್ರೆ ಹಸಿವು ಕಾಮ ಮತ್ತು ಉದಾಸಿನದಿಂದ ಹೊರಬರುವುದು ಇಲ್ಲಿ ಅಗತ್ಯ. ಪರಕಾರ್ ಅವಧಿಯಲ್ಲಿ ಈ ವಿಚಾರಗಳನ್ನು ಹೇಳಿಕೊಟ್ಟ ಮೇಲೆ ಆತನನ್ನು ಮತ್ತೆ ಸಂಸಾರ ಜೀವನಕ್ಕೆ ಮರಳುವಂತೆ ಸಲಹೆ ನೀಡಲಾಗುತ್ತದೆ. ಹಾಗೊಂದು ವೇಳೆ ಮತ್ತೆ ಸಂಸಾರ ಜೀವನಕ್ಕೆ ಹೋಗಲು ಇಚ್ಚೆ ಇಲ್ಲದವನಿಗೆ ಸನ್ಯಾಸ ದೀಕ್ಷೆಯನ್ನು ನೀಡಿ ಮಹಾಪುರಷ್ ಎಂದು ಘೊಷಣೆ ಮಾಡಲಾಗುತ್ತದೆ.
ಅವದೂತ್ :
ಹೀಗೇ ಮಹಾಪುರಷ್ ಎನಿಸಿಕೊಂಡ ಮೇಲೆ ಆತ ಪಂಚ ಸಂಸ್ಕಾರ ಎಂಬ ನಿಯಮವನ್ನು ಪಾಲಿಸಬೇಕಾಗಿದ್ದು ಈ ವೇಳೆ ಶಿವ ವಿಷ್ಣು ಶಕ್ತಿ ಸೂರ್ಯ ಮತ್ತು ಗಣೇಶನನ್ನು ಆರಾಧಿಸುವುದು ಕಡ್ಡಾಯ. ಕೇವಲ ಧ್ಯಾನದಿಂದ ತನ್ನಲ್ಲಿನ ಎಲ್ಲಾ ಭಾವನೆಗಳನ್ನು ನಿರ್ಮೂಲನೆ ಮಾಡಿಕೊಂಡ ಮೇಲೆ ಆತನನ್ನು ಅವದೂತ್ ಎಂದು ಕರೆಯಲಾಗುತ್ತದೆ. ಅವದೂತ್ ಎನಿಸಿಕೊಂಡ ಮೇಲೆ ಆತ ಗುರುಗಳು ಹೇಳಿದ ಯಾವುದೇ ಕೆಲಸವನ್ನೂ ಚಾಚೂ ತಪ್ಪದೆ ಶಿರಸಾವಹಿಸಿ ಪಾಲಿಸಬೇಕಾಗುತ್ತದೆ.
ದಿಗಂಬರ ಮತ್ತು ನಾಗ ಸಾಧು :
ಒಮ್ಮೆ ಅವದೂತ್ ಎನಿಸಿಕೊಂಡ ಸಂನ್ಯಾಸಿ ನಾಗ ಸಾಧು ಎನಿಸಿಕೊಳ್ಳಲು ಕೊನೆಯದಾಗಿ ಮಾಡಿಕೊಳ್ಳುವ ಕರ್ಮವೇ ಪಿಂಡ ಪ್ರಧಾನ. ಮೂರು ದಿನಗಳ ಕಾಲ ಹಸಿವು, ನಿದ್ರೆಯನ್ನು ತೊರೆದು ನಿರಂತರ ಕಠಿಣ ವೃತಾಚರಣೆಯ ಬಳಿಕ ತನ್ನ ಕುಟುಂಬಸ್ಥರಿಗೆ, ಹಾಗೂ ತನಗೆ ತಾನೇ ಪಿಂಡ ಪ್ರಧಾನ ಮಾಡಿಕೊಂಡು ಲೌಕಿಕ ಜಗತ್ತಿನಿಂದ ಸಂಪೂರ್ಣ ವಿಮುಕ್ತನಾಗುತ್ತಾನೆ. ಹೀಗೆ ದಿಗಂಬರನಾಗಿ ನಾಗಸಾಧುವಾಗಿ ಬದಲಾಗುತ್ತಾನೆ.
ಕುಂಭ ಮೇಳದಲ್ಲಿ ನಾಲ್ಕು ವಿಧದ ನಾಗ ಸಾಧುಗಳು :
ಪ್ರಯಾಗ್ ರಾಜ್‌ನಲ್ಲಿ ನಾಲ್ಕು ಕಡೆಗಳಲ್ಲಿ ಕುಂಭ ಮೇಳ ನಡೆಯುತ್ತಿದ್ದು, ಈ ನಾಲ್ಕು ಕಡೆಯಲ್ಲಿ ಸೇರುವ ನಾಗ ಸಾಧುಗಳು ಬೇರೆ ಬೇರೆಯಾಗಿದ್ದಾರೆ. ಪ್ರಯಾಗ್ ರಾಜ್‌ನಲ್ಲಿ ಸೇರುವವರನ್ನು ನಾಗ ಎಂದು ಕರೆದರೆ, ಉಜ್ಜೈನಿಯಲ್ಲಿ ಸೇರುವ ನಾಗಗಳನ್ನು ಕೂನಿ ನಾಗ , ಹರಿದ್ವಾರದಲ್ಲಿ ಸೇರುವ ನಾಗಗಳನ್ನು ಬರ್ಫಾನಿ ನಾಗ ಹಾಗೂ ನಾಸಿಕ್‌ನಲ್ಲಿ ಸೇರುವ ನಾಗಗಳನ್ನು ಕಿಚಡಿಯ ನಾಗ ಎಂದು ಕರೆಯಲಾಗುತ್ತದೆ. ಇನ್ನು ಇವರು ತಿನ್ನುವ ಆಹಾರಗಳಿಗೆ ಕೋಡ್ ವರ್ಡ್ ಇದ್ದು ಗೋದಿಗೆ ಬಸ್ಮಿ, ಬೇಳೆಗೆ ಪಿಯಾರಾಮ್, ಬೆಳ್ಳುಳ್ಳಿಗೆ ಪಾತಾಳ ಲವಂಗ, ಉಪ್ಪಿಗೆ ರಾಮರಸ , ರೋಟಿಗೆ ರೋಟಿರಾಮ ಎಂದು ಕರೆಯುತ್ತಾರೆ.
ಮಹಿಳಾ ನಾಗ ಸಾಧುಗಳು :
ಪುರಷರಂತೆ ಮಹಿಳೆಯರು ಕೂಡಾ ನಾಗ ಸಾಧುಗಳಾಗುತ್ತಿದ್ದು ಇವರಿಗೂ ಕೂಡಾ ಕಠಿಣ ವೃತಾಚರಣೆಯ ನಿಯಮಗಳಿವೆ. ಇವರನ್ನು ಅವದೂತಿನಿ, ಮಾಯಿ ಮತ್ತು ನಾಗಿನ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. 2013 ರಲ್ಲಿ ಮೊದಲ ಬಾರಿಗೆ ಅತೀ ಹಳೆಯದಾದ ನಾಗಸಾಧು ಅಖಾಡವಾದ ಜೂನಾ ಅಖಾಡದಲ್ಲಿ ನಾಗ ಸಂನ್ಯಾಸಿಗಳು ಕಾಣಿಸಕೊಂಡಿದ್ದರು. ಅತ್ಯಂತ ಹೆಚ್ಚಿನ ಮಹಿಳಾ ನಾಗ ಸಾದುಗಳು ಇದೇ ಅಖಾಡದಲ್ಲಿದ್ದಾರೆ. ಇವರಲ್ಲಿ ಅತ್ಯಂತ ಹಿರಿಯ ನಾಗ ಸಂನ್ಯಾಸಿಗೆ ಶ್ರೀ ಮಹಾಂತ್ ಎಂದು ಕರೆಯಲಾಗುತ್ತದೆ.
ಶಾಹಿ ಸ್ನಾನದ ವಿಚಾರದಲ್ಲಿ ನಾಗ ಸಾಧುಗಳ ನಡುವೆ ಗಲಾಟೆ :
1760 ನೇ ಇಸವಿಯಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ನಾಗ ಸಾಧುಗಳು ಹಾಗೂ ಬೈರಾಗಿ ಸನ್ಯಾಸಿಗಳ ನಡುವೆ ದೊಡ್ಡ ಹೊಡೆದಾಟ ನಡೆದಿದ್ದ ಇತಿಹಾಸ ಇದೆ. ಇದಾದ ಬಳಿಕ 1796 ರಲ್ಲೂ ಶೈವ ನಾಗ ಹಾಗೂ ಸಿಕ್ ನಾಗ ತಂಡದ ನಡುವೆ ಹೊಡೆದಾಟ ನಡೆದಿತ್ತು. ಇದಾದ ಬಳಿಕ ಅಖಾಡಗಳ ಮುಖಂಡರು ಚರ್ಚೆ ನಡೆಸಿ ನಾಲ್ಕು ಕಡೆಯಲ್ಲಿ ನಡೆಯುವ ಶಾಹಿ ಸ್ನಾನದಲ್ಲಿ ಯಾರು ಎಲ್ಲಿ ಸ್ನಾನ ಮಾಡಬೇಕು ಎಂದು ತೀರ್ಮಾನಿಸಿದ್ರು. ಹಾಗೂ ಸಂಗಮದಲ್ಲಿ ಮೊದಲು ಶೈವ ಸನ್ಯಾಸಿಗಳು ಸ್ನಾನ ಮಾಡಿದ ಬಳಿ ಬೈರಾಗಿ ನಾಗಗಳು ಸ್ನಾನ ಮಾಡಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು.