Connect with us

    DAKSHINA KANNADA

    ಕೇಂದ್ರ ಗೃಹ ಸಚಿವ ಅಮಿತ್‍ ಶಾ ಪುತ್ತೂರು ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯಲು ದೇವರ ಮೊರೆ..!

    Published

    on

    ಅಮಿತ್ ಶಾ ಕಾರ್ಯಕ್ರಮದ ಯಶಸ್ಸಿಗೆ ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಗುರುವಾರ ಪ್ರಾರ್ಥನೆ ಸಲ್ಲಿಸಲಾಯಿತು.

    ಪುತ್ತೂರು :ಕೇಂದ್ರ ಗೃಹ ಸಚಿವ ಅಮಿತ್‍ ಶಾ ಫೆ.11 ರ ಶನಿವಾರದಂದು ಕರಾವಳಿ ಜಿಲ್ಲೆ ದಕ್ಷಿಣ ಕನ್ನಡಕ್ಕೆ ಆಗಮಿಸಲಿದ್ದು, ಬಳಿಕ  ಪುತ್ತೂರಿನಲ್ಲಿ  ಕ್ಯಾಂಪ್ಕೋ ಸುವರ್ಣ ಮಹೋತ್ಸವ ಉದ್ಘಾಟನೆ ಹಾಗೂ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಈ ಹಿನ್ನಲೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಗುರುವಾರ ಪ್ರಾರ್ಥನೆ ಸಲ್ಲಿಸಲಾಯಿತು.

    ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್‍. ಭಟ್‍ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮ ಹಾಗೂ ಬರುವವರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಅನುಗ್ರಹಿಸಲು ದೇವರನ್ನು ಪ್ರಾರ್ಥಿಸಲಾಯಿತು.

    ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ,, ನಗರಸಭೆ ಅಧ್ಯಕ್ಷ ಜೀವಂಧರ್‍ ಜೈನ್‍, ಬಿಜೆಪಿ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಸಾಜ ರಾಧಾಕೃಷ್ಣ ಆಳ್ವ, ಪಿ. ಜಿ. ಜಗನ್ನಿವಾಸ್ ರಾವ್, ಧಾಕೃಷ್ಣ ಬೋರ್ಕರ್‍, ರಾಜೇಶ್‍ ಬನ್ನೂರು, ಚಂದ್ರಶೇಖರ ರಾವ್‍ ಬಪ್ಪಳಿಗೆ, ಗೋಪಾಲಕೃಷ್ಣ ಹೇರಳೆ, ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್‍ ಪೆರಿಯತ್ತೋಡಿ, ನಿತೇಶ್‍ ಕುಮಾರ್‍ ಶಾಂತಿವನ ಮತ್ತಿತರರು ಉಪಸ್ಥಿತರಿದ್ದರು.

    DAKSHINA KANNADA

    ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನಿಂದ ಮೆಸೇಜ್; ಯುವಕರಿಂದ ಹಲ್ಲೆ

    Published

    on

    ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನೋರ್ವ ವಿದ್ಯಾರ್ಥಿನಿಗೆ ಮೆಸೇಜ್ ಮಾಡಿದ್ದಾನೆ ಎಂದು ಆರೋಪಿಸಿ ತಂಡವೊಂದು ಹಲ್ಲೆ ಮಾಡಿದ ಘಟನೆ ಸುಬ್ರಹ್ಮಣ್ಯದ ಗುತ್ತಿಗರುವಿನಲ್ಲಿ ನಡೆದಿದೆ.

    ಥಳಿತಕ್ಕೊಳಗಾದ ಯುವಕ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆಯುತ್ತಿದ್ದಾನೆ.

    ನಿಯಾಝ್ ಎಂಬಾತ ಹಲ್ಲೆಗೊಳಗಾದ ಯುವಕ.

    ಸ್ಥಳೀಯ ಯುವತಿಯೋರ್ವಳಿಗೆ ನಿಯಾಝ್ ಮೆಸೇಜ್ ಮಾಡುತ್ತಿರುವುದಾಗಿ ತಿಳಿದು ಬಂದ ಬಳಿಕ, ಅವನನ್ನು ಕರೆಸಿಕೊಂಡ ಯುವಕರ ತಂಡವೊಂದು ಹಲ್ಲೆ ನಡೆಸಿದ್ದಾರೆ.

    ಈ ಪ್ರಕರಣದ ಕುರಿತು, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ತಾರಾನಾಥ ಮುಗೇರ ನಿಗೂಢ ಸಾ*ವು ಪ್ರಕರಣಕ್ಕೆ ಟ್ವಿಸ್ಟ್; ಅಕ್ಕನಿಂದಲೇ ಹ*ತ್ಯೆ!

    Published

    on

    ಮಂಗಳೂರು : ಅನುಮಾನಾಸ್ಪದ ರೀತಿಯಲ್ಲಿ ಸಾ*ವಿಗೀಡಾಗಿದ್ದ ಕಟೀಲು ಗಿಡಿಗೆರೆ ನಿವಾಸಿಯ ಸಾ*ವು ಆತ್ಮಹ*ತ್ಯೆಯಲ್ಲ ಕೊ*ಲೆ ಎಂಬುದನ್ನು ಬಜಪೆ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಕಟೀಲು ಗಿಡಿಗೆರೆ ನಿವಾಸಿ ತಾರಾನಾಥ ಮುಗೇರ (40) ಎಂಬವರ ಶ*ವ ಅವರ ಮನೆಯಿಂದ ಸುಮಾರು 100ಮೀ. ದೂರದಲ್ಲಿ ಭಾನುವಾರ ಅ.27ರಂದು  ಪತ್ತೆಯಾಗಿತ್ತು. ಪ್ರಕರಣದ ಸಂಶಯದ ಸುಳಿವುಗಳ ಜಾಡು ಹಿಡಿದು ತನಿಖೆ ಮುಂದುವರಿಸಿದ ಬಜಪೆ ಪೊಲೀಸರು ತಾರಾನಾಥರ ದೊಡ್ಡಪ್ಪನ ಮಗಳನ್ನು ಬಂಧಿಸಿದ್ದಾರೆ.

    ದೇವಕಿ (42) ಬಂಧಿತ ಆರೋಪಿ. ದೇವಕಿ ಅವಿವಾಹಿತೆಯಾಗಿದ್ದು,  ವಿಚಾರಣೆಯ ವೇಳೆ ಆಕೆಯ ಮೇಲೆ ಸಂಶಯ ದೃಢಪಟ್ಟ ಹಿನ್ನೆಲೆ ಆಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

     ಕೊ*ಲೆಯಾಗಿದ್ದು ಹೇಗೆ ?

    ತಾರಾನಾಥರಿಗೆ ಕುಡಿತದ ಚಟವಿತ್ತು. ಆತ ಮನೆಯವರಿಗೂ ಹಾಗೂ ಆರೋಪಿ ದೇವಕಿಗೂ ಕಿರುಕು*ಳ ನೀಡುತ್ತಿದ್ದ ಎನ್ನಲಾಗಿದೆ. ಹೆದರಿಸುವ ಸಲುವಾಗಿ ತಾರಾನಾಥ ತನ್ನ ಮನೆಯ ಪಕ್ಕವೇ ಇರುವ ದೊಡ್ಡಪ್ಪನ ಮನೆಯ ಬಟ್ಟೆ ಒಣಗಿಸಲು ಕಟ್ಟಿದ್ದ ಕೇಬಲನ್ನು ತಂದು ಕುತ್ತಿಗೆಗೆ ಬಿಗಿದುಕೊಂಡಿದ್ದ ವೇಳೆ ದೇವಕಿ ಅದನ್ನು ಜೋರಾಗಿ ಬಿಗಿದಾಗ ಆತ ಮೃ*ತಪಟ್ಟಿದ್ದರು ಎನ್ನಲಾಗಿದೆ.

    ಇದನ್ನೂ ಓದಿ : ಕಡಬ : ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗಲೇ ಹೃ*ದಯಾಘಾತದಿಂದ ವ್ಯಕ್ತಿ ಸಾ*ವು

    ಶನಿವಾರ ರಾತ್ರಿ 7 ಗಂಟೆಯ ಬಳಿಕ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಜೋಡಿಸಿ ಇಟ್ಟಿದ್ದ ಚಪ್ಪಲಿ, ಸ್ಥಳ ಮಹಜರು ವೇಳೆ ಧೃಡಪಟ್ಟ ಅಂಶಗಳಿಂದ ಪ್ರಕರಣದ ಸುಳಿವು ಸಿಕ್ಕಿತ್ತೆನ್ನಲಾಗಿದೆ. ಪ್ರಕರಣದಲ್ಲಿ ತಾರಾನಾಥನ ಸಹೋದರನನ್ನು ಕೂಡ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.

    Continue Reading

    DAKSHINA KANNADA

    ದೀಪಾವಳಿ ಹಬ್ಬದ ಪ್ರಯುಕ್ತ ಕ್ಯಾಥೋಲಿಕ್ ಸಭೆಯಿಂದ ರಾಮಕೃಷ್ಣ ಮಿಷನ್ ಆಶ್ರಮಕ್ಕೆ ಭೇಟಿ

    Published

    on

    ಮಂಗಳೂರು : ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳೂರಿನ ಧರ್ಮಪ್ರಾಂತ್ಯದ ಲೇ ಫೇಯ್ತ್‌ಫುಲ್ ಕಮಿಷನ್‌ನ ಪ್ರಮುಖ ಸದಸ್ಯರು, ಕ್ಯಾಥೋಲಿಕ್ ಸಭಾದ ಮುಖಂಡರು ಮತ್ತು ಇತರ ಪ್ರತಿನಿಧಿಗಳೊಂದಿಗೆ ಮೋರ್ಗಾನ್ಸ್ ಗೇಟ್‌ನಲ್ಲಿರುವ ರಾಮಕೃಷ್ಣ ಮಿಷನ್ ಆಶ್ರಮಕ್ಕೆ ಭೇಟಿ ನೀಡಿದರು.

    ಆಶ್ರಮದ ಮುಖ್ಯಸ್ಥ ಶ್ರೀ ಜಿತಕಾಮನಂದಗಿ ಸ್ವಾಮೀಜಿ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ ಮಾತನಾಡಿ, ಓಂ ಅಸತೋ ಮಾ ಸದ್‌ ಗಮಯ ತಮಸೋ ಮಾ ಜ್ಯೋತಿರ್‌ ಗಮಯ ಮೃತ್ಯೋರ್‌ ಮಾಮ್ರತಂ ಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ” ಎಂಬಂತೆ ನಮ್ಮನ್ನು ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಮತ್ತು ಸಾವಿನಿಂದ ಅಮರತ್ವಕ್ಕೆ ಕರೆದೊಯ್ಯಿರಿ. ಈ ಸಂದೇಶವು ಇಂದಿನ ಸಮಾಜದಲ್ಲಿ ಸಹೋದರತ್ವ, ಶಾಂತಿ ಮತ್ತು ಸಂತೋಷವನ್ನು ಹರಡುವ ಹಂಚಿಕೆಯ ಗುರಿಯನ್ನು ಒತ್ತಿಹೇಳುತ್ತದೆ ಎಂದರು.

    ಕಾರ್ಯಕ್ರಮ ಆಯೋಜಿಸಿದ್ದ ದಿಲ್‌ರಾಜ್ ಆಳ್ವ ದೀಪಾವಳಿಯ ಮೌಲ್ಯಗಳನ್ನು ಪ್ರತಿಧ್ವನಿಸುವ ಸ್ಮರಣೀಯ ಅನುಭವವನ್ನು ಹಂಚಿಕೊಂಡರು. ಧರ್ಮಪ್ರಾಂತ್ಯದ ಲೇ ಫೇತ್‌ಫುಲ್ ಆಯೋಗದ ಕಾರ್ಯದರ್ಶಿ ರೆ.ಫಾ. ಜೆ.ಬಿ.ಕ್ರಾಸ್ತಾ, ಮಂಗಳೂರು ಧರ್ಮಪ್ರಾಂತ್ಯದ ಕೆಥೋಲಿಕ್ ಸಭಾದ ಅಧ್ಯಕ್ಷ ಅಲ್ವಿನ್ ಡಿಸೋಜಾ, ಪ್ರಸಿದ್ಧ ಸಾಮಾಜಿಕ ಸಂಯೋಜಕ ಡಾ. ಮಿಥುನ್ ಸಿಕ್ವೇರಾ,  ಆರೋಗ್ಯ ಸೇವಾ ಕ್ಷೇತ್ರದ ಸ್ವಯಂಸೇವಕ ಬಸವರಾಜು ಉಪಸ್ಥಿತರಿದ್ದರು.

    ಇದನ್ನೂ ಓದಿ : ಬಲಗೈ ಬಿಟ್ಟು ಎಡಕೈಗೆಯೇ ಯಾಕೆ ವಾಚ್ ಕಟ್ಟುವುದು ಗೊತ್ತಾ ?

    ಸ್ವಾಮೀಜಿಯೊಂದಿಗೆ ಸಾಂಕೇತಿಕ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಸಮುದಾಯಗಳ ನಡುವೆ ಐಕ್ಯತೆ ಸಾರಲಾಯಿತು.

    Continue Reading

    LATEST NEWS

    Trending