2021-22ರ ಕೇಂದ್ರ ಸರ್ಕಾರದ ಬಜೆಟ್ ಮಂಡನೆ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್..!
Union Budget for 2021-22: Union Finance Minister Nirmala Sitharaman .
ನವದೆಹಲಿ: ಕೊರೊನಾ ಸಂಕಷ್ಠದಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯ ನಡುವೆ 2021-22ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ.
ಬಜೆಟ್ ಮಂಡನೆಯಲ್ಲಿ ರಾಷ್ಟ್ರೀಯ ಜನಗಣತಿ ಯೋಜನೆ ಜಾರಿಯಾಗಿದ್ದು, .ದೇಶದಲ್ಲಿ ಮೊದಲ ಡಿಜಿಟಲ್ ಜನಗಣತಿ ಯೋಜನೆಗೆ 3,768 ಕೋಟಿ ರೂ. ಹಣ ಮೀಸಲಿರಿಸಲಾಗಿದೆ.
ಗೋವಾಗೆ 300 ಕೋಟಿ ರೂನ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಅಸಂಘಟಿತ ಕಾರ್ಮಿಕ ವಲಯಕ್ಕೂ ಪಿಂಚಣಿವ್ಯವಸ್ಥೆ ಜಾರಿಗೊಳಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಗೆ ಹೆಚ್ಚು ಕ್ರಮ ಕೈಗೊಳ್ಳಲಾಗುವುದು. ದೇಶದಲ್ಲಿ 100 ಸೈನಿಕ ಶಾಲೆಗಳ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ರೈತರ ಆದಾಯ ಐದು ಪಟ್ಟು ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಬದ್ಧ, ಕೃಷಿವಲಯ ಚೇತರಿಕೆಗೆ ಕೇಂದ್ರದಿಂದ ಹೊಸ ಯೋಜನೆ. ಪ್ರಸಕ್ತ ವರ್ಷ ಗೋಧಿ ಖರೀದಿಗೆ 75 ಸಾವಿರ ಕೋಟಿ ರೂ. ವ್ಯಯ. 40 ಲಕ್ಷ ರೈತರಿಗೆ ಇದರ ಲಾಭ ಸಿಕ್ಕಿದೆ.
1.ಲಕ್ಷ 72 ಸಾವಿರ ಕೋಟಿ ರೂ. ಮೊತ್ತದಲ್ಲಿ ಭತ್ತ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು. ಪಶುಪಾಲನೆ, ಹೈನುಗಾರಿಕೆ ಕುಕ್ಕುಟೋದ್ಯಮಕ್ಕೆ ಅನುದಾನ ಹೆಚ್ಚಳ ಮಾಡಲಾಗುವುದು 30 ಸಾವಿರ ಕೋಟಿ ರೂ. ಇದ್ದ ಅನುದಾನ 40 ಸಾವಿರ ಕೋಟಿಗೆ ಹೆಚ್ಚಳ ರೈತರ ಸಾಲ ಯೋಜನೆಗೆ 16.5 ಲಕ್ಷ ಕೋಟಿ ರೂ.ನಿಗದಿ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಇದೇ ವೇಳೆ ಕೊರೋನಾಗೆ ಎರಡು ರೀತಿಯ ವ್ಯಾಕ್ಸಿನ್ ನೀಡಿಕೆಯ ಕಾರ್ಯ ದೇಶದಲ್ಲಿ ನಡೆಯುತ್ತಿದೆ. ಸ್ವದೇಶಿಯ ವ್ಯಾಕ್ಸಿನ್ ನೀಡಿಕೆಯ ಬಹುದೊಡ್ಡ ಲಸಿಕಾ ಅಭಿಯಾನ ನಡೆಯುತ್ತಿದೆ.
ಭಾರತದಲ್ಲಿ ಈಗ ಎರಡು ಲಸಿಕೆ ಲಭ್ಯವಿದೆ. ಶೀಘ್ರದಲ್ಲಿ ಇನ್ನೆರಡು ಲಸಿಕೆ ಲಭ್ಯವಾಗಲಿದೆ. ಲಾಕ್ ಡೌನ್ ವೇಳೆ 27.1 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ 5 ಮಿನಿ ಬಜೆಟ್ ಘೋಷಣೆ ಮಾಡಲಾಗಿದೆ. ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ ಗಳ ಮೂಲಕ ದೇಶದ ಜನರಿಗೆ ಆಹಾರ ಭದ್ರತೆ ಒದಗಿಸಲಾಗಿದೆ.
ಬ್ಯಾಂಕ್ ಠೇವಣಿದಾರ ವಿಮೆಗೆ ಹಣದ ಮೊತ್ತ ಏರಿಕೆ 1 ಲಕ್ಷ ರೂ. ನಿಂದ 5 ಲಕ್ಷ ರೂ. ವರೆಗೆ ಏರಿಕೆ ಮಾಡಲಾಗಿದೆ. 6 ವರ್ಷಗಳಲ್ಲಿ ವಿದ್ಯುತ್ ಹಲವು ಸುಧಾರಣೆಗಳನ್ನು ತರಲಾಗಿದೆ. 2.8 ಕೋಟಿ ಮನೆಗಳಲ್ಲಿ 6 ವರ್ಷದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಗ್ರಾಹಕರು ಯಾರಿಂದ ಬೇಕಾದ್ರೂ ವಿದ್ಯುತ್ ಖರೀದಿಸಬಹುದು. 2022 ಕ್ಕೆ ನ್ಯಾಷನಲ್ ಹೈಡ್ರೋಜನ್ ಎನರ್ಜಿ ಮಿಷನ್ ಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಕೊರೊನಾ ಮಹಾಮಾರಿ ನಡುವೆ ಬಜೆಟ್ ಮಂಡನೆ ತಯಾರಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 1.18 ಲಕ್ಷ ಕೋಟಿ ರೂ. ಅನುದಾನ,ತಮಿಳುನಾಡಿನಲ್ಲಿ 3,500 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಕೇರಳದಲ್ಲಿ 1,100 ಕಿ.ಮೀ , 55 ಸಾವಿರ ಕೋಟಿ ರೂ. ನೀಡಿಕೆ. ಪಶ್ಚಿಮ ಬಂಗಾಳ್ಲಿ 675 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 25 ಸಾವಿರ ಕೋಟಿ ರೂ.ನೀಡಲಾಗುವುದು ಎಂದು ತಿಳಿಸಿದರು.