LATEST NEWS
ಭೂಗತ ಲೋಕದ ಅನಭಿಷಿಕ್ತ ದೊರೆಯಾಗಲು ಹೋಗಿ ಖೆಡ್ಡಾಕ್ಕೆ ಬಿದ್ದನೇ ಶರಣ್..?
ಮಂಗಳೂರು: ಭೂಗತ ಲೋಕ ಅಂದ್ರೆ ಮಂಗಳೂರು, ಮಂಗಳೂರು ಅಂದ್ರೆ ಭೂಗತಲೋಕ ಅನ್ನುವ ಕಾಲವೊಂದಿತ್ತು.
ರಾಜ್ಯದ ಅಂಡರ್‌ವಲ್ಡ್‌ಗೆ ಆಧುನಿಕ ಟಚ್ ಕೊಟ್ಟ ಇತಿಹಾಸ ಕರಾವಳಿಗರದ್ದು, ಇಲ್ಲಿನ ಭೂಗತ ಪಾತಕಿಗಳು ಮಂಗಳೂರು ಮಾತ್ರವಲ್ಲ.
ಬೆಂಗಳೂರು, ಮುಂಬೈ ಹಾಗೂ ಗಲ್ಫ್ ದೇಶಗಳಲ್ಲಿ ತಮ್ಮದೇ ಲಿಂಕ್ ಮೂಲಕ ಭೂಗತ ಲೋಕವನ್ನು ಆಳಿ ಅಳಿದವರು ಇದ್ದಾರೆ.
ಕಳೆದ ಎರಡು ದಶಕದಿಂದ ಕರಾವಳಿ ಅಂತಹ ರಕ್ತ ಸಿಕ್ತ ಅಧ್ಯಾಯವನ್ನೇ ನೋಡಿಲ್ಲ.
ಇದೀಗ ಮತ್ತೆ ಅಂತಹ ಲೋಕ ಸೃಷ್ಟಿಸಿ ಭೂಗತ ಜಗತ್ತಿಗೆ ಡಾನ್ ಆಗುವ ತವಕದಲ್ಲಿದ್ದ ಕುಖ್ಯಾತ ರೌಡಿಶೀಟರ್ ಆಕಾಶಭವನ ಶರಣ್ ಹಾಗೂ ನಾಲ್ವರು ಸಹಚರರನ್ನು ಮಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ತನ್ನ ಒಂದು ಸಣ್ಣ ತಪ್ಪಿನಿಂದ ಸಿಕ್ಕಿಬಿದ್ದು ಕೈಗೆ ಕೋಳ ಹಾಕಿಸಿಕೊಂಡಿದ್ದಾನೆ ಈ ಶರಣ್.
ಪೊಲೀಸ್ ದಾಖಲೆಗಳೇ ಹೇಳುವಂತೆ ಸರಿಸುಮಾರು ಕಳೆದ ಒಂದೂವರೆ ದಶಕದಿಂದ ಮಂಗಳೂರಿನ ಇತಿಹಾಸದಲ್ಲಿ ಅತೀ ಹೆಚ್ಚು ಕ್ರೈಂ ಬ್ಯಾಕ್‌ಹಿಸ್ಟರಿ ಇರುವ ಕಿರಾತಕ ಅಂದ್ರೆ ಅದು ಆಕಾಶಭವನ ಶರಣ್.
ಈವರೆಗೆ 22 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಆಕಾಶಭವನ ಶರಣ್ ಎರಡು ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬೇಲ್ ಮೂಲಕ ರಿಲೀಸ್ ಆಗಿದ್ದ.
ಈತ ಹೊರಬರುತ್ತಿದ್ದಂತೆ ಉಳಿದ ಪ್ರಕರಣದ ಅರೆಸ್ಟ್ ವಾರಂಟ್ ಮೇಲೆ ಪೊಲೀಸರು ಆತನನ್ನು ಹುಡುಕುತ್ತಿದ್ದರು.
ಆದರೆ ಈತ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಮಂಗಳೂರು, ಉಡುಪಿ, ಬೆಂಗಳೂರು ಅಂತ ಸುತ್ತಾಡುತ್ತಿದ್ದನಂತೆ.
ಒಮ್ಮೊಮ್ಮೆ ಮಂಗಳೂರಿನ ಆಕಾಶಭವನದ ಮನೆಗೆ ಮಧ್ಯರಾತ್ರಿ ಬಂದು ಬೆಳ್ಳಂಬೆಳಗ್ಗೆ ಜಾಗ ಖಾಲಿ ಮಾಡುತ್ತಿದ್ದ.
ಆದರೆ ಈತನ ಚಲನವಲನದ ಮೇಲೆ ಮಂಗಳೂರು ಖಾಕಿಪಡೆಯ ಹದ್ದಿನ ಕಣ್ಣು ಬಿದ್ದಿದ್ದು, ಶರಣ್‌ಗೆ ಗೊತ್ತೇ ಇರಲಿಲ್ಲ.
ಮಂಗಳೂರು ನಗರ ಹೊರವಲಯದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳಾರು ನಂದಿನಿ ಬ್ರೀಡ್ಜ್ ಬಳಿಯಲ್ಲಿ, ಕಳೆದ ಡಿ.8 ರಂದು ರಾತ್ರಿ 11-30 ರ ಸುಮಾರಿಗೆ ಹಳೆಯಂಗಡಿ ನಿವಾಸಿಯೊಬ್ಬರು
ದ್ವಿ ಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಅಪರಿಚಿತ ವ್ಯಕ್ತಿಗಳಿದ್ದ ಕಾರು ಅವರನ್ನು ಹಿಂಬಾಲಿಸಿ ತಡೆದು ಚಾಕು ತೋರಿಸಿ ಬೆದರಿಸಿ ಅವರ ಬಳಿಯಿದ್ದ ಮೊಬೈಲ್ ಫೋನ್,
3000 ರೂಪಾಯಿ ನಗದು ಹಾಗೂ ಟಿವಿಎಸ್ ದ್ವಿಚಕ್ರವನ್ನು ಸುಲಿಗೆ ಮಾಡಿದ್ದರು. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದರ ತನಿಖೆ ನಡೆಸುತ್ತಿದ್ದ ವೇಳೆ ಕೃತ್ಯಕ್ಕೆ ಉಪಯೋಗಿಸಿದ ಮೊಬೈಲ್‌ನಿಂದ ಈತ ಮತ್ತೋರ್ವ ರೌಡಿ ಶೀಟರ್‌ಗೆ ಕಾಲ್ ಮಾಡಿ ಕೊಲೆ ಬೆದರಿಕೆ ಹಾಕಿದ ವಿಷಯ ಪೊಲೀಸರಿಗೆ ದೊರೆಯುತ್ತದೆ.
ಜೊತೆಗೆ ಆತನ ಕೊಲೆಗೆ ಸ್ಕೆಚ್ ಸಹ ಹಾಕಿದ್ದಾನೆ ಎಂಬ ಅಂಶ ಬಯಲಾಗುತ್ತದೆ. ವಿಶೇಷ ಎಂದರೆ ಆತ ಯಾವ ರೌಡಿ ಶೀಟರ್‌ಗೆ ಕೊಲೆ ಬೆದರಿಕೆ ಹಾಕಿದ್ದಾನೋ ಅದೇ ಗುಂಪಿನಲ್ಲಿ ಈ ಹಿಂದೆ ಆಕಾಶಭವನ್ ಶರಣ್ ಗುರುತಿಸಿಕೊಂಡಿದ್ದನು.
ಆದ್ರೆ ಅದ್ಯಾಕೋ ಆತನಿಗೆ ಅಲ್ಲಿ ಸರಿಬಂದಿರಲಿಲ್ಲ.
ಆ ಕಾರಣಕ್ಕೆ ಶರಣ್ ಆ ಗುಂಪಿನಿಂದ ಹೊರಬಂದು ತನ್ನದೇ ಗ್ಯಾಂಗ್ ಕಟ್ಟಿಕೊಂಡಿದ್ದ. ಇದೀಗ ಅದೇ ಗುಂಪಿನ ರೌಡಿಶೀಟರ್‌ಗೆ ಮೊಬೈಲ್ ಮೂಲಕ ಕೊಲೆ ಬೆದರಿಕೆ ಹಾಕಿ ತಾನು ತೋಡಿದ್ದ ಖೆಡ್ಡಾಕ್ಕೆ ಬಿದ್ದಿದ್ದಾನೆ.
ಈತನ ಮೇಲಿತ್ತು ಬರೋಬ್ಬರಿ 22 ಕೇಸ್
ಆಕಾಶ್ ಭವನ ಶರಣ್ ಮೇಲೆ ಮಂಗಳೂರು ನಗರ ಕಮೀಷನರೇಟ್, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯಲ್ಲಿ ಸೇರಿ ಒಟ್ಟು 22 ಪ್ರಕರಣಗಳು ದಾಖಲಾಗಿದೆ.
ಇದರಲ್ಲಿ 6 ಕೊಲೆ, 2 ಕೊಲೆ ಯತ್ನ, 2 ದರೋಡೆಗೆ ಯತ್ನ, 4 ಹಲ್ಲೆ, 2 ಅತ್ಯಾಚಾರ, 1 ದರೋಡೆ ಮತ್ತು ಎನ್ ಡಿ ಪಿ ಎಸ್ ಕಾಯ್ದೆ, ಕಳವು, ಹಫ್ತಾ ವಸೂಲಿ ಪ್ರಕರಣಗಳು ಸೇರಿವೆ.
ಇದಲ್ಲದೆ ಇನ್ನೂ ಹಲವು ಪ್ರಕರಣಗಳು ಶರಣ್ ಮೇಲೆ ದಾಖಲಾಗುವ ಸಾಧ್ಯತೆ ಇದೆ. ಕಾರಣ ಕೆಲವು ಕೃತ್ಯಗಳಲ್ಲಿ ಸಂತ್ರಸ್ತರು ಶರಣ್ ಭಯದಿಂದ ಮುಂದೆ ಬಂದು ದೂರು ನೀಡುವ ಧೈರ್ಯ ಮಾಡಿರಲಿಲ್ಲ.
ಆದರೆ ಇದೀಗ ಮಂಗಳೂರು ನಗರ ಪೊಲೀಸ್ ಆಯಕ್ತರು ಸಂತ್ರಸ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೂರು ದಾಖಲಿಸುವ ಸಾಧ್ಯತೆಗಳಿವೆ.
2003 ರಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಪಿ.ಎಲ್.ಗೇಟ್ ಬಳಿಯಲ್ಲಿ ರಿಕ್ಷಾ ಚಾಲಕ ಫಾರೂಕ್ ಕೊಲೆ ಪ್ರಕರಣ.
2011ರಲ್ಲಿ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೆವಿಜಿ ಕಾಲೇಜ್ ಕ್ಯಾಂಪಸ್ ಪರಿಸರದಲ್ಲಿ ಕೆವಿಜಿ ಆಡಳಿತಾಧಿಕಾರಿ ರಾಮಕೃಷ್ಣ ಎಂಬವರ ಕೊಲೆ ಪ್ರಕರಣ.
2012 ರಲ್ಲಿ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಆಕಾಶಭವನ ನಿವಾಸಿ ಕುಮಾರ್ ಕೊಲೆ ಪ್ರಕರಣ. 2013 ರಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯಾದಲ್ಲಿ ಪ್ರಶಾಂತ್ ಯಾನೆ ಪಚ್ಚು ಕೊಲೆ ಪ್ರಕರಣ.
2015 ರಲ್ಲಿ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯಾಗಿದ್ದ ಮಾಡೂರು ಯೂಸುಫ್ ಎಂಬಾತನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಶರಣ್ ನೇರವಾಗಿ ಭಾಗಿಯಾಗಿದ್ದ ಅಂಶ ಬಯಲಾಗಿತ್ತು.
2020 ರಲ್ಲಿ ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣದಲ್ಲಿ ಈತನ ನೇರ ಕೈವಾಡ ಇದೆ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ.
ಈ ಕೊಲೆಯು ನಡೆಯುವ ಸಮಯ ಈತನು ಪರಪ್ಪನ ಅಗ್ರಹಾರಲ್ಲಿದ್ದು, ತನ್ನ ಸಹಚರರ ಮೂಲಕ ಈ ಕೊಲೆಯನ್ನು ನಡೆಸಿರುವುದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈತನ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಸಹ ತೆರೆಯಲಾಗಿದೆ.
ಇಷ್ಟೆಲ್ಲಾ ಪ್ರಕರಣಗಳು ಶರಣ್ ಮೇಲಿದ್ದರೂ ಕಳೆದ ವರ್ಷ ನ.11 ರಂದು ಬೆಂಗಳೂರು ಪರಪ್ಪನ ಅಗ್ರಹಾರ ಜೈಲ್ ನಿಂದ ನಿರಾಯಾಸವಾಗಿ ಜಾಮೀನಿನ ಮೇಲೆ ಹೊರಬಂದಿದ್ದನು. ಮತ್ತೆ ಅದೇ ಹಿಂದಿನ ಚಾಳಿ ಮುಂದುವರೆಸಿದ್ದ.
ಕರಾವಳಿ ಭೂಗತ ಲೋಕದ ಡಾನ್ ಆಗಲು ಬಯಸಿದ್ದ ಶರಣ್
ರೋಹಿತ್‌ದಾಸ್ ಅಲಿಯಾಸ್ ಆಕಾಶಭವನ ಶರಣ್‌ಗೆ ಕರಾವಳಿಯ ಭೂಗತ ಲೋಕದ ಅನಭಿಷಿಕ್ತ ದೊರೆಯಾಗಬೇಕು ಒಂದು ಆಸೆ ಇತ್ತು.
ಇತ್ತೀಚಿನ ವರ್ಷಗಳಲ್ಲಿ ಕರಾವಳಿಯಲ್ಲಿ ಫೀಲ್ಡಲ್ಲಿದ್ದು, ರೌಡಿಸಂ ಮಾಡುವ ತಾಕತ್ತು ಯಾರಿಗಿರಲಿಲ್ಲ.
ಕಾರಣ ಮಂಗಳೂರು ಪೊಲೀಸರ ಕಾರ್ಯದಕ್ಷತೆ ಮತ್ತು ಕಟ್ಟು ನಿಟ್ಟಿನ ಕ್ರಮಗಳು ಅಂಡರ್‌ವಲ್ಡ್ ಚಟುವಟಿಕೆಗಳನ್ನು ಸಂಪೂರ್ಣ ಅಳಿಸಿ ಹಾಕಿತ್ತು.
ಇದರ ಪರಿಣಾಮ ಕರಾವಳಿಯಲ್ಲಿ ಕಳೆದೆರಡು ದಶಕದಿಂದ ದೊಡ್ಡ ಮಟ್ಟದ ರಕ್ತ ಹರಿದಿರಲಿಲ್ಲ.
ಸುಪಾರಿ ಕಿಲ್ಲಿಂಗ್, ರೌಡಿಸಂ, ಶೂಟೌಟ್, ಉದ್ಯಮಿಗಳಿಗೆ ಹಫ್ತಾಕ್ಕಾಗಿ ಬೆದರಿಕೆ ಮುಂತಾದ ಕುಕೃತ್ಯಗಳಿಗೆ ಫುಲ್‌ಸ್ಟಾಪ್ ಬಿದ್ದಿತ್ತು.
ಇದನ್ನೇ ಅವಕಾಶವಾಗಿ ಬಳಸಿ ತಾನು ರೌಡಿ ಗ್ಯಾಂಗ್ ಕಟ್ಟಬೇಕು.
ಆ ಮೂಲಕ ಅಂಡರ್‌ವಲ್ಡ್‌ನ ಸಿಂಹಾಸನದಲ್ಲಿ ಆಸೀನರಾಬೇಕು ಎಂದು ಕನಸು ಕಂಡಿದ್ದ ಶರಣ್.
ಅದಕ್ಕಾಗಿ ಹೊರದೇಶಗಳಲ್ಲಿ ಕರಾವಳಿಯ ಇರುವ ಭೂಗತ ಪಾತಕಿಗಳ ಜೊತೆ ಕೈಜೋಡಿಸುವ ಬಗ್ಗೆ ಫೋನ್ ಮೂಲಕ ಮಾತುಕತೆಯೂ ನಡೆದಿತ್ತು.
ಜೊತೆಗೆ ಕರಾವಳಿಯಲ್ಲಿ ಪೊಲೀಸ್ ಉಪಟಳ ಜಾಸ್ತಿಯಾದ್ರೆ ಜಾಗ ಖಾಲಿ ಮಾಡಿ ಹೊರದೇಶದಲ್ಲಿದ್ದುಕೊಂಡೇ ಇಲ್ಲಿನ ಕ್ರೈಂ ಲೋಕವನ್ನು ಆಪರೇಟ್ ಮಾಡುವ ಸಲುವಾಗಿ ಪರಪ್ಪನ ಅಗ್ರಹಾರದಲ್ಲಿ
ಈತ ಜೈಲು ಶಿಕ್ಷೆ ಅನುಭವಿಸುತ್ತಿರುವ ವೇಳೆ ಬೆಂಗಳೂರಿನ ಲೋಕಲ್ ರೌಡಿ ಶೀಟರ್‌ಗಳೊಂದಿಗೆ ಸಖ್ಯ ಬೆಳೆಸಿ ಶರಣ್ ಅಲ್ಲಿನ ಕುಕೃತ್ಯಕ್ಕೆ ಕರಾವಳಿಯ ಹುಡುಗರನ್ನು ಕಳುಹಿಸುವ ಒಪ್ಪಂದ ಕೂಡಾ ನಡೆದಿತ್ತು.
ಆದರೆ ಕಾನೂನಿನ ಕೈಗಳು ಉದ್ದ ಎಂಬುವುದು ಮತ್ತೊಮ್ಮೆ ಸಾಬೀತಾಗಿ ಮಂಗಳೂರು ಪೊಲೀಸರು ಖೆಡ್ಡಾ ನಿರ್ಮಿಸಿ ಶರಣ್‌ನನ್ನು ಮತ್ತೆ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದ ರೇಪಿಸ್ಟ್ ಶರಣ್
ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ ಬಗ್ಗೆ ಕಳೆದ ವರ್ಷ ಜನವರಿ 7ರಂದು ಶರಣ್ ವಿರುದ್ಧ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ರೌಡಿ ಶರಣ್ ನನ್ನು ಬಂಧಿಸಿದ್ದರು. ಶರಣ್ ಹುಲಿವೇಷ ತರಬೇತಿ ನೀಡುತ್ತಿದ್ದು,
ತರಬೇತಿಗಾಗಿ ಬಂದಿದ್ದ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಲಾಡ್ಜ್ ವೊಂದಕ್ಕೆ ಕರೆದೊಯ್ದು, ಅಲ್ಲಿ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ.
ಅತ್ಯಾಚಾರದ ಬಳಿಕ ಬಾಲಕಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು.
LATEST NEWS
ವರದಿ ಪಡೆಯದೆ ತಮಿಳು ನಾಡಿಗೆ ನೀರು ಬಿಟ್ಟದ್ದೇಕೆ..? – ಶೋಭಾ ಕರಂದ್ಲಾಜೆ
ಉಡುಪಿ: ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆಯ ವಿವಾದ ವಿಚಾರಕ್ಕೆ ಸಂಬಂಧಪಟ್ಟಂತೆ ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಬರಗಾಲ ಇದೆ.
ವಾಡಿಕೆಯ ಮಳೆಯಾಗಿಲ್ಲ. ನಮ್ಮ ಬೆಂಗಳೂರು ಕರ್ನಾಟಕದ ಹೃದಯ ಅಲ್ಲಿಗೆ ನೀರಿನ ಸಮಸ್ಯೆ ಎದುರಾಗಿದೆ.
ಕಾವೇರಿ ಕಬಿನಿ ಡ್ಯಾಮ್ ಗಳಲ್ಲಿ ನೀರಿಲ್ಲ. ಕಳೆದ ಬಾರಿಗೆ ಹೋಲಿಸಿದ್ರೆ ಅರ್ಧದಷ್ಟು ನೀರು ಇಲ್ಲ.
ನಮಗೆ ಕುಡಿಯಲು 35 ಟಿಎಂಸಿ ನೀರುಬೇಕು. ಇಂದಿನ ಬೆಂಗಳೂರಿನ ಜನಸಂಖ್ಯೆ ಗೆ ಆಧಾರಿತ ಲೆಕ್ಕಾಚಾರ ಮಾಡಿಲ್ಲ.
ವಿಪಕ್ಷ, ಸಂಘಟನೆ ಜೊತೆ ಚರ್ಚೆ ಮಾಡಿಲ್ಲ. ಅಧಿಕೃತ ವರದಿ ಪಡೆಯದೆ 15 ಸಾವಿರ ಕ್ಯೂ ಸೆಕ್ಸ್ ನೀರು ಯಾಕೆ ಬಿಟ್ರಿ….? ಎಂದು ರಾಜ್ಯ ಸರಕಾರವನ್ನು ಸಚಿವೆ ತರಾಟೆಗೆ ತೆಗೆದುಕೊಂಡರು.
DAKSHINA KANNADA
Mangaluru: ಧಕ್ಕೆಯಲ್ಲಿ ಬ್ಯಾನರ್ ವಿವಾದ – ಮೀನುಗಾರರ ಸಂಘದಿಂದ ಸ್ಪಷ್ಟನೆ
ಮಂಗಳೂರು: ಮೀನುಗಾರಿಕಾ ಧಕ್ಕೆಯಲ್ಲಿ ವಿವಾದಕ್ಕೆ ಕಾರಣವಾಗಿರುವ ಈದ್ ಮಿಲಾದ್ ಬ್ಯಾನರ್ ಕುರಿತು ಹಸಿ ಮೀನುಗಾರರ ಸಂಘ ಸ್ಪಷ್ಟನೆ ನೀಡಿದೆ.
ಹಸಿ ಮೀನು ವ್ಯಾಪಾರಸ್ಥರ ಸಂಘ, ಸದಸ್ಯರು ಅವರರವರು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ ಹಬ್ಬ ದಿನಗಳಲ್ಲಿ ತಮ್ಮ ವ್ಯವಹಾರಕ್ಕೆ ಖಡ್ಡಾಯ ರಜೆ ಹೊಂದುವ ಪೂರ್ವ ನಿರ್ಧರಿತ ಪದ್ಧತಿಯಂತೆ ಈ ಬಾರಿ ಬರುವ ಸೆ. 28 ರಂದು ಮುಸ್ಲಿಮ್ ಭಾಂದವರ ಹಬ್ಬವಾದ ಈದ್ ಮಿಲಾದ್ ಪ್ರಯುಕ್ತ ಅವರು ಮತ್ತು ಇತರ ಧರ್ಮ ಭಾಂದವರು ಖಡ್ಡಾಯ ರಜೆ ಪಾಲಿಸುವ ಬಗ್ಗೆ ವಿವಿಧ ಸಂಘಗಳಲ್ಲಿ ನಿರ್ಣಯಿಸಿದಂತೆ ಪ್ರಕಟಣೆ ಫಲಕ ಅಳವಡಿಸಲಾಗಿರುತ್ತದೆ.
ಅದೇ ರೀತಿಯಲ್ಲಿ ವರ್ಷದ ಇತರ ದಿನಗಳಲ್ಲಿ ಇತರ ಹಬ್ಬಗಳಾದ ಬಾರ್ಕೂರು ಪೂಜೆ,ಉಚ್ಚಿಲ ಪೂಜೆ, ಗಣೇಶ ಚತುರ್ಥಿ, ಈದ್ ಉಲ್ ಫಿತರ್, ಬಕ್ರೀದ್, ಈದ್ ಮಿಲಾದ್, ಗುಡ್ ಫ್ರೈಡೇ ಮತ್ತು ಕ್ರಿಸ್ಮಸ್ ಎಂಬಿತ್ಯಾದಿ ಶುಭ ದಿನಗಳಲ್ಲಿ ಕೂಡಾ ಸಂಘಗಳ ನಿರ್ಣಯದಂತೆ ಮಾರಾಟಗಾರರು ಖಡ್ಡಾಯ ರಜೆ ಹೊಂದಿ ಆ ದಿನದ ಮಟ್ಟಿಗೆ ಮೀನುಗಾರಿಕಾ ಮಾರಾಟ ಚಟುವಟಿಕೆ ಸ್ಥಗಿತ ಗೊಳಿಸುವುದು ಅನೇಕ ವರ್ಷಗಳಿಂದ ನಡೆದು ಕೊಂಡು ಬಂದಿರುತ್ತದೆ.
ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆಯಲ್ಲಿ ಹಸಿ ಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘ, ಪರ್ಶಿಯನ್ ಬೋಟ್ ಯೂನಿಯನ್, ಟ್ರಾಲ್ ಬೋಟ್ ಯೂನಿಯನ್, ಫಿಶ್ ಬಯ್ಯರ್ಸ್ ಎಸೋಸಿಯೇಶನ್ ಮತ್ತಿತರ ಸಂಘಗಳು ಸಂಯುಕ್ತವಾಗಿ ಈ ರಜೆಗಳನ್ನು ನಿರ್ಧರಿಸಿದ್ದಾರೆ.
ಆದರೆ ಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ ಸಂಘದ ಮೀಲಾದ್ ರಜೆಯ ಪ್ರಕಟನಾ ಫಲಕ ( ಫ್ಲೆಕ್ಸ್ ) ದ ಬಗ್ಗೆ ಕೆಲವರು ತಪ್ಪು ಗ್ರಹಿಕೆಯ ಪ್ರಚೋದನಾತ್ಮಕ ಮಾಹಿತಿ ಹಂಚುತ್ತಿರುವುದು ಖೇದಕರ.
ಇಂತಹ ತಪ್ಪು ಮಾಹಿತಿ ಗಳಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು ಎಂದು ಮಂಗಳೂರು ದಕ್ಕೆ ಹಸಿಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘದ ಅಧ್ಯಕ್ಷ ಕೆ.ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
DAKSHINA KANNADA
Ullala: ರೈಲಿನಡಿಗೆ ತಲೆಯಿಟ್ಟು ಅವಿವಾಹಿತ ವ್ಯಕ್ತಿ ಜೀವಾಂತ್ಯ..!
ಉಳ್ಳಾಲ: ವ್ಯಕ್ತಿಯೊಬ್ಬರು ರೈಲಿನಡಿಗೆ ತಲೆಯಿಟ್ಟು ಜೀವಾಂತ್ಯ ಮಾಡಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲ ರೈಲ್ವೇ ಗೇಟ್ ಬಳಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಮಂಗಳೂರು ನಗರದ ಕೊಂಚಾಡಿಯ ನಿವಾಸಿಯಾಗಿರುವ ಪ್ರಶಾಂತ್ (44) ಎಂದು ಗುರುತಿಸಲಾಗಿದೆ.
ಸೆ.24 ರಂದು ಸಂಜೆ ಮನೆಯಿಂದ ಹೊರಟ ಪ್ರಶಾಂತ್ ಅವರು ಇಂದು ಬೆಳಗ್ಗೆ ರೈಲ್ವೇ ಗೇಟ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ.
ಆಕ್ಟಿವಾ ಸ್ಕೂಟರನ್ನು ಉಳ್ಳಾಲದ ರೈಲ್ವೇ ನಿಲ್ದಾಣದಲ್ಲಿರಿಸಿ, ಉಚ್ಚಿಲ ರೈಲ್ವೇ ಗೇಟ್ ವರೆಗೆ ನಡೆದುಕೊಂಡು ಹೋಗಿ ರೈಲ್ವೇ ಹಳಿಯಲ್ಲಿ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವಿವಾಹಿತರಾಗಿದ್ದ ಪ್ರಶಾಂತ್ ಅವರಿಗೆ ಯಾವುದೇ ಸಮಸ್ಯೆಗಳಿರಲಿಲ್ಲ.
ಅವರು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ವೈದ್ಯಕೀಯ ವರದಿಯಿಂದ ಲಭ್ಯವಾಗಿದೆ.
ಮಂಗಳೂರು ರೈಲ್ವೇ ಪೊಲೀಸ್ ಠಾಣೆಯ ಎಎಸ್ ಐ ಮಧುಚಂದ್ರ ನೇತೃತ್ವದಲ್ಲಿ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- LATEST NEWS7 days ago
Udupi: ಪತಿಗೆ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರು ಎರಚಿದ ಪತ್ನಿ..!
- FILM6 days ago
ರಶ್ಮಿಕಾ ಮಂದಣ್ಣರನ್ನು ನೋಡಿ ಮುಖ ತಿರುಗಿಸಿದ ಶ್ರದ್ಧಾ ಕಪೂರ್
- DAKSHINA KANNADA5 days ago
Ullala: 25 ಕೋಟಿ ರೂ. ಲಾಟರಿ ಒಲಿದಿದೆ ಎಂಬ ಲಿಂಕ್ ಕಳುಹಿಸಿ ಮೋಜಿನಾಟ..!
- bangalore6 days ago
FILM: ಎಲ್ಲೆಲ್ಲೂ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಸಾಂಗ್ ಹವಾ