Connect with us

LATEST NEWS

ನೆರೆಯಿಂದ ಜಲಾವೃತಗೊಂಡ ಮನೆ..! ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಹೋಗಲಾಗದೆ ಪರದಾಟ..!

Published

on

ಉಡುಪಿ:  ಜಿಲ್ಲೆಯಾದ್ಯಂತ ಭಾರಿ ಗಾಳಿ ಮಳೆ ಮುಂದುವರಿದೆ. ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬ್ರಹ್ಮಾವರ ತಾಲೂಕಿನ ಅಚ್ಲಾಡಿಯಲ್ಲಿ ವೃದ್ಧರೊಬ್ಬರ ಮನೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.  ನೆರೆಯ ಅವಾಂತರಕ್ಕೆ  ಸಿಲುಕಿದ್ದ ಮಹಾಬಲ ಶೆಟ್ಟಿಯವರು  ಹಠಾತನೆ ಉಸಿರಾಟದ ತೊಂದರೆಗೆ ತುತ್ತಾಗಿದ್ದಾರೆ.  ಮನೆ ನೆರೆಯಿಂದ ಜಲಾವೃತಗೊಂಡಿದ್ದರಿಂದ ಮಹಾಬಲ ಶೆಟ್ಟಿಯವರನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದೆ ಮನೆಯವರು ಹರಸಾಹಸ ಪಟ್ಟ ಘಟನೆ ನಡೆದಿದೆ.

ಉಡುಪಿಯಲ್ಲಿ ಧಾರಾಕಾರ ಗಾಳಿ, ಮಳೆ..! ಸಮುದ್ರ ತೀರದ ಜನಕ್ಕೆ ಕಟ್ಟೆಚ್ಚರ ನೀಡಿದ ಜಿಲ್ಲಾಡಳಿತ

ತಡವಾಗಿ ವಿಚಾರ ತಿಳಿದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ದೋಣಿ ಮುಖಾಂತರ ಮಹಾಬಲಶೆಟ್ಟಿಯವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದ್ದಾರೆ. ಇದೀಗ ಅವರ ಅರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ತಿಳಿದು ಬಂದಿದೆ.

LATEST NEWS

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ: ಮುಂದಿನ ಸಿಎಂ ಇವರೇ ?

Published

on

ಮಂಗಳೂರು/ಮಹಾರಾಷ್ಟ್ರ : ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯ ಗಳಿಸಿದೆ. ಮಹಾರಾಷ್ಟ್ರದಲ್ಲಿ ನೂತನ ಮುಖ್ಯಮಂತ್ರಿ ಯಾರೆಂಬ ಕುತೂಹಲದ ನಡುವೆಯೇ ಏಕನಾಥ್ ಶಿಂಧೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.


ಇಂದು ಬೆಳಿಗ್ಗೆ ರಾಜಭವನಕ್ಕೆ ತೆರಳಿದ ಅವರು ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರಿಗೆ ರಾಜೀನಾಮೆ ಸಲ್ಲಿಸಿದರು. ಈ ವೇಳೆ ಉಪಮುಖ್ಯಮಂತ್ರಿಗಳಾದ ಅಜಿತ್ ಪವರ್ ಹಾಗೂ ದೇವೇಂದ್ರ ಫಡ್ನವಿಸ್ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಸ್ಫೋಟ – 3 ಮನೆಗಳು ಕುಸಿದು ಇಬ್ಬರು ಸಾ*ವು
ಇನ್ನೂ ಈ ಬಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 132, ಶಿವಸೇನಾ ಶಿಂಧೆ ಬಣ 57, ಎನ್ ಸಿಪಿ ಅಜಿತ್ ಪವರ್ ಬಣ 41 ಹಾಗೂ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಕೇವಲ 49 ಸೀಟುಗಳನ್ನು ಗಳಿಸಿ ತೀವ್ರ ಮುಖಭಂಗ ಅನುಭವಿಸಿದೆ. ಅಲ್ಲದೇ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವೇ ಇಲ್ಲದಂತಾಗಿದೆ.

ಮುಂದಿನ ಮುಖ್ಯಮಂತ್ರಿ ಯಾರು ?
ಮಹಾರಾಷ್ಟ್ರದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ದೇವೇಂದ್ರ ಫಡ್ನವಿಸ್ ಜವಾಬ್ದಾರಿಯನ್ನು ಪಡೆಯಬಹುದು ಹಾಗೂ ಉಪಮುಖ್ಯಂತ್ರಿಗಳಾಗಿ ಏಕನಾಥ್ ಶಿಂಧೆ ಮತ್ತು ಅಜಿತ್ ಪವರ್ ಅಧಿಕಾರ ವಹಿಸುವ ಸಾಧ್ಯತೆ ಇದೆ.

Continue Reading

LATEST NEWS

ಮಧ್ಯಪ್ರದೇಶದಲ್ಲಿ ಸ್ಫೋಟ – 3 ಮನೆಗಳು ಕುಸಿದು ಇಬ್ಬರು ಸಾ*ವು

Published

on

ಮೊರೆನಾ: ಮಧ್ಯಪ್ರದೇಶದ ಮೊರೆನಾ ನಗರದಲ್ಲಿ ಮಧ್ಯರಾತ್ರಿಯ ಸುಮಾರಿಗೆ ಮೂರು ಮನೆಗಳು ಸ್ಫೋಟಗೊಂಡ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಥೋಡ್ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಕೆಲವರು ಅವಶೇಷಗಳಡಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಫೋಟಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಸೌರಭ್ ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸ್ಫೋಟದ ಕಾರಣವನ್ನು ಕಂಡುಹಿಡಿಯಲು ಫೋರೆನ್ಸಿಕ್ ತಂಡವೂ ಸ್ಥಳದಲ್ಲಿದೆ ಎಂದು ಅವರು ಹೇಳಿದ್ದಾರೆ.

Continue Reading

BIG BOSS

BBK 11: ಮೋಕ್ಷಿತಾ ಎರಡು ತಲೆ ನಾಗರಹಾವು: ಗುಡುಗಿದ ತ್ರಿವಿಕ್ರಮ್

Published

on

ದೊಡ್ಮನೆ ಇದೀಗ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಉಗ್ರಂ ಮಂಜು ರಾಜನಾಗಿ ಮನೆಯನ್ನು ಆಳುತ್ತಿದ್ದಾರೆ. ಮಂಜು ಸಾಮ್ರಾಜ್ಯದಲ್ಲಿ ಬಿಗ್ ಬಾಸ್ ನಾಮಿನೇಷನ್ ವಿಭಿನ್ನವಾಗಿದೆ ನಡೆದಿದೆ. ಈ ವೇಳೆ, ಮೋಕ್ಷಿತಾಗೆ ತ್ರಿವಿಕ್ರಮ್ ಎರಡು ತಲೆ ನಾಗರಹಾವು ಎಂದು ಗುಡುಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿರುವ ಪ್ರಜೆಯ ಫೋಟೋವನ್ನು ಬಾಣದಿಂದ ಚುಚ್ಚಿ ಮನೆಯ ಮುಖ್ಯದ್ವಾರದಿಂದ ಹೊರಹೋಗುವಂತೆ ಹೊಡೆದು ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ನಿಯಮ ಹೇಳಿರುತ್ತಾರೆ. ಅದರಂತೆ ಮೋಕ್ಷಿತಾ ಪೈ ಅವರು ನಾಮಿನೇಷನ್‌ಗೆ ಭವ್ಯ ಗೌಡ ಹಾಗೂ ತ್ರಿವಿಕ್ರಮ್ ಹೆಸರನ್ನು ಹೇಳುತ್ತಾರೆ. ಮಂಜು ಮುಂದೆ ತ್ರಿವಿಕ್ರಮ್ ಬಿಲ್ಡಪ್ ಕೊಡುತ್ತಾರೆ. ಆಚೆ ಬಂದ್ಮೇಲೆ ಅದೇ ಮಂಜು ಬಗ್ಗೆ ಏನೂ ಅಲ್ಲ ಎನ್ನುತ್ತಾರೆ ಎಂದು ಮೋಕ್ಷಿತಾ ಕಾರಣ ಹೇಳ್ತಾರೆ. ಅದಕ್ಕೆ, ಉಗ್ರಂ ಮಂಜು, ಅದು ನಂಬಿಕೆ ದ್ರೋಹ ಎಂದು ಕೂಗಾಡಿದ್ದಾರೆ.

ನಂತರ ತ್ರಿವಿಕ್ರಮ್ ತಮ್ಮನ್ನು ಸಮರ್ಥಿಸಿಕೊಂಡು, ನಾನು ಇವರನ್ನು ಮ್ಯಾನಿಪುಲೇಟ್ ಮಾಡುತ್ತಿಲ್ಲ. ನಿಜವಾಗಿಯೂ ಮಾಡ್ತಿರೋದು ಇವರು. ಅದಕ್ಕೆ ಸಿಟ್ಟಿಗೆದ್ದ ಉಗ್ರಂ ಮಂಜು, ಮಾತು ಬರುತ್ತದೆ ಎಂದು ನೀವು ಮಾತನಾಡಬೇಡಿ ಎನ್ನುತ್ತಾರೆ. ಆಗ ನನ್ನನ್ನು ಗೋಮುಖ ವ್ಯಾಘ್ರ ಎನ್ನುತ್ತಾರೆ. ನಿಜವಾಗಿಯೂ ಇವರು ಎರಡು ತಲೆ ನಾಗರಹಾವು ಎಂದು ಮೋಕ್ಷಿತಾ ವಿರುದ್ಧ ತ್ರಿವಿಕ್ರಮ್ ರೊಚ್ಚಿಗೆದ್ದಿದ್ದಾರೆ.

Continue Reading

LATEST NEWS

Trending

Exit mobile version