Connect with us

DAKSHINA KANNADA

ಉಳ್ಳಾಲ ಸೋಮೇಶ್ವರ ಬೀಚ್ ನೈತಿಕ ಪೊಲೀಸ್ ಗಿರಿ : ಐವರು ಪೊಲೀಸ್ ವಶಕ್ಕೆ..!

Published

on

ಸೋಮೇಶ್ವರ ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದವರ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಐವರುನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಉಳ್ಳಾಲ: ಸೋಮೇಶ್ವರ ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದವರ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಐವರುನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಉಳ್ಳಾಲ ಬಸ್ತಿಪಡ್ಪು ನಿವಾಸಿ ಯತೀಶ್, ಉಚ್ಚಿಲ ನಿವಾಸಿ ಸಚಿನ್ , ತಲಪಾಡಿ ನಿವಾಸಿ ಮೋಕ್ಷಿತ್, ಸುಹಾನ್, ಪ್ರಾಪ್ತ ವಯಸ್ಸಿನ ಅಖಿಲ್‌ ಇವರು ಪೊಲೀಸ್ ವಶದಲ್ಲಿರುವ ಆರೋಪಿಗಳಾಗಿದ್ದಾರೆ.

ಈ ನಾಲ್ವರು ಹಿಂದೂ ಸಂಘಟನೆ ಕಾರ್ಯಕರ್ತರಾಗಿದ್ದಾರೆಂದು ತಿಳಿದುಬಂದಿದೆ. ಮೂವರು ಕೇರಳ ಗಡಿಭಾಗ ತಲಪಾಡಿ ಅವರಾಗಿದ್ದರೆ, ಓರ್ವ ಉಳ್ಳಾಲ ಬಸ್ತಿಪಡ್ಪು ನಿವಾಸಿಯಾಗಿದ್ದಾನೆ.

ಕೇರಳ ಚೆರ್ಕಳದ ಜಾಫರ್ ಶರೀಫ್ ಹಾಗೂ ಮಂಜೇಶ್ವರ ಮೂಲದ ಮುಜೀಬ್ , ಆಶಿಕ್ ಹಲ್ಲೆಗೊಳಗಾದ ವಿದ್ಯಾರ್ಥಿಗಳಾಗಿದ್ದಾರೆ .

ಮಂಗಳೂರಿನ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ವಿಹಾರಕ್ಕಾಗಿ ಸೋಮೇಶ್ವರ ಸಮುದ್ರ ತೀರಕ್ಕೆ ನಿನ್ನೆ ಸಂಜೆ ಆಗಮಿಸಿದ್ದರು.

ಮೂವರು ಯುವಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ತಂಡವೊಂದು ಹಿಂಬಾಲಿಸಿತ್ತು.

ಹಿಂದೂ ವಿದ್ಯಾರ್ಥಿನಿಯರ ಜೊತೆ ಬಂದಿದ್ದ ಕಾರಣಕ್ಕೆ ತಂಡ ನೈತಿಕ ಪೊಲೀಸ್ ಗಿರಿ ನಡೆಸಿತ್ತು.

ಪ್ರಕರಣದ ವಿಚಾರಣೆಗಾಗಿ ಎರಡು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಇದೀಗ ತಂಡ ಐವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ.

ಈ ಮಧ್ಯೆ ಗಾಯಗೊಂಡ ಯುವಕರ ಜತೆಗಿದ್ದ ಮೂವರು ವಿದ್ಯಾರ್ಥಿನಿಯರು ಕೇರಳಕ್ಕೆ ತೆರಳಿರುವ ಮಾಹಿತಿಯಿದೆ.

DAKSHINA KANNADA

ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ‘ಸ್ಕಿಲ್ ಅಪ್’ ಕಾರ್ಯಕ್ರಮ

Published

on

ಮಂಗಳೂರು: ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ವತಿಯಿಂದ ‘ಸ್ಕಿಲ್ ಅಪ್’ ಎಂಬ ಕಾರ್ಯಕ್ರಮ ಸೆ. 23 ರಂದು ನಡೆಯಿತು.

ಆರೋಗ್ಯ ಕ್ಷೇತ್ರದ ಕಾರ್ಯನಿರ್ವಾಹಕರಿಗೆ ಅಗತ್ಯವಾದ, ಆಡಳಿತ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿತ್ತು.

ಮಂಗಳೂರಿನ ಸುಶಾಂತ್ ಕನ್ಸಲ್ಟೆನ್ಸಿಯ ಎಚ್. ಪ್ರಶಾಂತ್ ಮಿರಾಂಡ, ಎಂಡಿಪಿ ನಿರ್ದೇಶಕ ಪ್ರೊ.ವೆಂಕಟೇಶ್ ಅಮೀನ್ ಮತ್ತು ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಡೀನ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಕಾರ್ಯಕ್ರಮವನ್ನು ಎಚ್‌. ಪ್ರಶಾಂತ್ ಮಿರಾಂಡ, ಪ್ರೊ. ವೆಂಕಟೇಶ್ ಶೇಖರ್ ಅಮಿನ್, ಪ್ರೊ. ಡಾ. ಅಮುತಾ ಪಿ. ಮಾರ್ಲಾ, ಡಾ. ಶಾಶ್ವತ್ ಎಸ್., ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ವಹಣೆಗಾರ ಪ್ರೊ. ವಿಜಯ ಪಿ., ಎ.ಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮುಖ್ಯಾಧಿಕಾರಿ ಅವರು ಉದ್ಘಾಟಿಸಿದರು.

ಚೆನ್ನೈ ಅಪೋಲೊ ಪ್ರೋಟಾನ್ ಕ್ಯಾನ್ಸರ್ ಸೆಂಟರ್, ಆಥರ್ವ ಆರ್ಥೋ ಕೇರ್ ಮಂಗಳೂರು, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು(ಸಿಎಂಸಿ) ವೆಲ್ಲೂರು, ಡಾಕ್ಟರ್ ಟಿಎಂಎ ಪೈ ಆಸ್ಪತ್ರೆ, ಉಡುಪಿ, ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು ಮತ್ತು ಆಸ್ಪತ್ರೆ ದೇರೆಳಕಟ್ಟೆ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು, ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ, ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ) ಅತ್ತಾವರ, ಮಣಿಪಾಲ್ ಹೆಲ್ತ್ ಎಂಟರ್ಪ್ರೈಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ರಾಜಗಿರಿ ಆಸ್ಪತ್ರೆ ಬೆಂಗಳೂರು, ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಬೆಂಗಳೂರು, ರಾಮಯ್ಯ ಯೂನಿವರ್ಸಿಟಿ ಆಫ್ ಆಪ್ಲೈಡ್ ಸೈನ್ಸೆಸ್ ಬೆಂಗಳೂರು, ಶ್ರೀ ರೇಂಗ ಆಸ್ಪತ್ರೆ ತಮಿಳುನಾಡು, ಶ್ರೀನಿವಾಸ್ ಆಸ್ಪತ್ರೆ ಮುಕ್ಕ, ಸೈಂಟ್‌ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಬೆಂಗಳೂರು, ಯೂನಿಟಿ ಆಸ್ಪತ್ರೆ ಮಂಗಳೂರು, ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರು ಮತ್ತಿತರ ಸಂಸ್ಥೆಗಳಿಂದ ಆಧಿಕಅರಿ ಮತ್ತು ಸಿಬಂದಿ ಭಾಗವಹಿಸಿದ್ದರು. ಎ. ಜೆ. ಹ್ಯೂಮನ್ ರಿಸೋರ್ಸಸ್ ನ ಮ್ಯಾನೇಜರ್ ಶಶಧರ ಆಚಾರ್ಯ ಪ್ರಸ್ತಾವನೆಗೈದರು.

ಎ..ಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ನ ಸಹಾಯಕ ಪ್ರಾಧ್ಯಾಪಕಿ ಪ್ರೀಮ್ ರೋಸ್ ವಿಷ್ಣು ಸ್ವಾಗತಿಸಿದರು.

Continue Reading

DAKSHINA KANNADA

Mangaluru: ಸಿನೆಮಾಕ್ಕೆ ಸಾವಿದೆ, ನಾಟಕಕ್ಕೆ ಸಾವಿಲ್ಲ-ವಿಜಯಕುಮಾರ್ ಕೊಡಿಯಾಲ್‌ ಬೈಲ್‌

Published

on

ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್‌ ಗೌರವ ಅತಿಥಿಯಾಗಿ ಗುರುವಾರದಂದು ರಂಗಕರ್ಮಿ, ನಟ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ ಬೈಲ್‌ ಭಾಗವಹಿಸಿದ್ದರು.

ತನ್ನ ನಾಟಕ, ಸಿನೆಮಾ, ರಂಗಭೂಮಿ ಜರ್ನಿ ಬಗ್ಗೆ ವಿಜಯಕುಮಾರ್ ಕೊಡಿಯಾಲ್ ಬೈಲ್‌ ಈ ಸಂದರ್ಭ ಸಂವಾದ ನಡೆಯಿತು.

ರಂಗಭೂಮಿ, ಸಿನೆಮಾ ರಂಗ ಹೀಗೆ ಎರಡೂ ಕ್ಷೇತ್ರಗಳಲ್ಲಿ ನಾನು ಇಷ್ಟೊಂದು ಬೆಳೆದುಕೊಂಡು ಬರಲು ಕಾರಣವಾಗಿದ್ದು, ಮಾಧ್ಯಮ ಮಿತ್ರರು ಹಾಗು ನಾಡಿನ ಜನತೆ.

ಪತ್ರಿಕಾ ರಂಗದ ಮಿತ್ರರು ಕೊಟ್ಟ ಸಹಕಾರ ನಾನು ಎಂದಿಗೂ ಮರೆಯಲ್ಲ ಎಂದರು. ನಾನು ನೇರ ನಡೆ ನುಡಿಯ ವ್ಯಕ್ತಿ. ಹೀಗಾಗಿ ನನ್ನ ನೇರ ಮಾತುಗಳು ಹಲವರಿಗೆ ಕಹಿ ಆಗುತ್ತಿದೆ ಎಂದು ಅವರು ನಾನು ಏಕತಾನತೆಗೆ ಶರಣಾಗಿಲ್ಲ.

ನಾಟಕದಿಂದ ನಾಟಕಕ್ಕೆ ನಾನು ಬದಲಾವಣೆ ಕೊಟ್ಟಿದ್ದೇನೆ. ಇಲ್ಲಿ ನನಗೆ ತುಂಬಾ ತೃಪ್ತಿ ಇದೆ. ಸಿನೆಮಾಕ್ಕೆ ಸಾವಿದೆ. ಆದರೆ ನಾಟಕಕ್ಕೆ ಸಾವಿಲ್ಲ.

ತುಳುನಾಡಿನಲ್ಲಿ ಎಂದಿನವರೆಗೆ ಜಾತ್ರೆ, ನಾಟಕ, ಕೋಲ ಇರುತ್ತದೆಯೋ ಅಲ್ಲಿಯವರೆಗೂ ನಾಟಕ ರಂಗ ಇದ್ದೇ ಇರುತ್ತದೆ ಎಂದರು.

ನಾನು 26 ನಾಟಕಗಳನ್ನು ಬರೆದಿದ್ದೇನೆ. ಶಾಂತಿ ಮತ್ತು ಹಿಂಸೆಯ ಸಂಘರ್ಷದ ನಾಟಕ ‘ಒಯ್ಕ್ ಲ ಆವಂದಿನಕುಲು’ ನಾಟಕ ನನಗೆ ಆತ್ಮತೃಪ್ತಿ ಕೊಟ್ಟ ನಾಟಕವಾಗಿದೆ. ಆದರೆ ಆರ್ಥಿಕವಾಗಿ ನಾನು ಅದರಲ್ಲಿ ಸೋಲು ಕಂಡೆ ಎಂದರು.

ಜನರಿಗೆ ಈಗ ಹಾಸ್ಯ ನಾಟಕಗಳು ಬೇಡವಾಗಿದೆ. ‘ಮೈತಿದಿ’ ನಾಟಕದಲ್ಲಿ ಹಾಸ್ಯ ಕಡಿಮೆ. ಆದರೂ ಜನ 2 ಗಂಟೆಗಳ ಕಾಲ ಅಲ್ಲಾಡದೇ ನಾಟಕ ನೋಡ್ತಾರೆ.

ತುಳು ಸಿನೆಮಾಗಳು ಏಕತಾನತೆಯಿಂದ ಬೋರ್‌ ಹೊಡೆಸುತ್ತಿದೆ. ಇದು ವಿಷಾದನೀತ ಸಂಗತಿ ಎಂದರು.

ಕಾರ್ಯಕ್ರಮವನ್ನು ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಕರ್ಕೇರ ಅವರು ಉದ್ಘಾಟಿಸಿ, ಮಂಗಳೂರು ಪತ್ರಕರ್ತರ ಸಂಘ ನಡೆಸುವ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭ ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್‌, ಸಂಘದ ಸದಸ್ಯರು ಉಪಸ್ಥಿತರಿದ್ದರು.

Continue Reading

DAKSHINA KANNADA

ಅಂತಾರಾಷ್ಟ್ರೀಯ ಕ್ರೀಡಾ ಸಾಧಕ ದಿ. ಲೋಕನಾಥ ಬೋಳಾರ ಸ್ಮರಣಾರ್ಥ ಕ್ರೀಡಾಕೂಟ

Published

on

ಮಂಗಳೂರು: ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಶಾಖೆ ಮತ್ತು ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಬಂದರು ಮಂಗಳೂರು ಸಹಯೋಗದಲ್ಲಿ ಕರ್ನಾಟಕ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟ ಇಂದಿನಿಂದ ಸೆ. 30ವರೆಗೆ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ನಿಟ್ಟಿನಲ್ಲಿ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ನೀಡಲಾಯಿತು. ಇನ್ನೂ ಉದ್ಘಾಟನೆಗೂ ಮುನ್ನ ಉರ್ವ ಮಾರಿಯಮ್ಮ ದೇವಸ್ಥಾನದಿಂದ ಸ್ಪರ್ಧಿಗಳು ಮತ್ತು ಸಂಘಟಕರು ಮಂಗಳಾ ಕ್ರೀಡಾಂಗಣಕ್ಕೆ ಮೆರವಣಿಗೆಯ ಮೂಲಕ ಸಾಗಿ ಬಂದರು.

ಅಂತಾರಾಷ್ಟ್ರೀಯ ಕ್ರೀಡಾ ಸಾಧಕ ದಿವಗಂತ ಲೋಕನಾಥ ಬೋಳಾರ ಸ್ಮರಣಾರ್ಥ ನಡೆಯುತ್ತಿರುವ ಕ್ರೀಡಾ ಕೂಟವನ್ನು ಉಡುಪಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಸ್ಥಾಪಕ ಮತ್ತು ಅಧ್ಯಕ್ಷ ಡಾ. ಜಿ. ಶಂಕರ್ ಉದ್ಘಾಟಿಸಿ ಕಾರ್ಯಕ್ರಮದ ಕುರಿತು ಮೆಚ್ಚಗೆಯ ನುಡಿಗಳನ್ನಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಅತ್ಲೇಟಿಕ್ ಅಸೋಸಿಯೆಷನ್ ಅಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು.

ಇದೇ ವೇಳೆ ಮುಂಬಯಿ ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಎಚ್. ಅರುಣ್ ಕುಮಾರ್ ಮುಂದಾಳತ್ವದಲ್ಲಿ ರಾಷ್ಟ್ರೀಯ ಪವರ್ ಲಿಫ್ಟರ್ ಬೋಳಾರ ಇದರ ಕಮಲಾಕ್ಷ ಅಮೀನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಲೋಕನಾಥ ಬೋಳಾರ ಅವರ ಪತ್ನಿ ಡಾ. ದೇವಿ, ಮಂಗಳೂರು ಯಾoತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಉಮೇಶ್ ಟಿ. ಕರ್ಕೇರ, ಉಪಾಧ್ಯಕ್ಷ ಬಾಬು ಸಾಲ್ಯಾನ್ ಉಳ್ಳಾಲ, ಕ್ರೀಡಾ ಸಂಚಾಲಕ ವಿಜಯ ಸುವರ್ಣ ಬೆಂಗ್ರೆ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಜಿಲ್ಲಾ ಕೋಶಾಧಿಕಾರಿ ಭರತ್ ಕುಮಾರ್, ಮಂಗಳೂರು ಟ್ರಾಲ್ ಬೋಟ್ ಮಾಲಕರ ಸಂಘದ ಅಧ್ಯಕ್ಷ ನಿತಿನ್ ಕುಮಾರ್, ಉರ್ವ ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ಲೋಕೇಶ್ ಸುವರ್ಣ ಮತ್ತು ಮೊಕ್ತೇಸರರು ರಾಜ್ಯ ಅತ್ಲೇಟಿಕ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎ. ರಾಜವೇಲು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹನಿರ್ದೇಶಕ ರವಿ. ವೈ ನಾಯಕ್ ಮತ್ತು ಮತ್ಸ್ಯದ್ಯೋಮಿ ಗಳು ಪಾಲ್ಗೊಂಡಿದ್ದರು.

ಮೊಗವೀರ ವ್ಯವಸ್ಥಾಪಕ ಮಂಡಳಿಯ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ ಸ್ವಾಗತಿಸಿದರು.

Continue Reading

LATEST NEWS

Trending