Connect with us

    ಉಳ್ಳಾಲದಲ್ಲಿ ನದಿಗೆ ಹಾರಿದ್ದ ತಂದೆ -ಮಗ ಶವ ಉಡುಪಿ ಕಟಪಾಡಿ ಸಮುದ್ರ ಕಿನಾರೆಯಲ್ಲಿ ಪತ್ತೆ..!!?

    Published

    on

    ಉಳ್ಳಾಲದಲ್ಲಿ ನದಿಗೆ ಹಾರಿದ್ದ ತಂದೆ -ಮಗ ಶವ ಉಡುಪಿ ಕಟಪಾಡಿ ಸಮುದ್ರ ಕಿನಾರೆಯಲ್ಲಿ ಪತ್ತೆ..!!?

    ಉಡುಪಿ : ಉಡುಪಿಯ ಸಮುದ್ರ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ 2 ಅಪರಿಚಿತ ಶವಗಳು ಪತ್ತೆಯಾಗಿವೆ.

    ಕಟಪಾಡಿಯ ಮಟ್ಟು ಸಮುದ್ರ ಕಿನಾರೆಯಲ್ಲಿ ಈ ಶವಗಳು ಪತ್ತೆಯಾಗಿದ್ದು, ಅದರಲ್ಲಿ ಒಂದು ಶವ ಗಂಡಸಿದ್ದು ಹಾಗೂ ಮತೊಂದು ಗಂಡು ಮಗುವಿನ ಶವಗಳು ಎಂದು ಹೇಳಲಾಗಿದೆ.

    ಈ ಶವಗಳು ಫೆಬ್ರವರಿ 16 ರಂದು ಮಂಗಳೂರಿನ ಉಳ್ಲಾಲ ನೇತ್ರಾವತಿ ಸೇತುವೆಯಲ್ಲಿ ಕಾರನ್ನು ಪಾರ್ಕ್‌ ಮಾಡಿ ನಿಗೂಢವಾಗಿ ಕಣ್ಮರೆಯಾಗಿದ್ದ ಬಾಳ್ತಿಲ ಶಂಭೂರು ಚರ್ಚ್ ಬಳಿಯ ನಿವಾಸಿ ಗೋಪಾಲಕೃಷ್ಣ ರೈ(45), ಹಾಗೂ ಅವರ ಪುತ್ರ ಅನೀಶ್ ರೈ(6) ಎಂದು ಶಂಕಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮಂದುವರೆಸಿದ್ದಾರೆ.

    ಫೆಬ್ರವರಿ 16 ರ ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ತಂದೆ ಹಾಗೂ ಆರು ವರ್ಷದ ಪುತ್ರ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರ ನೇತ್ರಾವತಿ ಸೇತುವೆ ಬಳಿ ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ರುದರು ನಾಪತ್ತೆಯಾದವರನ್ನು ಬಂಟ್ವಾಳ , ಬಾಳ್ತಿಲ ಶಂಭೂರು ಚರ್ಚ್ ಬಳಿಯ ನಿವಾಸಿ ಗೋಪಾಲಕೃಷ್ಣ ರೈ(45), ಹಾಗೂ ಅವರ ಪುತ್ರ ಅನೀಶ್ ರೈ(6) ಎಂದು ಗುರುತಿಸಲಾಗಿತ್ತು.  ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ಗೋಪಾಲಕೃಷ್ಣ ರೈ ಅವರು ಕಳೆದ ಎರಡು ದಿನಗಳ ಹಿಂದೆ ಮುಂಬಯಿಯಿಂದ ಕೊಣಾಜೆಯ ಪಾವೂರಿಗೆ ಕುಟುಂಬದವರ ಸಂಬಂಧಿಕರ ಮನೆಗೆ ನೇಮಕ್ಕೆ ಬಂದಿದ್ದರು. ಭಾನುವಾರ ನಸುಕಿನ ಜಾವ 4.30 ರ ವೇಳೆ ಮಗ ಅನೀಶ್ ರೈ ರೊಂದಿಗೆ ಗೋಪಾಕೃಷ್ಣ ರೈ ಅವರು ಕಾರು ಚಲಾಯಿಸಿ ಮನೆಯಿಂದ ಹೊರಗೆ ಹೊರಟಿದ್ದರು ಎನ್ನಲಾಗಿದ್ದು, ಈ ಕಾರು ಭಾನುವಾರ ಬೆಳಗ್ಗಿನ ಜಾವ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಪತ್ತೆಯಾಗಿತ್ತು.ನೇತ್ರಾವತಿ ಸೇತುವೆಯಲ್ಲಿ ಕಾರು ನಿಂತಿದ್ದು ವಾಹನದಲ್ಲಿ ಯಾರು ಇಲ್ಲದ್ದು ನೋಡಿ ಸಾರ್ವಜನಿಕರು ಪೋಲಿಸರಿಗೆ ಮಾಹಿತಿಯನ್ನು ನೀಡಿದ್ದರು.
    ‘ತನಗೆ ಒಂದು ವಾರದಿಂದ ನಿದ್ರೆ ಬರುತ್ತಿಲ್ಲ. ನಾನೊಬ್ಬ ಮಗನನ್ನು ಕೊಲ್ಲುವ ಮಹಾ ಪಾಪಿ. ಇದಕ್ಕಾಗಿ ನನ್ನ ಕ್ಷಮಿಸಿರಿ.ಪತ್ನಿ ಅಶ್ವಿನಿ ರೈ ನಿನ್ನ ಬಿಟ್ಟು ಇಬ್ಬರೂ ದೂರ ಹೋಗುತ್ತಿರುವುದಾಗಿ’  ಡೆತ್ ನೋಟ್ ಬರೆದಿಟ್ಟದ್ದೂ ಪತ್ತೆಯಾಗಿತ್ತು. ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಕ್ಕಾಗಿ ರಾತ್ರಿ ಹಗಲು ಶೋಧಕಾರ್ಯ ನಡೆಸಿದ್ದರು. ಆದರೂ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ. ಇದೇಗ ಕಟಪ್ಪಾಡಿಯಲ್ಲಿಂದು ಸಿಕ್ಕಿದ ದೇಹಗಳು ಇವರದ್ದೇ ಎಂಬ ಅನುಮಾನ ಬಲವಾಗಿದ್ದು, ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ಆರಂಭಿಸಿದ್ದಾರೆ.

    ವಿಡಿಯೋಗಾಗಿ..

    Click to comment

    Leave a Reply

    Your email address will not be published. Required fields are marked *

    International news

    ಚೀನಾ ಸೈನಿಕರ ಕಾಲರ್ ನಲ್ಲಿ ಗುಂಡು ಪಿನ್ ಏಕಿದೆ ಗೊತ್ತಾ ?

    Published

    on

    ಮಂಗಳೂರು/ಬೀಜಿಂಗ್ : ಸಾಮಾನ್ಯವಾಗಿ ಭಾರತೀಯ ಸೇನೆ ಮತ್ತು ಚೀನಾ ಸೇನೆಯ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ವಿಷಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ಚೀನಾದ ಸೈನಿಕರ ತರಬೇತಿಯಲ್ಲಿ, ಯೋಧರ ಕೊರಳಪಟ್ಟಿಗಳ ಮೇಲೆ ಗುಂಡು ಪಿನ್ ಗಳನ್ನು ಅಂಟಿಸಿರುವುದು, ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ.

    ಮಿಲಿಟರಿ ಸೇವೆಯಲ್ಲಿ ಸೈನಿಕರು ನಡೆಯುವ ರೀತಿ, ಚಲಿಸುವ ಅಥವಾ ನಿಂತಿರುವ ರೀತಿಯಲ್ಲಿ ವಿಶೇಷ ಗಮನ ಹರಿಸುತ್ತಾರೆ. ಸೈನಿಕರು ತಮ್ಮ ಎದೆಯನ್ನು ಮೇಲಕ್ಕೆತ್ತಿ, ಕುತ್ತಿಗೆಯನ್ನು ನೇರವಾಗಿ ಮತ್ತು ಕೈಗಳನ್ನು ನೇರವಾಗಿ ನಿಲ್ಲಬೇಕು ಎಂಬ ನಿಯಮ ಇದೆ. ಈ ನಿಯಮ ಚೀನಾದ ಸೇನೆಯಲ್ಲೂ ಇದೆ.

    ಚೀನಾದ ಸೈನಿಕರ ಸಮವಸ್ತ್ರದ ಕೊರಳಪಟ್ಟಿಗಳ ಮೇಲೆ ಗುಂಡುಪಿನ್ ಗಳನ್ನು ಅಂಟಿಕೊಂಡಿರುವ ರೀತಿಯಲ್ಲಿ ಇರಿಸಲಾಗುತ್ತದೆ. ಇದಕ್ಕೆ ಒಂದು ಕಾರಣವೂ ಇದೆ. 2009ರಲ್ಲಿ ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ವರದಿ ಮಾಡಿತ್ತು. ಸೈನಿಕರು ತಮ್ಮ ಕುತ್ತಿಗೆಯನ್ನು ಸದಾ ಗಟ್ಟಿಯಾಗಿರಿಸಲು ಈ ರೀತಿಯಾಗಿ ಪಿನ್ ಗಳನ್ನು ಧರಿಸುತ್ತಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ

    ಕುತ್ತಿಗೆಯನ್ನು ಬಾಗಿಸಿದಾಗ ಪಿನ್ ಗಳು ಕುತ್ತಿಗೆಗೆ ಚುಚ್ಚುವ ರೀತಿಯಲ್ಲಿ ಕಾಲರ್ ನಲ್ಲಿ ಇರಿಸಲಾಗಿದೆ. ಸೈನಿಕರು ತಮ್ಮ ಕುತ್ತಿಗೆಯನ್ನು ಸದಾ ನೇರವಾಗಿರಿಸಲು ಈ ರೀತಿ ಮಾಡಲಾಗುತ್ತದೆ. ಅಲ್ಲದೆ, ಸದಾ ಅಲರ್ಟ್ ಆಗಿರಲು ಈ ರೀತಿ ಮಾಡಲಾಗುತ್ತದೆ. ಇದನ್ನು ಹೆಚ್ಚಾಗಿ ಪರೇಡ್ ಸಂದರ್ಭಗಳಲ್ಲಿ ಅನುಸರಿಸಲಾಗುತ್ತದೆ.

    ಪ್ರತಿಯೊಬ್ಬ ಸೈನಿಕನಿಗೂ ಈ ವಿಧಾನ ಅನ್ವಹಿಸುವುದಿಲ್ಲ. ಬದಲಾಗಿ ಕುತ್ತಿಗೆ ನೇರವಾಗಿರಿಸದ ಸೈನಿಕರಿಗೆ ಇದನ್ನು ಬಳಸುತ್ತಾರೆ ಮತ್ತು ಇದರಿಂದ ಅವರ ಭಂಗಿಯನ್ನು ಸರಿಪಡಿಸಲಾಗುತ್ತದೆ.

    Continue Reading

    DAKSHINA KANNADA

    ಜ.10 ರಂದು ಡೊಂಗರಕೇರಿ ವೆಂಕಟರಮಣ ದೇವಳದಲ್ಲಿ ವೈಕುಂಠ ಏಕಾದಶಿ

    Published

    on

    ಮಂಗಳೂರು :  ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಜನವರಿ 10 ರಂದು ಏಳನೇ ವರ್ಷದ ಏಕಾದಶಿಯನ್ನು ಅದ್ಧೂರಿಯಿಂದ ಆಚರಿಸಲಾಗುವುದು  ಎಂದು ದೇವಳದ ಮ್ಯಾನೇಜಿಂಗ್ ಟ್ರಸ್ಟಿ ಪ್ರವೀಣ್ ನಾಗ್ವೇಕರ್ ಬೋಳಾರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

    ಇಲ್ಲಿ ನಡೆಯುವ ಏಕಾದಶಿ ಕಾರ್ಯಕ್ರಮ ದೇವರ ಅಪ್ಪಣೆಯಂತೆ ನಡೆಯುತ್ತಿದ್ದು, ಪ್ರತೀ ಬಾರಿಯಂತೆ ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲಾಗುವುದು. ಅಂದು ಲೋಕ ಕಲ್ಯಾಣಕ್ಕಾಗಿ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಾಯಂಕಾಲ 4 ಗಂಟೆಗೆ ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ ನಡೆಯಲಿದೆ  ಎಂದು ಮಾಹಿತಿ ನೀಡಿದರು.

    ಇದನ್ನೂ ಓದಿ : ಮಹಾಕುಂಭ ಮೇಳಕ್ಕೆ ನಾಗಾಸಾಧುಗಳ ಗ್ರ್ಯಾಂಡ್ ಎಂಟ್ರಿ..!

    ಕಾರ್ಯಕ್ರಮದ ಉಸ್ತುವಾರಿ ಗಣೇಶ್ ನಾಗ್ವೇಕರ್ ಬೋಳಾರ್ ಮಾತನಾಡಿ, ಅಂದು ಬೆಳಗ್ಗೆ 7 ರಿಂದ 8ರ ವರೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 1 ರಿಂದ 3ರ ವರೆಗೆ ಭಜನಾ ಕಾರ್ಯಕ್ರಮ, ರಾತ್ರಿ 9ಕ್ಕೆ ದೀಪಾರಾಧನೆ ಮಹಾಪೂಜೆ ಬಳಿಕ 10 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ  ಎಂದು ಹೇಳಿದರು.

    ಪತ್ರಿಕಾಗೋಷ್ಟಿಯಲ್ಲಿ ವಿನಾಯಕ ಶೇಟ್, ಸಾಯಿದತ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

     

    Continue Reading

    LATEST NEWS

    ಅಯೋಧ್ಯೆಯಲ್ಲಿ ಭಾರೀ ಭದ್ರತಾ ಲೋಪ; ಅಧಿಕಾರಿಗಳನ್ನ ಬೆಚ್ಚಿಬೀಳಿಸಿದ ಆರೋಪಿಯ ಕನ್ನಡಕ..!

    Published

    on

    ಶ್ರೀರಾಮನ ಕ್ಷೇತ್ರ ಅಯೋಧ್ಯೆಯಲ್ಲಿ ಭದ್ರತಾ ಲೋಪವಾಗಿರುವ ಬಗ್ಗೆ ವರದಿಯಾಗಿದೆ. ವ್ಯಕ್ತಿಯೊಬ್ಬ ಕನ್ನಡಕದಲ್ಲಿ ಎರಡು ಕ್ಯಾಮೆರಾಗಳನ್ನು ಅಳವಡಿಸಿಕೊಂಡು ರಾಮಮಂದಿರಕ್ಕೆ ಎಂಟ್ರಿಯಾಗಿದ್ದ. ಕ್ಯಾಮೆರಾದಲ್ಲಿ ಗೌಪ್ಯವಾಗಿ ದೇಗುಲದ ಫೋಟೋವನ್ನು ತೆಗೆಯುತ್ತಿದ್ದ. ಇದು ಭದ್ರತಾ ಸಿಬ್ಬಂದಿಗೆ ಗೊತ್ತಾಗಿ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗ್ತಿದೆ.

    ಹೆಚ್ಚಿನ ವಿಚಾರಣೆಗಾಗಿ ಆತನನ್ನು ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ವರದಿಗಳ ಪ್ರಕಾರ, ಆರೋಪಿ ಸೋಮವಾರ ರಾಮಲಲ್ಲಾನ ದರ್ಶನ ಪಡೆಯಲು ಅಯೋಧ್ಯೆಗೆ ಆಗಮಿಸಿದ್ದ. ಕ್ಯಾಮೆರಾ ಇರುವ ಕನ್ನಡಕ ಧರಿಸಿದ್ದ ಈತ, ದೇಗುಲದ ಎಲ್ಲಾ ಭದ್ರತಾ ಚೆಕ್​ ಪಾಯಿಂಟ್ ದಾಟಿ ಬಂದರೂ ಸಿಬ್ಬಂದಿಗೆ ಗೊತ್ತಾಗಲಿಲ್ಲ.

    ಅದೇ ರೀತಿ ರಾಮಮಂದಿರ ಸಂಕಿರ್ಣಕ್ಕೆ ಆಗಮಿಸಿದ್ದ ಆರೋಪಿ ಫೋಟೋ ತೆಗೆಯಲು ಆರಂಭಿಸಿದ್ದ. ಇದು ಅಲ್ಲಿರುವ ಭದ್ರತಾ ಸಿಬ್ಬಂದಿಗೆ ಗೊತ್ತಾಗಿ ಕೂಡಲೇ ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಹೆಚ್ಚಿನ ತನಿಖೆಗಾಗಿ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಆತನನ್ನು ನೀಡಿದ್ದಾರೆ. ಆತ ಧರಿಸಿದ್ದ ಕನ್ನಡಕದ ಎರಡೂ ಬದಿಯಲ್ಲಿ ಕ್ಯಾಮೆರಾ ಅಳವಡಿಸಲಾಗಿತ್ತು. ಅದರ ಮೂಲಕ ಗೊತ್ತಾಗದ ರೀತಿಯಲ್ಲಿ ಸುಲಭವಾಗಿ ಫೋಟೋಗಳನ್ನು ತೆಗೆಯಬಹುದು.

    ಅಯೋಧ್ಯೆ ರಾಮಮಂದಿರದ ಭದ್ರತಾ ಜವಾಬ್ದಾರಿ ವಿಶೇಷ ಭದ್ರತಾ ಪಡೆ (ಎಸ್​ಎಸ್ಎಫ್​) ಬಳಿ ಇದೆ. ಯೋಗಿ ಆದಿತ್ಯನಾಥ ಸರ್ಕಾರ ವಿಶೇಷ ಭದ್ರತಾ ಪಡೆಯನ್ನು ನೇಮಿಸಿದೆ. ಪಿಎಸಿ ಮತ್ತು ಉತ್ತರ ಪ್ರದೇಶ ಪೊಲೀಸ್​ನ ಅತ್ಯುತ್ತಮ ಸಿಬ್ಬಂದಿಯನ್ನು ಸಂಯೋಜಿಸುವ ಎಸ್​​ಎಸ್​ಎಫ್ ಪಡೆ ರಚನೆ ಮಾಡಲಾಗಿದೆ.

    Continue Reading

    LATEST NEWS

    Trending