Connect with us

DAKSHINA KANNADA

ಉಳ್ಳಾಲ ಇನ್ಸ್ ಪೆಕ್ಟರ್ ಇನ್ಸ್ಟ್ಯಾಗ್ರಾಂ ಹ್ಯಾಕ್ : ನಕಲಿ ಖಾತೆಯಿಂದ ಹಣಕ್ಕಾಗಿ ಬೇಡಿಕೆ..!

Published

on

ಉಳ್ಳಾಲ: ಉಳ್ಳಾಲ ಠಾಣಾಧಿಕಾರಿ ಸಂದೀಪ್ ಅವರ ಹೆಸರಿನಲ್ಲಿ ಇನ್ಸ್ಟ್ಯಾಗ್ರಾಂ ನಕಲಿ ಖಾತೆಯನ್ನು ತೆರೆದಿರುವ ಹ್ಯಾಕರ್ ಗಳು ಹಲವರಲ್ಲಿ ಹಣಕ್ಕಾಗಿ ಬೇಡಿಕೆಯನ್ನು ಇಡುತ್ತಿದ್ದಾರೆ. ಈ ಕುರಿತು ಠಾಣಾಧಿಕಾರಿ ತನ್ನ ಇನ್ಸ್ಟ್ಯಾಗ್ರಾಂ ಹಾಗೂ ಫೇಸ್ ಬುಕ್ ಮುಖಪುಟದಲ್ಲಿ ದೂರು ಹಂಚಿಕೊಂಡಿದ್ದಾರೆ.

ಕಳೆದ ಎರಡು ದಿನಗಳಿಂದ ನಕಲಿ ಇನ್ಸ್ಟಾ ಗ್ರಾಂ ಖಾತೆ ತೆರೆದು ಸಂದೀಪ್ ಅವರ ಸ್ನೇಹಿತರಲ್ಲಿ ಹಣಕ್ಕಾಗಿ ಬೇಡಿಕೆ ಇಡಲಾಗಿದೆ. ಎಲ್ಲಾ ಸ್ನೇಹಿತರಲ್ಲಿ ಕಷ್ಟದಲ್ಲಿರುವ ಕಾರಣ ಹೇಳಿ 7,500 ರೂ ಕೊಡುವಂತೆ ಸಂದೇಶ ಹಾಕಲಾಗುತ್ತಿದೆ. ಇದು ಠಾಣಾಧಿಕಾರಿ ಗಮನಕ್ಕೆ ಬಂದು ಸಾಮಾಜಿಕ ಜಾಲತಾಣಗಳಲ್ಲಿ ಹಣ ನೀಡದಂತೆ ಸಂದೇಶ ಹಾಕಿದ್ದಾರೆ.

ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಸೇರಿದಂತೆ ಗಣ್ಯರು, ಪತ್ರಕರ್ತರ ಫೇಸ್ ಬುಕ್ ಅಕೌಂಟ್ ಗಳನ್ನು ಹ್ಯಾಕ್ ಮಾಡಿ ಸ್ನೇಹಿತರನ್ನು ಮತ್ತೆ ತನ್ನ ಖಾತೆಗೆ ಸೇರಿಸಿಕೊಂಡು ಹಣವನ್ನು ಕೇಳುವ ಜಾಲ ದ.ಕ ಜಿಲ್ಲೆಯಾದ್ಯಂತ ಹಲವು ತಿಂಗಳಿನಿಂದ ನಡೆಯುತ್ತಿದೆ.

ಈ ಕುರಿತು ಸೈಬರ್ ಸೆಲ್‍ನಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಹ್ಯಾಕರ್ ಗಳ ಪತ್ತೆ ಅಸಾಧ್ಯವಾಗುತ್ತಿದೆ.

ಮೂಲವೊಂದರ ಪ್ರಕಾರ ಉತ್ತರಭಾರತ ಮೂಲದ ರೈತರುಗಳ ಬ್ಯಾಂಕ್ ಖಾತೆಗೆ , ಹ್ಯಾಕರ್ ಗಳು ಹಣವನ್ನು ಮೋಸದ ಮೂಲಕ ವರ್ಗಾಯಿಸುತ್ತಿದ್ದಾರೆ.

ಅಲ್ಲಿ ರೈತರಿಗೆ ಸಣ್ಣ ಮೊತ್ತವನ್ನು ನೀಡಿ ಅವರಿಂದ ಬ್ಯಾಂಕ್ ಖಾತೆ ಸಂಖ್ಯೆ, ಒಟಿಪಿ ಪಡೆದುಕೊಂಡು ಹಣವನ್ನು ವರ್ಗಾಯಿಸುತ್ತಿದ್ದಾರೆ.

ಜಿಲ್ಲೆಯ ಸೈಬರ್ ಸೆಲ್ ಪೊಲೀಸರು ಅಕೌಂಟ್ ಫ್ರೀಝ್ ಮಾಡಿ ಉತ್ತರಭಾರತಕ್ಕೆ ತಲುಪುವ ಹೊತ್ತಲ್ಲಿ ಬಡರೈತ ಮಾತ್ರ ಪೊಲೀಸರಿಗೆ ಎದುರಾಗುತ್ತಿದ್ದಾನೆ. ಆದರೆ ಆರೋಪಿಗಳ ಸುಳಿವು ಲಭ್ಯವಾಗುತ್ತಿಲ್ಲ.

ಸೆಂಟ್ರಲೈಸ್ ಆಗಬೇಕಿದೆ ಸೈಬರ್ ಠಾಣೆ : ಅಂತರ್ಜಾಲದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ವಂಚನೆಗಳು ನಡೆಯುತ್ತಲೇ ಇದೆ.

ಇಡೀ ದೇಶದುದ್ದಕ್ಕೂ ವಂಚನೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ರಾಜ್ಯ ಪೊಲೀಸ್ ಇಲಾಖೆಯಡಿ ಸೈಬರ್ ಠಾಣೆಗಳಿರುವುದರಿಂದ ತನಿಖೆ ವೇಗವನ್ನು ಪಡೆಯದೆ ಹಲವು ಕೋನಗಳಲ್ಲಿ ಅಡಚಣೆಗಳು ಉಂಟಾಗಿ ಆರೋಪಿಗಳ ಪತ್ತೆ ಅಸಾಧ್ಯವಾಗುತ್ತಿದೆ .

ಇದರಿಂದ ಕೇಂದ್ರದಿಂದಲೇ ಸೈಬರ್ ಠಾಣೆ ನಿರ್ವಹಿಸುವ ಯೋಜನೆ ಜಾರಿಯಾದಲ್ಲಿ ಜಿಲ್ಲೆಯಲ್ಲಿ ಆಗುವ ಅಪರಾಧದ ಕುರಿತು ದೇಶದುದ್ದಕ್ಕೂ ಏಕಸಮಯದಲ್ಲಿ ತನಿಖೆಯನ್ನು ಆರಂಭಿಸಿ ತಕ್ಷಣಕ್ಕೆ ಆರೋಪಿ ಪತ್ತೆ ಸಾಧ್ಯವಾಗಬಹುದು ಅನ್ನುವ ಅಭಿಪ್ರಾಯ ಪೊಲೀಸರದ್ದಾಗಿದೆ.

DAKSHINA KANNADA

ಡಿ. 14ರಿಂದ 17 ರವರೆಗೆ “ಆಳ್ವಾಸ್ ವಿರಾಸತ್”

Published

on

ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವರ್ಷದ ‘ಆಳ್ವಾಸ್ ವಿರಾಸತ್ 2023’ ಡಿ.14ರಿಂದ 17ರವರೆಗೆ ಮೂಡಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ  ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದೊಂದಿಗೆ ನಡೆಯುವ ವಿರಾಸತ್ ಅನ್ನು ದೇಶಕ್ಕಾಗಿ ದೇಹತ್ಯಾಗ ಮಾಡಿದ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಗಿದೆ ಎಂದು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿ.14ರಂದು ರಾಜ್ಯಪಾಲರಾದ ಥಾವರ್‌ ಚಂದ್ ಗೆಹ್ಲೋಟ್ ವಿರಾಸತ್ ಉದ್ಘಾಟಿಸಲಿದ್ದು,ಈ ಬಾರಿಯ ವಿರಾಸತ್ ನಲ್ಲಿ ಬೆನ್ನಿದಯಾಲ್, ವಿಜಯಪ್ರಕಾಶ್, ಶ್ರೇಯಾ ಘೋಷಾಲ್ ಸ್ವರ ಮಾಧುರ್ಯ, ಪ್ರತಿನಿತ್ಯ 13 ಗಂಟೆಗಳ ಕಾಲ 750 ಮಳಿಗೆಗಳಲ್ಲಿ ಪ್ರದರ್ಶನ ಹಾಗೂ ಮಾರಾಟಗಳು ನಡೆಯಲಿವೆ. ಭವ್ಯ ಸಾಂಸ್ಕೃತಿಕ ಮೆರವಣಿಗೆ ಬಳಿಕ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ, ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪದರ್ಶನ ಮೇಳ, ಚಿತ್ರಕಲಾ ಮೇಳಗಳು ಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ಸ್ಕೌಟ್ಸ್ ಗೈಡ್ಸ್ ಸಾಹಸಮಯ ಚಟುವಟಿಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾ ಗೋಷ್ಠಿಯಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Continue Reading

BELTHANGADY

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪದಾಧಿಕಾರಿಗಳ ಆಯ್ಕೆ

Published

on

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಯುವ ವೇದಿಕೆ ಬೆಳ್ತಂಗಡಿ ಇದರ 2023-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ವಾಣಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.


ಅಧ್ಯಕ್ಷರಾಗಿ ಚಂದ್ರಕಾಂತ್ ನಿಡ್ಡಾಜೆ, ಕಾರ್ಯದರ್ಶಿಯಾಗಿ ಸುರೇಶ್ ಕೌಡಂಗೆ, ಕೋಶಾಧಿಕಾರಿಯಾಗಿ ರಂಜಿತ್ ಕಳೆಂಜ, ಜೊತೆ ಕಾರ್ಯದರ್ಶಿಯಾಗಿ ತೀಕ್ಷಿತ್ ಕೆ.ಕಲ್ಬೆಟ್ಟು ದಿಡುಪೆ, ಉಪಾಧ್ಯಕ್ಷರುಗಳಾಗಿ ನಿತಿನ್ ಕಲ್ಮಂಜ ಮತ್ತು ಪ್ರಶಾಂತ್ ಅಂತರ ಕಡಿರುದ್ಯಾವರ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಮೋದ್ ದಿಡುಪೆ, ಕಾನೂನು ಸಲಹೆಗಾರರಾಗಿ ನವೀನ್ ಬಿ.ಕೆ.ಕಲ್ಮಂಜ, ಯಶವಂತ್ ಬನಂದೂರು ಮತ್ತು ಜಯಾನಂದ ಗೌಡ ಬೆಳ್ತಂಗಡಿ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಯಶವಂತ ಗೌಡ ಪುದುವೆಟ್ಟು, ಮಂಜುನಾಥ ಗೌಡ ಚಾರ್ಮಾಡಿ, ವಿಕ್ರಮ್ ಧರ್ಮಸ್ಥಳ, ಸತೀಶ್ ಬೆಳಾಲು, ಪ್ರಸಾದ್ ಅಡಿಮಾರ್ ಚಾರ್ಮಾಡಿ, ಹೇಮಂತ್ ಕಳಿಯ, ದಿನೇಶ್ ದೇಂತ್ಯಾರು ಕೊಯ್ಯೂರು, ಪ್ರದೀಪ್ ನಾಗಾಜೆ ನಾವೂರು, ಭರತ್ ಗೌಡ ಪುದುವೆಟ್ಟು, ನಿತೇಶ್ ಬೆಳ್ತಂಗಡಿ, ಅಕ್ಷಯ್ ಕುಮಾರ್ ಮಾಚಾರ್, ಕರುಣಾಕರ ಗೌಡ ಉಜಿರೆ, ಗಿರೀಶ್ ನಿಡ್ಲೆ ಮತ್ತು ಕಿಶಾನ್ ಗೌಡ ಸವಣಾಲು ಇವರನ್ನು ಆಯ್ಕೆ ಮಾಡಲಾಯಿತು. ಈ ಸಂಧರ್ಭದಲ್ಲಿ ತಾಲೂಕು ಸಂಘದ ನಿಕಟ ಪೂರ್ವ ಕಾರ್ಯದರ್ಶಿ ಮೋಹನ್ ಗೌಡ ಕೊಯ್ಯೂರು ಉಪಸ್ಥಿತರಿದ್ದರು. ಯಶವಂತ್ ಬನಂದೂರು ಸ್ವಾಗತಿಸಿದರು.ಕಾರ್ಯದರ್ಶಿ ಸುರೇಶ್ ಕೌಡಂಗೆ ವಂದಿಸಿದರು.

Continue Reading

BELTHANGADY

ಖೋಟ ನೋಟು ಪ್ರಕರಣ: 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ..!

Published

on

ಧರ್ಮಸ್ಥಳ: ಖೋಟ ನೋಟು ಪ್ರಕರಣದಲ್ಲಿ ಕಳೆದ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮೋಹನ ಕುಮಾ‌ರ್ ಎಂಬಾತನನ್ನು ಬೆಂಗಳೂರು ಗೊಲ್ಲಹಳ್ಳಿ ಬಸ್ಸು ತಂಗುದಾಣದ ಬಳಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಘಟನೆ ನಡೆದಿದೆ.

ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸುಮಾರು 4 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಆರೋಪಿ ಕೆಂಪೆರಾಜ್ ಎಂಬಾತನನ್ನು ಚಿಕ್ಕನಾಯಕನಹಳ್ಳಿ ತಾಲೂಕು ಮುಳಬಾಗಿಲು ಬಸ್ಸು ತಂಗುದಾಣದ ಬಳಿಯಿಂದ ಧರ್ಮಸ್ಥಳ ಠಾಣಾ ಪಿ.ಎಸ್.ಐ ಸಮರ್ಥ ಆರ್ ಗಾಣಿಗೇ‌ರ್, ಹೆಚ್ ಸಿ 607 ರಾಜೇಶ್ ಎನ್, ಪಿ.ಸಿ 2406 ವಿನಯ ಕುಮಾರ್ ರವರುಗಳ ತಂಡ ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದೆ.

Continue Reading

LATEST NEWS

Trending