Connect with us

    LATEST NEWS

    ಫೆ.10ಕ್ಕೆ ಮುಂದೂಡಿಕೆಯಾದ ಉಳ್ಳಾಲ ಉರೂಸ್‌

    Published

    on

    ಉಳ್ಳಾಲ: ಕೊರೋನ ಭೀತಿ ಹಿನ್ನೆಲೆಯಲ್ಲಿ ಉಳ್ಳಾಲ ದರ್ಗಾ ಉರೂಸ್ ಕಾರ್ಯಕ್ರಮ ಎರಡು ತಿಂಗಳು ಮುಂದೂಡಲ್ಪಟ್ಟಿದ್ದು, ಫೆ.10 ರಿಂದ ಮಾರ್ಚ್ 6ರವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ತಿಳಿಸಿದ್ದಾರೆ.


    2020ರಲ್ಲಿ ನಡೆಯಬೇಕಾಗಿದ್ದ ಉಳ್ಳಾಲ ಉರೂಸ್ ಕೊರೋನ ಕಾರಣದಿಂದ ಮುಂದೂಡಲ್ಪಟ್ಟು ಡಿ.23 ರಿಂದ ಜ.16ವರೆಗೆ ನಡೆಸಲು ದರ್ಗಾ ಆಡಳಿತ ಸಮಿತಿ ತೀರ್ಮಾನಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಸ್ಥಳ ಪರಿಶೀಲನೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕೂಡಾ ನಡೆದಿತ್ತು.

    ಉರೂಸ್ ಗೆ ಸಕಲ ಸಿದ್ಧತೆ ನಡೆಯುತ್ತಿದ್ದಂತೆ ಕೆಲವು ಕಡೆ ಒಮೈಕ್ರೊನ್ ಸೋಂಕು ಪತ್ತೆ ಆದ ಕಾರಣ ಜಿಲ್ಲಾಡಳಿತ ಎರಡು ತಿಂಗಳ ಕಾಲ ಉರೂಸ್ ಕಾರ್ಯಕ್ರಮ ಮುಂದೂಡುವಂತೆ ದರ್ಗಾ ಆಡಳಿತ ಸಮಿತಿಗೆ ಸೂಚಿಸಿತ್ತು.

    ಇದಕ್ಕೆ ಸಹಮತ ವ್ಯಕ್ತಪಡಿಸಿದ ದರ್ಗಾ ಆಡಳಿತ ಸಮಿತಿ ಡಿಸೆಂಬರ್ ತಿಂಗಳಲ್ಲಿ ನಿಗದಿಯಾಗಿದ್ದ ಉರೂಸ್ ಕಾರ್ಯಕ್ರಮ ವನ್ನು ಎರಡು ತಿಂಗಳ ಕಾಲ ಮುಂದೂಡಿತ್ತು

    Click to comment

    Leave a Reply

    Your email address will not be published. Required fields are marked *

    LATEST NEWS

    ಭೀಕರ ರಸ್ತೆ ಅ*ಪಘಾ*ತ; ಯುವ ಪರ್ತಕರ್ತ ದು*ರ್ಮ*ರಣ

    Published

    on

    ಮಂಗಳೂರು/ಚಿಕ್ಕಬಳ್ಳಾಪುರ: ಕಾರು ನಿಯಂತ್ರಣ ತಪ್ಪಿ ಕರೆ ಕಟ್ಟೆಗೆ ಡಿ*ಕ್ಕಿ ಹೊ*ಡೆದು ಯುವ ಪತ್ರಕರ್ತ ದಾ*ರುಣವಾಗಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮಾಚಹಳ್ಳಿ ಎಂಬಲ್ಲಿ ನಡೆದಿದೆ.

    ಯುವ ಪತ್ರಕರ್ತ ಭರತ್ (34) ಮೃ*ತ ವ್ಯಕ್ತಿ ಎಂದು ಗುರುತಿಸಲಾಗಿದೆ.

    ಮೃತ ಭರತ್‌ನ ಮಗಳಿಗೆ ಬರುವ ಫೆಬ್ರವರಿ 7 ರಂದು ನಾಮಕರಣವನ್ನು ಗುಡಿಬಂಡೆಯಲ್ಲಿ ಹಮ್ಮಿಕೊಂಡಿದ್ದು ಈ ಸಂಭಂಧ ಗುಡಿಬಂಡೆಗೆ ಹೋಗಿ ಕಲ್ಯಾಣ ಮಂಟಪ ಮಾತನಾಡಿ, ವಾಪಸ್ಸು ಬಾಗೇಪಲ್ಲಿಗೆ ಹೋಗುವ ಸಮಯದಲ್ಲಿ ಮಾಚಹಳ್ಳಿ ಕೆರೆ ಕಟ್ಟೆಯ ಮೇಲೆ ಕಾರು ನಿಯಂತ್ರಣ ತಪ್ಪಿ ಕೆರೆ ಕಟ್ಟೆಗೆ ಡಿ*ಕ್ಕಿ ಹೊಡೆದಿದೆ. ಅ*ಪಘಾ*ತದಿಂದ ಭರತ್‌ನ ತಲೆಗೆ ಗಂ*ಭೀರ ಗಾ*ಯವಾಗಿದೆ. ತಕ್ಷಣವೇ ಗಾ*ಯಾಳನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದಾರೆ.

     

    ಇದನ್ನೂ ಓದಿ : ಹೆಲ್ಮೆಟ್ ಧರಿಸದೇ ಇದ್ದರೆ ಪೆಟ್ರೋಲ್ ಇಲ್ಲ: ಸರಕಾರದ ಆದೇಶ

     

    ಮೃ*ತರು ಪತ್ನಿ ಮತ್ತು ಒಂದು ವರ್ಷದ ಹೆಣ್ಣು ಮಗುವನ್ನು ಅ*ಗಲಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    ಕಾಶ್ಮೀರದ ಝಡ್-ಮೋರ್ಹ್ ಸುರಂಗ ಇಂದು ಲೋಕಾರ್ಪಣೆ: ಏನಿದರ ವಿಶೇಷತೆ ?

    Published

    on

    ಮಂಗಳೂರು/ಶ್ರೀನಗರ : ಲಡಾಖ್ ಗೆ ಸೇನಾ ಸಂಪರ್ಕವನ್ನು ಸುಲಭವಾಗಿಸುವ, ರಾಷ್ಟ್ರೀಯ ಭದ್ರತೆಯ ನಿಟ್ಟಿನಲ್ಲಿ ಪ್ರಮುಖವೆನಿಸಿರುವ ಝೆಡ್-ಮೋರ್ (ಘಮೋರ್) ಸುರಂಗವು ಲೋಕಾರ್ಪಣೆಗೆ ಸಜ್ಜಾಗಿದೆ.

    ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ 2,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ 6.5 ಕಿ.ಮೀ. ಉದ್ದದ ಈ ಸುರಂಗವನ್ನು ಇಂದು (ಸೋಮವಾರ) ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

    ವ್ಯೂಹಾತ್ಮಕವಾಗಿ ಪ್ರಾಮುಖ್ಯ ಪಡೆದಿರುವ ಲಡಾಖ್ ಪ್ರದೇಶಕ್ಕೆ ಈ ಸುರಂಗವು ವರ್ಷಪೂರ್ತಿ ಸಂಪರ್ಕ ಕಲ್ಪಿಸಲಿದೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಕಾಶ್ಮೀರದಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಸುರಂಗ ಲೋಕಾರ್ಪಣೆ ಬಳಿಕ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಇದನ್ನೂ ಓದಿ: ಹೆಲ್ಮೆಟ್ ಧರಿಸದೇ ಇದ್ದರೆ ಪೆಟ್ರೋಲ್ ಇಲ್ಲ: ಸರಕಾರದ ಆದೇಶ

    ಏನಿದರ ವಿಶೇಷತೆ?
    ಪ್ರಾಕೃತಿಕವಾಗಿಯೂ ರಮ್ಯ ತಾಣವಾಗಿರುವ ಪ್ರದೇಶಕ್ಕೆ ಸರ್ವ ಋತುವಿನಲ್ಲಿ ಮತ್ತು ಎಂಥದ್ದೇ ಹವಾಮಾನವಿದ್ದರೂ ಈ ಸುರಂಗವು ಸಂಪರ್ಕ ಒದಗಿಸಲಿದೆ. ವಿಶೇಷವಾಗಿ ಸೋನಾಮಾರ್ಗ್ ಅಭಿವೃದ್ದಿ ಪ್ರಾಧಿಕಾರ (ಎಸ್ ಡಿಎ) ನಿರ್ಮಿಸಿರುವ ಅತ್ಯಾಧುನಿಕ ಐಸ್-ಸ್ಕೇಟಿಂಗ್ ರಿಂಕ್ ಚಳಿಗಾಲದ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ಹೊಸ ಭರವಸೆಯನ್ನು ಹುಟ್ಟುಹಾಕಿದೆ.

    ಐಸ್-ಸ್ಕೇಟಿಂಗ್ ರಿಂಕ್, ಈಗಗಾಲೇ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ. ಚಳಿಗಾಲದ ಕ್ರೀಡಾ ತಾಣವಾಗಿ ಸೋನಾಮಾರ್ಗ್ ಹೊಸ ಯುಗಕ್ಕೆ ನಾಂದಿ ಹಾಡಿದೆ. ಇದು ಪ್ರವಾಸಿಗರನ್ನಷ್ಟೇ ಆಕರ್ಷಿಸುತ್ತಿಲ್ಲ. ಇದು ಸ್ಥಳೀಯ ಯುವಕರಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದೆ.

    ಸೇನೆಗೆ ಅನುಕೂಲ
    ಪಾಕ್, ಚೀನ ಜತೆ ಲಡಾಖ್ ಗಡಿ ಹಂಚಿಕೊಂಡಿರುವ ಕಾರಣ ಈ ಸುರಂಗವು ರಾಷ್ಟ್ರೀಯ ಭದ್ರತೆ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಸುರಂಗ ಹಾಗೂ ನಿರ್ಮಾಣ ಹಂತದಲ್ಲಿರುವ ಝೋಜಿಲಾ ಸುರಂಗವು ಭವಿಷ್ಯದಲ್ಲಿ ಲಡಾಖ್ ಗೆ ಸರ್ವ ಋತು ಸಂಪರ್ಕ ಒದಗಿಸಲಿದೆ. ನಾಗರಿಕರು ಮತ್ತು ಸೇನಾ ಸಂಚಾರ (ಸೇನಾ ಸಿಬ್ಬಂದಿ, ಸಲಕರಣೆಗಳು ಹಾಗೂ ಇತರ ಪೂರೈಕೆಗಳು)ಕ್ಕೆ ಇದರಿಂದ ಅನುಕೂಲ ಆಗಲಿದೆ.

    ಜತೆಗೆ, ದೇಶದ ಉಳಿದ ಭಾಗಗಳ ಜತೆ ಲಡಾಖ್ ಸಂಪರ್ಕ ಹೊಂದಲು, ಆ ಮೂಲಕ ವ್ಯಾಪಾರ-ವಹಿವಾಟು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದೆ ಹಾಗೂ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.

     

     

    Continue Reading

    LATEST NEWS

    ಸಾಸ್ತಾನ  : ಟೋಲ್ ಗೇಟ್‌ಗೆ ನುಗ್ಗಿದ ಟಿಪ್ಪರ್ ಲಾರಿ

    Published

    on

    ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಸಾಸ್ತಾನ ಟೋಲ್ ಗೇಟ್ ಗೆ ನುಗ್ಗಿದ ಘಟನೆ  ಭಾನುವಾರ(ಜ. 12) ರಾತ್ರಿ ಸಂಭವಿಸಿದೆ.

    ಜಲ್ಲಿ ಕಲ್ಲು ತುಂಬಿಕೊಂಡು ಬ್ರಹ್ಮಾವರ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂ*ತ್ರಣ ತಪ್ಪಿ ಸಾಸ್ತಾನ ಟೋಲ್ ಗೇಟ್ ಗೆ ಡಿ*ಕ್ಕಿ ಹೊಡೆದಿದೆ. ಡಿ*ಕ್ಕಿಯ ರಭಸಕ್ಕೆ ಟೋಲ್ ಗೇಟ್ ಜಖಂ ಗೊಂಡಿದೆ. ಮೇಲ್ನೋಟಕ್ಕೆ ಚಾಲಕ ಮದ್ಯಪಾನ ಮಾಡಿ ಟಿಪ್ಪರ್ ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ.

    ಇದನ್ನೂ ಓದಿ : ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!

    ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.

    Continue Reading

    LATEST NEWS

    Trending