Connect with us

  DAKSHINA KANNADA

  ಉಳ್ಳಾಲ: ನೈತಿಕ ಪೊಲೀಸ್ ಗಿರಿ ಪ್ರಕರಣ-ಬಂಧಿತರ ಸಂಖ್ಯೆ 5ಕ್ಕೇರಿಕೆ, ಠಾಣೆಗೆ ಬಿಜೆಪಿ- ಹಿಂದೂ ನಾಯಕರ ದೌಡು..!

  Published

  on

  ಮಂಗಳೂರು ಹೊರ ವಲಯದ ಉಳ್ಳಾಲ ಸೋಮೇಶ್ವರ ಬೀಚ್ ನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಅಪ್ರಾಪ್ತ ಆರೋಪಿ ಸೇರಿ ಈವರೆಗೆ ನೈತಿಕ ಪೊಲೀಸ್ ಗಿರಿ ಕೇಸ್ ನಲ್ಲಿ ಬಂಧಿತರವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.   

  ಉಳ್ಳಾಲ: ಮಂಗಳೂರು ಹೊರ ವಲಯದ ಉಳ್ಳಾಲ ಸೋಮೇಶ್ವರ ಬೀಚ್ ನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

  ತಲಪಾಡಿ ನಿವಾಸಿ ಅಖಿಲ್ ಬಂಧಿತ ಆರೋಪಿಯಾಗಿದ್ದಾನೆ. ಅಪ್ರಾಪ್ತ ಆರೋಪಿ ಸೇರಿ ಈವರೆಗೆ ನೈತಿಕ ಪೊಲೀಸ್ ಗಿರಿ ಕೇಸ್ ನಲ್ಲಿ ಬಂಧಿತರವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

  ಬಸ್ತಿಪಡ್ಪು‌ ನಿವಾಸಿ ಯತೀಶ್, ತಲಪಾಡಿ ನಿವಾಸಿಗಳಾದ ಸಚಿನ್ ಮತ್ತು ಸುಹಾನ್, ಅಖಿಲ್ ಸೇರಿ ಓರ್ವ ಅಪ್ರಾಪ್ತ ಬಂಧಿತ ಆರೋಪಿಗಳಾಗಿದ್ದಾರೆ.

  ಐಪಿಸಿ 307 ಹಾಗೂ ಗಲಭೆ ಸೃಷ್ಟಿ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ.

  ಮತ್ತಷ್ಟು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಮೂರು ಪ್ರತ್ಯೇಕ ತಂಡದಿಂದ ತನಿಖೆ ಮುಂದುವರಿಸಲಾಗಿದೆ.

  ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳ ದೂರಿ‌ನಡಿ ಎಫ್ಐಆರ್ ದಾಖಲಾಗಿತ್ತು.ಅದರಂತೆ ಹಿಂದೂ ಸಂಘಟನೆಗೆ ಸೇರಿದ ಐವರು ಆರೋಪಿಗಳನ್ನು ಈವರೆಗೆ ಬಂಧಿಸಲಾಗಿದೆ.

  ಮಂಗಳೂರು ಪೊಲಿಸ್ ಕಮೀಷನರ್ ಭೇಟಿ :
  ಪ್ರಕರಣ ಗಂಭೀರತೆ ಪಡೆದ ಹಿನ್ನೆಲೆ ಉಳ್ಳಾಲ ಪೊಲೀಸ್ ಠಾಣೆಗೆ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಇಂದು ಭೇಟಿ ನೀಡಿ ಮಾಹಿತಿ ಪಡೆದರು.

  ಸಿಸಿಬಿ ಎಸಿಪಿ ಪಿ.ಎ ಹೆಗ್ಡೆ ಹಾಗೂ ಉಳ್ಳಾಲ ಇನ್ಸ್‌ಪೆಕ್ಟರ್‌ ಅವರುಗಳಿಂದ ಕಮಿಷನರ್ ಮಾಹಿತಿ ಪಡೆದರು. ಮೂರು ಪೊಲೀಸ್ ತಂಡಗಳಿಗೆ ಸಮಗ್ರ ತನಿಖೆ ನಡೆಸಿ ಉಳಿದ ಆರೋಪಿಗಳ ಶೀಘ್ರ ಪತ್ತೆಗೆ ಆದೇಶಿಸಿದರು.

  ಬಿಜೆಪಿ- ಹಿಂದು ನಾಯಕರಿಂದ ಠಾಣೆಗೆ ಭೇಟಿ :
  ಅಮಾಯಕರ ಬಂಧನವಾಗಿದೆ ಎಂದು ಆರೋಪಿಸಿ ಉಳ್ಳಾಲ ಠಾಣೆಗೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ನಾಯಕರು ಭೇಟಿ ನೀಡಿದರು.

  ಉಳ್ಳಾಲ ಠಾಣೆಗೆ ಆಗಮಿಸಿದ ಬಿಜೆಪಿ ನಾಯಕ ಸತೀಶ್ ಕುಂಪಲ ಹಾಗೂ ವಿಎಚ್ ಪಿ, ಭಜರಂಗದಳ ಪ್ರಮುಖರು ಕಮಿಷನರ್ ಕುಲದೀಪ್ ಜೈನ್ ಭೇಟಿಯಾಗಿ ಮಾತುಕತೆ ನಡೆಸಿದರು.

  ಹಲವು ಅಮಾಯಕ ಹಿಂದೂ ಯುವಕರ ಬಂಧಿಸಲಾಗಿದೆ. ತಕ್ಷಣ ಅಮಾಯಕರ ಬಿಡುಗಡೆಗೆ ಮಾಡಬೇಕು ಎಂದು ಹಿಂದೂ ನಾಯಕರು ಒತ್ತಾಯಿಸಿದರು.

  ಈ ಸಂದರ್ಭ ಪ್ರಕರಣದ ಆರೋಪಿಗಳನ್ನಷ್ಟೇ ಬಂಧಿಸುತ್ತೇವೆ. ವಶಕ್ಕೆ ಪಡೆದವರು ಕೇಸ್ ನಲ್ಲಿ ಇಲ್ಲದಿದ್ದರೆ ಬಿಡುಗಡೆ ಮಾಡುವ ಭರವಸೆಯನ್ನು ಪೊಲೀಸ್ ಕಮಿಷನರ್ ನೀಡಿದರು.

  ಕಮಿಷನರ್ ಭೇಟಿ ಬಳಿಕ ಬಿಜೆಪಿ ಮುಖಂಡ ಸತೀಶ್ ಕುಂಪಲ ಮಾಧ್ಯಮಗಳ ಜತೆ ಮಾತನಾಡಿ ಕಾಂಗ್ರೆಸ್ ಸರ್ಕಾರ ಬಂದ ಬೆನ್ನಲ್ಲೇ ಉಳ್ಳಾಲದಲ್ಲಿ ಅಹಿತಕರ ಘಟನೆ ನಡೆದಿದೆ.

  ಕಾಲೇಜಿನ ಅನ್ಯಕೋಮಿನ ವಿದ್ಯಾರ್ಥಿಗಳು ಸೋಮೇಶ್ವರ ಬೀಚ್ ಗೆ ಬಂದಿದ್ದಾರೆ.

  ಪರಮ ಪವಿತ್ರ ಕ್ಷೇತ್ರದಲ್ಲಿ ಅಶ್ಲೀಲವಾಗಿ ವರ್ತಿಸಿದಾಗ ಸ್ಥಳೀಯ ಯುವಕರು ಪ್ರಶ್ನೆ ಮಾಡಿದ್ದಾರೆ.

  ಇದು ತಪ್ಪಾದರೂ ದೇವರ ಕ್ಷೇತ್ರದ ಬಳಿ ಅಶ್ಲೀಲ ವರ್ತನೆ ಕಂಡು ಆಕ್ರೋಶ ಸಹಜವಾಗಿದೆ. ಏನೇ ಆದರೂ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಲಿ.

  ಇಂತಹ ಘಟನೆಗಳಿಗೆ ಆಸ್ಪದ ನೀಡುವುದು ಬೇಡ ಅಮಾಯಕರ ಬಂಧನ ಸರಿಯಲ್ಲ, ಅಮಾಯಕರನ್ನ ಬಿಡುತ್ತೇವೆ ಅಂದಿದ್ದಾರೆ.

  ಯುವಕರು ನಮ್ಮ ಕಾರ್ಯಕರ್ತರಾ ಅಥವಾ ಅಲ್ಲವಾ ಅನ್ನೋದು ಪ್ರಶ್ನೆ ಅಲ್ಲ.

  ಅವರ ಕುಟುಂಬದವರು ಬಂದು ಹೇಳಿದಾಗ ನಾವು ಠಾಣೆಗೆ ಬಂದಿದ್ದೇವೆ. ಎಲ್ಲಾ ವೈದ್ಯಕೀಯ ಕಾಲೇಜುಗಳ ಪ್ರಮುಖರ ಜತೆಗೆ ಮಾತನಾಡಿ ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳುವ ಪ್ರಯತ್ನ ಮಾಡುತ್ತೇನೆ ಎಂದರು.

  DAKSHINA KANNADA

  ಸರ್ಕಾರಿ ಬಸ್ ಮತ್ತು ಟ್ಯಾಂಕರ್ ಮಧ್ಯೆ ಅಪ*ಘಾತ; ಹಲವರಿಗೆ ಗಾ*ಯ

  Published

  on

  ಚಿಕ್ಕಮಗಳೂರು: KSRTC ಹಾಗೂ ಟ್ಯಾಂಕರ್ ಮಧ್ಯೆ ಭಯಾನಕ ಡಿ*ಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಹಲವರಿಗೆ ಗಂಭೀರ ಗಾ*ಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

  ಮೂಡಿಗೆರೆ ತಾಲೂಕಿನ ಕಡೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರವಳಲು ಬಳಿ ಈ ಅಪ*ಘಾತ ಸಂಭವಿಸಿದೆ. ಅಪ*ಘಾತದಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾ*ಯಗಳಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾ*ನಿ ಸಂಭವಿಸಿಲ್ಲ.

  KSRTC, ಟ್ಯಾಂಕರ್ ಅಪ*ಘಾತದಿಂದ ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  Continue Reading

  DAKSHINA KANNADA

  ರಾಷ್ಟಮಟ್ಟದ ಪರ್ವತಾರೋಹಣಕ್ಕೆ ಕರ್ನಾಟಕದ ಏಕೈಕ ವಿದ್ಯಾರ್ಥಿನಿ…!

  Published

  on

  ಪುತ್ತೂರು : ಅಟಲ್ ಬಿಹಾರಿ ವಾಜಪೇಯಿ ಇನ್‍ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಮತ್ತು ಅಲೈಡ್ ಸ್ಪೋರ್ಟ್ಸ್ ಆಶ್ರಯದಲ್ಲಿ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದ ಎನ್‍ಸಿಸಿ ಅಖಿಲ ಭಾರತ ವಿಶೇಷ ಮೂಲ ಪರ್ವತಾರೋಹಣ ತರಬೇತಿಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಆರ್ಮಿ ಎನ್‍ಸಿಸಿ ಕೆಡೆಟ್ ಸಮೃದ್ಧಿ ಚೌಟ ಭಾಗವಹಿಸಿ ಮುಂದಿನ ರಾಷ್ಟ್ರಮಟ್ಟದ ಪರ್ವತಾರೋಹಣಕ್ಕೆ ಆಯ್ಕೆಗೊಂಡಿದ್ದಾರೆ.


  2024ನೇ ಮೂಲ ಪರ್ವತಾರೋಹಣ ತರಬೇತಿಯಲ್ಲಿ ಕರ್ನಾಟಕದಿಂದ ಆಯ್ಕೆಯಾದ ಎನ್‍ಸಿಸಿ ಹುಡುಗಿಯರ ವಿಭಾಗದಲ್ಲಿ ಸಮೃದ್ಧಿ ಚೌಟ ಏಕೈಕ ಕೆಡೆಟ್ ಆಗಿದ್ದಾರೆ. ಹಿಮಾಚಲ ಪ್ರದೇಶದ ಮನಾಲಿಯ 15,700 ಅಡಿ ಎತ್ತರದ ‘ಶಿಥಿಧರ್’ ಶಿಖರವನ್ನು ಏರಲು ಎನ್.ಸಿ.ಸಿ ಮಹಾನಿರ್ದೇಶಕರು ನವದೆಹಲಿ ವತಿಯಿಂದ ಮೂಲ ಪರ್ವತಾರೋಹಣ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ದೇಶದ 48 ಮಂದಿ ಎನ್.ಸಿ.ಸಿ. ಕೆಡೆಟ್ ಗಳು ಭಾಗವಹಿಸಿದ್ದರು.

  ಇದನ್ನೂ ಓದಿ : ಬಜೆಟ್ 2024 : ಚಿನ್ನ, ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವೆ ನಿರ್ಮಲಾ ಸೀತಾರಾಮನ್

  ಸಮೃದ್ಧಿ ಚೌಟ ಈ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ತರಬೇತಿಯ ‘ಬೆಸ್ಟ್ ರೋಪ್ ಟೀಮ್’ ಪ್ರಶಸ್ತಿಗೆ ಭಾಜನರಿದ್ದಾರೆ. ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಕ್ಯಾ.ಜೋನ್ಸನ್ ಡೇವಿಡ್ ಸಿಕ್ವೇರಾ ಅವರ ತರಬೇತಿಯಲ್ಲಿ ಪಳಗಿದ ಸಮೃದ್ಧಿ ಚೌಟ ಅವರ ಸಾಧನೆಗೆ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ.ಫಾ. ಲಾರೆನ್ಸ್ ಮಸ್ಕರೇನಸ್ ಹಾಗೂ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಅವರು ಅಭಿನಂದಿಸಿದ್ದಾರೆ.

  Continue Reading

  DAKSHINA KANNADA

  ಇನ್​ಸ್ಟಾಗ್ರಾಂನಲ್ಲಿ ಈ ರೀಲ್ಸ್​ ನೋಡುವುದರಿಂದಲೂ ನಿಮ್ಮ ತೂಕ ಹೆಚ್ಚಾಗಬಹುದು!

  Published

  on

  ಫೇಸ್​ಬುಕ್, ಇನ್​ಸ್ಟಾಗ್ರಾಂ ಮತ್ತು ಸ್ನಾಪ್​ಚಾಟ್​ನಲ್ಲಿ ನಾವು ನೋಡುವ ರೀಲ್‌ಗಳು ಹೆಚ್ಚು ವ್ಯಸನಕಾರಿ ಎಂದು ಎಲ್ಲಾ ವಯಸ್ಸಿನ ಜನರು ಒಪ್ಪಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ತಾವು ವೀಕ್ಷಿಸಲು ಇಷ್ಟಪಡುವದನ್ನು ತಮ್ಮ ಆದ್ಯತೆಗಳನ್ನು ಹೊಂದಿದ್ದರೂ, ಒಮ್ಮೆ ನೀವು ಸ್ಕ್ರೋಲಿಂಗ್ ಮಾಡಲು ಪ್ರಾರಂಭಿಸಿದರೆ, ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ನಾವು ಆಹಾರಕ್ಕೆ ಸಂಬಂಧಿಸಿದಂತೆ ಅತಿಯಾಗಿ ರೀಲ್ಸ್ ನೋಡುವುದರಿಂದಲೂ ನಮ್ಮ ತೂಕ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

  “ಆಹಾರದ ವೀಡಿಯೊಗಳು ವ್ಯಸನಕಾರಿಯಾಗಿದೆ. ಏಕೆಂದರೆ ಅವು ನಮ್ಮ ಆಹಾರದ ಕಡುಬಯಕೆಗಳೊಂದಿಗೆ ಸಂಯೋಜಿಸಲ್ಪಟ್ಟ ಉತ್ಪನ್ನಕ್ಕೆ ಹಂತ-ಹಂತದ ಪ್ರಕ್ರಿಯೆಯನ್ನು ಪ್ರದರ್ಶಿಸುತ್ತವೆ” ಎಂದು ತಜ್ಞರು ಹೇಳುತ್ತಾರೆ. ನೀವು ರೀಲ್ಸ್​ನಲ್ಲಿ ರುಚಿಯಾದ ಅಡುಗೆ ತಯಾರಿಸುವುದನ್ನು ಹೆಚ್ಚಾಗಿ ನೋಡುತ್ತಿದ್ದರೆ, ಫುಡ್ ವ್ಲಾಗ್​​ಗಳನ್ನು ನೋಡುತ್ತಿದ್ದರೆ ನಿಮಗೂ ಆ ತಿನಿಸನ್ನು ತಿನ್ನಬೇಕೆಂಬ ಬಯಕೆಯಾಗುವುದು ಸಹಜ. ಅದು ನಿಮಗೇ ಗೊತ್ತಿಲ್ಲದಂತೆ ನಿಮ್ಮಲ್ಲಿ ತಿನ್ನುವ ಹಪಹಪಿಯನ್ನು ಹೆಚ್ಚಿಸುತ್ತದೆ.

  ದೆಹಲಿ ಮೂಲದ ಮನಶ್ಶಾಸ್ತ್ರಜ್ಞರಾದ ಶಿವಂಗಿ ರಜಪೂತ್ ಪ್ರಕಾರ, ಆಹಾರದ ರೀಲ್‌ಗಳನ್ನು ನೋಡುವುದು ನಿಮ್ಮ ಮನಸ್ಸಿನ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಈ ರೀಲ್‌ಗಳು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸಬಹುದು, ವಿಶ್ರಾಂತಿ ನೀಡಬಹುದು ಮತ್ತು ಅಡುಗೆಮನೆಯಲ್ಲಿ ಸೃಜನಶೀಲತೆಯನ್ನು ಪ್ರೇರೇಪಿಸಬಹುದು. ಇದು ಬಲವಾದ ಕಡುಬಯಕೆಗಳನ್ನು ಪ್ರಚೋದಿಸಬಹುದು, ಇದು ಅತಿಯಾಗಿ ತಿನ್ನುವುದು ಅಥವಾ ಅನಾರೋಗ್ಯಕರ ತಿನ್ನುವ ಮಾದರಿಗಳಿಗೆ ಕಾರಣವಾಗುತ್ತದೆ.

  ಪ್ರಲೋಭನಗೊಳಿಸುವ ಆಹಾರ ಚಿತ್ರಗಳಿಗೆ ನಿರಂತರ ಒಡ್ಡಿಕೊಳ್ಳುವಿಕೆಯು ಮೆದುಳಿನ ಡೋಪಮೈನ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಆಹ್ಲಾದಕರ ಭಾವನೆಗಳನ್ನು ಸೃಷ್ಟಿಸುತ್ತದೆ. ನೀವು ಹಲವಾರು ವಿಭಿನ್ನ ವೀಡಿಯೊಗಳನ್ನು ನೋಡುವುದರಿಂದ, ನಿಮ್ಮ ಬೆರಳುಗಳು ಸ್ಕ್ರೋಲಿಂಗ್ ಮಾಡುತ್ತಲೇ ಇರುತ್ತವೆ, ಇದು ಹೆಚ್ಚಿದ ಪರದೆಯ ಸಮಯ ಮತ್ತು ದೈಹಿಕ ಚಟುವಟಿಕೆಯ ಕೊರತೆಗೆ ಕಾರಣವಾಗುತ್ತದೆ. ನಿಷ್ಕ್ರಿಯತೆಯು ನಿಮ್ಮ ಸಾಮಾನ್ಯ ಹಸಿವಿನ ಸಂಕೇತವನ್ನು ಅಡ್ಡಿಪಡಿಸುತ್ತದೆ ಮತ್ತು ತಿನ್ನಲು ಕಾರಣವಾಗಬಹುದು.

  Continue Reading

  LATEST NEWS

  Trending