Monday, January 24, 2022

ಭಾವಕ್ಯತೆಗೆ ಸಾಕ್ಷಿಯಾದ ಉಳ್ಳಾಲ: ಹಿಂದೂ ಹುಡುಗಿಯ ಮದುವೆ ಮಾಡಿಸಿದ ಮುಸ್ಲಿಂ ಕುಟುಂಬ

ಉಳ್ಳಾಲ: ಮಗಳ ಮದುವೆ ನಡೆಸಲು ಪರದಾಡುತ್ತಿದ್ದ ಹಿಂದೂ ಮಹಿಳೆಗೆ ಮುಸ್ಲಿಂ ಕುಟುಂಬವೊಂದು ನೆರವಾಗುವ ಮೂಲಕ ಜಿಲ್ಲೆಯಲ್ಲಿ ಭಾವಕ್ಯತೆ ಇನ್ನೂ ಜೀವಂತವಾಗಿದೆ ಎಂದು ಉಳ್ಳಾಲದ ಶಕ್ತಿನಗರದ ಕುಟುಂಬವೊಂದು ತೋರಿಸಿಕೊಟ್ಟಿದೆ.

ಉಳ್ಳಾಲದ ಶಕ್ತಿನಗರದ ನಿವಾಸಿ ಗೀತಾ ಎಂಬವರು ಕೆಲ ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದರು. 1 ವರ್ಷದ ಹಿಂದೆ ಹಿರಿಯ ಮಗಳ ಮದುವೆ ಮಾಡಿದ್ದ ಅವರು ಇದಕ್ಕಾಗಿ ಸಾಕಷ್ಟು ಸಾಲ ಮಾಡಿದ್ದರು. ಇದಕ್ಕಾಗಿ ಮನೆಯಲ್ಲಿದ್ದ ಕೆಲವು ಬೆಲೆಬಾಳುವ ವಸ್ತುಗಳನ್ನು ಮಾರಾಟ ಮಾಡಿದ್ದು, ಇದರ ಮಧ್ಯೆ ಕಿರಿಯ ಮಗಳಿಗೂ ಮದುವೆ ನಿಶ್ಚಯವಾಗಿದೆ. ಈ ಸಂದರ್ಭದಲ್ಲಿ ಗೀತಾ ಅವರು ಕಂಗಾಲಾಗಿದ್ದು, ಕಿರಿಯ ಮಗಳ ಮದುವೆ ಹೇಗೆ ಮಾಡುವುದು ಎಂಬ ಚಿಂತೆಯಲ್ಲಿದ್ದರು.

ಈ ವಿಷಯ ತಿಳಿದ ಉಳ್ಳಾಲ ಅಲೇಕಳದ ಎಂ.ಕೆ ಕುಟುಂಬದ ಹಂಝ ಮದುವೆ ಮಾಡಿಸುವ ಭರವಸೆ ನೀಡಿದ್ದು, ಅದರಂತೆ ಶನಿವಾರದಂದು ತಮ್ಮ ಮನೆಯಲ್ಲೇ ಮೆಹಂದಿ ಶಾಸ್ತ್ರ ನೆರವೇರಿಸಿದ್ದಾರೆ. ಭಾನುವಾರದಂದು ತಲಪಾಡಿ ದೇವಿಪುರದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗೀತಾ ಅವರ ಮಗಳ ಮದುವೆ ನಡೆದಿದ್ದು, ಇದಕ್ಕೆ ಅಗತ್ಯ ನೆರವನ್ನೂ ಹಂಝ ಕುಟುಂಬ ನೀಡಿದೆ.

Hot Topics

ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಧನ ಸಹಾಯ ಹಾಗೂ ಅಕ್ಕಿ ವಿತರಣೆ

ಕಾರ್ಕಳ: ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮೊಹಮ್ಮದ್ ಮಸೂದ್ ರವರು ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ಟ್ರಸ್ಟ್ ವತಿಯಿಂದ ಮಿತ್ತಬೈಲ್...

‘ಪುಷ್ಪ’ ಸಿನಿಮಾ ನೋಡಿ ಅಪ್ರಾಪ್ತರಿಂದ ಯುವಕನ ಬರ್ಬರ ಹತ್ಯೆ- ಕೃತ್ಯದ ವೀಡಿಯೋ ಚಿತ್ರೀಕರಣ

ನವದೆಹಲಿ: ಟಾಲಿವುಡ್‌ನ ಅಲ್ಲು ಅರ್ಜುನ್‌ ನಟನೆಯ ಸೂಪರ್‌ ಹಿಟ್‌ 'ಪುಷ್ಪ' ಸಿನಿಮಾ ನೋಡಿ ಅದರಿಂದ ಪ್ರಭಾವಿತರಾಗಿ ಯುವಕನನ್ನು ಮೂವರು ಆರೋಪಿಗಳು ಬರ್ಬರವಾಗಿ ಥಳಿಸಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.ಕೊಲೆಗೀಡಾದ ಯುವಕ...

ಮಲಗಿದ್ದ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಸೊಸೆ

ಚಿತ್ರದುರ್ಗ: ಅತ್ತೆ-ಸೊಸೆ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ನಡೆದಿದೆ.ರುದ್ರಮ್ಮ(60) ಹತ್ಯೆಗೀಡಾದ ದುರ್ದೈವಿಯಾಗಿದ್ದು, ಆರೋಪಿ ಸೊಸೆ ಮುದ್ದಕ್ಕ (38)ಳನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಅತ್ತೆ-ಸೊಸೆ ನಡುವೆ ಹೊಂದಾಣಿಕೆ...