Thursday, September 29, 2022

ತೊಕ್ಕೊಟ್ಟು ಕಾಪಿಕಾಡಿನಲ್ಲಿ ಬೈಕಿಗೆ ಕಾರು ಡಿಕ್ಕಿ : ಸವಾರರಿಗೆ ಗಾಯ – ಕಾರು ಕಮರಿಗೆ ..!

ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ66ರ ತೊಕ್ಕೊಟ್ಟು ಕಾಪಿಕಾಡ್ ಬಳಿ ವಿರುದ್ಧ ದಿಕ್ಕಿನಲ್ಲಿ ಬಂದ ಬೈಕ್‍ಗೆ ಕಾರು ಡಿಕ್ಕಿ ಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದ್ದು ಕಾರು ಮತ್ತು ಬೈಕ್ ಎರಡೂ ಕಮರಿಗೆ ಉರುಳಿ ಬಿದ್ದಿದೆ.


ಮರ ಕಡಿಯುವ ಕೆಲಸ ಮಾಡುತ್ತಿದ್ದ ಮಂಜನಾಡಿ ನಿವಾಸಿ ಆಸೀಫ್ ಗಂಭೀರ ಗಾಯಗೊಂಡರೆ, ಸಹ ಸವಾರ ಅಂಬ್ಲಮೊಗರು ನಿವಾಸಿ ಮಹಮ್ಮದ್ ಅಶ್ರಫ್ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ ಸಂದೀಪ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಘಟನೆಯ ವಿವರ : ಮರ ಕಡಿಯುವ ಕೆಲಸ ಮುಗಿಸಿ ಉಳ್ಳಾಲ ಕಡೆಯಿಂದ ಕಾಪಿಕಾಡು ಕಡೆಗೆ ವಿರುದ್ಧ ದಿಕ್ಕಿನಲ್ಲಿ ಆಸೀಫ್ ಅವರು ತಮ್ಮ ಬೈಕ್‍ನಲ್ಲಿ ಮಹಮ್ಮದ್ ಅಶ್ರಫ್‍ರೊಂದಿಗೆ ತೆರಳುತ್ತಿದ್ದಾಗ ಕುಂಪಲ ಕಡೆಯಿಂದ ಕೊಲ್ಯ ಮಾರ್ಗವಾಗಿ ಓವರ್ ಬ್ರಿಡ್ಜ್ ಕಡೆ ಬರುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಕಾರು ಮತ್ತು ಬೈಕ್ ಕಮರಿಗೆ ಉರುಳಿ ಬಿದ್ದಿತ್ತು.

ಘಟನೆಯಲ್ಲಿ ಆಸೀಫ್ ಗಂಭೀರ ಗಾಯಗೊಂಡರೆ, ಮಹಮ್ಮದ್ ಅಶ್ರಫ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ದಕ್ಷಿಣ ಸಂಚಾರ ವಿಭಾಗದ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

5 ವರ್ಷ PFI ಬ್ಯಾನ್ : ಮಂಗಳೂರಿನ ಕಚೇರಿಗಳಿಗೆ ಬೀಗ ಜಡಿದು ಸೀಲ್ ಡೌನ್ ಮಾಡಿದ ಪೊಲೀಸರು..!

ಮಂಗಳೂರು : ಪಿಎಫ್‌ಐ ಮತ್ತು ಅದರ ಅಂಗ ಸಂಘಟನೆಗಳನ್ನು 5 ವರ್ಷ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕೇಂದ್ರ ಸರ್ಕಾರದ ನಿರ್ದೇಶನದ ಮೇಲೆ ಪಿಎಫ್‌ಐ ಕಚೇರಿಗಳನ್ನು ಸೀಲ್ ಡೌನ್...

ಸುಳ್ಯ: ಮಾಡರ್ನ್‌ಯುಗಕ್ಕೆ ಹೊಂದಿಕೊಂಡ ಕಾಗೆ ತನ್ನ ಗೂಡು ಹೆಣೆದಿದ್ದು ಕಬ್ಬಿಣದ ತಂತಿಯಲ್ಲಿ..!

ಸುಳ್ಯ: ಕಾಗೆಯೊಂದು ಕಬ್ಬಿಣದ ತಂತಿಗಳನ್ನೇ ಬಳಸಿ ಗೂಡು ಹೆಣೆದಿರುವ ಅದ್ಭುತ ಘಟನೆ ಸುಳ್ಯದ ಚೊಕ್ಕಾಡಿಯಲ್ಲಿ ನಡೆದಿದೆ.ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ಆವರಣದಲ್ಲಿ ಸ್ವಚ್ಚತೆ ಕಾರ್ಯ ಕೈಗೊಂಡ ವೇಳೆ ಮರವೊಂದರ ಕೊಂಬೆಯಲ್ಲಿ ಈ...

ಪುತ್ತೂರು: PFI ಪ್ರಧಾನ ಕಛೇರಿಗೆ ಬೆಳಿಗ್ಗೆಯಿಂದಲೇ ಬೀಗ-ಗುಪ್ತಸಭೆ ನಡೆಸುತ್ತಿದ್ದ ಆರೋಪ

ಪುತ್ತೂರು: ದೇಶದಾದ್ಯಂತ ಪಿಎಫ್ಐ ಹಾಗೂ ಅದರ ಬೆಂಬಲಿತ ಸಂಘಟನೆಗಳಿಗೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೇರಿರುವ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಪಿಎಫ್ಐ ನ ಪ್ರಧಾನ...