ಉಳ್ಳಾಲದಲ್ಲಿ ಅಪ್ರಾಪ್ತೆ ವಿದ್ಯಾರ್ಥಿನಿ ಜೊತೆ ಜೋಲಿ ರೈಡ್ ನೋಡಿ ಸಂಘಟನೆಗಳು ಮಾಡಿದ್ದೇನು ಗೊತ್ತಾ..?
ulalla Jolly Raid with Minor Girl : Youth Handover to police by Hindu organisation..!
ಮಂಗಳೂರು : 8ನೇ ತರಗತಿ ವಿದ್ಯಾರ್ಥಿನಿ ಜೊತೆ ಪ್ರೀತಿ ಪ್ರೇಮದ ಹೆಸರಿನಲ್ಲಿ ಬೈಕಿನಲ್ಲಿ ಸುತ್ತಾಡಿಸುತ್ತಿದ್ದ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉಳ್ಳಾದಲ್ಲಿ ನಡೆದಿದೆ.
25 ವರ್ಷದ ಯುವಕ ಹಲವು ದಿನಗಳಿಂದ ಬಾಲಕಿಯ ಜೊತೆ ಸುತ್ತಾಟ ನಡೆಸುತ್ತಿರುವುದು ಸ್ಥಳಿಯರು ಗಮನಿಸಿದ್ದಾರೆ. ಇಬ್ಬರೂ ತಮ್ಮ ಮನೆಯವರ ಕಣ್ತಪ್ಪಿಸಿ ಬೈಕಲ್ಲಿ ಓಡಾಡುತ್ತಿದ್ದರು.
ಇದನ್ನು ಗಮನಿಸಿದ್ದ ಸ್ಥಳೀಯರು ಬಾಲಕಿ ಪೋಷಕರಿಗೆ ಹೇಳಿದಾಗ ಅವರು ಹಿಂದೂ ಪರ ಸಂಘಟನೆಗಳಿಗೆ ಮಾಹಿತಿ ನೀಡಿದ್ದಾರೆ.
ಹಿಂದೂ ಪರ ಸಂಘಟನೆ ಕಾರ್ಯಕರ್ತರು ಜೋಡಿಯನ್ನು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಯುವಕ ಕೆಲಸ ಕಾರ್ಯ ಇಲ್ಲದೆ ಖಾಲಿಯಾಗಿ ಮತ್ತು ಜೋಲಿಯಾಗಿ ತಿರುಗುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದು ಯುವಕ ಹಾಗೂ ಬಾಲಕಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದು ಪೊಲೀಸರು ಯುವಕನಿಗೆ ಎಚ್ಚರಿಕೆ ನೀಡಿ ಇನ್ನೊಮ್ಮೆ ಈ ರೀತಿ ಮಾಡದಂತೆ ಮುಚ್ಚಳಿಕೆ ಪತ್ರ ಬರೆಸಿ ಬಿಟ್ಟುಕಳುಹಿಸಿದ್ದಾರೆ.