Saturday, July 2, 2022

ಉಕ್ರೇನ್‌ ಗಡಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ

ನವದೆಹಲಿ: ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಮುಂದುವರೆದಿದೆ. ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ಸ್ಥಿತಿ ಶೋಚನಿಯವಾಗಿದ್ದು, ರೊಮೇನಿಯನ್ ಮತ್ತು ಪೋಲೆಂಡ್ ಗಡಿಯಲ್ಲಿ ನಿಯೋಜಿಸಲಾದ ಸೈನಿಕರು ಕಿರುಕುಳದ ಜೊತೆಗೆ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.


ಭಾರತೀಯ ರಾಯಭಾರ ಕಚೇರಿ ಭಾನುವಾರ ಮಾರ್ಗಸೂಚಿ ಹೊರಡಿಸಿ, ಭಾರತೀಯ ಪ್ರಜೆಗಳು ಸಂಘರ್ಷ ವಲಯಗಳಿಂದ ದೂರ ಹೋಗುವಂತೆ ಸೂಚಿಸಿದೆ.

ಪೋಲೆಂಡ್, ರೊಮೇನಿಯಾ ಮತ್ತು ಹಂಗೇರಿ ಗಡಿಯಲ್ಲಿ ಚೆಕ್​ಪಾಯಿಂಟ್​ಗಳನ್ನು ತೆರೆಯಲಾಗಿದ್ದು, ವಿದ್ಯಾರ್ಥಿಗಳು ಗಡಿ ಚೆಕ್‌ಪೋಸ್ಟ್‌ಗಳಿಗೆ ಹೊರಡುವಂತೆ ಸೂಚಿಸಿದೆ.

ಖಾರ್ಕಿವ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಯೊಬ್ಬರು ಮಾತನಾಡಿ, ಪ್ರತಿ ದಿನ ಬಂಕರ್​ಗಳಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಸ್ಥಳಾಂತರಿಸಲು ಕೀವ್‌ನಿಂದ ಪಶ್ಚಿಮ ಗಡಿಗಳಿಗೆ ಕರೆದೊಯ್ಯುಲಾಗುತ್ತಿದೆ.

ಆದರೆ ಪೋಲೆಂಡ್ ಮತ್ತು ರೊಮೇನಿಯಾದ ಗಡಿಗಳಲ್ಲಿ ರಷ್ಯಾ ಸೈನಿಕರಿಂದ ಅವರು ಕಿರುಕುಳ ಅನುಭವಿಸುತ್ತಿದ್ದಾರೆ. ಈ ಕುರಿತಾದ ವಿಡಿಯೋಗಳನ್ನ ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ವಿಟ್ಲ: ಅಕ್ರಮ ಗಾಂಜಾ ಸಾಗಾಟ-ಮೂವರ ಬಂಧನ

ವಿಟ್ಲ: ಮಾದಕ ವಸ್ತುಗಳಾದ ಎಂಡಿಎಮ್ಎ, ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ವಿಟ್ಲದಲ್ಲಿ ನಡೆದಿದೆ.ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನೆಲ್ಲಿಗುಡ್ಡೆ ನಿವಾಸಿ...

ಗೋಹತ್ಯೆ ಕಾನೂನನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು: ವಿಹೆಚ್‌ಪಿ ಆಗ್ರಹ

ಮಂಗಳೂರು: ರಾಜ್ಯದಲ್ಲಿ ಗೋಹತ್ಯೆ ಕಾನೂನು ಜಾರಿಗೆ ಬಂದಿದೆ. ಆ ಕಾನೂನು ಪ್ರಬಲವಾಗಿದೆ. ಇದನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ವಿಹೆಚ್‌ಪಿಯ ಪ್ರಾಂತ ಗೋರಕ್ಷಾ ಪ್ರಮುಖ್‌ ಕಟೀಲು ದಿನೇಶ್‌ ಪೈ ಹೇಳಿದ್ದಾರೆ.ನಗರದ ಕದ್ರಿಯ...

ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ಸನ್ನಿಧಿಯಲ್ಲಿ ಕರಾವಳಿ ಸಂತರ ಸಮಾಗಮ

ಉಡುಪಿ: ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ಸನ್ನಿಧಿಯಲ್ಲಿ ಶುಕ್ರವಾರ (ಜು.1) ಕರಾವಳಿ ಸಂತರ ಸಮಾಗಮ ವೈಭವದಿಂದ ನೆರವೇರಿತು.ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ,ಬೆಂಗಳೂರು ಆರ್ಯ ಈಡಿಗ...