Connect with us

LATEST NEWS

ಜಾತಿ ವೈಷಮ್ಯ ಮರೆಸಿದ ಉಜ್ಜೋಡಿಯ ರಸ್ತೆ ದುರಂತ: ಅನ್ಯ ಧರ್ಮೀಯನನ್ನು ಆಸ್ಪತ್ರೆಗೆ ಸಾಗಿಸಿದ ಹಿಂದೂ ಕಾರ್ಯಕರ್ತರು

Published

on

ಮಂಗಳೂರು: ಹಣ್ಣುಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಗೆ ಪಿಕ್‌ಆಪ್ ವಾಹನ ಢಿಕ್ಕಿ ಹೊಡೆದು ಅಪಘಾತಕ್ಕೀಡಾದ ಅನ್ಯ ಧರ್ಮದ ಯುವಕನನ್ನು ಹಿಂದೂ ಕಾರ್ಯಕರ್ತರು ಆಸ್ಪತ್ರೆಗೆ ಸಾಗಿಸಿದ ಮಾನವೀಯ ಘಟನೆ ಇಂದು ಮುಂಜಾನೆ ಮಂಗಳೂರಿನ ಉಜ್ಜೋಡಿಯಲ್ಲಿ ನಡೆದಿದೆ.

ಉಳಾಯಿಬೆಟ್ಟು ನಿವಾಸಿ ಚಾಲಕ ಅಬ್ದುಲ್ ಅಶ್ರಪ್ ಅಪಘಾತಕ್ಕೀಡಾದ ಗಾಯಾಳು.


ಮಂಗಳೂರಿನ ಉಜ್ಜೋಡಿ ಸಮೀಪ ಕೇರಳಕ್ಕೆ ತರಕಾರಿ, ಫ್ರುಟ್ಸ್ ತುಂಬಿ ಸಾಗುತ್ತಿದ್ದ ಲಾರಿಗೆ ಪಿಕ್ ಆಪ್ ವಾಹನ ಢಿಕ್ಕಿಹೊಡೆದು ಅಫಘಾತ ಸಂಭವಿಸಿತ್ತು.


ಆ ಸಂದರ್ಭ ಹಿಂದೂ ಯುವ ಸೇನೆಯ ವಾರಿಯರ್ಸ್ ಭುವನ್ ಎಕ್ಕೂರ್ ಹಾಗೂ ಪ್ರವೀಣ್ ಎಕ್ಕೂರು ಅವರು ತುರ್ತಾಗಿ ಗುಣಕರ ಎಂಬವರ ಅ್ಯಂಬುಲೆನ್ಸ್ ಸೇವೆ ಒದಗಿಸಿಕೊಟ್ಟು ಜೀವಣ್ಮರಣ ಸ್ಥಿತಿಯಲ್ಲಿದ್ದ ಅವರನ್ನು ಪಂಪ್‌ವೆಲ್‌ನ ಇಂಡಿಯಾನ ಆಸ್ಪತ್ರೆಗೆ ದಾಖಲುಪಡಿಸಿ ಜೀವ ಉಳಿಸುವ ಮಹತ್ಕಾರ್ಯ ಮಾಡಿದ್ದಾರೆ.

2 Comments

2 Comments

  1. A

    16/05/2022 at 11:52 AM

    ಯಾಕೆ…? ಎಲ್ಲದರಲ್ಲೂ ಜಾತಿಯನ್ನು ಬಿಂಬಿಸುತ್ತೀರಿ. ಮಾಧ್ಯಮದ ಉದ್ದೇಶ ಸುದ್ದಿಯನ್ನು ಮುಟ್ಟಿಸುವುದೇ ಹೊರತು ಜಾತಿಯನ್ನು ಎತ್ತಿ ಹಿಡಿಯುವಿದರಲ್ಲಲ್ಲ. ಎಲ್ಲರೂ ಮೊದಲು ಮಾನವರು. ಮತ್ತೆ ಜಾತಿ.

  2. Brijesh

    17/05/2022 at 10:26 PM

    This accident took place two years back. Double check please…

Leave a Reply

Your email address will not be published. Required fields are marked *

bangalore

ಆಸ್ಟ್ರೇಲಿಯಾ ಬೀಚ್ ನಲ್ಲಿ ಮಂಗ್ಳೂರು ಬೆಡಗಿ ಅನುಶ್ರೀ…

Published

on

Film: ಕನ್ನಡ ರಿಯಾಲಿಟಿ ಶೋನಲ್ಲಿ ಹೆಸರುವಾಸಿಯಾಗಿರುವ ಮಂಗ್ಳೂರು ಬೆಡಗಿ ಆಂಕರ್ ಅನುಶ್ರಿ ಇದೀಗ ಆಸ್ಟ್ರೇಲಿಯಾದತ್ತ ಟ್ರಿಪ್ ಹೋಗಿರುವ ಪೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕರಾವಳಿ ಬೆಡಗಿ ಆಗಿರುವ ಅನುಶ್ರೀ ಕನ್ನಡ ಕಿರುತೆರೆಯಲ್ಲಿ ಉತ್ತಮ ಆಂಕರ್ ಆಗಿ ಅವರ್ಡ್ ಪಡೆದುಕೊಂಡ ಅನುಶ್ರೀಯ ಮಾತು ಕೇಳೊಕೆ ಎಲ್ಲರಿಗೆ ಅಚ್ಚು ಮೆಚ್ಚು. ಬಾಯಿ ತೆರೆದರೆ ಪಟಪಟನೇ ಮಾತನಾಡುವ ಆಂಕರ್ ಇದೀಗ ಆಸ್ಟ್ರೇಲಿಯಾದತ್ತ ಕಾಲಿಟ್ಟಿದ್ದಾರೆ.


ಪ್ರತಿದಿನ ಆಂಕರ್ ಮಾಡೋದು ಅಲ್ಲ ಸೊಲ್ಪ ಹೊರಗಿನ ಪ್ರಪಂಚಕ್ಕೆ ಕಾಲಿಡಬೇಕು. ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡಬೇಕು. ಅದೇ ರೀತಿ ಆಸ್ಟ್ರೇಲಿಯಾಕ್ಕೆ ತೆರಳಿದ ಅನುಶ್ರೀ ಆಸ್ಟ್ರೇಲಿಯಾ ಬೀಚ್ ನಲ್ಲಿ ಅಪ್ಪು ಎಂದು ಬರೆದುಕೊಂಡಿದ್ದಾರೆ.

 

ಅಲ್ಲಿರುವ ಆಸ್ಟ್ರೇಲಿಯಾ ಸ್ಕೈ ಪಾಯಿಂಟ್, ಬೀಚ್‌ಗಳು ಹಾಗೂ ಪ್ರಾಣಿ ಸಂಗ್ರಹಾಲಯಕ್ಕೆ ಹಾಗೂ ಹಲವು ಕಡೆ ಭೆಟಿ ನೀಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ ಮಾಡಿದ್ದಾರೆ.


ಜೀ ಕುಟುಂಬ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಅತಿ ಸುಂದರವಾಗಿ ನಿರೂಪಣೆ ಮಾಡಿ, ಬೆಸ್ಟ್​ ಆ್ಯಂಕರ್​ ಪ್ರಶಸ್ತಿಯನ್ನೂ ಪಡೆದ ನಟಿ ಆ್ಯಂಕರ್​ ಅನುಶ್ರೀ ಈಗ ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ.


ಬ್ರಿಸ್ಬೇನ್‌ನ ಉತ್ತರದ ಸನ್‌ಶೈನ್ ಕೋಸ್ಟ್ ತೀರದತ್ತ ಸಂಚಾರ ನಡೆಸಿದ ಅವರು ಸ್ಯಾಂಡಲ್ ವುಡ್ ನ ನಟ ನಗು ಮೊಗದ ಅಪ್ಪು ಪುನೀತ್ ರಾಜ್‌ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

Continue Reading

bangalore

“ಎಂಚ ಉಲ್ಲಾರ್ ಮರ್ರೆ”…. ಎಂದು ತುಳುವಿನಲ್ಲಿ ಮಾತನಾಡಿದ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್

Published

on

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಸಮೂಹ ಶಿಕ್ಷಣ ಸಂಸ್ಥೆಗಳ ಅಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಭ್ರಮರ ಇಂಚರ ನುಡಿಹಬ್ಬ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಿದ ಸ್ಯಾಂಡಲ್ ವುಡ್  ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಭಾಗವಹಿಸಿ ಮಕ್ಕಳ ಜೊತೆಗೆ ಮಕ್ಕಳಂತೆ ಬೆರೆತು ಮಕ್ಕಳನ್ನು ಕೊಂಡಾಡಿದರು.

ಈ ವೇದಿಕೆಯಲ್ಲಿ ವಿದ್ಯಾಥಿಗಳು ನಟಿ ರಚಿತಾ ರಾಮ್ ಅವರ ಡ್ರಾಯಿಂಗ್ ಮಾಡಿ ಕೊಡುಗೆಯಾಗಿ ನೀಡಿದಾಗ ಖುಷಿ ಪಟ್ಟ ನಟಿ ಆ ವಿದ್ಯಾರ್ಥಿಗಳನ್ನು ವೇದಿಕೆಗೆ ತಾವೇ ಕರೆಸಿ ಅಭಿನಂದಿಸದರು.

ಹಾಗೂ ಕೆಲವು ವಿದ್ಯಾರ್ಥಿಗಳ ಜೊತೆ ವೇದಿಕೆಗೆ ಕರೆಸಿ ಹಾಡಿಸಿದರು. ಅದರಲ್ಲಿ ತಾನೇ ಬಂದು ವೇದಿಕೆಯಲ್ಲಿ ಒಂದು ಪುಟಾಣಿ ‘ಬಾಳ ಒಳ್ಳೇರು ನಮ್ಮ ಮಿಸ್ ಎನ ಹೇಳಿದ್ರು ಎಸ್ ಎಸ್ಸು’ ಎಂದು ಹಾಡಿದಾಗ ನಟಿ ಬಹಳ ಖುಷಿ ಪಟ್ಟರು.

ಈ ಸಂದರ್ಭ ರಚಿತರಾಮ್ ಜೊತೆ ಹಾಡಲು ಹೇಳಿದಾಗ ಅವರು ಕೂಡ “ಬಾಳ ಒಳ್ಳೇರು ನಮ್ಮ ಮಿಸ್ ಎನ ಹೇಳಿದ್ರು ಎಸ್ ಎಸ್ಸು” ಎಂದು ನಗ್ತಾ ನಗ್ತಾ ಹಾಡಿದರು.


ಬಳಿಕ ಮಾತನಾಡಿದ ನಟಿ ವಿದ್ಯಾರ್ಥಿಗಳು ಇಂತಹ ವೇದಿಕೆ ಸಿಕ್ಕಾಗ ಬಳಸಿಕೊಳ್ಳಬೇಕು. ಮತ್ತೇ ಇಂತಹ ವೇದಿಕೆ ಸಿಗುವುದಿಲ್ಲ. ನಮ್ಮ ಪ್ರತಿಭೆಯನ್ನು ನಾವೇ ಪ್ರದರ್ಶನ ಮಾಡಬೇಕು. ಬೇರೆ ಯಾರೂ ಕೂಡ ನಮಗೆ ಹೇಳಲು ಬರುವುದಿಲ್ಲ.

ಯಾರೂ ಕೂಡ ಸಪೋರ್ಟ್ ಮಾಡುವುದಿಲ್ಲ. ಸ್ವಾಯತ್ತತೆಯಿಂದ ನಾವು ಗೆಲ್ಲಬೇಕು. ಒಳ್ಳೆ ಒಳ್ಳೆ ವೇದಿಕೆ ಸಿಕ್ಕಾಗ ಬಿಡಬಾರದು. ಅದರ ಜೊತೆಗೆ ನಮ್ಮ ಗುರುಗುಳಿಗೆ ಹಾಗೂ ತಮ್ಮ ಪೋಷಕರಿಗೆ ಗೌರವ ಕೊಡಿ, ಮರ್ಯಾದೆ ಕೊಡಿ ಜೊತೆಗೆ ಅವರನ್ನು ಪ್ರೀತಿಸಿ ಎಂದರು.

ಈ ವೇಳೆ ರಚಿತರಾಮ್ ಕನ್ನಡದಲ್ಲಿ ಮಾತನಾಡಿದಾಗ ವಿದ್ಯಾರ್ಥಿಗಳು ತುಳುವಿನಲ್ಲಿ ಮಾತನಾಡಿ ಎಂದು ಕೂಗಾಡಿದರು. ಆಗ ಅವರು ಎಂಚ ವುಲ್ಲರ್ ಮರ್ರೆ…ಹುಷಾರ್ ವುಲ್ಲರಾ…ಎಂದು ತುಳುವಿನಲ್ಲಿ ಮಾತನಾಡಿದರು.

Continue Reading

BELTHANGADY

Belthangady: ರಸ್ತೆ ಪಕ್ಕದ ಗೂಡಂಗಡಿಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು..!

Published

on

ಬೆಳ್ತಂಗಡಿ: ಬೆಳ್ತಂಗಡಿ ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ಕಿಡಿಗೇಡಿಗಳು ರಾತ್ರಿಯ ವೇಳೆ ಧ್ವಂಸಗೊಳಿಸಿದ ಘಟನೆ ಸಂಭವಿಸಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಕೊಕ್ಕಡ ಗ್ರಾಮದ ಮಲ್ಲಿಗೆಮಜಲು ನಿವಾಸಿ ಅಬ್ದುಲ್ ಅಝೀಝ್ ಎಂಬವರು ತಮ್ಮ ಜೀವನೋಪಾಯಕ್ಕಾಗಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಗೂಡಂಗಡಿಯನ್ನು ಹಾಕಿ ವ್ಯಾಪಾರ ನಡೆಸುತ್ತಿದ್ದರು.

ಕಳೆದ ಮೂರು ವರ್ಷಗಳಿಂದ ಈ ಗೂಡಂಗಡಿ ಕಾರ್ಯ‌ ನಿರ್ವಹಿಸುತ್ತಿತ್ತು. ರಸ್ತೆ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಗೂಡಂಗಡಿಯನ್ನು ನಿರ್ಮಿಸಲಾಗಿತ್ತು. ಎಂದಿನಂತೆ ಶುಕ್ರವಾರ ರಾತ್ರಿಯ ವೇಳೆ ಅಂಗಡಿಯನ್ನು ಮುಚ್ಚಿ ಹೋಗಿದ್ದ ಅಬ್ದುಲ್ ಅಝೀಝ್ ಶನಿವಾರ ಬೆಳಗ್ಗೆ ಬಂದು ನೋಡಿದಾಗ ಅಂಗಡಿಯನ್ನು ಧ್ವಂಸಗೊಳಿಸಿರುವುದು ಕಂಡು ಬಂದಿದೆ. ಅಂಗಡಿಯಲ್ಲಿದ್ದ ವಸ್ತುಗಳೆಲ್ಲವನ್ನು ಹೊರಗೆಳೆದು ನಾಶಗೊಳಿಸಲಾಗಿದೆ. ತಂಪು ಪಾನೀಯಗಳ ಬಾಟ್ಲಿಗಳನ್ನು ಒಡೆದು ಹಾಕಲಾಗಿದೆ. ಅಂಗಡಿಯನ್ನು ಬಹುತೇಕ ಧ್ವಂಸಗೊಳಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.

Continue Reading

LATEST NEWS

Trending