BIG BOSS
Bigg Boss: ಉಗ್ರಂ ಮಂಜು ತಲೆಗೆ ಬಾಟಲಿಯಿಂದ ಹೊಡೆದ ಮೋಕ್ಷಿತಾ ಪೈ..!
Published
12 hours agoon
By
NEWS DESK2ಬಿಗ್ಬಾಸ್ ಮನೆಯಲ್ಲಿ ನಾಮಿನೇಷನ್ ಬೆಂಕಿ ಹೊತ್ತುಕೊಂಡಿದೆ. ಈ ಬಾರಿ ವಿಭಿನ್ನವಾಗಿ ನೇರವಾಗಿ ನಾಮಿನೇಷನ್ ಟಾಸ್ಕ್ ನೀಡಲಾಗಿದೆ.
ಸ್ಪರ್ಧಿಗಳು ಮನೆಯಿಂದ ಆಚೆ ಕಳುಹಿಸಲು ಇಷ್ಟ ಪಡುವ ಸ್ಪರ್ಧಿಗಳ ತಲೆ ಮೇಲೆ ಬಾಟಲಿಯಿಂದ ಹೊಡೆದು ನಾಮಿನೇಟ್ ಮಾಡಬೇಕು. ಅಂತೆಯೇ ಭವ್ಯ ಗೌಡ ಅವರು, ಐಶ್ವರ್ಯ ಅವರ ತಲೆಗೆ ಬಾಟಲಿಯಿಂದ ಹೊಡೆದಿದ್ದಾರೆ. ಇನ್ನು ಮೋಕ್ಷಿತಾ ಉಗ್ರಂ ಮಂಜು ತಲೆಗೆ ಬಾಟಲಿಯಿಂದ ಹೊಡೆದಿದ್ದಾರೆ.
ಈ ವೇಳೆ ಮಂಜು ಹಾಗೂ ಮೋಕ್ಷಿತಾ ಮಧ್ಯೆ ಟಾಕ್ ಫೈಟ್ ನಡೆದಿದೆ. ಮೋಕ್ಷಿತಾ ನೀವು ಮನೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಕಾರಣ ನೀಡಿದ್ದಾರೆ. ಇದಕ್ಕೆ ರೊಚ್ಚಿಗೇಳುವ ಮಂಜು, ನಾಳೆಯಿಂದ ಈ ಮನೆಯಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಎಂದು ನಿಮ್ಮ ಬಳಿ ಟ್ಯೂಷನ್ಗೆ ಬರ್ತೀನಿ ಎಂದಿದ್ದಾರೆ. ನಿಮಗೆ ನಾನು ಕಾಣಿಸಿಕೊಳ್ಳಲು ಏನಾದರೂ ತಂದುಕೊಡಬೇಕಾ ಎಂದು ಕೇಳಿದ್ದಾರೆ.
ಆಗ ಕೆರಳಿದ ಮೋಕ್ಷಿತಾ, ಅಂದರೆ ನೀವು ಮನೆಯಲ್ಲಿ ಕಾಣಿಸಿಕೊಳ್ಳೋದು ಒಬ್ಬರಿಗೆ ತೆಗೆದುಕೊಂಡು ಹೋಗಿ ಇಬ್ಬರಿಗೆ ಕೊಟ್ಟಾಗಲೇ ಅಂತಾನಾ? ನೀವು ಯಾರು ನನಗೆ ವೈಸ್ ರೈಸ್ ಮಾಡೋಕೆ ಎಂದು ಆವಾಜ್ ಹಾಕಿದ್ದಾರೆ. ಕ್ಷುಲ್ಲಕ ಕಾರಣಗಳಿಗೆ ನಾನು ನಾಮಿನೇಟ್ ಆಗಲ್ಲ ಎಂದ ಮಂಜುಗೆ, ನಿಮ್ಮನ್ನು ನಾಮಿನೇಟ್ ಮಾಡೋದು ನನ್ನಿಷ್ಟ. ನನ್ನ ನಿರ್ಧಾರ ಎಂದು ಬಾಟಲಿಯಿಂದ ತಲೆಗೆ ಹೊಡೆದಿದ್ದಾರೆ.
BIG BOSS
BBK11: ಮೋಕ್ಷಿತಾ ತೊಡೆ ಮೇಲೆ ಕೂತು ಮಜಾ ತಗೊಂಡ ರಜತ್.. ಬಿಗ್ ಬಾಸ್ ಮನೆಯಲ್ಲಿ ಸಖತ್ ಸೀನ್!
Published
1 day agoon
25/12/2024By
NEWS DESK2ಕನ್ನಡದ ಬಿಗ್ಬಾಸ್ ಈಗ ಐಶಾರಾಮಿ ರೆಸಾರ್ಟ್ ಆಗಿ ಬದಲಾಗಿದೆ. ಬಿಗ್ಬಾಸ್ ಮನೆಯಷ್ಟೇ ಅಲ್ಲದೇ ಸ್ಪರ್ಧಿಗಳು ಕೂಡ ಚೇಂಜ್ ಆಗಿದ್ದಾರೆ. ಒಂದು ತಂಡ ಐಶಾರಾಮಿ ರೆಸಾರ್ಟ್ನಲ್ಲಿ ಕೆಲಸಗಾರರಾಗಿದ್ದರೆ, ಮತ್ತೊಂದು ತಂಡ ಅತಿಥಿಗಳಾಗಿದ್ದಾರೆ.
ಈ ವಾರ ಬಿಗ್ಬಾಸ್ ಮನೆ ಮಂದಿಗೆ ಟಾಸ್ಕ್ವೊಂದನ್ನು ಕೊಟ್ಟಿದ್ದಾರೆ. ಈಗ ಬಿಗ್ಬಾಸ್ ಮನೆ ಸಂಪೂರ್ಣವಾಗಿ ರೆಸಾರ್ಟ್ ರೀತಿಯಲ್ಲೇ ಬದಲಾಗಿದೆ. ನಿನ್ನೆ ರೆಸಾರ್ಟ್ಗೆ ಅತಿಥಿಯಾಗಿ ಬಂದ ಮಂಜಣ್ಣ ಉಗ್ರ ಅವತಾರಾ ತಾಳಿದ್ದರು. ರೆಸಾರ್ಟ್ಗೆ ಬಂದ ಅತಿಥಿಗಳನ್ನು ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್, ರಜತ್ ಹಾಗೂ ಮೋಕ್ಷಿತಾ ಇದ್ದಾರೆ ನೋಡಿಕೊಳ್ಳಬೇಕಿತ್ತು.
ಅತಿಥಿಗಳು ಹೇಳಿದ ಕೆಲಸವನ್ನು ಚಾಚು ತಪ್ಪದೇ ಪಾಲಿಸಬೇಕಿತ್ತು. ಇದೇ ವೇಳೆ ಮ್ಯಾನೇಜರ್ ಮೋಕ್ಷಿತಾಗೆ, ಮಂಜಣ್ಣ ಎಲ್ಲ ಕತ್ತೆ ಮೇಯಿಸೋಕೆ ಬಂದಿದ್ದೀರಾ ಅಂತ ಪ್ರಶ್ನೆ ಮಾಡಿದ್ದರು. ಇದಾದ ಬಳಿಕ ಮೋಕ್ಷಿತಾ ಮೇಲೆ ಮಂಜು, ತಲೆ ತುಂಬಾ ಮಣ್ಣು ತುಂಬಿಕೊಂಡ್ರೆ ಏನೂ ಮಾಡೋದಕ್ಕೆ ಆಗೋದಿಲ್ಲ ಅಂತ ಅವಾಜ್ ಹಾಕಿದ್ರು.
ಇದೀಗ ಬಿಗ್ಬಾಸ್ ಮನೆಯಲ್ಲಿ ಎಲ್ಲವೂ ಅದಲು ಬದಲು ಆಗಿದೆ. ನಿನ್ನೆ ಅತಿಥಿಗಳಾಗಿದ್ದವರು ಇಂದು ಕೆಲಸಗಾರರಾಗಿದ್ದಾರೆ. ನಿನ್ನೆ ಕೆಲಸಗಾರರಾಗಿದ್ದರು ಇಂದು ಅತಿಥಿಗಳಾಗಿದ್ದಾರೆ. ರಜತ್, ತ್ರಿವಿಕ್ರಮ್, ಮೋಕ್ಷಿತಾ, ಭವ್ಯಾ ಗೌಡ, ಧನರಾಜ್ ಇವರ ಅಸಲಿ ಆಟ ಈಗ ಬಿಗ್ಬಾಸ್ ಮನೆಯಲ್ಲಿ ಶುರುವಾಗಿದೆ.
ನಿನ್ನೆ ಕೆಲಸಗಾರರಾಗಿದ್ದ ಈ ತಂಡ ಇಂದು ಅತಿಥಿಗಳಾಗಿದ್ದಾರೆ. ನಿನ್ನೆ ಮಾಡಿದ ಎಲ್ಲ ಕೆಲಸವನ್ನು ತ್ರಿವಿಕ್ರಮ್ ತಂಡ ಚಾಚು ತಪ್ಪದೇ ವಾಪಸ್ ತರುತ್ತಿದೆ. ಅಲ್ಲದೇ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ರಜತ್, ಮೋಕ್ಷಿತಾ ತೊಡೆ ಮೇಲೆ ಕುಳಿತುಕೊಂಡಿದ್ದಾರೆ. ಆಗ ಮೋಕ್ಷಿತಾ ಏಕಾಏಕಿ ಕೋಪಗೊಂಡು ಯಾಕ್ರಿ ಕುಳಿತುಕೊಂಡ್ರಿ ಅಂತ ರೇಗಾಡಿದ್ದಾರೆ. ಸದ್ಯ ಬಿಗ್ಬಾಸ್ ಮನೆಯಲ್ಲಿ 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಮುಂದಿನ ವಾರ ಬಿಗ್ಬಾಸ್ ಮನೆಯಿಂದ ಯಾರು ಆಚೆ ಹೋಗಲಿದ್ದಾರೆ ಅಂತ ಕಾದು ನೋಡಬೇಕಿದೆ.
BIG BOSS
BBK11: ಬಿಗ್ ಬಾಸ್ ಮನೆಯಲ್ಲಿ ಅದಲು-ಬದಲು; ರೊಚ್ಚಿಗೆದ್ದ ರಜತ್ ಕಾಟಕ್ಕೆ ಚೈತ್ರಾ ವಿಲವಿಲ!
Published
1 day agoon
25/12/2024By
NEWS DESK2ಕನ್ನಡದ ಬಿಗ್ಬಾಸ್ ಸೀಸನ್ 11, 85 ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಕನ್ನಡದ ಬಿಗ್ಬಾಸ್ ಸೀಸನ್ 11 ರೆಸಾರ್ಟ್ ಆಗಿ ಬದಲಾಗಿದೆ. ಈ ಬಾರಿ ಬಿಗ್ಬಾಸ್ ಮನೆ ಮಂದಿಗೆ ಟ್ವಿಸ್ಟ್ ಕೊಟ್ಟಿದ್ದಾರೆ. ಈ ಟ್ವಿಸ್ಟ್ ಬೇರೆ ಮಟ್ಟಕ್ಕೆ ತಿರುಗಿದೆ.
ಹೌದು, ಬಿಗ್ಬಾಸ್ ಮನೆಯಲ್ಲಿ ಎರಡು ತಂಡವಾಗಿ ವಿಂಗಡಣೆಯಾಗಿದೆ. ಒಂದು ತಂಡದಲ್ಲಿ ಚೈತ್ರಾ ಕುಂದಾಪುರ, ಐಶ್ವರ್ಯಾ, ಮಂಜು, ಗೌತಮಿ, ಹನುಮಂತ ಒಂದು ಟೀಮ್ನಲ್ಲಿದ್ದಾರೆ. ಮತ್ತೊಂದು ಟೀಮ್ನಲ್ಲಿ ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್, ರಜತ್ ಹಾಗೂ ಮೋಕ್ಷಿತಾ ಇದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ತ್ರಿವಿಕ್ರಮ್ ತಂಡದವರು ಬಿಗ್ಬಾಸ್ ರೆಸಾರ್ಟ್ನಲ್ಲಿ ಕೆಲಸ ಮಾಡುವವರಾಗಿದ್ದರು.
ಅಲ್ಲದೇ ಮಂಜು ಟೀಮ್ ರೆಸಾರ್ಟ್ಗೆ ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದರು. ಇದೇ ಕಾನ್ಸೆಪ್ಟ್ನಲ್ಲಿ ಮನೆ ಮಂದಿ ಭಾಗಿಯಾಗಿದ್ದಾರೆ. ನಿನ್ನೆ ಮಂಜು ತಂಡ ಬೇಕಾ ಬಿಟ್ಟಿಯಾಗಿ ರೆಸಾರ್ಟ್ ಕೆಲಸಗಾರರ ಮೇಲೆ ಅವಾಜ್ ಹಾಕುತ್ತಿದ್ದಾರೆ. ಚೈತ್ರಾ ಕುಂದಾಪುರ ಅಂತೂ ಸಿಕ್ಕಿದ್ದೇ ಜಾನ್ಸ್ ಅಂತ ರಜತ್ಗೆ ಕೆಲಸ ಕೊಟ್ಟಿದ್ದರು. ಇದೀಗ ಬಿಗ್ಬಾಸ್ ಮನೆಯಲ್ಲಿ ಆಟ ಬದಲಾಗಿದೆ.
ನಿನ್ನೆ ಕೆಲಸಗಾರರಾಗಿದ್ದ ತ್ರಿವಿಕ್ರಮ್ ಟೀಮ್ ಈಗ ಅತಿಥಿಗಳಾಗಿದ್ದಾರೆ. ಮಂಜು ಟೀಮ್ ಬಿಗ್ಬಾಸ್ ರೆಸಾರ್ಟ್ನಲ್ಲಿ ಕೆಲಸ ಮಾಡುವವರಾಗಿದ್ದಾರೆ. ಈಗ ಬಿಗ್ಬಾಸ್ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ನಿನ್ನೆ ಆಳಾಗಿದ್ದವರು ಇಂದು ಅತಿಥಿಗಳಾಗಿದ್ದಾರೆ. ತ್ರಿವಿಕ್ರಮ್ ತಂಡ ತಮ್ಮ ಆಟವನ್ನು ಸ್ಟಾರ್ಟ್ ಮಾಡಿದ್ದಾರೆ. ಬೇಕು ಬೇಕು ಅಂತಾನೇ ಬಿಗ್ಬಾಸ್ ರೆಸಾರ್ಟ್ನಲ್ಲಿ ಕೆಲಸ ಮಾಡುವವರಿಗೆ ಹೆಚ್ಚಾಗಿ ವರ್ಕ್ ಕೊಟ್ಟಿದ್ದಾರೆ. ರಜತ್ ಅಂತೂ ಸಿಕ್ಕಿದ್ದೇ ಸೀರುಂಡೆ ಚೈತ್ರಾ ಮೇಲೆ ರಿವೆಂಜ್ ತೀರಿಸಿಕೊಂಡಿದ್ದಾರೆ.
BIG BOSS
BBK11: ಇಲ್ಲಿಗೆ ಬಂದು ತಪ್ಪು ಮಾಡಿಬಿಟ್ಟೆ; ಬಿಗ್ಬಾಸ್ ಮನೆಯಲ್ಲಿ ಪಶ್ಚಾತಾಪದ ಮಾತಾಡಿದ ಚೈತ್ರಾ ಕುಂದಾಪುರ
Published
2 days agoon
24/12/2024By
NEWS DESK2ಕನ್ನಡದ ಬಿಗ್ಬಾಸ್ ಅಚ್ಚರಿಯ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದರು ಚೈತ್ರಾ ಕುಂದಾಪುರ. ಯಾರೂ ಊಹಿಸಿರಲಿಲ್ಲ ಚೈತ್ರಾ ಕುಂದಾಪುರ ಬಿಗ್ಬಾಸ್ ಮನೆಗೆ ಎಂಟ್ರಿ ಕೊಡ್ತಾರೆ ಎಂದು. ತುಂಬಾ ಖುಷಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದ ಚೈತ್ರಾ ಈಗ ಪಶ್ಚಾತಾಪದ ಮಾತುಗಳನ್ನು ಆಡುತ್ತಿದ್ದಾರೆ.
ಬಿಗ್ಬಾಸ್ಗೆ ಬಂದ ಮೊದ ಮೊದಲು ಚೆನ್ನಾಗಿಯೇ ಇದ್ದ ಚೈತ್ರಾ ಏಕಾಏಕಿ ಡಲ್ ಹೊಡೆದಿದ್ದಾರೆ. ಕೆಲವು ದಿನಗಳಿಂದ ಚೈತ್ರಾ ಕುಂದಾಪುರ ಮಾತಿನ ರೀತಿ ಬದಲಾಗಿದೆ. ಯಾವುದೇ ಸಂದರ್ಭದಲ್ಲಿಯೂ ಕುಗ್ಗದ ಚೈತ್ರಾ ಕುಂದಾಪುರ ಈಗ ಸಖತ್ ಸೈಲೆಂಟ್ ಆಗಿದ್ದಾರೆ. ನನಗೆ ಈ ವೇದಿಕೆ ಅಲ್ಲ ಅಂತ ನಿನ್ನೆಯ ಸಂಚಿಕೆಯಲ್ಲಿ ಬೇಸರ ಹೊರ ಹಾಕಿದ್ದಾರೆ.
ನಿನ್ನೆಯ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಭವ್ಯಾ ಗೌಡ ಮುಂದೆ ಈ ಪಶ್ಚಾತಾಪದ ಮಾತಾಡಿದ್ದಾರೆ. ಏಕೆಂದರೆ ವೀಕೆಂಡ್ ಎಪಿಸೋಡ್ನಲ್ಲಿ ಚೈತ್ರಾ ಕುಂದಾಪುರ ಅವರನ್ನು ಮನೆಮಂದಿ ಕಸಕ್ಕೆ ಹೋಲಿಸಿದ್ದರು. ಸುಖಾ ಸುಮ್ಮನೆ ಮಾತಾಡುತ್ತಲೇ ಇರುತ್ತಾರೆ. ಸುಮ್ನೆ ಇರಿ ಚೈತ್ರಾಕ್ಕ ಅಂದ್ರು ಮಾತುಗಳನ್ನು ಕೇಳುವುದೇ ಇಲ್ಲ ಅಂತ ಹೇಳಿದ್ದಾರೆ. ಇದೇ ಮಾತುಗಳು ಚೈತ್ರಾಗೆ ಬೇಸರ ತಂದಿದೆ.
ಬಿಗ್ಬಾಸ್ ನನಗೆ ಅಲ್ಲ. ತಪ್ಪು ನಿರ್ಧಾರ ತೆಗೆದುಕೊಂಡೆ. ಶಾಲೆಗೆ ಹೋಗುವವರು ಶಾಲೆಗೆ ಹೋಗಬೇಕು. ದೇವಸ್ಥಾನಕ್ಕೆ ಹೋಗುವವರು ಶಾಲೆಗೆ ಹೋಗಬೇಕು. ಪಬ್ಗೆ ಹೋಗುವವರು ಪಬ್ಗೆ ಹೋಗಬೇಕು. ನನ್ನಂಥವಳು ಇಲ್ಲಿಗೆ ಬರಬಾರದಾಗಿತ್ತು ಎಂದು ಚೈತ್ರಾ ಕುಂದಾಪುರ ಅವರು ಹೇಳಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ಎದುರಿಸಬೇಕು ಅಂತ ತುಂಬಾ ಸಲ ಅಂದುಕೊಳ್ಳುತ್ತೇನೆ. ಆದರೆ ಆಗಲ್ಲ. ನನ್ನ ಮಾತು ಕಿರಿಕಿರಿ ಅಂತ ಯಾರೂ ಹೇಳಿರಲಿಲ್ಲ. ಮಾತು ನನಗೆ ಅನ್ನ ಕೊಟ್ಟಿದೆ, ಬದುಕನ್ನು ಕೊಟ್ಟಿದೆ. ಕಿರಿಕಿರಿ ಅಂತ ಯಾರೂ ಹೇಳಿರಲಿಲ್ಲ ಎಂದು ಹೇಳಿಕೊಂಡು ಚೈತ್ರಾ ಕುಂದಾಪುರ ಅವರು ಕಣ್ಣೀರು ಹಾಕಿದ್ದಾರೆ. ಆಗ ಭವ್ಯಾ ಗೌಡ ಚೈತ್ರಾಗೆ ಅವರಿಗೆ ಸಮಾಧಾನ ಮಾಡಿ ಬುದ್ಧಿ ಮಾತು ಹೇಳಿದ್ದಾರೆ.