ಉಡುಪಿ : ಸದಾ ಗಾಂಜಾ, ರೌಡಿಸಂ ಅಂತೆಲ್ಲಾ ಅಡ್ಡ ಕಸುಬಿ ಮಾಡೋರಿಗೆ ಬುದ್ಧಿವಾದ ಹೇಳೋಕೆ ಹೋದ ಯುವಕನೊಬ್ಬ ಅಮಾನುಷವಾಗಿ ಹತ್ಯೆಗೀಡಾಗಿದ್ದಾನೆ. ಮನೆಗೆ ಆಧಾರಸ್ಥಂಭವಾಗಿದ್ದ ಈತನ ಮನೆಯಲ್ಲಿರುವ ಈತನ ತಂಗಿ ಸೇರಿದಂತೆ ಹಿರಿ ಜೀವಗಳು ಈತನಿಗಾಗಿ ಎದುರುನೋಡುತ್ತಿದ್ದಾರೆ. ಯಾಕೆಂದರೆ ಮನೆ ಪರಿಸ್ಥಿತಿ ತುಂಬ ಬಿಗಡಾಯಿಸಿದೆ. ಒಂದು ಹೊತ್ತಿನ ಕೂಳಿಗೂ ಪರದಾಡಬೇಕಾದ ಸ್ಥಿತಿ ಒಂದೆಡೆಯಾದರೆ, ಅನಾರೋಗ್ಯಪೀಡಿತರಿಗೆ ಆರೈಕೆ ನೀಡಬೇಕಾದ ಅನಿವಾರ್ಯವೂ ಎದುರಾಗಿದೆ. ದಯನೀಯ ಕುಟುಂಬದ ಕಣ್ಣೀರ ನೋವಿನ ಸುದ್ದಿ ಇದು…
ಉಡುಪಿ ಜಿಲ್ಲೆಯ ಮಲ್ಪೆ ಪ್ರದೇಶ… ಮಲ್ಪೆ ಅನ್ನುತ್ತಲೇ ನೆನಪಿಗೆ ಬರೋದೆ.. ಬಂದರು, ಮೀನುಗಾರಿಕೆ, ಪ್ರವಾಸಿ ತಾಣ.. ಅಲ್ಲಿ ಬದುಕು ಕಟ್ಟಿಕೊಳ್ಳಲು ಬರುವವರೂ ಇದ್ದಾರೆ. ಇಂತಹ ಮಲ್ಪೆ ತನ್ನ ಒಡಲಲ್ಲಿ ಅದೆಷ್ಟೋ ಯುವಕರಿಗೆ ಬದುಕು ಕಟ್ಟಿಕೊಳ್ಳುವ ಅವಕಾಶ ನೀಡಿದೆ. ಈತನ ಹೆಸರು ಯೋಗೀಶ್ ಪೂಜಾರಿ. ಪ್ರಾಯ 28.
ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ವೃತ್ತಿ ಮಾಡಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದು, ಸಹೋದರಿ, ಮನೆಯಲ್ಲಿರುವ ಹಿರಿಜೀವಗಳಿಗೆ ಆಸರೆಯಾಗಿದ್ದಾತ. ತಂಗಿಯ ಮದುವೆ ಒಂದು ಕಡೇ ಹಿರಿಯ ಜೀವಿಗಳಾದ 2 ಮಾವಂದಿರು.. ಹಾಗೆಯೇ ದೊಡ್ಡಮ್ಮ ನಾಲ್ಕು ಜನರನ್ನು ಸಾಕುವ ಮಹತ್ವವಾದ ಜವಾಬ್ದಾರಿ ಯೋಗೇಶ್ ಮೇಲೆ ಇತ್ತು…ಈ ಕುಟುಂಬ ತಮ್ಮ ಮನೆಯ ಆಧಾರ ಸ್ತಂಭವನ್ನು ಕಳೆದುಕೊಂಡು ಅನಾಥವಾಗಿದ್ದಾರೆ..ತನ್ನ ಸಹೋದರನ ಕೊಲೆ ಮಾಡಿದವರಿಗೆ ಜೀವಾವಧಿ ಶಿಕ್ಷೆ ಆಗಬೇಕು ಹಾಗೂ ತಮಗೆ ಸಹೃದಯರು ನೆರವು ನೀಡಬೇಕು ಎನ್ನುತ್ತಾರೆ ಈಕೆ ಸಹೋದರಿ….
ಪೂರ್ವದ್ವೇಷದ ಹಿನ್ನೆಲೆಯಲ್ಲಿ ಈತನನ್ನು ಕೊಲೆ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ದುಷ್ಕರ್ಮಿಗಳ ಏಟಿಗೆ ಯೋಗೇಶ್ ಶವವಾಗಿದ್ದಾನೆ. ಆದರೆ ಈತನನ್ನೇ ನಂಬಿದ್ದ ಕುಟುಂಬ ಅನಾಥವಾಗಿದೆ. ಅಮಾಯಕ ಕುಟುಂಬಕ್ಕೆ ಏನಾದರೂ ನೆರವು ನೀಡಬೇಕು ಎನ್ನುತ್ತಾರೆ ಈತನ ಸ್ನೇಹಿತರು..
ಅದೇನೇ ಇದ್ದರೂ ಇನ್ನು ಯೋಗೇಶನ ಮನೆ ಅನಾಥವಾಗಿದೆ. ಗಾಂಜಾ, ಅಡ್ಡಕಸುಬಿನಲ್ಲಿ ತೊಡಗಿಸಿಕೊಂಡು ಕ್ಷಣಕ ಕೋಪದಲ್ಲಿ ಕೊಲೆ ಮಾಡಲು ಮುಂದಾಗುವ ಕಿರಾತಕರ ಏಟಿಗೆ ಯೋಗೇಶನೇನೋ ಅಸುನೀಗಿದ್ದಾನೆ. ಆದರೆ ಆತನ ಮನೆ ಮಂದಿಯ ಬದುಕಿಗೆ ಆಧಾರ ಸ್ಥಂಭವಾಗುವವರು ಯಾರು..? ಸಹೃದಯ ದಾನಿಗಳು ಇವರಿಗೆ ನೆರವಿನ ಹಸ್ತ ಚಾಚಬೇಕಾಗಿದೆ.
ಸುಲಕ್ಷಿತ,
ಕೆನರಾ ಬ್ಯಾಂಕ್, ಕೊಡವೂರು ಶಾಖೆ
ಖಾತೆ ಸಂಖ್ಯೆ : 0656101029533
ಐಎಫ್‌ಎಸ್‌ಸಿ ಸಂಖ್ಯೆ : CNRB0000656
ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಎನ್ ಐ ಟಿ ಕೆ ಅಂಡರ್ ಪಾಸ್ ಬಳಿ ಬೈಕ್ ಗೆ ಬೋಲೇರೋ ಪಿಕಪ್ ಡಿಕ್ಕಿಯಾಗಿ ಬೈಕ್ ಸವಾರ ಸಹಿತ ನಾಲ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೈಕ್ ಗೆ ಸುರತ್ಕಲ್ ಎನ್ಐಟಿಕೆ ಅಂಡರ್ ಪಾಸ್ ಬಳಿ ಬೊಲೆರೋ ಪಿಕಪ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಹಾಗೂ ಪಿಕಪ್ ಹೆದ್ದಾರಿ ಬದಿಯ ಅಪಘಾತ ತಡೆಗೆ ಹಾಕಿದ್ದ ತಡೆ ಬೇಲಿಗೆ ಡಿಕ್ಕಿ ಹೊಡೆದು ಸುಮಾರು 12 ಅಡಿ ಆಳದ ಅಂಡರ್ ಪಾಸ್ ಕೆಳಗಡೆ ಬಿದ್ದಿದೆ.
ಅಪಘಾತದಿಂದ ಬೈಕ್ ಸವಾರ ಸಹಿತ ಬೊಲೆರೋ ಪಿಕಪ್ ನಲ್ಲಿದ್ದ ವಾಹನದ ಚಾಲಕ ಹಾಗೂ ಪ್ರಯಾಣಿಕರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಕ್ರೇನ್ ಮೂಲಕ ಎರಡು ವಾಹನಗಳನ್ನು ತೆರವುಗೊಳಿಸಲಾಯಿತು. ಅಪಘಾತದ ಗಾಯಾಳುಗಳ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.
ಮಂಗಳೂರು : ಸುಮಾರು 50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಸೌಲಭ್ಯ ಹೊಂದಿರುವ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರಕ್ಕೆ ಸಿಎಂ ಸಿದ್ಧರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದಾರೆ. ಮೇರಿ ಹಿಲ್‌ನಲ್ಲಿ ನಿರ್ಮಾಣವಾಗಲಿರುವ ಈ ಪ್ರಾದೇಶಿಕ ಕೇಂದ್ರ ವೈದ್ಯಕೀಯ ಶಿಕ್ಷಣ ಸಂಬಂಧಿತ ವಿಚಾರಗಳಿಗೆ ಪೂರಕವಾಗಲಿರುವ ವ್ಯವಸ್ಥೆಗಳು ಈ ಕೇಂದ್ರದಲ್ಲಿ ಇರಲಿದೆ. ಇದು ವಿದ್ಯಾರ್ಥಿಗಳಿಂದ ಹಿಡಿದು ಸಂಶೋಧನೆ ನಡೆಸುವ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ.
ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಏಷ್ಯಾದಲ್ಲೇ ಅತೀ ದೊಡ್ಡ ಸಂಸ್ಥೆಯಾಗಿದ್ದು, ಮಂಗಳೂರಿನಲ್ಲಿ ನಿರ್ಮಾಣವಾಗುವ ಪ್ರಾದೇಶಿಕ ಕೇಂದ್ರ ದೇಶದಲ್ಲೇ ದೊಡ್ಡ ಕೇಂದ್ರವಾಗಲಿದೆ. ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಈ ಕೇಂದ್ರ ಸ್ಥಾಪನೆಗೆ 2024-25ರ ಬಜೆಟ್‌ನಲ್ಲಿ ಅನುದಾನ ನೀಡಲಾಗಿದ್ದು, ಈಗ ಚಾಲನೆ ನೀಡಲಾಗುತ್ತಿದೆ. ಈ ಕೇಂದ್ರ ಸ್ಥಾಪನೆ ಬಳಿಕ ಕರಾವಳಿ ಭಾಗದ ಜನರಿಗೆ ವೈದ್ಯಕೀಯ ಶಿಕ್ಷಣ ಸಂಬಂಧಿತ ವಿಚಾರವಾಗಿ ಬೆಂಗಳೂರಿಗೆ ಹೋಗುವುದು ತಪ್ಪಲಿದೆ ಎಂದು ಹೇಳಿದ್ದಾರೆ.
ಬಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಸಿಗುವಂತಹ ಸೌಲಭ್ಯಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಬೇಕು ಎಂಬ ಚಿಂತನೆ ಸರ್ಕಾರಕ್ಕೆ ಇದೆ. ಇದಕ್ಕೆ ಬೇಕಾದ ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಸಚಿವ ದಿನೇಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಶಾಸಕರು ಹಾಗೂ ಪರಿಷತ್ ಸದಸ್ಯರು ಭಾಗಿಯಾಗಿದ್ದರು.
ಮಂಗಳೂರು/ಮುಂಬೈ : ಕೆಲವು ನಟಿಯರು ನೋ ಕಿಸ್ಸಿಂಗ್ ನೀತಿಯನ್ನು ಅನುಸರಿಸುತ್ತಾರೆ. ಈ ಬಗ್ಗೆ ಸಿನಿಮಾ ಒಪ್ಪಿಕೊಳ್ಳುವ ಮೊದಲೇ ಮಾತುಕತೆ ನಡೆಸಿರುತ್ತಾರೆ. ಇದನ್ನು ಬಾಲಿವುಡ್‌ನ ಈ ಸ್ಟಾರ್ ನಟಿ ಕೂಡ ಅನುಸರಿಸುತ್ತಿದ್ದರು.
ಆದರೆ ಆ ಒಬ್ಬ ನಟ ಬಲವಂತವಾಗಿ ಕಿಸ್ ಮಾಡಿದಕ್ಕೆ ವಾಂತಿ ಮಾಡಿ 100 ಸಲ ಮುಖ ತೊಳೆದಿದ್ದೆ ಎಂದು ಸ್ಟಾರ್ ನಟಿ ಹೇಳಿದ್ದಾರೆ.
ಬಾಲಿವುಡ್ ನಟಿ ರವೀನಾ ಟಂಡನ್ ಮೂರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ. ರವಿನಾ ಟಂಡನ್ ನೋ ಕಿಸ್ಸಿಂಗ್ ನೀತಿಯನ್ನು ಅನುಸರಿಸಿದ ನಟಿಯರಲ್ಲಿ ರವೀನಾ ಟಂಡನ್ ಕೂಡ ಒಬ್ಬರು.
ಆದರೆ ಸಿನಿಮಾವೊಂದರ ಶೂಟಿಂಗ್ ವೇಳೆ ಸಹ ನಟರೊಬ್ಬರು ಆಕಸ್ಮಿಕವಾಗಿ ರವೀನಾ ಟಂಡನ್ ತುಟಿಗಳಿಗೆ ಮುತ್ತಿಟ್ಟ ಘಟನೆ ನಡೆದಿತ್ತು. ಆ ನಂತರ ಏನಾಯಿತು ಎಂಬುದನ್ನು ಸ್ವತಃ ರವೀನಾ ಅವರೇ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಈ ಬಗ್ಗೆ ರವೀನಾ ಮಾತನಾಡಿದ್ದಾರೆ. ರವೀನಾ ಟಂಡನ್ ಅವರೊಂದಿಗೆ ಒಂದು ಘಟನೆ ನಡೆದಿತ್ತಂತೆ. ಅವರ ಸಹ ನಟರೊಬ್ಬರು ತಪ್ಪಾಗಿ ಅವರನ್ನು ಚುಂಬಿಸಿದ್ದರಂತೆ. ಈ ದೃಶ್ಯವು ಸ್ಕ್ರಿಪ್ಟ್ ನ ಭಾಗವೂ ಆಗಿರಲಿಲ್ಲ. ಇದಾದ ನಂತರ ರವೀನಾ ಟಂಡನ್ ತುಂಬಾ ಅನ್‌ಕಂಫರ್ಟ್ ಫೀಲ್ ಮಾಡಿಕೊಂಡರಂತೆ.
ಆ ಬಳಿಕ ವಾಂತಿ ಕೂಡ ಮಾಡಿದರಂತೆ. 100 ಸಲ ತಮ್ಮ ಬಾಯಿ ತೊಳೆದುಕೊಂಡಿದ್ದಾರಂತೆ. ನಂತರ ಆ ನಟ ರವೀನಾ ಟಂಡನ್ ಅವರ ಬಳಿಕ ಕ್ಷಮೆಯಾಚಿಸಿದರಂತೆ. ಸಂದರ್ಶನ ಸಮಯದಲ್ಲಿ ರವೀನಾ ಟಂಡನ್ ಈ ವಿಚಾರ ಹೇಳಿದ್ದಾರೆ. ಸಿನಿಮಾಗಳಲ್ಲಿ ಕಿಸ್ ಮಾಡದಿರುವುದು ನನ್ನ ಆಯ್ಕೆ ಎಂದು ರವೀನಾ ಟಂಡನ್ ಹೇಳಿದ್ದಾರೆ.